ಟೈಟಾನಿಕ್ ಖ್ಯಾತಿಯ ಹಾಲಿವುಡ್ನ ಹಾಟ್ ಬ್ಯೂಟಿ ಕೇಟ್ ವಿನ್ಸ್ಲೆಟ್, ಹೊಸ ಸಾಹಸ ಮಾಡಿದ್ದಾರೆ. ಅದನ್ನು ಕೇಳಿದರೇ ರೋಮಾಂಚನವಾಗುತ್ತದೆ. ಅದು ಇದುವರೆಗೂ ಯಾವ ನಟಿಯೂ ಮಾಡಿರದ ಸಾಹಸ. ಒಬ್ಬ ನಟಿ ಹೀಗೂ ಮಾಡಲು ಸಾಧ್ಯನಾ ಎಂದು ಎಲ್ಲರೂ ಹುಬ್ಬೇರಿಸಿ, ಅಚ್ಚರಿಪಟ್ಟುಕೊಳ್ಳುವಂತಹ ಸೂಪರ್ ಅಡ್ವೆಂಚರ್. ಹೌದು, 45 ವರ್ಷದ ಹಾಲಿವುಡ್ ಸುಂದರಿ ಕೇಟ್ ವಿನ್ಸ್ಲೆಟ್ ಸದ್ಯ ಬ್ಲಾಕ್ಬಸ್ಟರ್ ಹಿಟ್ ಎನಿಸಿಕೊಂಡಿದ್ದ ಅವತಾರ್ ಚಿತ್ರದ ಸೀಕ್ವಲ್ ಶೂಟಿಂಗ್ನಲ್ಲಿ ಬ್ಯುಸಿಯಿದ್ದಾರೆ. 2009ರಲ್ಲಿ ರಿಲೀಸ್ ಆಗಿದ್ದ ಅವತಾರ್ ಸೀಕ್ವೆಲ್ ಈ ವರ್ಷ ಬರುತ್ತೆ, ಮುಂದಿನ ವರ್ಷ ಬರುತ್ತೆ ಎನ್ನುತ್ತಲೇ 11 ವರ್ಷಗಳೇ ಉರುಳಿ ಹೋಗಿವೆ. ಆದರೆ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಕಳೆದ ಎರಡು ವರ್ಷಗಳಿಂದ ಗಂಭೀರವಾಗಿ ಈ ಚಿತ್ರದ ಕೆಲಸಗಳಲ್ಲಿ ಬ್ಯುಸಿಯಾಗಿದ್ದು, 2022ರ ಡಿಸೆಂಬರ್ ತಿಂಗಳಲ್ಲಿ ಅವತಾರ್ 2 ತೆರೆಗೆ ಅಪ್ಪಳಿಸುವುದು ಬಹುತೇಕ ಫಿಕ್ಸ್ ಎನ್ನಲಾಗಿದೆ.
ಸ್ಯಾಮ್ ವರ್ದಿಂಗ್ಟನ್, ಜೋ ಸಲ್ಡಾನಾ, ಸ್ಟೀಫನ್ ಲ್ಯಾಂಗ್ ಸೇರಿದಂತೆ ಮೊದಲ ಭಾಗದಲ್ಲಿದ್ದ ಹಲವರು ಸೀಕ್ವೆಲ್ ನಲ್ಲೂ ಮುಂದುವರಿದ್ದು, ನಿರ್ದೇಶಕ ಜೇಮ್ಸ್ ಎರಡನೇ ಪಾರ್ಟ್ನಲ್ಲಿ ಹಲವು ಹೊಸ ಹೊಸ ಪಾತ್ರಗಳನ್ನು ಪರಿಚಯಿಸಲಿದ್ದಾರೆ. ಅವತಾರ್ ಕಥೆ ಭೂಮಿ ಹಾಗೂ ಆಗಸದಲ್ಲಿ ನಡೆದಿದ್ದರೆ, ಅವತಾರ್ 2 ಸಮುದ್ರದ ಆಳದಲ್ಲಿ ನಡೆಯುವ ಕಥೆ ಎನ್ನಲಾಗಿದೆ. ಹೀಗಾಗಿಯೇ ಚಿತ್ರತಂಡದ ಅಷ್ಟೂ ತಾರೆಯರಿಗೆ ಸ್ವಿಮ್ಮಿಂಗ್, ಫ್ರೀಡೈವ್ಗಳ ತರಬೇತಿಯನ್ನೂ ನೀಡಲಾಗಿದೆ.
ಆದರೆ ಸೀನ್ ಒಂದರ ಚಿತ್ರೀಕರಣಕ್ಕಾಗಿ ನಟಿ ಕೇಟ್ ವಿನ್ಸ್ಲೆಟ್ ಬರೋಬ್ಬರಿ ಏಳು ನಿಮಿಷಗಳ ಕಾಲ ಉಸಿರು ಬಿಗಿ ಹಿಡಿದು ಈಜುಕೊಳದಲ್ಲಿ ನಿಂತಿದ್ದಾರೆ. ಆ ಮೂಲಕ ಹಾಲಿವುಡ್ ಆಕ್ಷನ್ ಸ್ಟಾರ್ ಟಾಮ್ ಕ್ರೂಸ್ ಅವರ ದಾಖಲೆಯನ್ನು ಹಿಂದಕ್ಕೆ ಹಾಕಿದ್ದಾರೆ.
ಹೌದು, ಮಿಷನ್ ಇಂಪಾಸಿಬಲ್ ರೋಗ್ ನೇಷನ್ ಚಿತ್ರದ ಸನ್ನಿವೇಶವೊಂದರ ಶೂಟಿಂಗ್ಗಾಗಿ ಟಾಮ್ ಕ್ರೂಸ್ ಬರೋಬ್ಬರಿ 6 ನಿಮಿಷಗಳ ಕಾಲ ಉಸಿರು ಬಿಗಿಹಿಡಿದು ನೀರಿನ ಆಳದಲ್ಲಿ ಶೂಟಿಂಗ್ ಮಾಡಿದ್ದರು. ಆದರೆ ಅವತಾರ್ 2 ಚಿತ್ರದ ಶೂಟಿಂಗ್ಗಾಗಿ ರೆಕ್ಕೆಯಂತಹ ಕಾಸ್ಟ್ಯೂಮ್ ಧರಿಸಿ ನೀರಿನ ಆಳದಲ್ಲಿ ನಿಂತು ಬರೋಬ್ಬರಿ 7 ನಿಮಿಷಗಳ ಕಾಲ ಉಸಿರು ಬಿಡಿಹಿಡಿದು ಶೂಟಿಂಗ್ನಲ್ಲಿ ಪಾಲ್ಗೊಳ್ಳುವ ಮೂಲಕ ಟೈಟಾನಿಕ್ ಚೆಲುವೆ ಹೊಸ ದಾಖಲೆ ನಿರ್ಮಿಸಿದ್ದಾರೆ.
1500 ಕೋಟಿ ರೂಪಾಯಿಗೂ ಅಧಿಕ ಬಜೆಟ್ನಲ್ಲಿ ನಿರ್ಮಾಣವಾಗಿದ್ದ ಅವತಾರ್-1, ವಿಶ್ವದಾದ್ಯಂತ ಬಾಕ್ಸಆಫೀಸ್ನಲ್ಲಿ ಬರೋಬ್ಬರಿ 18 ಸಾವಿರ ಕೋಟಿ ರೂಪಾಯಿ ಲೂಟಿ ಮಾಡಿತ್ತು. ಜೊತೆಗೆ ಅವೆಂಜರ್ಸ್ ದಿ ಎಂಡ್ಗೇಮ್ ರಿಲೀಸ್ ಆಗುವವರೆಗೂ ವಿಶ್ವದಲ್ಲೇ ಅತಿ ಹೆಚ್ಚು ಕಲೆಕ್ಷನ್ ಕಂಡ ಸಿನಿಮಾ ಎಂಬ ದಾಖಲೆ ಬರೆದಿತ್ತು. ಈಗ ಅವತಾರ್-2, 1800 ಕೋಟಿಗೂ ಅಧಿಕ್ ಬಜೆಟ್ನಲ್ಲಿ ನಿರ್ಮಾಣವಾಗುತ್ತಿದ್ದು, ಕಲೆಕ್ಷನ್ನಲ್ಲಿ ಮತ್ತೊಂದು ಹೊಸ ದಾಖಲೆ ನಿರ್ಮಿಸುವ ಎಲ್ಲ ನಿರೀಕ್ಷೆಗಳೂ ಇವೆ.
ಇದನ್ನೂ ಓದಿ: MS Dhoni: ಯುವ ಪೀಳಿಗೆಗೆ ಜವಾಬ್ದಾರಿ ನೀಡಬೇಕಿದೆ: ಮುಂದಿನ ನಡೆಯ ಬಗ್ಗೆ ಸುಳಿವು ನೀಡಿದ ಧೋನಿ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ