• Home
  • »
  • News
  • »
  • entertainment
  • »
  • Indian Movies 2023: ಈ ವರ್ಷ ತೆರೆ ಮೇಲೆ ಬರ್ತಿದೆ ಸೂಪರ್​ ಸ್ಟಾರ್​ಗಳ ಸಿನಿಮಾ; IMDb ನೀಡಿದೆ 20 ಮೂವಿಗಳ ಲಿಸ್ಟ್!

Indian Movies 2023: ಈ ವರ್ಷ ತೆರೆ ಮೇಲೆ ಬರ್ತಿದೆ ಸೂಪರ್​ ಸ್ಟಾರ್​ಗಳ ಸಿನಿಮಾ; IMDb ನೀಡಿದೆ 20 ಮೂವಿಗಳ ಲಿಸ್ಟ್!

ಐಎಂಡಿಬಿ ಸಂಸ್ಥೆ ಈ ವರ್ಷ ರಿಲೀಸ್​ ಆಗುತ್ತಿರುವ ಭಾರತೀಯ ಸಿನಿಮಾಗಳ 20 ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿ ರಿಲೀಸ್ ಮಾಡಿದೆ.

ಐಎಂಡಿಬಿ ಸಂಸ್ಥೆ ಈ ವರ್ಷ ರಿಲೀಸ್​ ಆಗುತ್ತಿರುವ ಭಾರತೀಯ ಸಿನಿಮಾಗಳ 20 ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿ ರಿಲೀಸ್ ಮಾಡಿದೆ.

ಐಎಂಡಿಬಿ ಸಂಸ್ಥೆ ಈ ವರ್ಷ ರಿಲೀಸ್​ ಆಗುತ್ತಿರುವ ಭಾರತೀಯ ಸಿನಿಮಾಗಳ 20 ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿ ರಿಲೀಸ್ ಮಾಡಿದೆ.

  • News18 Kannada
  • 2-MIN READ
  • Last Updated :
  • Karnataka, India
  • Share this:

2022ರಲ್ಲಿ ಅನೇಕ ಸಿನಿಮಾಗಳು ಭರ್ಜರಿ ಯಶಸ್ಸು ಕಂಡಿದ್ದು, ದೇಶ-ವಿದೇಶಗಳಲ್ಲೂ ಭಾರೀ ಸದ್ದು ಮಾಡಿತ್ತು. ಹೊಸ ವರ್ಷದ ಆರಂಭದಲ್ಲೇ ಸಾಲು ಸಾಲು ಸಿನಿಮಾಗಳು (Movies 2023) ರಿಲೀಸ್​ಗೆ ರೆಡಿಯಾಗಿದೆ.  2023ರ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯನ್ನು ಐಎಂಡಿ ರಿಲೀಸ್ ಮಾಡಿದೆ. ಕಳೆದ ವರ್ಷ ಬಾಲಿವುಡ್​ (Bollywood Movie) ಭಾರೀ ಒಡೆತ ತಿಂದಿದೆ. ಸ್ಟಾರ್ ನಟರ ಸಿನಿಮಾಗಳೇ ನೆಲ ಕಚ್ಚಿತ್ತು. ಯಾವ ಸಿನಿಮಾ ಕೂಡ ಹೇಳಿಕೊಳ್ಳುವ ಕಲೆಕ್ಷನ್ ಮಾಡಲಿಲ್ಲ. ಮತ್ತೊಂದೆಡೆ ಬಾಯ್ಕಾಟ್​ ಬಾಲಿವುಡ್​ಗೆ ಅನೇಕ​ ಸಿನಿಮಾಗಳು ಬಲಿಯಾದವು. ಸೌತ್​ ಸಿನಿಮಾಗಳು ಕಳೆದ ವರ್ಷ ಸಖತ್ ಸದ್ದು ಮಾಡಿದೆ. ಕೆಜಿಎಫ್, RRR ಸಿನಿಮಾ ದೇಶ ವಿದೇಶಗಳು ದಾಖಲೆ ಬರೆಯಿತು. ಕಾಂತಾರ ಸಿನಿಮಾ ಬಾಲಿವುಡ್​ ಬಾಕ್ಸ್​ ಆಫೀಸ್ ಕೊಳ್ಳೆ ಹೊಡೆದಿತ್ತು. ಈ ವರ್ಷ ಬಾಲಿವುಡ್​ ನ ಅನೇಕ ಸಿನಿಮಾಗಳು ತೆರೆಗೆ ಬರಲಿದ್ದು, ಬಿಗ್​ ಬಜೆಟ್​ ನಲ್ಲಿ ತಯಾರಾಗ್ತಿರುವ ಸೌತ್ ಸಿನಿಮಾಗಳು (South Movie) ಕೂಡ ಈ ವರ್ಷ ರಿಲೀಸ್​ ಆಗಲು ರೆಡಿಯಾಗಿವೆ. ಐಎಂಡಿಬಿ ಸಂಸ್ಥೆ ಈ ವರ್ಷ ರಿಲೀಸ್​ ಆಗುತ್ತಿರುವ ಭಾರತೀಯ ಸಿನಿಮಾಗಳ 20 ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿ (IMDb) ರಿಲೀಸ್ ಮಾಡಿದೆ.


IMDb Announces the Most Anticipated Indian Movies of 2023 pvn


ಪಠಾಣ್, ಜವಾನ್​: ಬಾಲಿವುಡ್​ ಬಾದ್ ಷಾ ಶಾರುಖ್ ಖಾನ್​ ಅಭಿನಯದ ಪಠಾಣ್​ ಸಿನಿಮಾ ಜನವರಿ 25 ರಂದು ರಿಲೀಸ್​ ಆಗಲಿದೆ. ಶಾರುಖ್​ಗೆ ನಟಿ ದೀಪಿಕಾ ಪಡುಕೊಣೆ ಜೋಡಿಯಾಗಿದ್ದು, ಚಿತ್ರದ ಬೇಷರಂ ಹಾಡು ಬಿಡುಗಡೆ ಆದಾಗಿಲಿಂದಲೂ ಭಾರೀ ವಿವಾದ ಸೃಷ್ಟಿಸಿದೆ. ಚಿತ್ರವನ್ನು ಬ್ಯಾನ್ ಮಾಡ್ಬೇಕು ಎನ್ನುವ ಕೂಗು ಕೇಳಿ ಬಂದಿದೆ. 4 ವರ್ಷದ ಬಳಿಕ ತೆರೆ ಮೇಲೆ ಬರ್ತಿರುವ ಶಾರುಖ್ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ. ಶಾರುಖ್ ಅಭಿನಯದ ಮತ್ತೊಂದು ಸಿನಿಮಾ ಜವಾನ್ ಕೂಡ ಇದೇ ವರ್ಷ ಬಿಡುಗಡೆಯಾಗಲಿದೆ.


ಟೈಗರ್ 3 : ಸಲ್ಮಾನ್ ಖಾನ್ ಬಹುನಿರೀಕ್ಷಿತ ಸಿನಿಮಾ ಟೈಗರ್ 3 ಕೂಡ ಇದೇ ವರ್ಷ ಬಿಡುಗಡೆಯಾಗಲಿದೆ,  ಏಪ್ರಿಲ್ 21 ರಂದು ಸಿನಿಮಾ ರಿಲೀಸ್ ಮಾಡೋದಾಗಿ ಘೋಷಣೆ ಮಾಡಲಾಲಿದೆ. ಏಕ್ ಥಾ ಟೈಗರ್ ಸಿನಿಮಾ ರಿಲೀಸ್ ಆಗಿ 10 ವರ್ಷ ಪೂರೈಸುತ್ತಿರುವ ಹಿನ್ನೆಲೆ ಇದೇ ವರ್ಷ ಟೈಗರ್ 3 ಕೂಡ ಇದೆ ವರ್ಷ ರಿಲೀಸ್ ಆಗಲಿದೆ.




ಸಲಾರ್​: ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್‌ನಲ್ಲಿ 'ಸಲಾರ್‌' ಸಿನಿಮಾ ತಯಾರಾಗುತ್ತಿದೆ. ಹೊಂಬಾಳೆ ಸಿನಿಮಾ ಚಿತ್ರವನ್ನು ನಿರ್ಮಾಣ ಮಾಡ್ತಿದೆ. ಈ ಬಿಗ್ ಬಜೆಟ್ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ.  ಈ ಸಿನಿಮಾ ಕೂಡ ಸೆಪ್ಟೆಂಬರ್​ 28 ರಂದು ಬಿಡುಗಡೆಯಾಗಲಿದೆ ಎಂದು ಹೇಳಲಾಗ್ತಿದೆ.  ತೆರೆ ಮೇಲೆ ಸಿನಿಮಾ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ.




ಪುಪ್ಪ-2:  ಪುಪ್ಪ ದಿ ರೈಸ್​ 2021ರಲ್ಲಿ ತೆರೆ ಕಂಡು ಭರ್ಜರಿ ಯಶಸ್ಸು ಕಂಡಿತ್ತು. ಇದೀಗ ಪುಪ್ಪ ಪಾರ್ಟ್ 2 ಸಿದ್ದವಾಗ್ತಿದೆ. ನಟ ಅಲ್ಲು ಅರ್ಜುನ್ ಹಾಗೂ ನಟಿ ರಶ್ಮಿಕಾ ಮಂದಣ್ಣ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಈ ಸಿನಿಮಾ ಕೂಡ ಇದೆ ವರ್ಷ ತೆರೆಗೆ ಬರಲು ರೆಡಿಯಾಗಿದೆ.


ತಮಿಳು ಸಿನಿಮಾ:  ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾ ಕೂಡ ಇದೇ ವರ್ಷ ರಿಲೀಸ್ ಆಗಲಿದೆ. ತಮಿಳಿನ ದಳಪತಿ ವಿಜಯ್ ಅಭಿನಯದ ವರಿಸು ಸಿನಿಮಾ ಜನವರಿ 11 ಕ್ಕೆ ರಿಲೀಸ್ ಆಗಲಿದೆ. ಪೊನ್ನಿಯಿನ್ ಸೆಲ್ವನ್​ 2  ಸಿನಿಮಾ ಕೂಡ ಇದೆ ವರ್ಷ ತೆರೆಗೆ ಬರಲು ರೆಡಿಯಾಗಿದೆ.


IMDb Announces the Most Anticipated Indian Movies of 2023 pvn
ಸಿನಿಮಾಗಳ ಲಿಸ್ಟ್​


ಕಮಲ್ ಹಾಸನ್ ಅಭಿನಯದ ಇಂಡಿಯನ್ ಮೂವಿ, ಪ್ರಭಾಸ್ ಅಭಿನಯದ ಆದಿಪುರುಷಲು ಹಾಗೂ ಅಜಿತ್ ಅಭಿನಯದ ತುಣಿವು ಸಿನಿಮಾ ಕೂಡ ಇದೇ ವರ್ಷ ತೆರೆಗೆ ಬರಲು ರೆಡಿಯಾಗಿದೆ.

Published by:ಪಾವನ ಎಚ್ ಎಸ್
First published: