ಇಸ್ರೇಲಿ ಚಲನಚಿತ್ರ ನಿರ್ದೇಶಕ ನಾದವ್ ಲ್ಯಾಪಿಡ್ (Nadav Lapid) ಅವರು 'ದಿ ಕಾಶ್ಮೀರ ಫೈಲ್ಸ್' (The Kashmir Files) ಚಿತ್ರವನ್ನು 'ಅಸಭ್ಯ ಸಿನಿಮಾ' ಎಂದು ಹೇಳಿಕೆ ನೀಡಿದ್ದರು. ಗೋವಾ (Goa) ಅಂತಾರಾಷ್ಟ್ರೀಯ ಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದ್ದರು. ಈ ಚಿತ್ರೋತ್ಸವದ 15ನೇ ಚಿತ್ರ, ದಿ ಕಾಶ್ಮೀರ್ ಫೈಲ್ಸ್ನಿಂದ ನಾವೆಲ್ಲರೂ ವಿಚಲಿತರಾಗಿದ್ದೇವೆ. ಆಘಾತಕ್ಕೊಳಗಾಗಿದ್ದೇವೆ. ಕಾಶ್ಮೀರ್ ಫೈಲ್ಸ್ 'ಅಸಭ್ಯ ಚಲನಚಿತ್ರ' ಎಂದು ಟೀಕಿಸಿದ್ದ ನಾದವ್ ಲ್ಯಾಪಿಡ್ ಹೇಳಿಕೆ ಕುರಿತು 'ದಿ ಕಾಶ್ಮೀರ್ ಫೈಲ್ಸ್' ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) 'ಎಚ್ಚರಿಕೆ'ಯ ಟ್ವೀಟ್ ಒಂದನ್ನು (Tweet) ಮಾಡಿದ್ದಾರೆ.
ಆ ಟ್ವೀಟ್ನಲ್ಲಿ “ಇದಾದ ನಂತರ ಕಾಶ್ಮೀರದಲ್ಲಿ ಯಾರೇ ಆಗಲಿ ಹಿಂದೂಗಳನ್ನು ಟಾರ್ಗೆಟ್ ಮಾಡಿದರೆ, ಅವರ ಕೈಯಲ್ಲಿ ಯಾರ ರಕ್ತವಿದೆ ಎಂಬುದು ನಿಮಗೆ ತಿಳಿಯುತ್ತೆ. ದಯವಿಟ್ಟು ಈ ಟ್ವೀಟ್ ಅನ್ನು ಸೇವ್ ಮಾಡಿ" ಎಂದು ಅಗ್ನಿಹೋತ್ರಿ ಟ್ವೀಟಿಸಿದ್ದಾರೆ.
ಕೊನೆಗೂ ಮೌನ ಮುರಿದಿರುವ ʼದಿ ಕಾಶ್ಮೀರಿ ಫೈಲ್ಸ್ʼ ನಿರ್ದೇಶಕ
ಗೋವಾದಲ್ಲಿ ನಡೆದ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಲ್ಯಾಪಿಡ್ ಅವರು ಭಾರತ ಸರ್ಕಾರದಿಂದ ರೆಸಿಸ್ಟೆನ್ಸ್ ಫ್ರಂಟ್ (ಭಯೋತ್ಪಾದನಾ ಗುಂಪು ಲಷ್ಕರ್-ಎ-ತೊಯ್ಬಾದ ಶಾಖೆ)ಗೆ 'ಸೈದ್ಧಾಂತಿಕ ಬೆಂಬಲ' ನೀಡಲಾಗುತ್ತಿದೆ ಎಂದು ಪ್ರತಿಪಾದಿಸಿದರು ಎಂದು ಅಗ್ನಿಹೋತ್ರಿ ಉಲ್ಲೇಖಿಸಿದ್ದಾರೆ.
“ಗೋವಾದಲ್ಲಿ ಹೇಳಿದ ಲ್ಯಾಪಿಡ್ ಅವರ ಆ ಹೇಳಿಕೆಯಾದ ಭಾರತವು ಇಸ್ಲಾಮಿ ಭಯೋತ್ಪಾದಕರಿಗೆ ಸೈದ್ಧಾಂತಿಕ ಬೆಂಬಲವನ್ನು ಬಹಿರಂಗವಾಗಿ ನೀಡುತ್ತಿದೆ ಎಂದು ಹೇಳಿದ ಒಂದು ವಾರದ ನಂತರ ದಿ ರೆಸಿಸ್ಟೆನ್ಸ್ ಫ್ರಂಟ್ (ಎಲ್ಇಟಿಯ ಮುಂಭಾಗ) ತನ್ನ ಭಯೋತ್ಪಾದಕರಿಂದ ಗುರಿಯಾಗುವ ಕಾಶ್ಮೀರಿ ಹಿಂದೂಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು" ಎಂದು ಅಗ್ನಿಹೋತ್ರಿ ಉಲ್ಲೇಖಿಸಿದ್ದಾರೆ.
ಆ ಟ್ವೀಟ್ನೊಂದಿಗೆ ಅವರು ಗೋವಾದಲ್ಲಿ ನಡೆದ ಚಲನಚಿತ್ರೋತ್ಸವದಲ್ಲಿ ಲ್ಯಾಪಿಡ್ ಮಾತನಾಡುತ್ತಿರುವ ಫೋಟೋಗಳನ್ನು ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರ ಪೋಟೋಗಳನ್ನು ಲಗತ್ತಿಸಿದ್ದಾರೆ.
ಅಗ್ನಿಹೋತ್ರಿ ಅವರು kashmirfight.com ವೆಬ್ಸೈಟ್ನಿಂದ ಪೋಟೋಗಳನ್ನು ತೆಗೆದುಕೊಂಡು ತಮ್ಮ ಟ್ವೀಟರ್ ಖಾತೆಯಲ್ಲಿ ಆ ಪೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ "1 ಮತ್ತು 2 ನೇ ಪೋಟೋಗಳು ಈ ವಿಷಯಕ್ಕೆ ಸಂಬಂಧಿಸಿದ ಕಾರಣಗಳನ್ನು ಸೂಚಿಸಿದರೆ, 3 ಮತ್ತು 4 ನೇ ಪೋಟೋಗಳು ಅದರ ಪರಿಣಾಮಗಳನ್ನು ತಿಳಿಸುತ್ತವೆ” ಎಂದು ತಿಳಿಸಿದ್ದಾರೆ.
ಚಿತ್ರದ ಕುರಿತು ನಾದವ್ ಲ್ಯಾಪಿಡ್ ಹೇಳಿದ್ದು ಏನು?
ಗೋವಾದಲ್ಲಿ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದ ನಾದವ್, 'ಈ ಚಿತ್ರೋತ್ಸವದ 15ನೇ ಚಿತ್ರ, ದಿ ಕಾಶ್ಮೀರ್ ಫೈಲ್ಸ್ನಿಂದ ನಾವೆಲ್ಲರೂ ವಿಚಲಿತರಾಗಿದ್ದೇವೆ. ಆಘಾತಕ್ಕೊಳಗಾಗಿದ್ದೇವೆ. ಅದು ಅಪಾಯಕಾರಿ ಸಿದ್ಧಾಂತವೊಂದನ್ನು ಪ್ರಚಾರ ಮಾಡುವ ಅಸಭ್ಯ ಚಲನಚಿತ್ರ' ಎಂದು ಟೀಕಿಸಿದ್ದಾರೆ.
'ಇಂತಹ ಪ್ರತಿಷ್ಠಿತ ಚಲನಚಿತ್ರೋತ್ಸವದ ಕಲಾತ್ಮಕ ಸ್ಪರ್ಧಾತ್ಮಕ ವಿಭಾಗಕ್ಕೆ ಸೂಕ್ತ ಚಿತ್ರವಲ್ಲ ಇದು ಎಂದು ಭಾಸವಾಯಿತು. ವೇದಿಕೆಯಲ್ಲಿ ನಿಮ್ಮೊಂದಿಗೆ ಈ ಭಾವನೆಗಳನ್ನು ಬಹಿರಂಗವಾಗಿ ಹಂಚಿಕೊಳ್ಳಲು ನನಗೆ ಸಂಪೂರ್ಣವಾಗಿ ಸ್ವಾತಂತ್ರ್ಯವಿದೆ. ಈ ಚಿತ್ರೋತ್ಸವದ ಮನೋಭಾವವು ಕಲೆಗೆ ಮತ್ತು ಜೀವನಕ್ಕೆ ಅಗತ್ಯವಾದ ವಿಮರ್ಶಾತ್ಮಕ ಚರ್ಚೆಯನ್ನು ಸಹ ಸ್ವೀಕರಿಸುವುದಾಗಿದೆ' ಎಂದು ನಾದವ್ ಅಭಿಪ್ರಾಯ ಪಟ್ಟಿದ್ದಾರೆ.
'ದಿ ಕಾಶ್ಮೀರ್ ಫೈಲ್ಸ್' ಚಿತ್ರ
ಈ ಚಿತ್ರವನ್ನು ಅಗ್ನಿಹೋತ್ರಿ ಅವರು ನಿರ್ದೇಶಿಸಿದ್ದಾರೆ. ಅನುಪಮ್ ಖೇರ್, ಮಿಥುನ್ ಚಕ್ರವರ್ತಿ ಮತ್ತು ಇತರರು ನಟಿಸಿದ್ದಾರೆ - 1990 ರ ದಶಕದಲ್ಲಿ ಉಗ್ರಗಾಮಿತ್ವವು ಅತಿರೇಕವಾಗಿದ್ದಾಗ ಕಣಿವೆಯಿಂದ ಪಂಡಿತರ ನಿರ್ಗಮನದ ಸತ್ಯ-ಆಧಾರಿತ ನಿರೂಪಣೆಯ ಚಿತ್ರ ಇದಾಗಿದೆ ಎನ್ನಲಾಗಿದೆ.
ಈ ಚಿತ್ರವನ್ನು ಬಿಜೆಪಿ ನಾಯಕರು ಶ್ಲಾಘಿಸಿದ್ದಾರೆ ಮತ್ತು ಹಲವಾರು ಪಕ್ಷಗಳ ಆಡಳಿತವಿರುವ ರಾಜ್ಯಗಳು ಅದನ್ನು ಚಿತ್ರಮಂದಿರಗಳಲ್ಲಿ ಪ್ರದರ್ಶಿಸಿದಾಗ ತೆರಿಗೆ ಮುಕ್ತ ಸ್ಥಾನಮಾನವನ್ನು ನೀಡಿವೆ.
ಲ್ಯಾಪಿಡ್ ಅವರು ಭಾರತಕ್ಕೆ ಕ್ಷಮೆ ಕೇಳಬೇಕೆಂದು ಸೂಚನೆ ನೀಡಿದ ಇಸ್ರೇಲ್ ರಾಯಭಾರಿ
ಲ್ಯಾಪಿಡ್ ಅವರ ಟೀಕೆಗಳನ್ನು ಅವರ ತಾಯ್ನಾಡು ಆದ ಇಸ್ರೇಲ್ನ ರಾಜತಾಂತ್ರಿಕರು ಸಹ ನಿಷೇಧಿಸಿದ್ದಾರೆ. ಇದಾದ ನಂತರ ಇಸ್ರೇಲ್ ರಾಯಭಾರಿ ನೌರ್ ಗಿಲೋನ್ ಅವರು ಲ್ಯಾಪಿಡ್ ಅವರಿಗೆ ಭಾರತಕ್ಕೆ ಕ್ಷಮೆಯಾಚಿಸುವಂತೆ ಕರೆ ನೀಡಿದರು ಮತ್ತು ಅವರ ಮಾತುಗಳಿಗೆ 'ನಾಚಿಕೆಯಾಗಬೇಕು' ಎಂದು ಸಹ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ