Sushma Shekhar: ಗಿಣಿರಾಮ ಧಾರಾವಾಹಿ ಮೂಲಕ ಮತ್ತೆ ನಟನೆಗೆ ಮರಳುತ್ತಿದ್ದಾರೆ ಸುಷ್ಮಾ ಶೇಖರ್

ಸುಷ್ಮಾ ಶೇಖರ್ ಸದಾ ಲಂಗ-ದಾವಣಿ ಧರಿಸಿ ಮುಗ್ಧ ನಗು ಮೂಲಕ ಎಲ್ಲರ ಮನ ಸೆಳೆದಿದ್ದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಗಿಣಿರಾಮ ಧಾರಾವಾಹಿ ಮೂಲಕ ಮತ್ತೆ ಮರಳಿ ಬಂದಿದ್ದಾರೆ. 

ಸುಷ್ಮಾ ಶೇಖರ್

ಸುಷ್ಮಾ ಶೇಖರ್

  • Share this:
    ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರ ಗೊಳ್ಳುತ್ತಿದ್ದ ಜನಪ್ರಿಯ ಧಾರಾವಾಹಿ ಯಾರೆ ನೀ ಮೋಹಿನಿಯಲ್ಲಿ ಸದಾ ನನ್ನ ಮುದ್ದು ಮಾವನ ಬಗ್ಗೆ ಯೋಚನೆ ಮಾಡುತ್ತಾ ಅಳುಮುಂಜಿ ಪಾತ್ರದಲ್ಲಿ ಗುರುತಿಸಿಕೊಂಡ ನಟಿ ಸುಷ್ಮಾ ಶೇಖರ್ (Sushma Shekhar) ಇದೀಗ ಮತ್ತೆ ಕಿರುತೆರೆಗೆ ಎಂಟ್ರಿಕೊಟ್ಟಿದ್ದಾರೆ. ವಿಭಿನ್ನ ಕಥಾವಸ್ತುವನ್ನಿಟ್ಟುಕೊಂಡು ಪ್ರೇಕ್ಷಕರ ಮನಗೆಲ್ಲುವಲ್ಲಿ ಈ ಧಾರಾವಾಹಿ ಯಶಸ್ವಿಯಾಗಿತ್ತು. ಬೆಳ್ಳಿ (Belli) ಪಾತ್ರವನ್ನು ನಿರ್ವಹಿಸುತ್ತಿದ್ದ ನಟಿ ತನ್ನ ಮುದ್ದಾದ ನಟನೆಯಿಂದ ಜನ ಮನ ಗೆದ್ದಿದ್ದರು. 'ಲಕುಮಿ' (Lakumi) ಪಾತ್ರದ ಮೂಲಕ ಜನ ಮನ ಗೆದ್ದ ಸುಷ್ಮಾ ಶೇಖರ್ ಸದಾ ಲಂಗ-ದಾವಣಿ ಧರಿಸಿ ಮುಗ್ಧ ನಗು ಮೂಲಕ ಎಲ್ಲರ ಮನ ಸೆಳೆದಿದ್ದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಗಿಣಿರಾಮ ಧಾರಾವಾಹಿ ಮೂಲಕ ಮತ್ತೆ ಮರಳಿ ಬಂದಿದ್ದಾರೆ. 

    ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಮಾಡಿ ಅಭಿಮಾನಿಗಳಿಗೆ ಖುಷಿ ಕೊಡುತ್ತಿದ್ದರು

    ಯಾರೆ ನೀ ಮೋಹಿನಿ ಧಾರಾವಾಹಿ ಬಳಿಕ ಇವರು ಯಾವುದೇ ಸಿನಿಮಾಗಳಲ್ಲಿ ಧಾರಾವಾಹಿಗಳಲ್ಲಾಗಿ ಕಾಣಿಸಿಕೊಳ್ಳಲಿಲ್ಲಾ. ಆದರೆ ಆಗಾಗ ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಮಾಡಿ ಅಭಿಮಾನಿಗಳಿಗೆ ಖುಷಿ ಕೊಡುತ್ತಿದ್ದರು. ಸುಷ್ಮಾಗೆ ಡ್ಯಾನ್ಸ್ ಎಂದರೆ ತುಂಬಾ ಇಷ್ಟವಂತೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ಸುಷ್ಮಾ ಆಗಾಗ ರೀಲ್ಸ್ ಮಾಡುತ್ತಿರುತ್ತಾರೆ.

    ಇದನ್ನೂ ಓದಿ: Olavina Nildana: ಕಲರ್ಸ್ ಕನ್ನಡದಲ್ಲಿ ಹೊಸ ರಂಗಿನ ಕಥೆ! 'ಒಲವಿನ ನಿಲ್ಗಾಣ'ದಲ್ಲಿ ಒಂದು ಸುತ್ತು ಹಾಕೋಣ ಬನ್ನಿ

    ಗಿಣಿರಾಮ ಧಾರಾವಾಹಿ ಮೂಲಕ ಮತ್ತೆ ಕಿರುತೆರೆಗೆ ಬಂದಿದ್ದಾರೆ

    ಇದೀಗ ಬ್ರೇಕ್ ನಂತರ ಮತ್ತೆ ಕಿರುತೆರೆಗೆ ಮರಳಿ ತಮ್ಮ ಅಭಿಮಾನಿಗಳಿಗೆ ಖುಷಿ ನೀಡಿದ್ದಾರೆ. ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಗಿಣಿರಾಮ ಧಾರಾವಾಹಿ ಮೂಲಕ ಮತ್ತೆ ಬಂದಿದ್ದಾರೆ. ಸುಷ್ಮಾ ಶೇಖರ್ ಎಂಟ್ರಿ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್ ಅನ್ನು ಕೊಡುವುದಂತೂ ಸತ್ಯ. ಸದ್ಯ ಶಿವರಾಮ್ ಮತ್ತು ಮಹತಿ ಇಬ್ಬರು ಪ್ರೀತಿಯಲ್ಲಿ ಬಿದ್ದಿದ್ದಾರೆ ಜೊತೆಗೆ ತಮ್ಮ ಪ್ರೀತಿಯನ್ನು ಪರಸ್ಪರ ಹೇಳಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ.

    ಇದನ್ನೂ ಓದಿ: Vijay Suriya: ರಾಜಿ ಮೂಲಕ ಕಿರುತೆರೆಗೆ ಮತ್ತೆ ಎಂಟ್ರಿಕೊಟ್ಟ ಹ್ಯಾಂಡ್ ಸಮ್ ಹೀರೋ ವಿಜಯ್ ಸೂರ್ಯ

    ಸುಷ್ಮಾ ಶೇಖರ್ ಧಾರಾವಾಹಿಯಲ್ಲಿ ನೇಹಾ ಪಾತ್ರ ದಲ್ಲಿ‌ ಕಾಣಿಸಿಕೊಳ್ಳುತ್ತಿದ್ದಾರೆ

    ಸುಷ್ಮಾ ಶೇಖರ್ ಅವರು ಧಾರಾವಾಹಿಯಲ್ಲಿ ನೇಹಾ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಆರಂಭದಿಂದಲೂ ಮಹತಿಯನ್ನು ಮದುವೆಯಾಗಲು ಶಿವರಾಮಗೆ ಇಷ್ಟವಿರಲಿಲ್ಲ ಇಬ್ಬರೂ ಪರಸ್ಪರ ದ್ವೇಷಗಳಾಗಿದ್ದರು ಆದರೆ ಅನಿವಾರ್ಯತೆಯಿಂದ ಇಬ್ಬರ ಮದುವೆ ನಡೆದಿತ್ತು.

    ಮಹತಿ ಬೇರೊಬ್ಬ ಹುಡುಗನನ್ನು ಅತಿಯಾಗಿ ಪ್ರೀತಿಸುತ್ತಿದ್ದ ಆದರೆ ನಡೆದ ಒಂದು ಘಟನೆಯಿಂದ ಅವರಿಬ್ಬರೂ ಪರಸ್ಪರ ಬೇರೆಯಾಗಿದ್ದರು. ಇತ್ತ ಶಿವರಾಮ್ ಕಥೆ ಕೂಡಾ ಅದೇ ಆಗಿತ್ತು ಅವನು ಬಹಳ ಇಷ್ಟಪಡುತ್ತಿದ್ದ ಒಬ್ಬಳು ಹುಡುಗಿ ಬಗ್ಗೆ ಆಗಾಗ ಧಾರಾವಾಹಿಯಲ್ಲಿ ವಿಚಾರಗಳು ವಿನಿಮಯವಾಗುತ್ತಿತ್ತು. ಆದರೆ ಆ ಹುಡುಗಿ ಯಾರೆಂಬುದನ್ನಾಗಲಿ ಶಿವರಾಮ್ ಬಾಳಿನಿಂದ ಅವರು ಯಾವ ಕಾರಣಕ್ಕೆ ದೂರ ಹೋದಳು ಎನ್ನುವ ಬಗ್ಗೆ ಎಲ್ಲೂ ಬಿಟ್ಟುಕೊಟ್ಟಿರಲಿಲ್ಲ. ಇದೀಗ ಮಹತಿ ಮತ್ತು ಶಿವರಾಮ್ ಪರಸ್ಪರ ಪ್ರೀತಿಯನ್ನು ಹೇಳಿಕೊಳ್ಳುವ ಸಂದರ್ಭದಲ್ಲಿ ನೇಹಾ ಎದುರು ಬಂದಿದ್ದಾಳೆ. ನೇಹಾ ಪಾತ್ರಧಾರಿಯಾಗಿ ಸುಷ್ಮ ಶೇಖರ್ ಅವರು ಬಂದಿದ್ದಾರೆ. ಪ್ರೀತಿಯಿಂದ ಇಬ್ಬರು ಸಮಯ ಪಡೆಯುತ್ತಿರುವ ಸಂದರ್ಭದಲ್ಲಿ ಮುಂದೇನಾಗುತ್ತದೆ ಎಂಬುದೇ ಪ್ರೇಕ್ಷಕರೆಲ್ಲರೂ ಪ್ರಶ್ನೆ. ಕಳೆದ ಬಾರಿ ಪ್ರೀತಿ ಹೇಳಿಕೊಳ್ಳುವ ಸಂದರ್ಭದಲ್ಲಿ ಮಹತಿಯ ಹಳೆಯ ಪ್ರೇಮಿ ಗೌರವ್ ನ ಎಂಟ್ರಿ ಯಾಗಿತ್ತು ಇದೀಗ ಮತ್ತೆ ಅದೇ ರೀತಿಯಾಗುವ ಸೂಚನೆ ಇದೆ.

    ಇನ್ನು ಧಾರವಾಹಿಯಲ್ಲಿ ಯಾವೆಲ್ಲ ಬದಲಾವಣೆಗಳು ಆಗುತ್ತವೆ ಎಂಬುದನ್ನು ಕಾದು ನೋಡಬೇಕಿದೆ. ಮಹತಿ ಶಿವರಾಮ್ ಮುದ್ದಾದ ಕಾದಾಟಗಳನ್ನು ನೋಡಲು ಪ್ರೇಕ್ಷಕರು ಕಾಯುತ್ತಿದ್ದರು. ನೇಹಾ ಬಂದ ಮೇಲೆ ಶಿವರಾಮ್ ಬಾಳಿನಲ್ಲಿ ಏನಿಲ್ಲ ಬದಲಾವಣೆಗಳಾಗುತ್ತವೆ ಎನ್ನುವುದನ್ನು ಪ್ರೇಕ್ಷಕರು ಕಾಯುತ್ತಿದ್ದಾರೆ.
    Published by:Swathi Nayak
    First published: