ನಾನು ಬ್ಲೂ ಫಿಲಂ ನೋಡುತ್ತಿದ್ದೆ, ನನ್ನ ಹಲವು ಸ್ನೇಹಿತರು ಸಲಿಂಗಿಗಳು: ನಟಿ ರೆಜಿನಾ

ಅಷ್ಟೇ ಅಲ್ಲದೆ ಟಾಲಿವುಡ್​ ನಟನೊಂದಿಗೆ ಕದ್ದು ಮುಚ್ಚಿ ನಿಶ್ಚಿತಾರ್ಥ ಮಾಡಿಕೊಂಡಿದ್ದೇನೆ ಎಂಬ ಸುದ್ದಿಯನ್ನು ಅಲ್ಲೆಗೆಲೆದಿರುವ ರೆಜಿನಾ, ಅಂತಹ ಸನ್ನಿವೇಶವೇನು ಇನ್ನು ಬಂದಿಲ್ಲ. ಅದೆಲ್ಲವೂ ಸುಳ್ಳು ಸುದ್ದಿ. ಮದುವೆ ವಿಷಯವನ್ನು ನಾನೇ ಎಲ್ಲರಿಗೂ ತಿಳಿಸುವುದಾಗಿ ಹೇಳಿದರು.

zahir | news18
Updated:June 30, 2019, 7:25 PM IST
ನಾನು ಬ್ಲೂ ಫಿಲಂ ನೋಡುತ್ತಿದ್ದೆ, ನನ್ನ ಹಲವು ಸ್ನೇಹಿತರು ಸಲಿಂಗಿಗಳು: ನಟಿ ರೆಜಿನಾ
regina cassandra
zahir | news18
Updated: June 30, 2019, 7:25 PM IST
ಸೌತ್ ಸುಂದರಿ ನಟಿ ರೆಜಿನಾ ಕಸ್ಸಂಡ್ರಾ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಈ ಹಿಂದೆ ನಾನು ಚಿಕ್ಕ ವಯಸ್ಸಿನಲ್ಲಿ ಬ್ಲೂಫಿಲಂ ನೋಡುತ್ತಿದ್ದೆ ಎಂದು ಹೇಳಿಕೊಂಡಿದ್ದ ನಟಿ ಇದೀಗ ಮತ್ತಷ್ಟು ಅಚ್ಚರಿ ಸಂಗತಿಗಳನ್ನು ಹೊರ ಹಾಕಿದ್ದಾರೆ.

'ಆ ದಿನಗಳು' ಚೇತನ್ ಅಭಿನಯದ 'ಸೂರ್ಯಕಾಂತಿ' ಚಿತ್ರದ ಮೂಲಕ  ಸ್ಯಾಂಡಲ್​ವುಡ್​ಗೆ ಪಾದರ್ಪಣೆ ಮಾಡಿದ್ದ ರೆಜಿನಾ, ಬಳಿಕ ಟಾಲಿವುಡ್​ ಮತ್ತು ಕಾಲಿವುಡ್​ನಲ್ಲೇ ಹೆಚ್ಚು ಮಿಂಚಿದ್ದರು. ದಕ್ಷಿಣ ಚಿತ್ರರಂಗದಲ್ಲೇ ಗಮನ ಸೆಳೆದಿದ್ದ ಈ ಚೆಂದುಳ್ಳಿ ಚೆಲುವೆ ಕೆಲ ತಿಂಗಳ ಹಿಂದೆ ಬಾಲಿವುಡ್​ಗೂ ಹಾರಿದ್ದರು.

ಸೋನಂ ಕಪೂರ್ ಅಭಿನಯದ 'ಏಕ್ ಲಡ್ಕಿ ಕೋ ದೇಖಾ, ತೋ ಐಸಾ ಲಗಾ' ಎಂಬ ಹಿಂದಿ ಚಿತ್ರದಲ್ಲಿ ಸಲಿಂಗಿ ಪಾತ್ರದಲ್ಲಿ  ರೆಜಿನಾ ಕಾಣಿಸಿಕೊಂಡಿದ್ದರು. ಈ ಚಿತ್ರದ ಪಾತ್ರವನ್ನು ಹಲವರು ಮೆಚ್ಚಿಕೊಂಡಿದ್ದರು. ಅದರಲ್ಲೂ ತನ್ನ ಸ್ನೇಹಿತರು ತುಂಬಾ ಇಷ್ಟಪಟ್ಟಿದ್ದರು ಎಂದು ರೆಜಿನಾ ತಿಳಿಸಿದ್ದಾರೆ.

ದಕ್ಷಿಣ ಭಾರತದ ನಟಿ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ, ನಾನು ನಿರ್ವಹಿಸಿದ 'ಏಕ್ ಲಡ್ಕಿ ಕೋ ದೇಖಾ, ತೋ ಐಸಾ ಲಗಾ' ಸಲಿಂಗಿ ಪಾತ್ರಕ್ಕೆ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ನನ್ನ ಸ್ನೇಹಿತರಲ್ಲಿ ಹಲವರು ಸಲಿಂಗಿ ಸಂಬಂಧ ಹೊಂದಿದವರಿದ್ದಾರೆ. ಈ ವಿಷಯ ನನಗೆ ಗೊತ್ತಾಗಿದ್ದು, ಆ ಪಾತ್ರದ ಬಳಿಕವಷ್ಟೇ. ನನ್ನ ಆ ಪಾತ್ರವನ್ನು ನೋಡಿ ಅವರೆಲ್ಲರೂ ತುಂಬಾ ಖುಷಿಯಿಂದ ಪ್ರತಿಕ್ರಿಯಿಸಿದ್ದರು ಎಂದು ರೆಜಿನಾ ಹೇಳಿದ್ದಾರೆ.

ನನಗೆ ಸಾಮಾಜಿಕ ಅಂಶಗಳನ್ನು ಎತ್ತಿ ತೋರಿಸುವಂತಹ ಪಾತ್ರಗಳಲ್ಲಿ ಅಭಿನಯಿಸುವುದು ಇಷ್ಟ. ಪ್ರಸ್ತುತ ಸಮಾಜವು ಸಲಿಂಗಿ ಸಂಬಂಧವನ್ನು ಒಪ್ಪಿಕೊಳ್ಳುತ್ತಿದೆ. ಆದರೆ ಹಿಂದೆ ಈ ಬಗ್ಗೆ ಮುಕ್ತವಾಗಿ ಹೇಳಿಕೊಳ್ಳುತ್ತಿರಲಿಲ್ಲ ಎಂದು ರೆಜಿನಾ ತಿಳಿಸಿದ್ದರು.

ಅಷ್ಟೇ ಅಲ್ಲದೆ ಟಾಲಿವುಡ್​ ನಟನೊಂದಿಗೆ ಕದ್ದು ಮುಚ್ಚಿ ನಿಶ್ಚಿತಾರ್ಥ ಮಾಡಿಕೊಂಡಿದ್ದೇನೆ ಎಂಬ ಸುದ್ದಿಯನ್ನು ಅಲ್ಲೆಗೆಲೆದಿರುವ ರೆಜಿನಾ, ಅಂತಹ ಸನ್ನಿವೇಶವೇನು ಇನ್ನು ಬಂದಿಲ್ಲ. ಅದೆಲ್ಲವೂ ಸುಳ್ಳು ಸುದ್ದಿ. ಮದುವೆ ವಿಷಯವನ್ನು ನಾನೇ ಎಲ್ಲರಿಗೂ ತಿಳಿಸುವುದಾಗಿ ಹೇಳಿದರು.

ಇದನ್ನೂ ಓದಿ: ಕಿರಿಕ್ ಸಾನ್ವಿಗೆ ಅವಕಾಶಗಳ ಸರಮಾಲೆ: ಸ್ಟಾರ್​ ಕುಡಿಯ ಚಿತ್ರಕ್ಕೆ ರಶ್ಮಿಕಾ ನಾಯಕಿ
Loading...

ಇದೀಗ ರೆಜಿನಾ ಅವರ ಹೇಳಿಕೆಯು ಸೋಷಿಯಲ್ ಮೀಡಿಯಾದಲ್ಲಿ ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ. ಇಲ್ಲಿ ಸಲಿಂಗಿ ಸಂಬಂಧವನ್ನು ನಮ್ಮ ಸಮಾಜ ಒಪ್ಪಿಕೊಳ್ಳಬೇಕೆಂದು ಹಲವರು ವಾದಿಸಿದರೆ, ಮತ್ತೆ ಕೆಲವರು 'ಸೂರ್ಯಕಾಂತಿ' ನಾಯಕಿ ವಿರುದ್ದವೇ ಹರಿಹಾಯ್ದಿದ್ದಾರೆ.
First published:June 30, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...