HOME » NEWS » Entertainment » I SAW SUSHANT SINGH RAJPUT TAKING DRUGS IN 2018 SAYS ACTORS STAFF DIPESH SAWANT RMD

ನಟ ಸುಶಾಂತ್​ ಡ್ರಗ್ಸ್​ ತೆಗೆದುಕೊಂಡಿದ್ದನ್ನು ನಾನೇ ನೋಡಿದ್ದೇನೆ

2018ರ ಸೆಪ್ಟೆಂಬರ್ ತಿಂಗಳಲ್ಲಿ ನಾನು ಸುಶಾಂತ್​ ಸಂಪರ್ಕಕ್ಕೆ ಬಂದಿದ್ದೆ. ಅವರಿಗೋಸ್ಕರ ಕೆಲಸ ಮಾಡುವಂತೆ ನನಗೆ ಸೂಚಿಸಿದ್ದರು. ಸುಶಾಂತ್​ಗಾಗಿ ಕೆಲಸ ಮಾಡಲು ಆರಂಭಿಸಿದ ಮೂರೇ ದಿನಕ್ಕೆ ಅವರು ಡ್ರಗ್ಸ್​ ತೆಗೆದುಕೊಂಡಿದ್ದನ್ನು ನೋಡಿದ್ದೇನೆ ಎಂದು ದೀಪೇಶ್​ ಹೇಳಿದ್ದಾರೆ.

news18-kannada
Updated:September 6, 2020, 3:28 PM IST
ನಟ ಸುಶಾಂತ್​ ಡ್ರಗ್ಸ್​ ತೆಗೆದುಕೊಂಡಿದ್ದನ್ನು ನಾನೇ ನೋಡಿದ್ದೇನೆ
ಸುಶಾಂತ್​ ಸಿಂಗ್​
  • Share this:
ಸುಶಾಂತ್​ ಸಿಂಗ್​ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಪ್ರಕರಣದಲ್ಲಿ ಸುಶಾಂತ್​ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ ಕೈವಾಡ ಕೂಡ ಇದೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ. ಇನ್ನು, ರಿಯಾಗೆ ಕೆಲ ಡ್ರಗ್​ ಪೆಡ್ಲರ್​ಗಳ ಸಂಪರ್ಕ ಇರುವ ವಿಚಾರ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಮಾದಕ ದ್ಯವ ನಿಯಂತ್ರಣ ಮಂಡಳಿ (ಎನ್​ಸಿಬಿ)  ವಿಚಾರಣೆ ಆರಂಭಿಸಿದೆ. ಸುಶಾಂತ್​ ಸಿಂಗ್​ ಬಾಣಸಿಗನಾಗಿದ್ದ, ದೀಪೇಶ್​ ಸಾಂವತ್​ರನ್ನು ಕೂಡ ಅರೆಸ್ಟ್​ ಮಾಡಲಾಗಿದೆ. ಇವರು ಈಗ ಎನ್​ಸಿಬಿ ಎದುರು ಶಾಕಿಂಗ್​ ಹೇಳಿಕೆ ನೀಡಿದ್ದಾರೆ.

2018ರ ಸೆಪ್ಟೆಂಬರ್ ತಿಂಗಳಲ್ಲಿ ನಾನು ಸುಶಾಂತ್​ ಸಂಪರ್ಕಕ್ಕೆ ಬಂದಿದ್ದೆ. ಅವರಿಗೋಸ್ಕರ ಕೆಲಸ ಮಾಡುವಂತೆ ನನಗೆ ಮ್ಯಾನೇಜರ್ ಸೂಚಿಸಿದ್ದರು. ಸುಶಾಂತ್​ಗಾಗಿ ಕೆಲಸ ಮಾಡಲು ಆರಂಭಿಸಿದ ಮೂರೇ ದಿನಕ್ಕೆ ಅವರು ಡ್ರಗ್ಸ್​ ತೆಗೆದುಕೊಂಡಿದ್ದನ್ನು ನೋಡಿದ್ದೇನೆ ಎಂದು ದೀಪೇಶ್​ ಹೇಳಿದ್ದಾರೆ.

ನನ್ನ ಗೆಳೆಯನ ಮೂಲಕ ನಾನು ಸುಶಾಂತ್​ ಅವರನ್ನು ಭೇಟಿ ಮಾಡಿದ್ದೆ. ಅವರಿಗಾಗಿ ಕೆಲಸ ಮಾಡಲು ನಾನು ಆರಂಭಿಸಿದೆ. ಈ ವೇಳೆ ಅವರು ಲಿಟ್ಲ್​ ಹೈಟ್ಸ್​ ಅಪಾರ್ಟ್​ಮೆಂಟ್​ನಲ್ಲಿ ವಾಸವಾಗಿದ್ದರು. ಅಲ್ಲಿಯೇ ಉಳಿದುಕೊಳ್ಳುವಂತೆ ಸುಶಾಂತ್​ ಮ್ಯಾನೇಜರ್​ ನನಗೆ ಸೂಚಿಸಿದ್ದರು. ಹೀಗಾಗಿ, ನಾನು ಅಲ್ಲಿಯೇ ಉಳಿದುಕೊಳ್ಳಲು ಆರಂಭಿಸಿದೆ. ಅವರು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದ ವಿಡಿಯೋಗಳನ್ನು ನಾನೇ ಶೂಟ್​ ಮಾಡುತ್ತಿದೆ ಎಂದು ದೀಪೇಶ್​ ತಿಳಿಸಿದ್ದಾರೆ.

ಇದೇ ಅವಧಿಯಲ್ಲಿ ಸುಶಾಂತ್​ ಗಾಂಜಾ ಸೇದುವುದನ್ನು ನಾನು ನೋಡಿದ್ದೇನೆ. 2020ರ ಆರಂಭದಲ್ಲಿ ಅವರನ್ನು ಭೇಟಿ ಮಾಡಿದಾಗ ಸುಶಾಂತ್​ ತುಂಬಾನೇ ಕುಗ್ಗಿದ್ದರು. ಅಲ್ಲದೆ ನಟನೆ ಬಿಡುವ ಬಗ್ಗೆಯೂ ಮಾತನಾಡುತ್ತಿದ್ದರು ಎಂದು ದೀಪೇಶ್​ ಎನ್​ಸಿಬಿ ಎದುರು ಮಾಹಿತಿ ನೀಡಿದ್ದಾರೆ.
Published by: Rajesh Duggumane
First published: September 6, 2020, 3:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories