Rashimka Mandanna: ಕಹಾನಿ ಮೇ ಟ್ವಿಸ್ಟ್​! ರಶ್ಮಿಕಾಗೆ ವಿಜಯ್ ದೇವರಕೊಂಡಗಿಂತ ಇವ್ರನ್ನು ಕಂಡ್ರೆ ಇಷ್ಟವಂತೆ

ಮತ್ತೊಂದು ವಿಚಾರವನ್ನು ರಶ್ಮಿಕಾ ಮಂದಣ್ಣ ಬಾಯಿಬಿಟ್ಟಿದ್ದಾರೆ. ಅವರಿಗೆ ತುಂಬ ಇಷ್ಟವಾದ ಕೋ ಆ್ಯಕ್ಟರ್​​ ವಿಜಯ್​ ದೇವರಕೊಂಡ ಅಲ್ವ ಎಂದು ಹೇಳಿದ್ದಾರ ಈ ಮಾತು ಕೇಳಿ ಅಭಿಮಾನಿಗಳೂ ಕೂಡ ಶಾಕ್​ ಆಗಿದ್ದಾರೆ. 

ರಶ್ಮಿಕಾ ಮಂದಣ್ಣ, ವಿಜಯ್​ ದೇವರಕೊಂಡ

ರಶ್ಮಿಕಾ ಮಂದಣ್ಣ, ವಿಜಯ್​ ದೇವರಕೊಂಡ

  • Share this:
ಕರ್ನಾಟಕ ಕ್ರಶ್ (Karnataka Crush), ಕಿರಿಕ್ ಬೆಡಗಿ, ಪ್ಯಾನ್​ ಇಂಡಿಯಾ (Pan India) ಸ್ಟಾರ್ ಹೀರೋಯಿನ್​.  ಒಂದಾ? ಎರಡಾ? ನಾನಾ ಬಿರುದುಗಳಿಂದ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ಅವರನ್ನು ಪ್ರೀತಿಯಿಂದ ಅವರ ಅಭಿಮಾನಿಗಳು ಕರಿತಾರೆ. 2016 ಕಿರಿಕ್ ಪಾರ್ಟಿ ಸಿನಿಮಾದ ನಂತರ ರಶ್ಮಿಕಾ ಮುಟ್ಟಿದ್ದೆಲ್ಲಾ ಚಿನ್ನ(Gold)ವಾಗಿದೆ. ದೇಶದ ಮೂಲೆ ಮೂಲೆಯಲ್ಲೂ ಅಭಿಮಾನಿ(Fans)ಗಳ ಹೊಂದಿರುವ ರಶ್ಮಿಕಾಗೆ ಹುಟ್ಟುರು ಕರುನಾಡಲ್ಲಿ ಹೊಗಳಿಕೆಗಿನ್ನ ತೆಗಳಿಕೆ ಜಾಸ್ತಿ.‌‌‌ ಅದರಲ್ಲೂ ಟ್ರೋಲ್ (Troll) ಪೇಜ್​ಗಳಿಗೆ ರಶ್ಮಿಕಾ ಮಂದಣ್ಣ ರಂಜಾನ್​ ಬಿರಿಯಾನಿ (Biryani) ಆಗಿ ಬಿಟ್ಟಿದ್ದಾರೆ. ಕರ್ನಾಟಕದಲ್ಲಿ ಹುಟ್ಟಿ ಬೇರೆ ಭಾಷೆಯಲ್ಲಿ ಮಿಂಚುತ್ತಿರುವ ಶ್ರೀವಲ್ಲಿ ಸನ್ಮಾನಕ್ಕಿಂತ ಅವಮಾನವೇ ಜಾಸ್ತಿ ಅಂತಿದೆ ಅವರ ಅಭಿಮಾನಿ ಬಳಗ.

ವಿಜಯ್​ ದೇವರಕೊಂಡ ಜೊತೆ ರಶ್ಮಿಕಾ ಮದುವೆ?

ಹೌದು, ಕೆಲವೊಂದು ದಿನಗಳಿಂದ ವಿಜಯ್​ ರಶ್ಮಿಕಾ ಮದುವೆಯಾಗುತ್ತಾರೆ ಎನ್ನುವ ಗಾಳಿ ಸುದ್ದಿ ಹರಿದಾಡುತ್ತಿತ್ತು. ಆದರೆ, ಈ ಬಗ್ಗೆ ಮಾತನಾಡಿದ್ದ ವಿಜಯ್ ದೇವರಕೊಂಡ ‘ಇದೊಂದು ನಾನ್​​ಸೆನ್ಸ್​ ಸುದ್ದಿ, ಆದರೂ ಈ ಗಾಸಿಪ್​ನ ನಾನು ಇಷ್ಟಪಡುತ್ತಿದ್ದೇನೆ’ ಎಂದು ಹೇಳಿದ್ದರು. ಈ ಬಗ್ಗೆ ಕೊನೆಗೂ ಕ್ಲಾರಿಟಿ ಸಿಕ್ಕಿರಲಿಲ್ಲ. ಇನ್ನೂ ಇತ್ತ ಮತ್ತೊಂದು ವಿಚಾರವನ್ನು ರಶ್ಮಿಕಾ ಮಂದಣ್ಣ ಬಾಯಿಬಿಟ್ಟಿದ್ದಾರೆ. ಅವರಿಗೆ ತುಂಬ ಇಷ್ಟವಾದ ಕೋ ಆ್ಯಕ್ಟರ್​​ ವಿಜಯ್​ ದೇವರಕೊಂಡ ಅಲ್ವ ಎಂದು ಹೇಳಿದ್ದಾರ ಈ ಮಾತು ಕೇಳಿ ಅಭಿಮಾನಿಗಳೂ ಕೂಡ ಶಾಕ್​ ಆಗಿದ್ದಾರೆ.

ರಶ್ಮಿಕಾಗೆ ಶರ್ಮಾನಂದ್​ ಫೇವರಿಟ್​ ಕೋ-ಆ್ಯಕ್ಟರ್​!

ರಶ್ಮಿಕಾ ಮಂದಣ್ಣ ಸದ್ಯ ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ.  ‘ಆಡವಾಳ್ಳು ಮೀಕು ಜೋಹಾರ್ಲು’ ಸಿನಿಮಾ ಮಾರ್ಚ್ 4ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾದಲ್ಲಿ ಶರ್ವಾನಂದ್​​ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. ತಿರುಮಲ ಕಿಶೋರ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ‘ರೆಡ್​’ ಸೇರಿ ಹಲವು ಸಿನಿಮಾಗಳಿಗೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ ಕಿಶೋರ್​​. ಈ ಚಿತ್ರದ ಪ್ರೀ-ರಿಲೀಸ್​ ಕಾರ್ಯಕ್ರಮ ಹೈದರಾಬಾದ್​ನಲ್ಲಿ ನೆರೆವೇರಿದೆ. ಈ ವೇಳೆ ಶರ್ವಾನಂದ ಬಗ್ಗೆ ರಶ್ಮಿಕಾ ಹೇಳಿದ್ದೇನು ಗೊತ್ತಾ? ಮುಂದೆ ನೋಡಿ.

ಇದನ್ನೂ ಓದಿ: ರಶ್ಮಿಕಾಗೆ ಕ್ಯೂಟಿ ಅಂದ್ರು ಫ್ಯಾನ್ಸ್​.. ಕೆನ್ನೆ ಕೆಂಪಾಗಿ ಹಿರಿ ಹಿರಿ ಹಿಗ್ಗಿದ `ಕಿರಿಕ್​ ಬ್ಯೂಟಿ’!

ತುಂಬಾ ಒಳ್ಳೆಯ ಹುಡುಗ ಶರ್ವಾನಂದ್​ ಎಂದ ನಟಿ!

ಹೌದು, ನಾನು ಇಲ್ಲಿವರೆಗೂ ಭೇಟಿಯಾದ ಒಳ್ಳೆಯ ಹುಡುಗರ ಸಾಲಿನಲ್ಲಿ ಶರ್ವಾನಂದ್​ ಒಬ್ಬರು. ಸೆಟ್​ನಲ್ಲಿ ನಾನು ಅವರಿಗೆ ಎಷ್ಟೇ ತೊಂದರೆ ಕೊಟ್ಟರೂ ತಿರುಗಿ ಮಾತನಾಡುತ್ತಿರಲಿಲ್ಲ. ನಾನು ಅವರಿಗೆ ಸಾಕಷ್ಟು ಕಿರಿ ಕಿರಿ ಮಾಡಿದ್ದೇನೆ. ಆದರೆ ಅವರು ಎಂದಿಗೂ ಇರಿಟೇಟ್​ ಆಗಿಲ್ಲ... ನಾನು ಭೇಟಿ ಮಾಡಿದ ಸಹಕಲಾವಿದರಲ್ಲಿ ಶರ್ವಾನಂದ್​ ಸ್ವೀಟೆಸ್ಟ್​’ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ಮಾತುಗಳನ್ನು ಕೇಳಿದ ಅಭಿಮಾನಿಗಳು ರಶ್ಮಿಕಾ ಮಂದಣ್ಣ ಅವರನ್ನು ಟ್ರೋಲ್​ ಮಾಡುತ್ತಿದ್ದರು.

ಇದನ್ನೂ ಓದಿ: ಮದ್ವೆ ಟ್ರೋಲ್ಸ್​ಗೆಲ್ಲ ಟಕ್ಕರ್​ ಕೊಟ್ರಾ ರಶ್ಮಿಕಾ? ಇದನ್ನು ಕುಡಿದು ಆರಾಮಾಗಿರಿ ಅಂದಿದ್ಯಾಕೆ ಕಿರಿಕ್​ ಬ್ಯೂಟಿ?

ರಶ್ಮಿಕಾಗೆ ಕ್ಯೂಟಿ ಎಂದ ಫ್ಯಾನ್ಸ್​!

ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಅವರು ಮುಂಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಅವರು ಪಾಪರಾಜಿಗಳ ಜೊತೆ ಮಾತನಾಡಿದ್ದಾರೆ. ಆಗ ಅವರು ರಶ್ಮಿಕಾ ಮಂದಣ್ಣಗೆ ಕ್ಯೂಟ್ ಎಂದಿದ್ದು, ರಶ್ಮಿಕಾ ಫುಲ್ ಖುಷಿಯಾಗಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.ಕ್ರಾಪ್ ಟಾಪ್, ಬೆಲ್ ಬಾಟಮ್ ಜೀನ್ಸ್, ಜಾಕೆಟ್ ಧರಿಸಿ ರಶ್ಮಿಕಾ ಮಿಂಚಿದ್ದಾರೆ. ಈ ವಿಡಿಯೋಗೆ ಮಿಶ್ರ ರೀತಿಯಲ್ಲಿ ಕಮೆಂಟ್​ಗಳು ಬರುತ್ತಿವೆ. ಕೆಲವರು ನಿಮ್ಮ ಕಣ್ಣುಗಳಿಗೆ ಏನಾಗಿದೆ ಈಕೆಯನ್ನು ಕ್ಯೂಟ್ ಅನ್ನುತ್ತಿದ್ದೀರಾ? ಎಂದು ಪ್ರಶ್ನೆ ಮಾಡಿದ್ದಾರೆ.
Published by:Vasudeva M
First published: