ಡ್ರಗ್ ಪಾರ್ಟಿ ಮೂಲಕ ಸುದ್ದಿಯಾಗಿದ್ದ ಈ ನಟ ಸೇನೆಗೋಸ್ಕರ ಮಾಡಿದ್ದೇನು ಗೊತ್ತಾ?

‘ಉರಿ: ದಿ ಸರ್ಜಿಕಲ್​ ಸ್ಟ್ರೈಕ್​’ ಸಿನಿಮಾ ತೆರೆಕಂಡು 6 ತಿಂಗಳೇ ಕಳೆದಿವೆ. ಆದರೆ, ವಿಕ್ಕಿ ಕೌಶಲ್​ ಮಾತ್ರ ಸದಾ ಸೇನೆಯ ಜೊತೆ ಕಾಣಿಸಿಕೊಳ್ಳುತ್ತಲೇ ಇದ್ದಾರೆ.

Rajesh Duggumane | news18
Updated:August 2, 2019, 10:07 AM IST
ಡ್ರಗ್ ಪಾರ್ಟಿ ಮೂಲಕ ಸುದ್ದಿಯಾಗಿದ್ದ ಈ ನಟ ಸೇನೆಗೋಸ್ಕರ ಮಾಡಿದ್ದೇನು ಗೊತ್ತಾ?
ವಿಕ್ಕಿ ಕೌಶಲ
  • News18
  • Last Updated: August 2, 2019, 10:07 AM IST
  • Share this:
ಇತ್ತೀಚಿಗೆ ಕರಣ್​ ಜೋಹರ್​ ಮನೆಯಲ್ಲಿ ಹಮ್ಮಿಕೊಂಡಿದ್ದ ಪಾರ್ಟಿಯ ವಿಡಿಯೋ ಸಾಕಷ್ಟು ವೈರಲ್​ ಆಗಿತ್ತು. ವಿಕ್ಕಿ ಕೌಶಲ್​, ದೀಪಿಕಾ ಪಡುಕೋಣೆ, ರಣಬೀರ್​ ಕಪೂರ್​ ಸೇರಿ ಅನೇಕ ಬಾಲಿವುಡ್​ ಕಲಾವಿದರು ಡ್ರಗ್​ ಸೇವಿಸಿದ್ದರು ಎನ್ನಲಾಗಿತ್ತು. ಈ ವಿಡಿಯೋ ವೈರಲ್​ ಆದ ಬೆನ್ನಲ್ಲೇ ಅವರು ಒಳ್ಳೆಯ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ವಿಕ್ಕಿ ಕೌಶಲ್​ ಸೇನಾ ಸಿಬ್ಬಂದಿಯನ್ನು ಭೇಟಿ ಮಾಡಿ ವಿಶೇಷ ಉಡುಗೊರೆ ಒಂದನ್ನೂ ನೀಡಿದ್ದಾರೆ!

ಭಾರತ ಪಾಕ್​ ಉಗ್ರರ ಮೇಲೆ ನಡೆಸಿದ ಸರ್ಜಿಕಲ್​ ಸ್ಟ್ರೈಕ್​ ಕಥೆ ಇಟ್ಟುಕೊಂಡು ‘ಉರಿ: ದಿ ಸರ್ಜಿಕಲ್​ ಸ್ಟ್ರೈಕ್​’ ಸಿನಿಮಾ ಮಾಡಲಾಗಿತ್ತು. ಈ ಚಿತ್ರ ತೆರೆಕಂಡು 6 ತಿಂಗಳೇ ಕಳೆದಿವೆ. ಆದರೆ, ವಿಕ್ಕಿ ಕೌಶಲ್​ ಮಾತ್ರ ಸದಾ ಸೇನೆಯ ಜೊತೆ ಕಾಣಿಸಿಕೊಳ್ಳುತ್ತಲೇ ಇದ್ದಾರೆ. ಈ ಬಾರಿ ಅವರು ಅರುಣಾಚಲ್​ ಪ್ರದೇಶದ ತವಾಂಗ್​ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅವರು ಸೇನೆಯವರಿಗೋಸ್ಕರ ರೊಟ್ಟಿ ಮಾಡಿ ಕೊಟ್ಟಿದ್ದಾರೆ.

“ನಾನು ಇದೇ ಮೊದಲ ಬಾರಿಗೆ ರೊಟ್ಟಿ ಮಾಡಿದ್ದೇನೆ. ಅದು ಸೇನೆಯವರಿಗೆ ಎಂಬುದು ವಿಶೇಷ,” ಎಂದು ವಿಕ್ಕಿ ಕೌಶಲ್​ ಬರೆದುಕೊಂಡಿದ್ದಾರೆ. ಕೆಲ ದಿನಗಳ ಕಾಲ ಅವರು ಅಲ್ಲಿಯೇ ಉಳಿದಿಕೊಳ್ಳಲಿದ್ದಾರಂತೆ. View this post on Instagram
 

The first ever roti I made... glad it was for the army.


A post shared by Vicky Kaushal (@vickykaushal09) on


ಸಿನಿಮಾ ವಿಚಾರಕ್ಕೆ ಬರುವುದಾದರೆ ವಿಕ್ಕಿ ಕೈಯಲ್ಲಿ ಸಾಕಷ್ಟು ಚಿತ್ರಗಳಿವೆ. ‘ತಕ್ತ್​’, ‘ಬೂತ್​ ಪಾರ್ಟ್​​ ಒನ್​’ ಹಾಗೂ ಮೇಘಾ ಗುಲ್ಜರ್​ ನಿರ್ದೇಶನದ ಇನ್ನೂ ಹೆಸರಿಡದ ಸಿನಿಮಾದಲ್ಲಿ ವಿಕ್ಕಿ ಬಣ್ಣ ಹಚ್ಚುತ್ತಿದ್ದಾರೆ.


First published: August 2, 2019, 10:05 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading