HOME » NEWS » Entertainment » I LOVE MOVIE MUSIC DIRECTOR KIRAN THOTAMBYLE ANGRY OVER SUDEEP STARRER PAILWAAN MOVIE RMD

‘ಪೈಲ್ವಾನ್’ ತೆಗಳುವ ಭರದಲ್ಲಿ ತನ್ನ ಸಿನಿಮಾಗೇ ಬೈದ ಐ ಲವ್ ಯು ಸಂಗೀತ ನಿರ್ದೇಶಕ!

ಈ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿವೆ. ಓರ್ವ ಸಂಗೀತ ನಿರ್ದೇಶಕ,  ಅವರು ಮಾಡಿದ ಸಿನಿಮಾದ ಮೇಲೆ  ಹೆಮ್ಮೆ ಹೊಂದಿಲ್ಲ ಎಂದಾದರೆ ಅಂಥವರಿಗೆ ಇನ್ನೆಷ್ಟು ಚಿತ್ರಗಳಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕೀತು ಎಂದು ಕೆಲವರು ಪ್ರಶ್ನಿಸಿದ್ದಾರೆ.

Rajesh Duggumane | news18-kannada
Updated:September 13, 2019, 8:37 PM IST
‘ಪೈಲ್ವಾನ್’ ತೆಗಳುವ ಭರದಲ್ಲಿ ತನ್ನ ಸಿನಿಮಾಗೇ ಬೈದ ಐ ಲವ್ ಯು ಸಂಗೀತ ನಿರ್ದೇಶಕ!
ಪೈಲ್ವಾನ್​ ಚಿತ್ರದಲ್ಲಿ ಸುದೀಪ್​
  • Share this:
‘ಪೈಲ್ವಾನ್​’ ಸಿನಿಮಾ ಗುರುವಾರ ತೆರೆಕಂಡಿತ್ತು. ಈ ಚಿತ್ರ ಮೊದಲ ದಿನ ಸ್ಯಾಂಡಲ್​ವುಡ್​ ಬಾಕ್ಸ್​ ಆಫೀಸ್​ನಲ್ಲಿ 10 ಕೋಟಿ ಕಲೆಕ್ಷನ್​​ ಮಾಡಿದೆ ಎಂಬುದು ಸಿನಿಮಾ ತಜ್ಞರ ಲೆಕ್ಕಾಚಾರ. ಕೆಲವರು 15 ಕೋಟಿ ರೂ. ಗಳಿಕೆ ಮಾಡಿದೆ ಎಂದೂ ಹೇಳುತ್ತಿದ್ದಾರೆ. ಈ ಮಧ್ಯೆ ಚಿತ್ರವನ್ನು ಕೆಲವರು ತೆಗಳುತ್ತಿದ್ದಾರೆ. ಹೀಗೆ ಮಾಡಿದವರ ಪೈಕಿ ‘ಐ ಲವ್​ ಯು’ ಸಿನಿಮಾದ ಸಂಗೀತ ನಿರ್ದೇಶಕ ಕೂಡ ಒಬ್ಬರು. ಆದರೆ, ಸುದೀಪ್​ ಸಿನಿಮಾ​ ತೆಗಳುವ ಭರದಲ್ಲಿ ತಾವೇ ಸಂಗೀತ ಸಂಯೋಜನೆ ಮಾಡಿದ್ದ 'ಐ ಲವ್​ ಯು' ಚಿತ್ರಕ್ಕೆ ಬೈದಿದ್ದಾರೆ!

ಉಪೇಂದ್ರ ನಟನಯೆ ‘ಐ ಲವ್​ ಯು’ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಸಿನಿಮಾಕ್ಕೆ ಸಂಗೀತ ಸಂಯೋಜನೆ ಮಾಡಿದ್ದು, ಕಿರಣ್ ತೋಟಂಬೈಲೆ. ಅವರು ‘ಪೈಲ್ವಾನ್​’ ಸಿನಿಮಾ ವೀಕ್ಷಣೆ ಮಾಡಿದ್ದಾರೆ. “ಪೈಲ್ವಾನ್​ ನೋಡಿ ಶಾಕ್​ ಅಲ್ಲಿದ್ದೇವೆ. ಕೃಷ್ಣ ಅವರೇ ಯಾಕೆ ಇಂಥ ಸಿನಿಮಾ ಮಾಡಿ ಸುದೀಪ್​ನ ಇನ್ಸಲ್ಟ್​ ಮಾಡ್ತೀರಾ,” ಎಂದು ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿದ್ದರು.ಈ ಪೋಸ್ಟ್​ಗೆ ಕಮೆಂಟ್​ ಮಾಡಿದ್ದ ಸುದೀಪ್​ ಅಭಿಮಾನಿ, ‘ನೀವು ಸಂಗೀತ ಸಂಯೋಜನೆ ಮಾಡಿದ್ದ ಐ ಲವ್​ ಯು ಸಿನಿಮಾ ಅತೀ ಕೆಟ್ಟದಾಗಿತ್ತು’ ಎಂದಿದ್ದ. ಇದಕ್ಕೆ ಉತ್ತರಿಸಿದ್ದ ಕಿರಣ್​, ‘ಐ ಲವ್​ ಯು ಚಿತ್ರ ಚೆನ್ನಾಗಿದೆ ಎಂದು ಹೇಳಿದವರಾರು? ನಾನು ಸಂಗೀತ ಸಂಯೋಜನೆ ಮಾಡಿದ ಸಿನಿಮಾವೇ ನನಗೆ ಇಷ್ಟವಾಗಿಲ್ಲ. ಅಂತೆಯೇ ಪೈಲ್ವಾನ್​ ಕೂಡ’ ಎಂದಿದ್ದಾರೆ. ಮತ್ತೊಂದು ಕಮೆಂಟ್​ನಲ್ಲಿ ‘ಡಬ್ಬಾ ಐ ಲವ್​ ಯು’ ಎಂದು ಬರೆದುಕೊಂಡಿದ್ದಾರೆ ಕಿರಣ್​.ಇದನ್ನೂ ಓದಿ: ಬಾಲಿವುಡ್​ಗೆ ಬಾದ್​ಶಾ ಆಗುವ ಸ್ಯಾಂಡಲ್​ವುಡ್​ ಸ್ಟಾರ್ ಯಾರು?; ಸಾಮಾಜಿಕ ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆ

ಈ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿವೆ. ಓರ್ವ ಸಂಗೀತ ನಿರ್ದೇಶಕ,  ಅವರು ಮಾಡಿದ ಸಿನಿಮಾದ ಮೇಲೆ  ಹೆಮ್ಮೆ ಹೊಂದಿಲ್ಲ ಎಂದಾದರೆ ಅಂಥವರಿಗೆ ಇನ್ನೆಷ್ಟು ಚಿತ್ರಗಳಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕೀತು ಎಂದು ಕೆಲವರು ಪ್ರಶ್ನಿಸಿದ್ದಾರೆ.

First published: September 13, 2019, 8:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories