Urfi Javed: ನಾನು ಬದಲಾಗ್ತೀನಿ! ಟ್ವಿಟ್ಟರ್‌ನಲ್ಲಿ ಕ್ಷಮೆಯಾಚಿಸಿದ ಉರ್ಫಿ ಜಾವೇದ್

ಉರ್ಫಿ ಜಾವೇದ್ ಮತ್ತು ಅವರ ಟ್ವೀಟ್​

ಉರ್ಫಿ ಜಾವೇದ್ ಮತ್ತು ಅವರ ಟ್ವೀಟ್​

ತನ್ನ ವಿಚಿತ್ರ ಡ್ರೆಸ್ಸಿಂಗ್​ನಿಂದಲೇ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸೆನ್ಸೇಶನ್ ಕ್ರಿಯೇಟ್ ಮಾಡಿದ್ದ ಉರ್ಫಿ ಜಾವೇದ್​ ಇದೀಗ ತನ್ನ ಅಭಿಮಾನಿಗಳಿಗೆ ಶಾಕಿಂಗ್​ ಸುದ್ದಿಯೊಂದನ್ನು ನೀಡಿದ್ದಾರೆ.

  • Share this:

ಉರ್ಫಿ ಜಾವೇದ್ (Urfi Javed), ಈ ಹೆಸರು ಕೇಳಿದೊಡನೆ ನೆನಪಾಗೋದು ಉದ್ದ ಜಡೆಯ ಜೊತೆಗೆ ಚಿತ್ರ - ವಿಚಿತ್ರ ಬಟ್ಟೆ, ತುಂಡುಡುಗೆ ಹಾಗೂ ಅವರು ಧರಿಸುವಂತಹ ವಿಶೇಷ ರೀತಿಯ ಡ್ರೆಸ್​ಗಳು. ಇನ್ನು ಇವರು ಧರಿಸುವಂತಹ ಎಷ್ಟೋ ಡ್ರೆಸ್​ಗಳು (Fashion) ಚಿತ್ರ ವಿಚಿತ್ರವಾಗಿದ್ದರೂ, ಭಾರೀ ಫೇಮಸ್​ ಆಗುತ್ತದೆ. ಆದರೆ ಇಂತಹ ವಿಚಿತ್ರ ಆಯ್ಕೆಗಳಿಂದಲೇ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಉರ್ಫಿ ಇನ್ಮುಂದೆ ಬದಲಾಗುತ್ತಾಳಂತೆ. ಹೀಗಂತ ಬೇರ್ಯಾರೂ ಹೇಳಿಲ್ಲ. ಬದಲಾಗಿ ಆಕೆಯೇ ತನ್ನ ಟ್ವಿಟ್ಟರ್‌ ಖಾತೆಯಲ್ಲಿ (Twitter Account) ಬರೆದುಕೊಂಡಿದ್ದಾಳೆ. ಇದರಿಂದ ಆಕೆಯ ಅಭಿಮಾನಿಗಳು ಹಾಗೂ ನೆಟ್ಟಿಗರು ಶಾಕ್‌ ಆಗಿದ್ದಾರೆ.


ಮೊಬೈಲ್‌ ಫೋನ್‌, ವೈರ್‌ಗಳು, ಕಿವಿ ಫ್ರುಟ್‌, ಪ್ಲಾಸ್ಟಿಕ್‌ ಕವರ್‌, ಸೇಫ್ಟಿ ಪಿನ್‌ ಹೀಗೆ ತನ್ನ ವಿಚಿತ್ರ ಔಟ್‌ಫಿಟ್‌ ಆಯ್ಕೆಗಳಿಗೆ ಹೆಸರುವಾಸಿಯಾಗಿರುವ ಇಂಟರ್‌ನೆಟ್‌ ಸೆನ್ಸೇಶನ್‌ ಹಾಗೂ ಟಿವಿ ಪರ್ಸನಾಲಿಟಿ ಉರ್ಫಿ ಜಾವೇದ್, ಟ್ವಿಟ್ಟರ್‌ನಲ್ಲಿ ಚಿಕ್ಕ ಬರಹವನ್ನು ಹಂಚಿಕೊಂಡಿದ್ದಾರೆ.


“ಬದಲಾಗುತ್ತೇನೆ” ಎಂದ ಉರ್ಫಿ


ತನ್ನ ಬಟ್ಟೆಗಳಿಂದ ಜನರ ಭಾವನೆಗಳನ್ನು ನೋಯಿಸಿದ್ದಕ್ಕಾಗಿ ಕ್ಷಮೆ ಕೇಳಿದ್ದಾರೆ. ಹಾಗೆಯೇ ತಾನು ಇನ್ಮುಂದೆ ಬದಲಾಗುತ್ತೇನೆ ಎಂದು ಸಹ ಉರ್ಫಿ ಟ್ವಿಟರ್​​ ಮೂಲಕ ಹೇಳಿದ್ದಾರೆ.


ಇದನ್ನೂ ಓದಿ: ಆಧುನಿಕ ಭಾರತದ ಅಮೃತ ಕಾಲಕ್ಕೆ ಕೊಡುಗೆ ನೀಡುವುದು ಉದ್ದೇಶ -ನೀತಾ ಮುಕೇಶ್ ಅಂಬಾನಿ ಮನದಾಳ


ಟ್ವಿಟ್ಟರ್‌ ಪೋಸ್ಟ್‌ನಲ್ಲಿ ಕ್ಷಮೆಯಾಚನೆ!


ತನ್ನ ಟ್ವಿಟರ್ ಬರಹದಲ್ಲಿ ಉರ್ಫಿ ಹೀಗೆ ಹೇಳಿದ್ದಾರೆ. “ನಾನು ಏನನ್ನು ಧರಿಸುತ್ತೇನೋ ಅಂತಹ ಬಟ್ಟೆ ಆಯ್ಕೆಗಳಿಂದಾಗಿ ಪ್ರತಿಯೊಬ್ಬರ ಭಾವನೆಗಳನ್ನು ನೋಯಿಸಿದ್ದೇನೆ. ಇದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ಇಂದಿನಿಂದ ನೀವು ಬದಲಾದ ಉರ್ಫಿಯನ್ನು ನೋಡುತ್ತೀರಿ. ಬಟ್ಟೆ ಬದಲಾಯಿತು. ಮಾಫಿ.” ಎಂದು ಬರೆದುಕೊಂಡಿದ್ದಾರೆ.


ಏಪ್ರಿಲ್‌ ಫೂಲ್‌ ಮಾಡುತ್ತಿದ್ದೀರಾ ಎಂದ ನೆಟ್ಟಿಗರು!


ಉರ್ಫಿ ಜಾವೇದ್ ಟ್ವೀಟ್‌ಗೆ ನೂರಾರು ಜನರು ಪ್ರತಿಕ್ರಿಯೆ ನೀಡಿದ್ದಾರೆ. ಉರ್ಫಿ ಬರೆದದ್ದನ್ನು ನೋಡಿ ಕೆಲವರು ಗೊಂದಲಕ್ಕೊಳಗಾಗಿದ್ದಾರೆ. ಕೆಲವು ಅಭಿಮಾನಿಗಳು ಆಕೆಯನ್ನು ಬದಲಾಗಬೇಡಿ. ನಿಮಗೆ ಹೇಗೆ ಇಷ್ಟವೋ ಹಾಗೆಯೇ ಇರಿ ಎಂದು ಹೇಳಿದ್ದಾರೆ. ಆದರೆ ಬಹಳಷ್ಟು ಜನರು ಏಪ್ರಿಲ್‌ ಫೂಲ್‌ ಮಾಡುತ್ತಿದ್ದೀರಾ ಎಂದು ಕೇಳಿದ್ದಾರೆ.


ಉರ್ಫಿ ಜಾವೇದ್ ಮತ್ತು ಅವರ ಟ್ವೀಟ್​


ಒಬ್ಬರು ನಾನು ನಿಮ್ಮ ಪಂಚ್ ಅನ್ನು ಪ್ರೀತಿಸುತ್ತೇನೆ. ನೀವು ರಾಕ್‌ಸ್ಟಾರ್ ಹುಡುಗಿ ಮತ್ತು ದ್ವೇಷಿಸುವವರ ಬಗ್ಗೆ ಕಾಳಜಿ ವಹಿಸುವಿರಿ. ಏಪ್ರಿಲ್ ಮೂರ್ಖರ ದಿನದ ಶುಭಾಶಯಗಳು! ಎಂದು ಹೇಳಿದ್ದಾರೆ. ಇನ್ನೊಬ್ಬರು ಮೂರ್ಖರ ದಿನ ನಾಳೆ ಇದೆ ಎಂದು ಕಾಮೆಂಟ್‌ ಮಾಡಿದ್ದಾರೆ. ಇನ್ನೂ ಕೆಲವಷ್ಟು ಜನರು “ಒಳ್ಳೆಯ ನಿರ್ಧಾರ” ಎಂದಿದ್ದಾರೆ.


ಉರ್ಫಿ ಅತ್ಯಂತ ಧೈರ್ಯಶಾಲಿ ಎಂದಿದ್ದ ಕರೀನಾ ಕಪೂರ್‌


ಇತ್ತೀಚಿಗೆ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಬಾಲಿವುಡ್‌ ನಟಿ ಕರೀನಾ ಕಪೂರ್‌ ಖಾನ್‌, ಉರ್ಫಿ ಜಾವೇದ್‌ ಫ್ಯಾಷನ್‌ ಸೆನ್ಸ್‌ ಅನ್ನು ಶ್ಲಾಘಿಸಿದ್ದರು. ಅಲ್ಲಿ ಅವರು "ನಾನು ಉರ್ಫಿಯಂತೆ ಧೈರ್ಯಶಾಲಿಯಲ್ಲ. ಆದರೆ ಉರ್ಫಿ ಅತ್ಯಂತ ಧೈರ್ಯಶಾಲಿ ಎಂದು ನಾನು ಭಾವಿಸುತ್ತೇನೆ. ಇದು ಫ್ಯಾಷನ್ ಅಭಿವ್ಯಕ್ತಿ ಮತ್ತು ವಾಕ್ ಸ್ವಾತಂತ್ರ್ಯಕ್ಕೆ ಸಂಬಂಧಿಸಿದೆ.



ಆಕೆ ನಿಜವಾಗಿಯೂ ತುಂಬಾ ಕೂಲ್‌ ಆಗಿ ಅದ್ಭುತವಾಗಿ ಕಾಣುತ್ತಾರೆ. ಅಲ್ಲದೇ "ಆಕೆ ಬಯಸಿದಂತೆ ಮಾಡುತ್ತಾರೆ. ಅದು ಫ್ಯಾಶನ್ ಆಗಿದೆ. ಆಕೆಯ ಆತ್ಮವಿಶ್ವಾಸವನ್ನು ಪ್ರೀತಿಸುತ್ತೇನೆ" ಎಂದು ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಉರ್ಫಿ “ರಾಣಿ ನನ್ನನ್ನು ಇಷ್ಟಪಡುತ್ತಾರೆ. ಆದ್ದರಿಂದ ನಿಮ್ಮ ಯಾವುದೇ ಅಭಿಪ್ರಾಯಗಳು ಈಗ ಮುಖ್ಯವಲ್ಲ” ಎಂದು ತನ್ನ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದರು.


ಈ ಮಧ್ಯೆ ಡರ್ಟಿ ಮ್ಯಾಗಜೀನ್‌ಗೆ ನೀಡಿದ ಸಂದರ್ಶನದಲ್ಲಿ, ಉರ್ಫಿ ತನ್ನ ಜೀವನ ಮತ್ತು ತನ್ನ ಆಯ್ಕೆಗಳ ಬಗ್ಗೆ ಹೇಳಿಕೊಂಡಿದ್ದರು. “ನನ್ನ ಜೀವನದುದ್ದಕ್ಕೂ ನಾನು ಹಣದ ಬಗ್ಗೆ ಅಸಮಾಧಾನ ಮತ್ತು ಒತ್ತಡವನ್ನು ಹೊಂದಿದ್ದೇನೆ.




ನನ್ನ ಪ್ರಕಾರ ಗಂಡಿನ ಹಿಂದೆ ಓಡುವ ಬದಲು ಹುಡುಗಿಯರು ಹಣದ ಹಿಂದೆ ಓಡಬೇಕು. ಏಕೆಂದರೆ ಹಣವು ಎಲ್ಲವೂ ಅಲ್ಲ, ಆದರೆ ಇದು ಬಹಳ ಮುಖ್ಯ. ನಿಮಗೆ 100 ಸಮಸ್ಯೆಗಳಿದ್ದರೆ, ಹಣವು ಅವುಗಳಲ್ಲಿ 99 ಸಮಸ್ಯೆಯನ್ನು ಪರಿಹರಿಸುತ್ತದೆ. ಹೇಗಾದರೂ ಬಡವರ ಸಮಸ್ಯೆಗಳಿಗಿಂತ ಶ್ರೀಮಂತರ ಸಮಸ್ಯೆಗಳನ್ನು ಹೊಂದಿರುವುದು ಉತ್ತಮ” ಎಂದು ಅಭಿಪ್ರಾಯ ಪಟ್ಟಿದ್ದರು.

First published: