ಸನ್ನಿ ಲಿಯೋನ್ ಮೃತ ಪಟ್ಟರೆ ಟಿ.ವಿಯಲ್ಲಿ ಏನು ಪ್ರಸಾರ ಮಾಡುತ್ತೀರಾ? ಹೀಗೆ ಕೇಳಿದವರು ಯಾರು ಗೊತ್ತಾ?

news18
Updated:March 1, 2018, 6:01 PM IST
ಸನ್ನಿ ಲಿಯೋನ್ ಮೃತ ಪಟ್ಟರೆ ಟಿ.ವಿಯಲ್ಲಿ ಏನು ಪ್ರಸಾರ ಮಾಡುತ್ತೀರಾ? ಹೀಗೆ ಕೇಳಿದವರು ಯಾರು ಗೊತ್ತಾ?
  • News18
  • Last Updated: March 1, 2018, 6:01 PM IST
  • Share this:
ನ್ಯೂಸ್ 18 ಕನ್ನಡ

ತಮಿಳು ನಟಿ ಕಸ್ತೂರಿ ಶಂಕರ್ ಅವರು ಇತ್ತೀಚೆಗೆ ಒಂದಲ್ಲಾ ಒಂದು ವಿವಾದಗಳಿಂದ ಸುದ್ದಿಯಾಗುತ್ತಲೇ ಇದ್ದಾರೆ. ಸದ್ಯ ತಮ್ಮ ಟ್ವಿಟರ್​ನಲ್ಲಿ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಬಾಲಿವುಡ್​ ನಟಿ ಸನ್ನಿ ಲಿಯೋನ್ ಅವರ ಬಗ್ಗೆ ಟ್ವೀಟ್ ಮಾಡುವ ಮೂಲಕ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

‘ಶ್ರೀದೇವಿ ಮೃತಪಟ್ಟರೆಂದು ಎಲ್ಲಾ ಸುದ್ದಿ ವಾಹಿನಿಗಳು ಅವರ ಹಾಡನ್ನು, ವೀಡಿಯೋವನ್ನೇ ಪ್ರಸಾರಮಾಡುತ್ತಿವೆ. ಒಂದು ವೇಳೆ ಸನ್ನಿ ಲಿಯೋನ್ ಮೃತಪಟ್ಟರೆ ಏನು ಮಾಡುತ್ತಾರೆ?’ ಎಂದು ಕಸ್ತೂರಿ ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ಅನೇಕ ಕಡೆಗಳಿಂದ ಆಕ್ಷೇಪ ವ್ಯಕ್ತವಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಟೇಕೆಗಳು ಕೇಳಿಬರುತ್ತಿದೆ.

 



ಇನ್ನು ಈ ಬಗ್ಗೆ ಸ್ಪಷ್ಟನೆ ನೀಡಿರುವ ನಟಿ ಕಸ್ತೂರಿ ಶಂಕರ್ ಅವರು, ‘ಪೇಸ್​ಬುಕ್​ನಲ್ಲಿ ಇದ್ದಂತಹ ಜೋಕ್ ​ಒಂದನ್ನು  ಹಂಚಿಕೊಂಡಿರುವೆ ಅಷ್ಟೆ’ ಎಂದು ಹೇಳಿದ್ದಾರೆ.

ಈ ಹಿಂದೆ ಕೂಡ ಹಲವಾರು ನಟಿಯರ ವಿರುದ್ದ ಆರೋಪ ಮಾಡಿರುವ ಕಸ್ತೂರಿ, ಇತ್ತೀಚೆಗೆ ಕಮಲ್ ಹಾಸನ್ ರಾಜಕೀಯ ಪ್ರವೇಶದ ವಿಚಾರವಾಗಿ ಟ್ವೀಟ್ ಮಾಡಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.

 
First published: March 1, 2018, 6:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading