ಡ್ರಗ್ಸ್ ಕೇಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ದಿನಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿ ನಟಿ ರಾಗಿಣಿ ಇವತ್ತು ಸಿಸಿಬಿ ತನಿಖಾಧಿಕಾರಿ ಮುಂದೆ ಹಾಜರಾಗಿದ್ದರು. ಸುಮಾರು 20 ನಿಮಿಷಗಳ ಕಾಲ ತನಿಖಾಧಿಕಾರಿಗಳ ವಿಚಾರಣೆ ಎದುರಿಸಿದ ನಟಿ ರಾಗಿಣಿ ತನಿಖೆಗೆ ಸಹಕಾರ ಕೊಡುತ್ತೀನಿ ಎಂದಿದ್ದಾರೆ. ಅಲ್ಲದೆ ಯಾವಾಗ ಕರೆದರೂ ವಿಚಾರಣೆಗೆ ಬರುತ್ತೀನಿ ಅಂತೇಳಿ ಸಹಿ ಹಾಕಿದ್ದಾರೆ. ಇದರ ಜೊತೆಗೆ ಕೆಲವೇ ದಿನಗಳಲ್ಲಿ ಪತ್ರಿಕಾಗೋಷ್ಠಿ ಮಾಡಿ ಸ್ಪೊಟಕ ಮಾಹಿತಿ ಕೊಡ್ತೀನಿ ಅಂತಾನೂ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಏನೆಲ್ಲಾ ಸ್ಪೋಟಕ ಮಾಹಿತಿ ಹೊರಗೆ ಹಾಕ್ತಾರೆ ಅನ್ನೋದು ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಇನ್ನು ಡ್ರಗ್ಸ್ ಕೇಸ್ ನಲ್ಲಿ ಸಿಸಿಬಿಯಿಂದ ಬಂಧನ ಆಗಿ ಜೈಲು ಸೇರಿದ್ದ ನಟಿ ರಾಗಿಣಿ ಸುಮಾರು 144 ದಿನಗಳ ಕಾಲ ಪರಪ್ಪನ ಅಗ್ರಹಾರದಲ್ಲಿದ್ದರು.
ಕೊನೆಗೆ ಸುಪ್ರೀಂ ಕೋರ್ಟ್ ನಿಂದ ಜಾಮೀನು ಪಡೆದು ಹೊರಬಂದ ನಟಿ ರಾಗಿಣಿ ಮೊದಲಿಗೆ ಮನೆಯವರೊಂದಿಗೆ ಸಮಯ ಕಳೆದಿದ್ದಾರೆ. ನಂತ್ರ ಟೆಂಪಲ್ ರನ್ ಸಹ ಮಾಡಿದ್ದರು. ಜೈಲಿನಿಂದ ರಿಲೀಸ್ ಆದ ದಿನವೇ ಪತ್ರಿಕಾಗೋಷ್ಠಿ ಮಾಡ್ತೀನಿ , ಕೇಸ್ ಸಂಬಂಧ ಸಾಕಷ್ಟು ವಿಚಾರಗಳು ಹಂಚಿಕೊಳ್ಳಬೇಕು ಎಂದಿದ್ದರು. ಆದರೆ ಇವತ್ತು ಸಿಸಿಬಿ ಕಚೇರಿಗೆ ಬಂದ ರಾಗಿಣಿ ಮಾಧ್ಯಮದವರ ಮೇಲೆ ಸ್ವಲ್ಪ ಗರಂ ಸಹ ಆಗಿದ್ದರು.
ಯಾವಾಗ ಸುದ್ದಿ ಗೋಷ್ಠಿ ನಡೆಸುತ್ತೀರಾ ಎಂಬ ಪ್ರಶ್ನೆಗೆ ಸ್ವಲ್ಪ ಸಮಯ ಕೊಡಿ ನಾನೆಲ್ಲಿಗೂ ಹೋಗಲ್ಲ ತುಂಬಾ ಮಾತನಾಡೋದು ಇದೆ ಅಂತ ಕೋಪಗೊಂಡರು. ಜೊತೆಗೆ ಈಗಷ್ಟೆ ನಾನು ಹೊಸ ರೀತಿಯ ಜೀವನ ಶುರುಮಾಡಿದ್ದೇನೆ. ಆದಷ್ಟು ಮನೆಯವರಿಗೆ ಟೈಂ ಕೊಡಲು ನೋಡುತ್ತಿರುವೆ. ಇನ್ನು ಸಿಸಿಬಿ ಪೊಲೀಸರು ಯಾವಾಗ ವಿಚಾರಣೆಗೆ ಅಂತ ಕರೆದ್ರು ನಾನು ಮಿಸ್ ಮಾಡದೆ ಬರ್ತೀನಿ, ಇಂದು ಬಂದು ಸಹಿ ಹಾಕುವಂತೆ ಹೇಳಿದ್ದರು. ಅದರಂತೆ ಬಂದು ಸಹಿ ಮಾಡಿದ್ದೇನೆ ಅಂತ ಹೇಳಿದ್ದಾರೆ.
ಪ್ರತಿ 15 ದಿನಕ್ಕೆ ಸಿಸಿಬಿ ಕಚೇರಿಗೆ ಹೋಗಿ ಸಹಿ ಹಾಕುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಅದರಂತೆ ಇಂದು ಸಿಸಿಬಿ ಕಚೇರಿಗೆ ಬಂದಿದ್ದ ನಟಿ ರಾಗಿಣಿ ತನಿಖಾಧಿಕಾರಿ ಪುನೀತ್ ಮುಂದೆ ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಮುಂದಿನ ದಿನಗಳಲ್ಲಿ ತನಿಖೆಗೆ ಯಾವಾಗಬೇಕಾದ್ರೂ ಬರುತ್ತೀನಿ, ಸಹಕಾರ ಕೊಡ್ತೀನಿ ಅಂತೇಳಿ ಸಹಿ ಹಾಕಿ ಹೊರ ಬಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ