• Home
  • »
  • News
  • »
  • entertainment
  • »
  • Viral News: 2ನೇ ಮದುವೆಯಾದ ಅಥರ್ ಅಮೀರ್ ಖಾನ್!

Viral News: 2ನೇ ಮದುವೆಯಾದ ಅಥರ್ ಅಮೀರ್ ಖಾನ್!

ಆಥರ್ ಅಮಿರ್ ಖಾನ್

ಆಥರ್ ಅಮಿರ್ ಖಾನ್

ದಾಬಿ ಅವರು 2016 ರ ರಾಜಸ್ಥಾನ ಕೇಡರ್ ಅಧಿಕಾರಿಯಾಗಿದ್ದು, ಡಾ. ಗವಾಂಡೆ ಅವರು 2013 ರ ಕೇಡರ್ ಅಧಿಕಾರಿಯಾಗಿದ್ದಾರೆ.

  • Share this:

ಈಗಂತೂ ಈ ವೈವಾಹಿಕ ಸಂಬಂಧಗಳು ಯಾವಾಗ ಮತ್ತು ಹೇಗೆ ಮುರಿದು ಬೀಳುತ್ತವೆ ಅಂತ ಊಹೆ ಸಹ ಮಾಡುವುದಕ್ಕೆ ಆಗುವುದಿಲ್ಲ ನೋಡಿ. ಹೌದು.. ಇಲ್ಲಿಯೂ ಸಹ ಅಂತಹದೇ ಒಂದು ಘಟನೆ ನಡೆದಿದೆ ನೋಡಿ. 2015 ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ 2ನೇ ಟಾಪರ್ ಆಗಿದ್ದ ಅಥರ್ ಅಮೀರ್ ಖಾನ್ ಅವರು ಕಾಶ್ಮೀರದಲ್ಲಿ ನಡೆದಂತಹ ಅದ್ದೂರಿ ಸಮಾರಂಭದಲ್ಲಿ ಡಾ. ಮೆಹ್ರೀನ್ ಖಾಜಿ ಅವರೊಂದಿಗೆ ವಿವಾಹವಾದರು. ಇದು ಅಥರ್ ಅವರ (Athar Aamir Khan) ಎರಡನೇ ವಿವಾಹವಾಗಿದೆ, ಅವರು ಈ ಹಿಂದೆ 2015 ರ ಯುಪಿಎಸ್‌ಸಿ ಟಾಪರ್ ಆಗಿರುವ ಟೀನಾ ದಾಬಿ (IAS Tina Dabi) ಅವರನ್ನು 2018 ರಲ್ಲಿ ವಿವಾಹವಾಗಿದ್ದರು. ಆದಾಗ್ಯೂ, 2020 ರಲ್ಲಿ ದಂಪತಿಗಳು ಬೇರ್ಪಟ್ಟರು. ನಂತರ, ದಾಬಿ ಅವರು ಈ ವರ್ಷದ ಏಪ್ರಿಲ್ ನಲ್ಲಿ ಐಎಎಸ್ ಅಧಿಕಾರಿಯಾದ ಪ್ರದೀಪ್ ಗವಾಂಡೆ ಅವರನ್ನು ಜೈಪುರದಲ್ಲಿ ವಿವಾಹವಾದರು. ಇವರ ಮದುವೆಯ ಕೆಲವು ತಿಂಗಳುಗಳ ನಂತರ ಎಂದರೆ ಜುಲೈನಲ್ಲಿ ಅಥರ್ ಮತ್ತು ಮೆಹ್ರೀನ್ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿತ್ತು.


ದಾಬಿಯ ವಿವಾಹವು ಕುಟುಂಬದ ಸದಸ್ಯರನ್ನು ಮತ್ತು ಸ್ನೇಹಿತರನ್ನು ಮಾತ್ರವೇ ಒಳಗೊಂಡಿದ್ದರೆ, ಇತ್ತ ಅಮೀರ್ ಮತ್ತು ಮೆಹ್ರೀನ್ ಅವರ ವಿವಾಹವು ಅದ್ಧೂರಿಯಾಗಿ ನಡೆಯಿತು. ಏತನ್ಮಧ್ಯೆ, ಅವರ ಸುಂದರವಾದ ಮದುವೆಯ ಫೋಟೋಗಳು ಮತ್ತು ವೀಡಿಯೋಗಳು ಇಂಟರ್ನೆಟ್ ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರು ಈ ಜೋಡಿಯನ್ನು ನೋಡಿ ಬೆರಗುಗೊಂಡಿದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


ಭಾರತೀಯ ಉಡುಗೆಯಲ್ಲಿ ಸುಂದರವಾಗಿ ಕಾಣುತ್ತಿದೆ ಈ ಜೋಡಿ
ಈ ವೀಡಿಯೋದಲ್ಲಿ ದಂಪತಿಗಳು ಮದುವೆಯ ಪ್ರತಿಜ್ಞೆಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಂತೆ ಅತ್ಯಂತ ಸಂತೋಷದಿಂದ ಕಾಣುತ್ತಿದ್ದರು. ಅಥರ್ ಮತ್ತು ಮೆಹ್ರೀನ್ ತಮ್ಮ ಜನಾಂಗೀಯ ಭಾರತೀಯ ಉಡುಗೆಯಲ್ಲಿ ಅದ್ಭುತವಾಗಿ ಕಾಣುತ್ತಿದ್ದರು. ಇಸ್ಲಾಮಿಕ್ ಆಚರಣೆಗಳಿಗೆ ಅನುಗುಣವಾಗಿ ತಮ್ಮ ಮದುವೆಯನ್ನು ಔಪಚಾರಿಕಗೊಳಿಸಲು ಅವರು ಮೂರು ಬಾರಿ 'ಕುಬೂಲ್ ಹೈ' ಎಂದು ಹೇಳುತ್ತಿರುವುದನ್ನು ಈ ವೀಡಿಯೋದಲ್ಲಿ ನೋಡಬಹುದು.


ನವವಿವಾಹಿತ ದಂಪತಿಗಳು ತಮ್ಮ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್ ಗಳಲ್ಲಿ ಮದುವೆಯ ಪ್ರತಿಜ್ಞೆಗಳನ್ನು ವಿನಿಮಯ ಮಾಡಿಕೊಳ್ಳುವ ಫೋಟೋಗಳು ಮತ್ತು ವೀಡಿಯೋಗಳನ್ನು ಹಂಚಿಕೊಂಡರು.


ಇದನ್ನೂ ಓದಿ:Kantara Movie: ಟ್ರೈಲರ್-ಟೀಸರ್ ಬಿಟ್ಟಿಲ್ಲಾಂದ್ರು ನಿಮ್ ಸಿನಿಮಾ ನೋಡ್ತೀವಿ! ಕಾಂತಾರಕ್ಕೆ ಪ್ರೇಕ್ಷಕರು ಫಿದಾ


ಅಥರ್ ಪ್ರಸ್ತುತ ಶ್ರೀನಗರದಲ್ಲಿ ಮುನ್ಸಿಪಲ್ ಕಮಿಷನರ್ ಆಗಿ ನೇಮಕಗೊಂಡಿದ್ದಾರೆ ಮತ್ತು ಮೆಹ್ರೀನ್ ಅವರು ದೆಹಲಿಯ ರಾಜೀವ್ ಗಾಂಧಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ಮತ್ತು ರಿಸರ್ಚ್ ಸೆಂಟರ್ ನಲ್ಲಿ ವೈಜ್ಞಾನಿಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.


"ಅಥರ್ ಮತ್ತು ಮೆಹ್ರೀನ್ ಅವರ ಸುಂದರ ಮತ್ತು ಅದ್ದೂರಿಯಾದ ವಿವಾಹ ಸಮಾರಂಭಕ್ಕಾಗಿ ಸಂಯೋಜಿಸಲಾದ 'ಕುಬೂಲ್ ಹೈ' ಎಂಬ ವಿಶೇಷ ಹಾಡು" ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದಾರೆ.


ಅಥರ್ ಮತ್ತು ಟೀನಾ ಮೊದಲ ಬಾರಿಗೆ ಮಸ್ಸೋರಿಯಲ್ಲಿ ಭೇಟಿಯಾಗಿದ್ದರು
ಐಎಎಸ್ ತರಬೇತಿಯ ಸಮಯದಲ್ಲಿ ಐಎಎಸ್ ಖಾನ್ ಅವರು ತಮ್ಮ ಮಾಜಿ ಪತ್ನಿ ಟೀನಾ ದಾಬಿ ಅವರನ್ನು ಮಸ್ಸೋರಿಯಲ್ಲಿ ಭೇಟಿಯಾದರು. ಈ ಜೋಡಿ ಏಪ್ರಿಲ್ 7, 2018 ರಂದು ವಿವಾಹವಾದರು. ಆದರೂ ಅವರ ವೈವಾಹಿಕ ಆನಂದವು ಹೆಚ್ಚು ಕಾಲ ಉಳಿಯಲಿಲ್ಲ, ಮತ್ತು ದಂಪತಿಗಳು ಆಗಸ್ಟ್ 10, 2021 ರಂದು ಬೇರ್ಪಡಲು ನಿರ್ಧರಿಸಿದರು.


ಇದನ್ನೂ ಓದಿ: Adipurush: ಆದಿಪುರುಷ್ ಫಸ್ಟ್​ಲುಕ್​ಗೆ ಭರ್ಜರಿ ರೆಸ್ಪಾನ್ಸ್! ನೆಟ್ಟಿಗರೇನಂದ್ರು?


ಅವರ ವಿವಾಹವು "ಅಂತರ್ಧರ್ಮೀಯ" ವಾಗಿರುವುದರಿಂದ ಸಾಕಷ್ಟು ಟೀಕೆಗಳು ಸಹ ಕೇಳಿ ಬಂದವು ಮತ್ತು ಇದು ಕೋಮು ವೈಷಮ್ಯ ಮತ್ತು "ಲವ್-ಜಿಹಾದ್" ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿತು. ಆದಾಗ್ಯೂ, ದಾಬಿ ತಾನು ದ್ವೇಷದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಮತ್ತು ಅವಳ ವಿವಾಹವು ಧಾರ್ಮಿಕ ವಿಭಜನೆಗಳನ್ನು ಮೀರಿದೆ ಎಂದು ಹೇಳಿದ್ದರು.


ಟೀನಾಗಿಂತಲೂ ಪ್ರದೀಪ್ ಮೂರು ವರ್ಷ ದೊಡ್ಡವರು
ದಾಬಿ ಅವರಿಗಿಂತ ಮೂರು ವರ್ಷ ಹಿರಿಯರಾದ ಪ್ರದೀಪ್ ಗವಾಂಡೆ ಅವರು 2013 ರಲ್ಲಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಅವರು ಅರ್ಹ ವೈದ್ಯರಾಗಿದ್ದು, ಅವರು ಮಹಾರಾಷ್ಟ್ರದಿಂದ ಬಂದವರು. ಯುಪಿಎಸ್‌ಸಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವ ಮೊದಲು ಅವರು ಎಂಬಿಬಿಎಸ್ ಪದವಿಯನ್ನು ಪಡೆದಿದ್ದರು.


ದಾಬಿ ಅವರು 2016 ರ ರಾಜಸ್ಥಾನ ಕೇಡರ್ ಅಧಿಕಾರಿಯಾಗಿದ್ದು, ಡಾ. ಗವಾಂಡೆ ಅವರು 2013 ರ ಕೇಡರ್ ಅಧಿಕಾರಿಯಾಗಿದ್ದಾರೆ.

Published by:ಗುರುಗಣೇಶ ಡಬ್ಗುಳಿ
First published: