ಪ್ರೇಮಂ ಸಾಯಿ ಪಲ್ಲವಿಯನ್ನು ಕಣ್ಣೀರು ಹಾಕಿಸಿದ್ರಂತೆ ಖ್ಯಾತ ನಿರ್ದೇಶಕರು..!

ಬರೋಬ್ಬರಿ ಐದು ವರ್ಷಗಳ ಬಳಿಕ ಸೆಲ್ವರಾಘವನ್ ನಿರ್ದೇಶಿಸಿರುವ ಚಿತ್ರವಾಗಿರುವ ಕಾರಣ ಎನ್​ಜಿಕೆ ಮೇಲೆ ಸಿನಿಪ್ರಿಯರಲ್ಲಿ ಸಿಕ್ಕಾಪಟ್ಟೆ ಕೂತೂಹಲವಿದೆ. 

zahir | news18
Updated:May 26, 2019, 4:32 PM IST
ಪ್ರೇಮಂ ಸಾಯಿ ಪಲ್ಲವಿಯನ್ನು ಕಣ್ಣೀರು ಹಾಕಿಸಿದ್ರಂತೆ ಖ್ಯಾತ ನಿರ್ದೇಶಕರು..!
ಸಾಯಿ ಪಲ್ಲವಿ
zahir | news18
Updated: May 26, 2019, 4:32 PM IST
ಮಲರ್ ಟೀಚರ್​ ಎಂದೊಡನೆ ಕಣ್ಣುಮುಂದೆ ಬರುವುದು ಮುದ್ದು ಮುಖದ ನಟಿ ಸಾಯಿ ಪಲ್ಲವಿ. ಮೊದಲ ಚಿತ್ರ 'ಪ್ರೇಮಂ'ನಲ್ಲೇ ಅದ್ಭುತ ಅಭಿನಯ ಮತ್ತು ಕ್ಯೂಟ್ ನಗುವಿನ ಮೂಲಕ ಸಿನಿಪ್ರಿಯರ ಹಾರ್ಟ್​​ಗೆ ಲಗ್ಗೆಯಿಟ್ಟಿದ್ದ ಈ ನಟಿ ಬಳಿಕ ಏಕಧಂ ಸ್ಟಾರ್ ಪಟ್ಟಕ್ಕೇರಿದ್ದರು. ಸದ್ಯ ಸಾಯಿ ಪಲ್ಲವಿ ಕೈಯಲ್ಲಿ ಮಲಯಾಳಂ, ತಮಿಳು, ತೆಲುಗು ಚಿತ್ರಗಳ ಸರಮಾಲೆಯೇ ಇದೆ.

ಇಷ್ಟೆಲ್ಲಾ ಚಿತ್ರಗಳಿದ್ದರೂ, ಸಿನಿರಂಗಕ್ಕೆ ಗುಡ್​ ಬೈ ಹೇಳಲು ಮುಂದಾಗಿದ್ದೆ ಎಂಬ ವಿಷಯವನ್ನು ರಟ್ಟು ಮಾಡಿದ್ದಾರೆ 'ಮಾರಿ'ಯ ಈ ಬೇಬಿ. ಹೌದು, 'ಮಾರಿ-2' ಚಿತ್ರದಲ್ಲಿನ ಲವ್ಲಿ ಪಾತ್ರದ ಮೂಲಕ ಕಾಲಿವುಡ್ ಸಿನಿಪ್ರಿಯರ ಮನಗೆದ್ದ 'ಫಿದಾ' ನಟಿ, ಖ್ಯಾತ ನಿರ್ದೇಶಕ ಸೆಲ್ವರಾಘವನ್​ ಅವರ ಚಿತ್ರದಲ್ಲಿ ಅವಕಾಶ ಲಭಿಸಿತ್ತು.

'ಎನ್​ಜಿಕೆ' (ನಂದ ಗೋಪಾಲನ್ ಕುಮಾರನ್) ಎಂಬ ಹೆಸರಿನ ಈ ಚಿತ್ರದಲ್ಲಿ ಸಾಯಿ ಪಲ್ಲವಿಗೆ ನಾಯಕ ಅಭಿನಯ ಚತುರ ಸೂರ್ಯ. ಸೆಲ್ವರಾಘವನ್ ಆ್ಯಕ್ಷನ್​ಗೆ ನಟ ಸೂರ್ಯ ಒಂದೇ ಟೇಕ್​ನಲ್ಲಿ ಓಕೆ ಎಂದೇಳಿಸುತ್ತಿದ್ದರು. ಆದರೆ ಅತ್ತ ಕಡೆ ಸಾಯಿ ಪಲ್ಲವಿ ಸೀನ್​ಗಳು ಮಾತ್ರ ಸರಿಯಾಗಿ ಬರುತ್ತಿರಲಿಲ್ಲವಂತೆ.

ಹೀಗಾಗಿ ಅನೇಕ ಬಾರಿ ಸಾಯಿ ಪಲ್ಲವಿಯ ಟೇಕ್​ಗಳು ಓಕೆ ಆಗದಿದ್ದ ಕಾರಣ ನಿರ್ದೇಶಕರು ಪ್ಯಾಕ್ಅಪ್ ಹೇಳಿದ್ದರು. ಇದರಿಂದ ನೊಂದಿದ್ದ ಸಾಯಿ ಪಲ್ಲವಿ ಮನೆಗೆ ಬಂದು ಅತ್ತಿದ್ದರಂತೆ. ಅಲ್ಲದೆ ಅಮ್ಮನೊಂದಿಗೆ ನನಗೆ ಅಭಿನಯಿಸಲು ಬರುತ್ತಿಲ್ಲ. ನಾನು ವೈದ್ಯಕೀಯ ವೃತ್ತಿಯನ್ನು ಮುಂದುವರೆಸುವುದಾಗಿ ತಿಳಿಸಿದ್ದರು. ಅಲ್ಲದೆ ಶೂಟಿಂಗ್​ನಲ್ಲಿ ತನ್ನ ನಟನೆಯನ್ನು ನಿರ್ದೇಶಕರು ಮೆಚ್ಚಿಕೊಳ್ಳದಿರುವುದನ್ನು ಇಡೀ ದಿನ ಅಳುತ್ತಾ ಮನೆಯಲ್ಲಿ ಕೂತಿರುತ್ತಿದ್ದೆ ಎಂದು ಸಾಯಿ ಪಲ್ಲವಿ ತಿಳಿಸಿದ್ದಾರೆ.

ಆದರೆ ಮರುದಿನ ಶೂಟಿಂಗ್​ನಲ್ಲಿ ನನ್ನ ಮೊದಲ ಸೀನ್​ ಮೊದಲ ಟೇಕ್​ನಲ್ಲಿ ಓಕೆಯಾಗಿತ್ತು. ಇದರಿಂದ ನಿರ್ದೇಶಕರು ಖುಷ್, ನಾನು ಫುಲ್ ಹ್ಯಾಪಿ ಎಂದು 'ಎನ್​ಜಿಕೆ' ಚಿತ್ರದ ಅನುಭವಗಳನ್ನು  ಹಂಚಿಕೊಂಡಿದ್ದಾರೆ ನಟಿ ಸಾಯಿ ಪಲ್ಲವಿ.

ಇದನ್ನೂ ಓದಿ: ಚೊಚ್ಚಲ ಕಾಲಿವುಡ್ ಸಿನಿಮಾ ಬಿಡುಗಡೆ ಮುನ್ನವೇ ಸ್ಟಾರ್​ ನಟನ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ!
Loading...

ಭಾರೀ ನಿರೀಕ್ಷೆ ಮೂಡಿಸಿರುವ 'ಎನ್​ಜಿಕೆ' ಚಿತ್ರವು ಪೊಲಿಟಿಕಲ್ ಡ್ರಾಮಾ ಕಥೆಯನ್ನು ಆಧರಿಸಿದ್ದು, ಸೂರ್ಯ ಇಲ್ಲಿ ಯುವ ರಾಜಕಾರಣಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬರೋಬ್ಬರಿ ಐದು ವರ್ಷಗಳ ಬಳಿಕ ಸೆಲ್ವರಾಘವನ್ ನಿರ್ದೇಶಿಸಿರುವ ಚಿತ್ರವಾಗಿರುವ ಕಾರಣ 'ಎನ್​ಜಿಕೆ' ಮೇಲೆ ಸಿನಿಪ್ರಿಯರಲ್ಲಿ ಸಿಕ್ಕಾಪಟ್ಟೆ ಕೂತೂಹಲವಿದೆ. ನಂದ, ಗೋಪಾಲನ್, ಕುಮಾರನ್ ಎಂಬ ಮೂರು ವಿಭಿನ್ನ ಶೇಡ್​ಗಳ ಪಾತ್ರದಲ್ಲಿ ನಟ ಸೂರ್ಯ ಮತ್ತೊಮ್ಮೆ ತೆರೆ ಮೇಲೆ ಮ್ಯಾಜಿಕ್ ಮಾಡುವ ಇರಾದೆಯಲ್ಲಿದ್ದಾರೆ.

ಪ್ರೇಮಂ ಚಿತ್ರದ ಕ್ಯೂಟ್ ಸೀನ್​ಗಳು:

First published:May 26, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...