ಅಖಂಡ ಕರ್ನಾಟಕ ಕೂಗಿಗೆ ಧ್ವನಿಯಾದ ಹ್ಯಾಟ್ರಿಕ್​ ಹೀರೋ ಶಿವರಾಜ್​ ಕುಮಾರ್​

news18
Updated:August 1, 2018, 7:12 PM IST
ಅಖಂಡ ಕರ್ನಾಟಕ ಕೂಗಿಗೆ ಧ್ವನಿಯಾದ ಹ್ಯಾಟ್ರಿಕ್​ ಹೀರೋ ಶಿವರಾಜ್​ ಕುಮಾರ್​
news18
Updated: August 1, 2018, 7:12 PM IST
ಹರೀಶ್​, ನ್ಯೂಸ್​ 18 ಕನ್ನಡ

ಬೆಂಗಳೂರು (ಆ.1): ರಾಜ್ಯದಲ್ಲಿ ಎದ್ದಿರುವ ಪ್ರತ್ಯೇಕ ಕರ್ನಾಟಕ ಬೇಡಿಕೆ ಕುರಿತು ಈಗ ಎಲ್ಲೆಡೆ ಬಿಸಿ ಹೆಚ್ಚಿದೆ. ಇದನ್ನು ಶಮನ ಮಾಡಲು ಮೈತ್ರಿ ಸರ್ಕಾರ ಕಸರತ್ತು ನಡೆಸಿದೆ. ಈ ಮಧ್ಯೆ ಗೋಕಾಕ್​ ಚಳುವಳಿಯ ಮೂಲಕ ಹೊಸ ಇತಿಹಾಸ ನಿರ್ಮಾಣ ಮಾಡಿದ ನಟ ರಾಜ್​ ಕುಮಾರ್​  ಅವರ ಮಗ ಶಿವಣ್ಣ ಈಗ ಉತ್ತರ ಕರ್ನಾಟಕ ವಿಷಯದ ಬಗ್ಗೆ ಮಾತನಾಡಿದ್ದು, ಈ ಮೂಲಕ ಈ ಸಮಸ್ಯೆಗೆ ಅಂತ್ಯವಾಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.

'ಯಾವುದೇ ಕಾರಣಕ್ಕೂ ರಾಜ್ಯ ಒಡೆಯುವ ಕೆಲಸ ಮಾಡಬೇಡಿ.  ನಾವೆಲ್ಲ ಒಂದೇ. ಒಟ್ಟಿಗೆ ಇರಬೇಕು. ಏನೇ ಸಮಸ್ಯೆ ಬಂದರೂ ಬಗೆಹರಿಸಿಕೊಂಡು ಹೋಗೋಣ. ಖಂಡ-ಖಂಡ ಕರ್ನಾಟಕ ಗೊತ್ತಿಲ್ಲ, ನನಗೆ ಗೊತ್ತಿರೋದು ಅಖಂಡ ಕರ್ನಾಟಕವೊಂದೆ. ಪ್ರತ್ಯೇಕ ರಾಜ್ಯ ಬೇಕೆಂದು ಹೇಳೋರಿಗೆ ಬುದ್ಧಿಮಾತು ಹೇಳುವಷ್ಟು ದೊಡ್ಡವನಲ್ಲ' ಎಂದು ‘ಕವಚಾ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ನಟ ಶಿವರಾಜ್ ಕುಮಾರ್  ತಿಳಿಸಿದರು.

ಸಿನಿಮಾ ನಟರು ಜನರ ಮೇಲೆ  ಹೆಚ್ಚು ಪ್ರಭಾವ ಬೀರುವ ವ್ಯಕ್ತಿಗಳಾಗಿದ್ದು, ಅವರ ಮಾತುಗಳನ್ನು ಜನರು ಕೂಡ ಕೇಳುತ್ತಾರೆ ಎಂಬ ಮಾತು ಸಾಮಾನ್ಯವಾಗಿದೆ. ಗೋಕಾಕ್​ ಚಳುವಳಿಯ ಸಂದರ್ಭದಲ್ಲಿಯೂ ಕೂಡ ಇದು ದೃಢಪಟ್ಟಿತು. ಗೋಕಾಕ್​ ಚಳುವಳಿಗೆ ನಟ ರಾಜ್​ ಕುಮಾರ್​ ಪ್ರವೇಶವಾಗುತ್ತಿದ್ದಂತೆ ಚಳುವಳಿಯ ಸ್ವರೂಪವೇ ಬದಲಾಯಿತು. ಈಗ ನಟ ಶಿವರಾಜ್​ ಕುಮಾರ್​ ಕೂಡ ಅಖಂಡ ಕರ್ನಾಟಕ ವಿಷಯದಲ್ಲಿ ಧ್ವನಿ ಎತ್ತಿದ್ದು, ನಟರೆಲ್ಲರೂ ಒಗ್ಗೂಡಿದರೆ ರಾಜ್ಯದಲ್ಲಿ ಒಡಕು ಮೂಡುವುದನ್ನು ತಡೆಗಟ್ಟಲು ಸಾಧ್ಯವಾಗಬಹುದು ಎಂಬ ನಂಬಿಕೆ ಕೂಡ ಇದೆ ಎಂದಿದ್ದಾರೆ.
First published:August 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...