ಯಶ್​ ಆಫರ್​ ನೀಡಿದರೆ ಈ ಬಾಲಿವುಡ್​ ನಟಿ ಕನ್ನಡ ಚಿತ್ರರಂಗಕ್ಕೆ ಕಾಲಿಡ್ತಾರಂತೆ!

ವಿದ್ಯಾ ಬಾಲನ್​ ಕನ್ನಡ ಚಿತ್ರರಂಗಕ್ಕೆ ಕಾಲಿಡುವುದು ಯಾವಾಗ ಎನ್ನುವ ಪ್ರಶ್ನೆ ಕೇಳಿ ಬಂದಿತ್ತು. ಅದಕ್ಕೆ ಉತ್ತರಿಸಿದ್ದ ವಿದ್ಯಾ, “ಯಶ್​ ಅವಕಾಶ ನೀಡಿದರೆ ಖಂಡಿತವಾಗಿಯೂ ಕನ್ನಡಕ್ಕೆ ಕಾಲಿಡುತ್ತೇನೆ” ಎಂದು ಸಂತಸ ವ್ಯಕ್ತಪಡಿಸಿದರು.

Rajesh Duggumane | news18
Updated:January 10, 2019, 12:02 PM IST
ಯಶ್​ ಆಫರ್​ ನೀಡಿದರೆ ಈ ಬಾಲಿವುಡ್​ ನಟಿ ಕನ್ನಡ ಚಿತ್ರರಂಗಕ್ಕೆ ಕಾಲಿಡ್ತಾರಂತೆ!
ವಿದ್ಯಾ ಬಾಲನ್​, ಯಶ್​
  • News18
  • Last Updated: January 10, 2019, 12:02 PM IST
  • Share this:
‘ಕೆಜಿಎಫ್​’ ಚಿತ್ರ 200 ಕೋಟಿ ರೂ. ಗಳಿಕೆ ಮಾಡಿದೆ. ಸಿನಿಮಾ ಬಾಲಿವುಡ್​ನಲ್ಲೂ ಒಳ್ಳೆಯ ಕಮಾಯಿ ಮಾಡುತ್ತಿದೆ. ಈ ಚಿತ್ರದಿಂದ ‘ರಾಕಿಂಗ್​ ಸ್ಟಾರ್​’ ಯಶ್​ ಖ್ಯಾತಿ ಹಿಂದಿ ಚಿತ್ರರಂಗಕ್ಕೂ ಹಬ್ಬಿದೆ. ನಟಿ ರವೀನಾ ಟಂಡನ್​ ಸೇರಿ ಅನೇಕರ ಬಾಲಿವುಡ್​ ಕಲಾವಿದರು ಯಶ್​ಗೆ ಅಭಿನಂದನೆ ತಿಳಿಸಿದ್ದಾರೆ. ಅಚ್ಚರಿ ಎಂದರೆ, ಹಿಂದಿ ನಟಿಯೊಬ್ಬರು, ಈಗ ಕನ್ನಡ ಚಿತ್ರರಂಗಕ್ಕೆ ಕಾಲಿಡುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಯಶ್​ ಆಫರ್​ ನೀಡಿದರೆ, ಅವರು ಚಂದನವನದಲ್ಲಿ ಬಣ್ಣ ಹಚ್ಚಲಿದ್ದಾರಂತೆ.

ಹಾಗಾದರೆ ಯಾರು ಆ ನಟಿ? ವಿದ್ಯಾ ಬಾಲನ್​. ಹೌದು, ಈ ಬಗ್ಗೆ ಸ್ವತಃ ವಿದ್ಯಾ ಮಾತನಾಡಿದ್ದಾರೆ. ಅವರು ಬಾಲಿವುಡ್​ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.  ಇತ್ತೀಚೆಗೆ ನಡೆದ ‘ಎನ್​ಟಿಆರ್​ ಕಥಾನಾಯಕುಡು’ ಸಿನಿಮಾದ ಸುದ್ದಿಗೋಷ್ಠಿಗೆ ಚಿತ್ರತಂಡ ಬೆಂಗಳೂರಿಗೆ ಆಗಮಿಸಿತ್ತು. ಎನ್​ಟಿಆರ್​ ಪತ್ನಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ವಿದ್ಯಾ ಬಾಲನ್​ ಕೂಡ ಆಗಮಿಸಿದ್ದರು. ಪುನೀತ್​ ರಾಜ್​ಕುಮಾರ್​ ಹಾಗೂ ಯಶ್​ ಕೂಡ ಆಗಮಿಸಿ ಚಿತ್ರಕ್ಕೆ ಬೆಂಬಲ ಸೂಚಿಸಿದರು.

ಇದನ್ನೂ ಓದಿ: ಪುನೀತ್​ ರಾಜ್​ಕುಮಾರ್​ ಬೇಕು ಎಂದು ಹಠ ಹಿಡಿದ ಕಾರನ್ನು ಗಿಫ್ಟ್​ ಕೊಟ್ಟಿದ್ದರಂತೆ ಎನ್​ಟಿಆರ್​!

ಈ ವೇಳೆ, ವಿದ್ಯಾ ಬಾಲನ್​ ಕನ್ನಡ ಚಿತ್ರರಂಗಕ್ಕೆ ಕಾಲಿಡುವುದು ಯಾವಾಗ ಎನ್ನುವ ಪ್ರಶ್ನೆ ಕೇಳಿ ಬಂದಿತ್ತು. ಅದಕ್ಕೆ ಉತ್ತರಿಸಿದ್ದ ವಿದ್ಯಾ, “ಯಶ್​ ಅವಕಾಶ ನೀಡಿದರೆ ಖಂಡಿತವಾಗಿಯೂ ಕನ್ನಡಕ್ಕೆ ಕಾಲಿಡುತ್ತೇನೆ” ಎಂದು ಸಂತಸ ವ್ಯಕ್ತಪಡಿಸಿದರು.

2011ರಲ್ಲಿ ತೆರೆಕಂಡ ಮಲಯಾಳಂನ ‘ಊರ್ಮಿ’ ಚಿತ್ರದ ಮೂಲಕ ವಿದ್ಯಾ ದಕ್ಷಿಣ ಭಾರತಕ್ಕೆ ಕಾಲಿಟ್ಟರು. ನಂತರ ಹಿಂದಿ ಚಿತ್ರರಂಗದಲ್ಲಿ ಬ್ಯಸಿಯಾದರು. ಈಗ ‘ಎನ್​ಟಿಆರ್​ ಕಥಾನಾಯುಕುಡು’ ಸಿನಿಮಾ ಮೂಲಕ ದಕ್ಷಿಣ ಭಾರತಕ್ಕೆ ಕಂಬ್ಯಾಕ್​ ಮಾಡಿದ್ದಾರೆ. ತೆಲುಗಿನಲ್ಲಿ ಇದು ಅವರ ಚೊಚ್ಚಲ ಸಿನಿಮಾ ಕೂಡ ಹೌದು. ಈಗ ಅವರು ಕನ್ನಡಕ್ಕೆ ಕಾಲಿಡಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಡಾ. ರಾಜ್​ಕುಮಾರ್​ ಬಯೋಪಿಕ್​ನಲ್ಲಿ 'ಅಪ್ಪು' ಅಭಿನಯಿಸಬೇಕಂತೆ; ಇದು ತೆಲುಗು ನಟ ಬಾಲಯ್ಯ ಕೋರಿಕೆ!

First published:January 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading