ತಮಿಳು ನಟ ವಿಶಾಲ್​ ಶೀಘ್ರ ಬಂಧನ?; ಜಾಮೀನು ರಹಿತ ಅರೆಸ್ಟ್​ ವಾರಂಟ್ ಜಾರಿ ಮಾಡಿದ ಕೋರ್ಟ್!

ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟೇಟರ್​ ನ್ಯಾಯಾಲಯ ವಿಶಾಲ್​ಗೆ ವಿಚಾರಣೆಗೆ ಹಾಜರಾಗುವಂತೆ ಸಾಲು ಸಾಲು ನೋಟೀಸ್​ ನೀಡಿತ್ತು. ಆದರೆ, ಅವರು ವಿಚಾರಣೆಗೆ ಹಾಜರಾಗಿರಲಿಲ್ಲ.

Rajesh Duggumane | news18
Updated:August 3, 2019, 1:42 PM IST
ತಮಿಳು ನಟ ವಿಶಾಲ್​ ಶೀಘ್ರ ಬಂಧನ?; ಜಾಮೀನು ರಹಿತ ಅರೆಸ್ಟ್​ ವಾರಂಟ್ ಜಾರಿ ಮಾಡಿದ ಕೋರ್ಟ್!
ವಿಶಾಲ್​
  • News18
  • Last Updated: August 3, 2019, 1:42 PM IST
  • Share this:
ಚೆನ್ನೈ (ಆ.3): ಕಾಲಿವುಡ್​ ನಟ ವಿಶಾಲ್​ ವಿರುದ್ಧ ಚೆನ್ನೈ ಸ್ಥಳೀಯ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರಂಟ್​ ಜಾರಿ ಮಾಡಿದೆ. ಇದು ರೀಲ್​ ಅಲ್ಲ ರಿಯಲ್​ ಕಥೆ. ತೆರಿಗೆ ಕಟ್ಟದೇ ಇರುವ ವಿಚಾರಕ್ಕೆ ಸಂಬಂಧಿಸಿ ನ್ಯಾಯಾಲಯ ಈ ಆದೇಶ ಹೊರಡಿಸಿದೆ. ಹೀಗಾಗಿ ವಿಶಾಲ್​ಗೆ ಬಂಧನ ಭೀತಿ ಎದುರಾಗಿದೆ.

ವಿಶಾಲ್​ ‘ವಿಶಾಲ್​ ಫಿಲ್ಮ್​​ ಫ್ಯಾಕ್ಟರಿ’ ಹೆಸರಿನ ಪ್ರೊಡಕ್ಷನ್​ ಹೌಸ್​ ನಡೆಸುತ್ತಿದ್ದಾರೆ. ಕಳೆದ ಐದು ವರ್ಷಗಳಿಂದ ಅವರು ಇದಕ್ಕೆ ತೆರಿಗೆ ಕಟ್ಟಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಪ್ರಕರಣ ದಾಖಲಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟೇಟರ್​ ನ್ಯಾಯಾಲಯ ವಿಶಾಲ್​ಗೆ ವಿಚಾರಣೆಗೆ ಹಾಜರಾಗುವಂತೆ ಸಾಲು ಸಾಲು ನೋಟೀಸ್​ ನೀಡಿತ್ತು. ಆದರೆ, ಅವರು ವಿಚಾರಣೆಗೆ ಹಾಜರಾಗದ ಕಾರಣ ನ್ಯಾಯಾಲಯ ವಿಶಾಲ್​ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್​ ಹೊರಡಿಸಿದೆ.

ವಿಶಾಲ್​ಗೆ ನೋಟೀಸ್​ ತಲುಪಿಯೇ ಇಲ್ಲ ಎಂದು ಅವರ ಪರ ವಕೀಲರು ವಾದ ಮಂಡಿಸಿದ್ದರು. ಆದರೆ, ಸರ್ಕಾರದ ಪರ ವಕೀಲರು ಇದು ಸುಳ್ಳು ಎಂದು ಹೇಳಿದ್ದರು. ಈ ಹಿನ್ನೆಯೆಲ್ಲಿ ಜಾಮೀನು ರಹಿತ ವಾರಂಟ್​ ಹೊರಡಿಸಿ ಎಂದು ಕೋರ್ಟ್​ ಬಳಿ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್​ ಈ ಆದೇಶ ಹೊರಡಿಸಿದೆ.

First published:August 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading