ಜೊತೆ ಜೊತೆಯಲಿ (Jote Joteyali) ಸೀರಿಯಲ್ ಮೂಲಕ ಮನೆ ಮನೆ ಮಾತಾಗಿದ್ದ ಅನಿರುದ್ಧ್ (Aniruddh) ವಿರುದ್ಧ ಸಾಕಷ್ಟು ಆರೋಪಗಳು ಕೇಳಿಬಂದಿತ್ತು. ಜೊತೆಗೆ ಈ ಸೀರಿಯಲ್ನಿಂದ ಅವರನ್ನು ತೆಗೆದುಹಾಕಿದ್ದು ಎಲ್ಲರಿಗೂ ಗೊತ್ತಿದೆ. 2 ವರ್ಷ ಅನಿರುದ್ಧ್ ಕಿರುತೆರೆಯಲ್ಲಿ ನಟಿಸಬಾರದು ಅಂತ ಕಿರುತೆರೆ ನಿರ್ಮಾಪಕರ ಸಂಘ ಫಿಲ್ಮ್ ಚೇಂಬರ್ (Film Chamber) ನಲ್ಲಿ ಮನವಿ ಸಲ್ಲಿಸಿದ್ದರು. ಇತ್ತಿಚೆಗಷ್ಟೇ ಅನಿರುದ್ಧ್ ಹೊಸ ಮನೆ (Aniruddh New Movie) ಗೃಹಪ್ರವೇಶ ಅದ್ಧೂರಿಯಾಗಿ ನಡೆದಿತ್ತು. ಇದಾದ ಬಳಿಕ ನಿರ್ದೇಶಕ ಎಸ್ ನಾರಾಯಣ್ (S Narayan) ಅವರು ಅನಿರುದ್ಧ್ ಅವರೊಂದಿಗೆ ಸೂರ್ಯವಂಶ (Suryavamsha) ಎಂಬ ಸೀರಿಯಲ್ ಶುರುಮಾಡುವುದಾಗಿ ಹೇಳಿಕೊಂಡಿದ್ದರು. ನಟ ಅನಿರುದ್ಧ ಹೊಸ ಧಾರಾವಾಹಿಯನ್ನು ಘೋಷಿಸುತ್ತಿದ್ದಂತೆಯೇ ವಿರೋಧ ವ್ಯಕ್ತವಾಗಿದೆ. ಎಸ್.ನಾರಾಯಣ್ ನಿರ್ದೇಶನದ ಸೂರ್ಯವಂಶ ಧಾರಾವಾಹಿಯಲ್ಲಿ ಅನಿರುದ್ಧ ನಾಯಕನಾಗಿ ನಟಿಸುತ್ತಿದ್ದಾರೆ.
ಅಡ್ಡಕತ್ತರಿಯಲ್ಲಿ ಅನಿರುದ್ಧ್ 'ಸೂರ್ಯವಂಶ'!
ಈ ಧಾರಾವಾಹಿಯನ್ನು ತಡೆಯಬೇಕು ಎಂದು ಕನ್ನಡ ಕಿರುತೆರೆ ನಿರ್ಮಾಪಕರು ಆಗ್ರಹಿಸಿದ್ದಾರೆ. ಅನಿರುದ್ಧ ಮೇಲೆ ಎರಡು ವರ್ಷಗಳ ಕಾಲ ಅಲಿಖಿತ ನಿಷೇಧ ಹೇರಿದ್ದರಿಂದ ಅವರಿಗಾಗಿ ಸೀರಿಯಲ್ ಮಾಡದಂತೆ ನಾರಾಯಣ್ ಅವರಿಗೆ ಮನವಿ ಮಾಡಿದ್ದಾರೆ. ಜೊತೆಗೆ ಇಂದು ಇದರ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಚರ್ಚೆ ಕೂಡ ಮಾಡಲಾಯ್ತು. ನಟ ಅನಿರುದ್ಧ್, ವಾಣಿಜ್ಯ ಮಂಡಳಿಯ ಭಾ ಮಾ ಹರೀಶ್, ಸುಂದರ್ ರಾಜು ಸೇರಿ ಹಲವರು ಬ್ಯಾನ್ ಬಗ್ಗೆ ಚರ್ಚೆ ಮಾಡಿದ್ದಾರೆ.
ಮನೆಯಲ್ಲಿ ಸಮಸ್ಯೆ ಬರೋದು ಸಹಜ ಎಂದ ಅನಿರುದ್ಧ್!
ಇನ್ನೂ ಚರ್ಚೆ ಬಳಿಕ ಪತ್ರಿಕಾಗೋಷ್ಠಿ ನಡೆಸಲಾಯ್ತು. ನಟ ಅನಿರುದ್ಧ್ ಜೊತೆ ಜೊತೆಯಲಿ ತಂಡದ ಬಗ್ಗೆ ಮತ್ತೆ ಬೇಸರ ವ್ಯಕ್ತಪಡಿಸಿದ್ದಾರೆ. 'ನಾನು ಸಾಕಷ್ಟು ಲೇಖನ ಬರಿತೀನಿ ನಿಮ್ಗೆಲ್ಲಾ ಗೊತ್ತಿದೆ, ಹಲವು ಲೇಖದನದಲ್ಲಿ ವಸುದೈವ ಕುಟುಂಬ ಅಂತ ಪದ ಬಳಸಿದ್ದೇನೆ.ಹಾಗಂದರೆ ನನ್ನ ಕುಟುಂಬ ಅಂತ ಅರ್ಥ, ಜೊತೆ ಜೊತೆಯಲಿ ಧಾರಾವಾಹಿ ಕೂಡ ನನ್ನ ಕುಟುಂಬ, ಮನೆಯಲ್ಲಿ ಸಮಸ್ಯೆ ಬರೋದು ಸಹಜ. ಅದನ್ನ ಕುಟುಂಬ ಸದಸ್ಯರು ಬಗೆ ಹರಿಸಿಕೊಳ್ಳೊದು ಒಳ್ಳೆಯದು. ಆದರೆ ಅವರು ನನ್ನನ್ನ ಕರೆದಿಲ್ಲ.ನಾನೇ ಹೋಗಿ ಮಾತಾಡೋಕೆ ಪ್ರಯತ್ನ ಪಟ್ಟೆ ಫೋನ್ ಕಾಲ್ ಮಾಡಿದೆ. ಆದರೆ ಅದಕ್ಕೂ ಅವರು ರೆಸ್ಪಾನ್ಸ್ ಮಾಡಿಲ್ಲ' ಅಂತ ಅನಿರುದ್ಧ್ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕನ್ನಡದ ಕಿರುತೆರೆಗೆ ವಾಪಾಸ್ ಆದ ಜೊತೆ ಜೊತೆಯಲಿ ಆರ್ಯವರ್ಧನ್!
ಒತ್ತಡ ಇದ್ದಿದ್ದಕ್ಕೆ ಅನಿರುದ್ಧ್ ಔಟ್?
'ನಮ್ಮ ಜೊತೆ ಜೊತೆಯಲಿ ನಿರ್ದೇಶಕ ಆರೂರು ಜಗದೀಶ್ಗೆ ಅವರಿಗೆ ಕರೆ ಮಾಡಿದ್ದೇನೆ. ಆದರೆ ಅವರು ಯಾವುದೇ ರಿಪ್ಲೆ ಮಾಡಿಲ್ಲ. ಕೊನೆಗೆ ಮೆಸೇಜ್ ಮಾಡಿ ನನಗೆ ಒತ್ತಡೆ ಇದೆ ಸರ್ ಅಂತ ವಾಯ್ಸ್ ಮೆಸೇಜ್ ಕಳಿಸಿದ್ರು. 3 ವರ್ಷ ಎರಡು ತಿಂಗಳು ಅವರ ಜೊತೆ ಕೆಲಸ ಮಾಡಿದ್ದೇನೆ. ಯಾರ ಒತ್ತಡ ಅಂತ ಕೇಳಿದ್ರೆ ಹೇಳಿಲ್ಲ. ಅದಕ್ಕೆ ಇದುವರೆಗೂ ಉತ್ತರ ಸಿಕ್ಕಿಲ್ಲ' ಎಂದಿದ್ದಾರೆ ಅನಿರುದ್ಧ್.
'ನಾನು ಕ್ಯಾರಾವ್ಯಾನ್ ಕೇಳಿದ್ದು ಮಹಿಳಾ ಕಲಾವಿದರಿಗಾಗಿ'
'ನಾನು ಅಶಿಸ್ತು ಅಂತ ಹೇಳಿದ್ರು. ಜೊತೆ ಜೊತೆಯಲಿ ತಂಡದ ಕಲಾವಿಧರನ್ನ ಕೇಳಿ. ಅವರು ಹೇಳಿದ ಸಮಯಕ್ಕೆ ನಾನು ಶೂಟಿಂಗ್ ಸ್ಥಳದಲ್ಲಿದ್ದೇನೆ. ನನ್ನ ಮೇಲೆ ಸಾಕಷ್ಟು ಆರೋಪ ಮಾಡಿದ್ದಾರೆ. ನಾನು ಕ್ಯಾರಾವ್ಯಾನ್ ಕೇಳಿದೆ ಅಂದ್ರು. ಬಾತ್ ರೂಮ್ ಗೆ ಹೋಗೋಕೆ ಜಾಗ ಇರುತ್ತಿರಲಿಲ್ಲ. ಮಹಿಳಾ ಕಲಾವಿದರು ಬಟ್ಟೆ ಬದಲಾಯಿಸಲು ಕಷ್ಟವಾಗುತ್ತಿತ್ತು. ಹೀಗಾಗಿ ನಾನು ಕ್ಯಾರಾವ್ಯಾನ್ ಕೇಳಿದ್ದೇನೆ ಅದು ತಪ್ಪಾ.? ನಾನು ಕೋಪ ಮಾಡಿದ್ರೆ ದುರಹಂಕಾರ ಅಂತ ಹೇಳ್ತಾರೆ' ಅಂತ ಅನಿರುದ್ಧ್ ಬೇಸರ ವ್ಯಕ್ತಪಡಿಸಿದ್ದಾರೆ.
ನಾನು ಸೀರಿಯಲ್ ಮಾಡೇ ಮಾಡ್ತಿನಿ ಎಂದ ಅನಿರುದ್ಧ್!
'ನಾನು ಇವತ್ತು ಫಿಲ್ಮ್ ಚೇಂಬರ್ ಗೆ ಅವರು ಬರ್ತಾರೆ ಅಂತ ನಿರೀಕ್ಷೆಯಿಂದ ಬಂದಿದ್ದೆ.ಆದರೆ ಇವತ್ತು ಅವರು ಬಂದಿಲ್ಲ. ಆದರೆ ಬೇರೆ ಧಾರವಾಹಿ ಯಲ್ಲಿ ನಾನು ನಟಿಸಬಾರದು ಅಂತ ಒತ್ತಡ ಹೇರುತ್ತಿದ್ದಾರೆ.ಇವತ್ತು. ಎಸ್ ನಾರಾಯಣ್ ಅವರ ಬಳಿ ಬಂದು ಧಾರವಾಹಿಯಲ್ಲಿ ಅವಕಾಶ ಕೊಡಬೇಡಿ ಅಂತ ಹೇಳುತ್ತಿದ್ದಾರೆ. ಇದಕ್ಕೆ ನಾನು ಕೋರ್ಟ್ಗೂ ಹೋಗಬಹುದು. ಆದರೆ ನಾವೆಲ್ಲಾ ಒಂದೇ ಕುಟುಂಬದವರು ಅನ್ನೋ ಭಾವನೆ ಇದೆ. ಎಸ್. ನಾರಾಯಣ್ ಸರ್ ಈ ಧಾರವಾಹಿ ಮಾಡೋಣ ಅಂತ ಅಂದಿದ್ದಾರೆ. ಎಸ್ ನಾರಾಯಣ್ ಸರ್ ಅಪ್ಪಾಜಿಗೆ ಕಥೆ ಹೇಳುತ್ತಿದ್ರು, ಈಗ ನನಗೆ ಕಥೆ ಹೇಳುತ್ತಿದ್ದಾರೆ. ಇದು ನನ್ನ ಅದೃಷ್ಠ, ನಾನು ಧಾರವಾಹಿ ಮಾಡೇ ಮಾಡ್ತೇನೆ' ಎಂದಿದ್ದಾರೆ ಅನಿರುದ್ಧ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ