• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Amitabh Bachchan: ಅಮಿತಾಭ್ ಬಚ್ಚನ್​ಗೆ ಈಗಲೂ ಚಾನ್ಸ್ ಸಿಗುತ್ತೆ, ನಮಗ್ಯಾಕಿಲ್ಲ? ಹೀಗೆಂದಿದ್ದೇಕೆ ನಟಿ ಆಶಾ ಪರೇಖ್

Amitabh Bachchan: ಅಮಿತಾಭ್ ಬಚ್ಚನ್​ಗೆ ಈಗಲೂ ಚಾನ್ಸ್ ಸಿಗುತ್ತೆ, ನಮಗ್ಯಾಕಿಲ್ಲ? ಹೀಗೆಂದಿದ್ದೇಕೆ ನಟಿ ಆಶಾ ಪರೇಖ್

ಅಮಿತಾಭ್ ಬಚ್ಚನ್ ಮತ್ತು ಆಶಾ ಪರೇಖ್

ಅಮಿತಾಭ್ ಬಚ್ಚನ್ ಮತ್ತು ಆಶಾ ಪರೇಖ್

ಇತ್ತೀಚೆಗೆ ಹಿರಿಯ ನಟಿಯರಾದ ಆಶಾ ಪರೇಖ್ ಮತ್ತು ತನುಜಾ ಒಟ್ಟಿಗೆ ಒಂದು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಸಿನಿಮಾ ರಂಗದ ಬಗ್ಗೆ ಕೆಲವೊಂದು ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದಾರೆ.

  • Share this:

1960 ಮತ್ತು 1970 ರ ದಶಕದಲ್ಲಿ ಹಿಂದಿ ಚಿತ್ರೋದ್ಯಮದಲ್ಲಿ (Cinema) ತುಂಬಾನೇ ಬೇಡಿಕೆಯಲ್ಲಿದ್ದ ನಟಿಯರ (Actress) ಸಾಲಿನಲ್ಲಿ ನಟಿ ಆಶಾ ಪರೇಖ್ (Asha Parekh) ಸಹ ಒಬ್ಬರು. ನಟಿ ಆಶಾ ಪರೇಖ್ ಅವರು ತಮ್ಮ ಸಮಯದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದರು ಅಂತ ಹೇಳಲಾಗುತ್ತಿದೆ ಮತ್ತು ಆ ಸಮಯದ ಅತ್ಯಂತ ಯಶಸ್ವಿ ನಟಿಯರಲ್ಲಿ ಒಬ್ಬರಾಗಿದ್ದರು. ಅವರನ್ನು ಹಿಂದಿ ಚಿತ್ರರಂಗದಲ್ಲಿ (Hindi Film Industry) ಸಾರ್ವಕಾಲಿಕ ಅತ್ಯಂತ ಪ್ರಭಾವಶಾಲಿ ನಟಿಯರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ನಟಿ ತೀಸ್ರಿ ಮಂಜಿಲ್, ಬಹಾರೋ ಕೆ ಸಪ್ನೆ, ಪ್ಯಾರ್ ಕಾ ಮೌಸಮ್ ಮತ್ತು ಕಾರವಾನ್ ನಂತಹ ಚಿತ್ರಗಳಲ್ಲಿ ನಟಿಸಿ ತುಂಬಾನೇ ಹೆಸರು ಮಾಡಿಕೊಂಡವರು.


ಈಗೇಕೆ ಈ ಹಿರಿಯ ನಟಿಯ ಬಗ್ಗೆ ಮಾತು ಅಂತೀರಾ? ಇತ್ತೀಚೆಗೆ ಹಿರಿಯ ನಟಿಯರಾದ ಆಶಾ ಪರೇಖ್ ಮತ್ತು ತನುಜಾ ಒಟ್ಟಿಗೆ ಒಂದು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಈ ಇಬ್ಬರು ನಟಿಯರು ಭಾರತೀಯ ಚಿತ್ರರಂಗದ ವಿಕಾಸದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.


ಆಶಾ ಪರೇಖ್ ತಮಗೆ ಸಿಗುತ್ತಿರುವ ಪಾತ್ರಗಳ ಬಗ್ಗೆ ಏನಂದ್ರು?


ಇತ್ತೀಚೆಗೆ, ಅವರು ಆ ಸಮಯದಲ್ಲಿ ಸಿನಿಮಾ ರಂಗದಲ್ಲಿ ಅಗತ್ಯವಿರುವ ಬದಲಾವಣೆಗಳ ಬಗ್ಗೆ ಮಾತನಾಡಿದರು. ಇತ್ತೀಚಿನ ಸಂಭಾಷಣೆಯಲ್ಲಿ, ಆಶಾ ಪರೇಖ್ ಅವರು ಹೇಗೆ ಅಮಿತಾಭ್ ಬಚ್ಚನ್ ಅವರಿಗೆ ಇನ್ನೂ ಒಳ್ಳೆಯ ಪಾತ್ರಗಳನ್ನು ಬರೆಯುತ್ತಾರೆ, ತಾವು ಮಾತ್ರ ಸಿನೆಮಾಗಳಲ್ಲಿ ಅಜ್ಜಿ ಅಥವಾ ತಾಯಿಯ ಪಾತ್ರವನ್ನು ಮಾಡುತ್ತಿರುವುದಾಗಿ ಹೇಳಿದರು.


ಇದನ್ನೂ ಓದಿ: ಐಸಿಯುನಲ್ಲಿ ಹಿರಿಯ ನಟ ಶರತ್ ಬಾಬು! ಹೇಗಿದೆ ನಟನ ಆರೋಗ್ಯ ಸ್ಥಿತಿ?


80 ವರ್ಷ ವಯಸ್ಸಿನ ಅಮಿತಾಭ್ ಬಚ್ಚನ್ ಇವತ್ತಿಗೂ ಸಹ ಹಿಂದಿ ಚಲನಚಿತ್ರೋದ್ಯಮದ ಅತ್ಯಂತ ಬ್ಯುಸಿಯಾಗಿರುವ ನಟರಲ್ಲಿ ಒಬ್ಬರು. ವಾಸ್ತವವಾಗಿ, ಅವರು ಸಿನೆಮಾಗಳಲ್ಲಿ ಒಮ್ಮೆ ಮಾಡಿದ ಪಾತ್ರ ಮತ್ತೆ ಅವರು ಮಾಡುವುದನ್ನು ನೀವು ಎಂದಿಗೂ ನೋಡುವುದಿಲ್ಲ. ಆಶಾ ಪರೇಖ್ ಮತ್ತು ತನುಜಾ ಇಬ್ಬರು ಮೈತ್ರಿ: ಫೀಮೇಲ್ ಫಸ್ಟ್ ಕಲೆಕ್ಟಿವ್ ಎಂಬ ಟಾಕ್ ಸೆಷನ್‌ನಲ್ಲಿ ಭಾಗವಹಿಸಿದರು, ಅಲ್ಲಿ ಬಿಗ್ ಬಿ ಗೆ ಇಂದಿಗೂ ಉತ್ತಮ ಪಾತ್ರಗಳನ್ನು ಹೇಗೆ ಬರೆಯಲಾಗುತ್ತಿದೆ ಎಂಬುದರ ಬಗ್ಗೆ ಆಶಾ ಅವರು ಮಾತನಾಡಿದರು.


ಅಮಿತಾಭ್‌ಗೆ ಪಾತ್ರಗಳನ್ನು ಬರೀತಾರೆ, ನಮಗೆ ಬರೆಯೋಲ್ಲ ಅಂದ್ರು ಆಶಾ


ಆಶಾ ಪರೇಖ್ ಅವರಿಗೆ ಸಿಗುತ್ತಿರುವ ಪಾತ್ರಗಳ ಬಗ್ಗೆ ಮಾತನಾಡುತ್ತಾ ಅವರು, "ಇಂದಿಗೂ ಸಹ ಅಮಿತಾಭ್ ಬಚ್ಚನ್, ಈ ವಯಸ್ಸಿನಲ್ಲಿಯೂ ಜನರು ಅವರಿಗಾಗಿ ಪಾತ್ರಗಳನ್ನು ಬರೆಯುತ್ತಿದ್ದಾರೆ. ಆದರೆ ಜನರು ನಮಗಾಗಿ ಪಾತ್ರಗಳನ್ನು ಏಕೆ ಬರೆಯುತ್ತಿಲ್ಲ? ನಾವು ಸಹ ಚಿತ್ರಕ್ಕೆ ಮುಖ್ಯವಾದ ಕೆಲವು ಪಾತ್ರಗಳನ್ನು ಪಡೆಯಬೇಕು. ಅದು ನಮಗೆ ಇಲ್ಲಿ ಸಿಗುತ್ತಿಲ್ಲ. ನಾವು ಬರೀ ತಾಯಿ, ಅಜ್ಜಿ ಅಥವಾ ಸಹೋದರಿಯಾಗಿ ನಟಿಸುವ ಪಾತ್ರಗಳನ್ನು ಪಡೆಯುತ್ತಿದ್ದೇವೆ. ಯಾರಿಗೆ ಆಸಕ್ತಿ ಇದೆ ನೋಡಿ ನಮಗಾಗಿ ಪಾತ್ರ ಬರೆಯೋದಕ್ಕೆ" ಅಂತ ಆಶಾ ಹೇಳಿಕೊಂಡರು.


ಅಮಿತಾಭ್ ಬಚ್ಚನ್ ಮತ್ತು ಆಶಾ ಪರೇಖ್


ಮದುವೆಯಾದ ನಟಿಯರ ಸಿನಿ ಜೀವನದ ಬಗ್ಗೆ ಮಾತನಾಡಿದ ಆಶಾ ಮತ್ತು ತನುಜಾ


ಆಶಾ ಪರೇಖ್ ಅವರು ನಟಿಯರು ಈ ಹಿಂದೆ ಮದುವೆಯಾಗುವುದರಿಂದ ಅವರ ಸಿನಿ ಜೀವನ ಮುಗಿದಿದೆ ಅಂತ ಹೇಗೆ ಜನರು ತಿಳಿದುಕೊಳ್ಳುತ್ತಿದ್ದರು ಎಂಬುದರ ಬಗ್ಗೆ ಮಾತನಾಡಿದರು. "ಮಹಿಳೆಯರಿಗೆ, ಆ ದಿನಗಳಲ್ಲಿ, ಅವರು ಮದುವೆಯಾದರೆ, ಅವರ ವೃತ್ತಿಜೀವನವು ಮುಗಿದಂತೆ ಭಾಸವಾಗುತ್ತಿತ್ತು. ಈಗ ಅದು ಹಾಗಿಲ್ಲ, ತುಂಬಾನೇ ಬದಲಾವಣೆ ಆಗಿದೆ. ನಾಯಕ ನಟನ ವಯಸ್ಸು 50 ಅಥವಾ 55 ವರ್ಷಗಳು ಮತ್ತು ಅವರು 20 ವರ್ಷ ವಯಸ್ಸಿನವರೊಂದಿಗೆ ಕೆಲಸ ಮಾಡುತ್ತಿದ್ದಾರೆ ಮತ್ತು ಅದು ಇಂದಿಗೂ ಜನರು ಒಪ್ಪುತ್ತಾರೆ ಮತ್ತು ಮೆಚ್ಚಿಕೊಳ್ಳುತ್ತಾರೆ” ಅಂತ ಆಶಾ ಹೇಳಿದರು.
"ಈಗ ಮಹಿಳೆಯರು ಅರ್ಥಮಾಡಿಕೊಳ್ಳುವುದು ಮತ್ತು ಅವರಿಗೆ ಅವರೇ ಹೇಳಿಕೊಳ್ಳುವ ಒಂದು ಮಾತು ಎಂದರೆ ಅವರಿಂದ ಎಲ್ಲವೂ ಸಾಧ್ಯವಿವೆ, ಅಸಾಧ್ಯವಾದುದ್ದು ಯಾವುದು ಇಲ್ಲ” ಅಂತ ನಟಿ ತನುಜಾ ಹೇಳಿದರು.

top videos
    First published: