ಐಫಾ ಪ್ರಶಸ್ತಿ ಪ್ರದಾನ: ತುಮ್ಹಾರಿ ಸುಲು ಅತ್ಯುತ್ತಮ ಚಿತ್ರ, ಶ್ರೀದೇವಿ ಅತ್ಯುತ್ತಮ ನಟಿ, ಇರ್ಫಾನ್​ ಖಾನ್​ ಅತ್ಯುತ್ತಮ ನಟ

news18
Updated:June 25, 2018, 4:51 PM IST
ಐಫಾ ಪ್ರಶಸ್ತಿ ಪ್ರದಾನ: ತುಮ್ಹಾರಿ ಸುಲು ಅತ್ಯುತ್ತಮ ಚಿತ್ರ, ಶ್ರೀದೇವಿ ಅತ್ಯುತ್ತಮ ನಟಿ, ಇರ್ಫಾನ್​ ಖಾನ್​ ಅತ್ಯುತ್ತಮ ನಟ
news18
Updated: June 25, 2018, 4:51 PM IST
ನ್ಯೂಸ್​ 18 ಕನ್ನಡ

ಬ್ಯಾಂಕಾಕ್‌(ಜೂನ್​ 25): ಬಾಲಿವುಡ್​ನ ಆಸ್ಕರ್​ ಪ್ರಶಸ್ತಿ ಎಂದೇ ಕರೆಯಲಾಗುವ 'ಐಫಾ (ಐಐಎಫ್​ಎ)' ಪ್ರಶಸ್ತಿ ಪ್ರದಾನ ಸಮಾರಂಭ ಬ್ಯಾಂಕಾಕ್​ನಲ್ಲಿ ಬಹಳ ಅದ್ದೂರಿಯಾಗಿ ನಡೆದಿದೆ. ಬಾಲಿವುಡ್​ನ ನಟ, ನಟಿ, ನಿರ್ದೇಶಕ, ನಿರ್ಮಾಪಕರ ದಂಡೇ ಅಲ್ಲಿ ಸೇರಿತ್ತು.ಈ ವರ್ಷದ ಐಫಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 'ತುಮ್ಹಾರಿ ಸುಲು' ಅತ್ಯುತ್ತಮ ಸಿನಿಮಾ, ಶ್ರೀದೇವಿಗೆ ಅತ್ಯುತ್ತಮ ನಟಿ ಪ್ರಶಸ್ತಿ, ಇರ್ಫಾನ್​ ಖಾನ್​ಗೆ ಅತ್ಯುತ್ತಮ ನಟ ಪ್ರಶಸ್ತಿ ಪ್ರದಾನ ಮಾಡಲಾಯಿತು.

'ಮಾಮ್'​ ಸಿನಿಮಾದ ಅಭಿನಯಕ್ಕಾಗಿ ಶ್ರೀದೇವಿಗೆ ಮರಣೋತ್ತರವಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಮತ್ತು 'ಹಿಂದಿ ಮೀಡಿಯಂ' ಚಿತ್ರದ ನಟನೆಗಾಗಿ ಇರ್ಫಾನ್​ ಖಾನ್​ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆದರೆ, ಅನಾರೋಗ್ಯದ ಕಾರಣ ಸಮಾರಂಭಕ್ಕೆ ಅವರು ಗೈರುಹಾಜರಾಗಿದ್ದರು.ವಿದ್ಯಾ ಬಾಲನ್​ ಅಭಿನಯದ 'ತುಮ್ಹಾರಿ ಸುಲು' ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನೊಳಗೊಂಡು 7 ಪ್ರಶಸ್ತಿಗಳನ್ನು ಬಾಚಿಕೊಂಡಿತು. ಶಶಿ ಕಪೂರ್‌ ಚಿತ್ರರಂಗಕ್ಕೆ ನೀಡಿದ ಕೊಡುಗೆ ಪರಿಗಣಿಸಿ ಮರಣೋತ್ತರವಾಗಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕೆಲ ತಿಂಗಳ ಹಿಂದೆ ನಿಧನರಾದ ನಟಿ ಶ್ರೀದೇವಿ ಪರವಾಗಿ ಅವರ ಪತಿ ಬೋನಿ ಕಪೂರ್​ ಪ್ರಶಸ್ತಿ ಸ್ವೀಕರಿಸಿದರು. ಕಳೆದ ವರ್ಷ ನಿಧನರಾದ ನಟ ಶಶಿ ಕಪೂರ್​ ಪರವಾಗಿ ರಿಷಿ ಕಪೂರ್ ಮತ್ತು ರಣಬೀರ್ ಕಪೂರ್ ಪ್ರಶಸ್ತಿಯನ್ನು ಸ್ವೀಕರಿಸಿದರು. ವಿನೋದ್​ ಖನ್ನಾ ಅವರ ಪರವಾಗಿ ರಮೇಶ್​ ಸಿಪ್ಪಿ ಪ್ರಶಸ್ತಿ ಸ್ವೀಕರಿಸಿದರು.ಇತರೆ ವಿಭಾಗಗಳ ಪುರಸ್ಕೃತರು:
'ಹಿಂದಿ ಮೀಡಿಯಂ' ಸಿನಿಮಾದ ನಿರ್ದೇಶನಕ್ಕಾಗಿ ಸಾಕೇತ್​ ಚೌಧರಿಗೆ ಅತ್ಯುತ್ತಮ ನಿರ್ದೇಶಕ, 'ಸೀಕ್ರೆಟ್​ ಸೂಪರ್​ಸ್ಟಾರ್​' ಸಿನಿಮಾದ ಅಭಿನಯಕ್ಕೆ ಮೆಹೆರ್​ ವಿಜ್​ಗೆ ಅತ್ಯುತ್ತಮ ಪೋಷಕ ನಟಿ, 'ಮಾಮ್'​ ಸಿನಿಮಾದ ಅದ್ಭುತ ನಟನೆಗಾಗಿ ನವಾಜುದ್ದೀನ್​ ಸಿದ್ದಿಕಿ ಅತ್ಯುತ್ತಮ ಪೋಷಕನಟ ಪ್ರಶಸ್ತಿಗಳನ್ನು ಪಡೆದರು. ಹಿರಿಯ ನಟ ಅನುಪಮ್​ ಖೇರ್​ಗೆ ಅತ್ಯುತ್ತಮ ಸಾಧಕ ಪ್ರಶಸ್ತಿಯನ್ನು ನಟ ಅನಿಲ್​ ಕಪೂರ್​ ಪ್ರದಾನ ಮಾಡಿದರು.'ನ್ಯೂಟನ್​' ಸಿನಿಮಾಗಾಗಿ ನಿರ್ದೇಶಕ ಅಮಿತ್​ ವಿ. ಮಸೂರ್ಕರ್​ಗೆ ಅತ್ಯುತ್ತಮ ಕತೆ, 'ಸೀಕ್ರೆಟ್​ ಸೂಪರ್​ಸ್ಟಾರ್'​ ಚಿತ್ರದ ಹಾಡಿಗಾಗಿ ಮೇಘನಾ ಮಿಶ್ರಾಗೆ ಅತ್ಯುತ್ತಮ ಹಿನ್ನೆಲೆ ಗಾಯಕಿ, 'ಜಬ್​ ಹ್ಯಾರಿ ಮೆಟ್​ ಸೇಜಲ್'​ ಚಿತ್ರದ ಗೀತೆಗೆ ಅರಿಜಿತ್​ ಸಿಂಗ್​ಗೆ ಅತ್ಯುತ್ತಮ ಹಿನ್ನೆಲೆ ಗಾಯಕ, 'ಬದ್ರಿನಾಥ್​ ಕಿ ದುಲ್ಹನಿಯ' ಸಿನಿಮಾದ ಸಂಗೀತಕ್ಕಾಗಿ ಅಮಾಲ್​ ಮಲ್ಲಿಕ್​, ತನಿಷ್ಕ್​, ಅಖಿಲ್​ ಸಚ್​ದೇವ್​ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ರಂಗಿನ ಕಾರ್ಯಕ್ರಮದಲ್ಲಿ ಬಾಲಿವುಡ್​ ತಾರೆಗಳಾದ ರಣಬೀರ್​ ಕಪೂರ್​, ವರುಣ್​ ಧವನ್, ಅರ್ಜುನ್​, ಕೃತಿ ಸನನ್​, ಬಾಬ್ಬಿ ಡಿಯೋಲ್​, ಶ್ರದ್ಧಾ ಸೇಠ್​ ಮುಂತಾದವರು ನೃತ್ಯ ಪ್ರದರ್ಶನ ನೀಡಿದರು.

First published:June 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...