Vicky Kaushal: ಶೀಘ್ರವೇ ಎಂಗೇಜ್​ಮೆಂಟ್​ ಮಾಡಿಕೊಳ್ಳುತ್ತೇನೆ; ನಿಶ್ಚಿತಾರ್ಥದ ಬಗ್ಗೆ ಕೊನೆಗೂ ಉತ್ತರಿಸಿದ ವಿಕ್ಕಿ ಕೌಶಲ್​

ಈ ಜೋಡಿ ಹಕ್ಕಿಗಳು ಕಳೆದ ಎರಡು ವರ್ಷಗಳಿಂದ ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ಗುಸುಗುಸು ಸಹ ಕೇಳಿ ಬಂದಿವೆ. 2019ರಿಂದ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. 2020ರಲ್ಲಿ ವಿಕ್ಕಿ ಹಾಗೂ ಕತ್ರೀನಾ ಒಟ್ಟಿಗೆ ದೀಪಾವಳಿಯನ್ನು ಆಚರಿಸಿದ್ದರು.

ವಿಕ್ಕಿ ಕೌಶಲ್- ಕತ್ರಿನಾ ಕೈಫ್

ವಿಕ್ಕಿ ಕೌಶಲ್- ಕತ್ರಿನಾ ಕೈಫ್

  • Share this:
    ಕಳೆದ ಒಂದು ತಿಂಗಳಿನಿಂದ ಬಾಲಿವುಡ್(Bollywood)​ ಅಂಗಳದಲ್ಲಿ ಬಿಸಿ ಬಿಸಿ ಹಾಟ್​​ ನ್ಯೂಸ್​ವೊಂದು ಸಖತ್​ ಗಾಸಿಪ್ ಆಗಿತ್ತು. ಅದು ಬಾಲಿವುಡ್​ ಹಾಟೆಸ್ಟ್​ ನಟಿ ಕತ್ರೀನಾ ಕೈಫ್(Katrina Kaif​​) ಹಾಗೂ ನಟ ವಿಕ್ಕಿ ಕೌಶಲ್(Vicky Kaushal) ನಿಶ್ಚಿತಾರ್ಥ(Engagement )ದ ವಿಷಯ. ಇವರಿಬ್ಬರ ಎಂಗೇಜ್​ಮೆಂಟ್​ ನಡೆದುಹೋಗಿದೆ ಎಂಬ ಮಾತುಗಳು ಕೇಳಿಬಂದಿತ್ತು. ಇವರಿಬ್ಬರ ನಿಶ್ಚಿತಾರ್ಥ ಎಂದು ಹೇಳಲಾಗುವ ಫೋಟೋ(Photo)ಗಳು ಕೂಡ ಸಖತ್​ ವೈರಲ್​ ಆಗಿತ್ತು. ಆದರೆ ಈ ಬಗ್ಗೆ ಎಲ್ಲೂ ವಿಕ್ಕಿ ಕೌಶಲ್​ ಅಥವಾ ಕತ್ರೀನಾ ಕೈಫ್​ ಅಧಿಕೃತ ಮಾಹಿತಿ ನೀಡಿರಲಿಲ್ಲ. ಕತ್ರೀನಾ ಕೈಫ್​ ಹಾಗೂ ವಿಕ್ಕಿ ಕೌಶಲ್​ ರಹಸ್ಯವಾಗಿ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದಾರೆ ಅನ್ನುವ ಸುದ್ದಿ ಹರಿದಾಡುತ್ತಿತ್ತು. ಆದರೆ ಈ ಸುದ್ದಿಯನ್ನು ಇಬ್ಬರು ಕುಟುಂಬಸ್ಥರು ಒಪ್ಪಿಕೊಂಡಿರಲಿಲ್ಲ. ಆದರೆ ವಿಕ್ಕಿ ಕೌಶಲ್​ ಇದೀಗ ತಮ್ಮ ಹಾಗೂ ಕತ್ರೀನಾ ಅವರ ನಿಶ್ಚಿತಾರ್ಥದ ವದಂತಿಗೆ ಪ್ರತಿಕ್ರಿಯೆ ನೀಡಿದ್ದಾರೆ.

    ‘ಶೀಘ್ರವೇ ನಿಶ್ಚಿತಾರ್ಥ ಮಾಡಿಕೊಳ್ಳುತ್ತೇನೆ’

    ಖಾಸಗಿ ಮಾಧ್ಯಮವೊಂದರ ಸಂದರ್ಶನಲ್ಲಿ ವಿಕ್ಕಿ ಕೌಶಲ್​, ಕತ್ರೀನಾ ಕೈಫ್​ ಜೊತೆಗಿನ ಸಂಬಂಧದ ಕುರಿತು ಸ್ಪಷ್ಟನೆ ನೀಡಿದ್ದಾರೆ. ‘ಎಲ್ಲದಕ್ಕೂ ಸಮಯ ಬರುತ್ತದೆ, ಆಗ ನಾನು ಉತ್ತರಿಸುತ್ತೇನೆ’ ಎಂದು ವಿಕ್ಕಿ ಕೌಶಲ್​ ಹೇಳಿದ್ದಾರೆ. ಇನ್ನೂ ನೀವು ಮತ್ತು ಕತ್ರಿನಾ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದೀರಾ ಎಂದು ನಿಮ್ಮ ಸ್ನೇಹಿತರು ಮಾಹಿತಿ ನೀಡಿದ್ದಾರೆ ಎಂಬ ಪ್ರಶ್ನೆಗೂ ವಿಕ್ಕಿ ಉತ್ತರಿಸಿದ್ದಾರೆ.‘ಶೀಘ್ರವೇ ನಾನು ನಿಶ್ಚಿತಾರ್ಥವನ್ನು ಮಾಡಿಕೊಳ್ಳುತ್ತೇನೆ. ಸಾಕಾ?’ ಎಂದು ಹೇಳಿದ್ದಾರೆ. ವಿಕ್ಕಿ ಕೌಶಲ್​ರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ. ವಿಕ್ಕಿಯವರ ಈ ಮಾತು ಅವರ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದು, ಸದ್ಯದಲ್ಲೇ ವಿಕ್ಕಿ ಹಾಗೂ ಕತ್ರೀನಾ ಎಂಗೇಜ್​ಮೆಂಟ್​ ಮಾಡಿಕೊಳ್ಳಲಿದ್ದಾರೆ ಎಂದು ಹೇಳುತ್ತಿದ್ದಾರೆ.

    ಇದನ್ನೂ ಒದಿ:Sruthi Hariharan Wedding Anniversary: ನಟಿ ಶ್ರುತಿ ಹರಿಹರನ್​ ಮದುವೆ ವಾರ್ಷಿಕೋತ್ಸವ; ಗಂಡನ ಜತೆ ಫೋಟೋ ಹಂಚಿಕೊಂಡ ‘ಲೂಸಿಯಾ’ ಬೆಡಗಿ

    ಸರ್ದಾರ್​ ಉಧಮ್​ ಸಿಂಗ್​ಗೆ ಕತ್ರೀನಾ ಕೈಫ್​ ಮೆಚ್ಚುಗೆ

    ಜಲಿಯನ್‌ ವಾಲಾಬಾಗ್ ಹತ್ಯಾಕಾಂಡದ ವಿರುದ್ಧ ಸೇಡು ತೀರಿಸಿಕೊಳ್ಳುವ ಸ್ವಾತಂತ್ರ್ಯ ಹೋರಾಟಗಾರ ಉಧಾಮ್ ಸಿಂಗ್ ಅವರ ಕಥೆಯುಳ್ಳ ‘ಸರ್ದಾರ್ ಉಧಾಮ್ ಸಿಂಗ್’ ಚಿತ್ರಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಈ ಸಿನಿಮಾದಲ್ಲಿ ವಿಕ್ಕಿ ಕೌಶಲ್​ ತಮ್ಮ ಕೆರಿಯರ್​ನ ಬೆಸ್ಟ್​ ಪರ್ಫಾಮೆನ್ಸ್​​ ನೀಡಿದ್ದಾರೆ. ನಟಿ ಕತ್ರೀನಾ ಕೈಫ್, ತಮ್ಮ ಇನ್‌ಸ್ಟಾಗ್ರಾಂ ಸ್ಟೋರೀಸ್‌ನಲ್ಲಿ ಉಧಾಮ್ ಸಿಂಗ್ ಚಿತ್ರದ ಕುರಿತು ಪೋಸ್ಟ್ ಮಾಡಿದ್ದು, ‘ವಿಕ್ಕಿ ಕೌಶಲ್’ ಅವರ ನಟನೆ ಅದ್ಭುತವಾಗಿದೆ ಎಂದು ಹಾಡಿ ಹೊಗಳಿದ್ದಾರೆ. ಚಿತ್ರ ಪೋಸ್ಟರ್​ ಸಹ ಕತ್ರೀನಾ ಹಂಚಿಕೊಂಡಿದ್ದು ಸಿನಿಮಾ ಎಲ್ಲರೂ ನೋಡಿ ಎಂದು ಹೇಳಿದ್ದಾರೆ.

    2 ವರ್ಷಗಳಿಂದ ಕತ್ರೀನಾ - ವಿಕ್ಕಿ ಡೇಟಿಂಗ್​

    ಈ ಜೋಡಿ ಹಕ್ಕಿಗಳು ಕಳೆದ ಎರಡು ವರ್ಷಗಳಿಂದ ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ಗುಸುಗುಸು ಸಹ ಕೇಳಿ ಬಂದಿವೆ. 2019ರಿಂದ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. 2020ರಲ್ಲಿ ವಿಕ್ಕಿ ಹಾಗೂ ಕತ್ರೀನಾ ಒಟ್ಟಿಗೆ ದೀಪಾವಳಿಯನ್ನು ಆಚರಿಸಿದ್ದರು. ಇಬ್ಬರು ಜೋಡಿಗಳ ದೀಪಾವಳಿ ಸಮಯದ ಫೋಟೋಗಳು ಸಹ ವೈರಲ್​ ಆಗಿತ್ತು. ಆದರೆ ಇಬ್ಬರೂ ಕೂಡ ಅವರ ಸಂಬಂಧದ ಬಗ್ಗೆ ಬಹಿರಂಗವಾಗಿ ಎಲ್ಲೂ ಹೇಳಿಕೊಂಡಿಲ್ಲ.

    ಈ ಹಿಂದೆ ಕತ್ರೀನಾ ಬಾಲಿವುಡ್​ ಭಜರಂಗಿ ಭಾಯ್​​ ಜಾನ್​ ಸಲ್ಮಾನ್​ ಖಾನ್​ ಜತೆ ರಿಲೇಷನ್​ಶಿಪ್​ನಲ್ಲಿಇದ್ದಿದ್ದು ಎಲ್ಲರಿಗೂ ಗೊತ್ತೆ ಇದೆ. ಕೆಲ ವರ್ಷಗಳ ಬಳಿಕ ಇವರು ಬೇರೆಯಾಗಿದ್ದರು. ಇದಾದ ನಂತರ ಕತ್ರೀನಾ ರಣಬೀರ್ ಸಿಂಗ್​ ಜತೆ ಸುತ್ತಾಡುತ್ತಿದ್ದರು. ರಣಬೀರ್​ ಹಾಗೂ ಕತ್ರೀನಾ ಮದುವೆಯಾಗುತ್ತಾರೆ ಅನ್ನುವ ಸುದ್ದಿ ಕೂಡ ಹರಿದಾಡಿತ್ತು.ಆದರೆ ಈ ಜೋಡಿ ಬ್ರೇಕ್​ ಅಪ್ ಮಾಡಿಕೊಂಡಿತ್ತು. ಈಗ ವಿಕ್ಕಿ ಕೌಶಲ್​ ಹಾಗೂ ಕತ್ರೀನಾ ಹೆಸರು ಕೇಳಿ ಬಂದಿದ್ದು, ಆದಷ್ಟು ಬೇಗ ಈ ಜೋಡಿ ಮದುವೆಯಾಗಲಿ ಎಂದು ಅಭಿಮಾನಿಗಳು ಕೇಳಿಕೊಳ್ಳುತ್ತಿದ್ದಾರೆ.

    ವರದಿ -ವಾಸುದೇವ್​
    Published by:Latha CG
    First published: