ಸಿನಿ ತಾರೆಯರ ಲವ್, ಬ್ರೇಕಪ್ ವಿಚಾರ ಆಗಾಗ ಸುದ್ದಿಯಾಗುತ್ತಿರುತ್ತದೆ. ಅಷ್ಟು ಮಾತ್ರವಲ್ಲದೆ, ವಿಚ್ಛೇದನ ವಿಚಾರವು ಬೆಳಕಿಗೆ ಬರುತ್ತಿರುತ್ತದೆ. ಅದರಂತೆ ಇದೀಗ ಬಾಲಿವುಡ್ ನಟಿಯೊಬ್ಬರ ಬ್ರೇಕ್ಅಪ್ ವಿಚಾರ ಬೆಳಕಿಗೆ ಬಂದಿದೆ. ನಟಿಯೇ ತಮ್ಮ ಬ್ರೇಕ್ ಅಪ್ ವಿಚಾರವನ್ನು ಹೇಳಿಕೊಂಡಿದ್ದಾರೆ.
ಬಾಲಿವುಡ್ ನಟಿ ಅನುಷಾ ದಂಡೇಕರ್ ತಮ್ಮ ಬ್ರೇಕ್ಅಪ್ ವಿಚಾರವನ್ನು ಹೇಳಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬರೆದು ಹಾಕಿಕೊಳ್ಳುವ ಮೂಲಕ ತಮ್ಮ ಖಾಸಗಿ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಅನುಷಾ ದಂಡೇಕರ್ ಮತ್ತು ಕರಣ್ ಕುಂದ್ರಾ ಎಂಟಿವಿ ಶೋನಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ನಂತರ ಇವರಿಬ್ಬರ ನಡುವೆ ಪ್ರೀತಿ ಚಿಗುರೊಡೆದಿದೆ. 5 ವರ್ಷಗಳ ಕಾಲ ಪ್ರೀತಿಸುತ್ತಿದ್ದರು. ಆದರೀಗ ಇವರಿಬ್ಬರ ಪ್ರೀತಿಯ ಕಟ್ಟೆ ಒಡೆದಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅನುಷಾ ‘ಆತ ನನಗೆ ಸುಳ್ಳು ಹೇಳಿದ, ಮೋಸ ಮಾಡಿದ. ಕ್ಷಮೆಯನ್ನೂ ಕೂಡ ಕೇಳಿಲ್ಲ. ನಾನು ಆತನನ್ನು ವಿಪರೀತವಾಗಿ ಪ್ರೀತಿಸಿದ್ದೆ, ನಂಬಿದ್ದೆ. ಆದರೆ ನಾನು ಮೋಸ ಹೋಗಿದ್ದೇನೆ. ಅವನಿಗಾಗಿ ಕಾಯಲು ಏನು ಉಳಿದಿಲ್ಲ. ನಾನು ಸಹ ಮನುಷ್ಯಳೆ. ಎಲ್ಲಾ ಪ್ರಯತ್ನಗಳು ವಿಫಲವಾಗಿ ನಾನು ಹೊರಗೆ ಬಂದಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಆದರೆ ಕರಣ್ ಕುಂದ್ರಾ ಅವರು ಅನುಷಾ ಅವರ ಬಳಿ ಏನು ಸುಳ್ಳು ಹೇಳಿದ್ದಾರೆ. ಮೋಸ ಮಾಡಲು ನಿಜವಾದ ಕಾರಣವೇನು. ಯಾವುದೇ ವಿಚಾರವನ್ನು ಅನುಷಾ ಅವರು ಬಹಿರಂಗ ಪಡಿಸಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ