ರಾಜ್​ ಕುಂದ್ರಾ ಬಂಧನ ಪ್ರಕರಣ: ಪೊಲೀಸರಿಗೆ ಮೊದಲು ಹೇಳಿಕೆ ಕೊಟ್ಟಿದ್ದು ನಾನೇ ಎಂದ ಶರ್ಲಿನ್ ಚೋಪ್ರಾ..!

ಮಹಾರಾಷ್ಟ್ರ ಸೈಬರ್ ಸೆಲ್ ಪೊಲೀಸರು ನನಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್​ ಕೊಟ್ಟಾಗ ಮೊದಲು ನನಗೆ ನೆನಪಾಗಿದ್ದು ಶಿಲ್ಪಾ ಶೆಟ್ಟಿ ಹಾಗೂ ಅವರ ಮಕ್ಕಳು. ನಾನು ಸಮನ್ಸ್​ ಬಂದ ನಂತರ ತಲೆಮರೆಸಿಕೊಳ್ಳಲಿಲ್ಲ. ಈ ಊರಿನಿಂದ ಹಾಗೂ ದೇಶದಿಂದ ಹೊರ ಹೋಗಲು ಪ್ರಯತ್ನಿಸಲಿಲ್ಲ ಎಂದು ಶರ್ಲಿನ್ ಚೋಪ್ರಾ ಸ್ಪಷ್ಟಪಡಿಸಿದ್ದಾರೆ.

ಶರ್ಲಿನ್ ಚೋಪ್ರಾ

ಶರ್ಲಿನ್ ಚೋಪ್ರಾ

  • Share this:
ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಬಂಧನ ಪ್ರಕರಣದಲ್ಲಿ ಶರ್ಲಿನ್ ಚೋಪ್ರಾ ಹೆಸರು ಕೇಳಿ ಬಂದಿದ್ದು ಗೊತ್ತೇ ಇದೆ. ಈಗ ನಟಿ ಶರ್ಲಿನ್ ಚೋಪ್ರಾ ಅವರೇ ರಾಜ್ ಕುಂದ್ರಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆಯನ್ನು ನೀಡಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ಶರ್ಲಿನ್ ಅವರು ಒಂದು ವಿಡಿಯೀ ಹಂಚಿಕೊಂಡಿದ್ದಾರೆ. ಅದರಲ್ಲಿ ರಾಜ್ ಕುಂದ್ರಾ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸೈಬರ್ ಸೆಲ್​ ಎದುರು ಮೊದಲು ಹೇಳಿಕೆ ಕೊಟ್ಟಿದ್ದು ನಾನೇ ಎಂದಿದ್ದಾರೆ.ಕಳೆದ ಕೆಲವು ದಿನಗಳಿಂದ ಮಾಧ್ಯಮದವರು ನನಗೆ ಕರೆ, ಇಮೇಲ್​ ಹಾಗೂ ಮೆಸೇಜ್​ಗಳ ಮೂಲಕ ಈ ಪ್ರಕರಣದ ಬಗ್ಗೆ ನನ್ನ ಅಭಿಪ್ರಾಯ ಕೇಳುತ್ತಿದ್ದಾರೆ. ಅದಕ್ಕೆ ಈ ವಿಡಿಯೋ ಮೂಲಕ ಉತ್ತರಿಸಲು ಬಯಸುತ್ತಿದ್ದೇನೆ ಎಂದು ಶರ್ಲಿನ್ ಮಾತು ಆರಂಭಿಸಿದ್ದಾರೆ. ಈ ಪ್ರಕರಣದಲ್ಲಿ ಮೊದಲು ಸೈಬರ್ ಸೆಲ್​ನವರ ಎದುರು ಮೊದಲು ಹೇಳಿಕೆ ಕೊಟ್ಟಿದ್ದು ನಾನೇ , ಜೊತೆಗೆ  ಅರ್ಮ್ಸ್​ಪ್ರೈಮ್​ ಕುರಿತಾಗಿಯೂ ಮಾಹಿತಿ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಮಹಾರಾಷ್ಟ್ರ ಸೈಬರ್ ಸೆಲ್ ಪೊಲೀಸರು ನನಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್​ ಕೊಟ್ಟಾಗ ಮೊದಲು ನನಗೆ ನೆನಪಾಗಿದ್ದು ಶಿಲ್ಪಾ ಶೆಟ್ಟಿ ಹಾಗೂ ಅವರ ಮಕ್ಕಳು. ನಾನು ಸಮನ್ಸ್​ ಬಂದ ನಂತರ ತಲೆಮರೆಸಿಕೊಳ್ಳಲಿಲ್ಲ. ಈ ಊರಿನಿಂದ ಹಾಗೂ ದೇಶದಿಂದ ಹೊರ ಹೋಗಲು ಪ್ರಯತ್ನಿಸಲಿಲ್ಲ. ಮಾರ್ಚ್​ 2001ರಲ್ಲೇ ನಾನು ಸೈಬರ್ ಸೆಲ್​ ಅಧಿಕಾರಿಗಳ ಮುಂದೆ ಹೇಳಿಕೆ ಕೊಟ್ಟಿದ್ದೇನೆ. ಇನ್ನು ದಯವಿಟ್ಟು ಈ ಪ್ರಕರಣದ ಸಂಬಂಧ ಏನೇ ಮಾಹಿತಿ ಬೇಕಿದ್ದರೂ ಸೈಬರ್ ಸೆಲ್​ ಅಧಿಕಾರಿಗಳನ್ನು ಸಂಪರ್ಕಿಸಿ ಎಂದು ಮನವಿ ಮಾಡಿದ್ದಾರೆ.

raj kundra, Raj Kundra Arrest, 25 laksh Bribe, raj kundra porn case, porn case, mumbai crime branch, 25 ಲಕ್ಷ ಲಂಚ, ಮುಂಬೈ ಕ್ರೈಂ ಬ್ರ್ಯಾಂಚ್​, ರಾಜ್​ ಕುಂದ್ರಾ, ಅಶ್ಲೀಲ ಸಿನಿಮಾಗಳ ನಿರ್ಮಾಣ, ಶಿಲ್ಪಾ ಶೆಟ್ಟಿ ಗಂಡ ರಾಜ್​ ಕುಂದ್ರಾ, Pornography Case Raj Kundra paid 25 lakh bribe to crime branch to avoid arrest ae
ರಾಜ್ ಕುಂದ್ರಾ


ಈ ದಂಧೆಗೆ ರಾಜ್​ ಕುಂದ್ರಾ ತನ್ನನ್ನು ನೂಕಿದರು ಎಂದು ಶರ್ಲಿನ್​ ಅವರು ಪೊಲೀಸರ ಮುಂದೆ ಹೇಳಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಪ್ರತಿ ಪ್ರಾಜೆಕ್ಟ್​ನಲ್ಲಿ ಶರ್ಲಿನ್​ ಚೋಪ್ರಾಗೆ 30 ಲಕ್ಷ ಸಿಗುತ್ತಿತ್ತು. ಇದೇ ರೀತಿ  15-30 ಪ್ರಾಜೆಕ್ಟ್​ಗಳಲ್ಲಿ ರಾಜ್​ ಕುಂದ್ರಾ ಜೊತೆ ಶರ್ಲಿನ್​ ಚೋಪ್ರಾ ಕೆಲಸ ಮಾಡಿದ್ದರು ಎಂಬ ಮಾಹಿತಿಯೂ ಬಲ್ಲ ಮೂಲಗಳಿಂದ ಲಭ್ಯವಾಗಿದೆ.

ಇದನ್ನೂ ಓದಿ:  ಶುರುವಾಯ್ತು ಮದಗಜದ ಅಬ್ಬರ: ಹಾಡಿನ ಚಿತ್ರೀಕರಣಕ್ಕೆ ಸಿದ್ಧವಾಗಿದೆ ಅದ್ಧೂರಿ ಸೆಟ್​..!

ಅಶ್ಲೀಲ ಚಿತ್ರಗಳ ನಿರ್ಮಾಣ ಹಾಗೂ ಮೊಬೈಲ್ ಅಪ್ಲಿಕೇಷನ್​ಗಳಲ್ಲಿ ಪ್ರಸಾರ ಮಾಡುವ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ರಾಜ್​ ಕುಂದ್ರಾ, ಬಂಧನವಾಗಬಾರದು ಎಂಬ ಕಾರಣಕ್ಕೆ 25 ಲಕ್ಷ ಹಣವನ್ನು ಲಂಚವಾಗಿ ಅಧಿಕಾರಿಗಳಿಗೆ ನೀಡಿದ್ದಾರಂತೆ. ಈ ಆರೋಪ ಮಾಡಿರುವುದು ಅರವಿಂದ್​ ಶ್ರೀವಾಸ್ತವ​.

ಅರವಿಂದ್ ಶ್ರೀವಾಸ್ತವ ಅಲಿಯಾಸ್ ಯಶ್​ ಠಾಕೂರ್​ ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದು, ತಲೆಮರೆಸಿಕೊಂಡಿದ್ದಾರೆ. ಈ ದಂಧೆಯ ಕಿಂಗ್​ಪಿನ್ ಎಂದೇ ಕರೆಯಲ್ಪಡುವ ಅರವಿಂದ್ ಶ್ರೀವಾಸ್ತವ ಇಮೇಲ್​ ಮೂಲಕ ಭ್ರಷ್ಟಾಚಾರ ತಡೆ ವಿಭಾಗ (ಎಸಿಬಿ)ಕ್ಕೆ ದೂರು ನೀಡಿದ್ದಾರೆ. ಈ ದೂರಿನಲ್ಲಿ ರಾಜ್​​ ಕುಂದ್ರಾ ಪೊಲೀಸರಿಗೆ ಲಂಚ ನೀಡಿರುವ ಬಗ್ಗೆ ಉಲ್ಲೇಖಿಸಿದ್ದಾರೆ ಎಂದು ಇಂಗ್ಲಿಷ್​ ಪತ್ರಿಕೆ ವರದಿ ಮಾಡಿದೆ.
ಕಳೆದ ಮಾರ್ಚ್​ನಲ್ಲೇ ಅರವಿಣದ್ ಅವರ ಒಡೆತನದ ಫ್ಲಿಜ್​ ಮೂವೀಸ್​ ಸಂಸ್ಥೆಗೆ ಸೇರಿದ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಅದರಲ್ಲಿ 4.50 ಕೋಟಿಗೂ ಹೆಚ್ಚು ಹಣ ವರ್ಗಾವಣೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗುತ್ತು.

ಇದನ್ನೂಓದಿ: Bigg Boss Kannada Season 8: ಮಂಜು ಪಾವಗಡ ಯಾವಾಗ್ಲೂ ಹುಡುಗಿಯರ ಜೊತೆಯಲ್ಲೇ ಇರ್ತಾರೆ ಏಕೆ ಗೊತ್ತಾ..?

ರಾಜ್​ ಕುಂದ್ರಾ ಅವರು ಅಶ್ಲೀಲ ವಿಡಿಯೋ ಲೈವ್ ಸ್ಟ್ರೀಮಿಂಗ್​ಗೆ ಭವಿಷ್ಯದಲ್ಲಿ ಬೇಡಿಕೆ ಬರಲಿದೆ ಅನ್ನೋದು ರಾಜ್​ ಕುಂದ್ರಾ ಲೆಕ್ಕಾಚಾರವಾಗಿತ್ತಂತೆ. ಬಾಲಿವುಡ್​ನಷ್ಟೇ ದೊಡ್ಡದಾಗಿ ಈ ಅಶ್ಲೀಲ ಸಿನಿಮಾಗಳ ಉದ್ಯಮವನ್ನು ಬೆಳೆಸಬೇಕು ಅನ್ನೋದು ರಾಜ್ ಕುಂದ್ರಾ ಪ್ಲಾನ್​ ಆಗಿತ್ತು ಎಂದು ಪೊಲೀಸ್​ ಮೂಲಗಳಿಂದ ತಿಳಿದು ಬಂದಿದೆ ಎಂದು ಇಂಗ್ಲಿಷ್ ಸುದ್ದಿ ವಾಹಿನಿಯೊಂದು ವರದಿ ಮಾಡಿದೆ.ಈ ಪ್ರಕರಣದಲ್ಲಿ ರಾಜ್​ ಕುಂದ್ರಾ ಅವರೇ ಪ್ರಮುಖ ಸಂಚುಕೋರ ಎಂದು ಪರಿಗಣಿಸಿರುವ ಪೊಲೀಸರು, ‘ಹಾಟ್‌ಶಾಟ್ಸ್’ ಆ್ಯಪ್ ಮೂಲಕ ಅಶ್ಲೀಲ ವಿಡಿಯೋಗಳ ಪ್ರಸಾರದಲ್ಲಿ ಕುಂದ್ರಾ ಭಾಗಿಯಾಗಿದ್ದರು ಎಂದು ತಿಳಿಸಿದ್ದಾರೆ. ‘ಹಾಟ್‌ಶಾಟ್‌’ ಆ್ಯಪ್​ ಪ್ರಸ್ತುತ ಎಲ್ಲಿಯೂ ಸಿಗುವುದಿಲ್ಲ, ಇದನ್ನು ಗೂಗಲ್​ ಪ್ಲೇಸ್ಟೋರ್​ ಮತ್ತು ಆ್ಯಪಲ್​ ಸ್ಟೋರ್​ಗಳು ತೆಗೆದು ಹಾಕಿವೆ. ಕುಂದ್ರಾ ಹಾಟ್​ಶಾಟ್​ ಆ್ಯಪ್​ಗೆ ಬೇಕಾದ ಕಟೆಂಟ್​ಗಳನ್ನು ಕೊಡುತ್ತಿದ್ದರು ಹಾಗೂ ಯುಕೆಯಲ್ಲಿ ಇರುವ ತನ್ನ ವಿಹಾನ್​ ಇಂಡಸ್ಟ್ರೀಸ್ ಕಚೇರಿಯಿಂದ ನಿಯಂತ್ರಿಸಲಾಗುತ್ತಿತ್ತು ಎಂದು ಹೇಳಲಾಗಿದೆ.

2019 ರಲ್ಲಿ ‘ಹಾಟ್‌ಶಾಟ್‌’ ಆ್ಯಪ್​ಅನ್ನು $25,000 ಡಾಲರ್​ಗೆ ಮಾರಾಟ ಮಾಡಿದ್ದೇನೆ ಎಂದು ಕುಂದ್ರಾ ಹೇಳಿದ್ದರು.ಕುಂದ್ರಾ ತನ್ನ ಆ್ಯಪ್ ‘ಹಾಟ್‌ಶಾಟ್ಸ್’ ಅನ್ನು ಯುಕೆ ಮೂಲದ ಕೆನ್ರಿನ್ ಪ್ರೈವೇಟ್ ಲಿಮಿಟೆಡ್‌ಗೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾನೆ. ಆದರೆ ಇದು ಅವವ ಸಂಬಂಧಿ ಪ್ರದೀಪ್ ಬಕ್ಷಿ ಒಡೆತನದಲ್ಲಿ ಇದೆ ಎಂದು ಹೇಳಿದ್ದರು. ಅದರ ಎಲ್ಲಾ ಚಟುವಟಿಕೆಗಳು ಮುಂಬೈಯಿಂದ ನಿಯಂತ್ರಿಸಲ್ಪಡುತ್ತಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ಕುಂದ್ರಾ ಮತ್ತು ಆತನ ಸಹಚರ ರಿಯಾನ್ ಥಾರ್ಪ್ ಅವರನ್ನು ಜುಲೈ 23 ರವರೆಗೆ ಬಂಧನದಲ್ಲಿ ಇಡಲಾಗಿದೆ.
Published by:Anitha E
First published: