• Home
  • »
  • News
  • »
  • entertainment
  • »
  • Amitabh Bachchan: ಪ್ರತಿದಿನ 9 ರಿಂದ 5 ಗಂಟೆವರೆಗೆ ಕೆಲಸ ಮಾಡೋ ಹೆಂಡತಿ ಬೇಡ ಅಂತ ಹೇಳಿದ್ರಂತೆ ಅಮಿತಾಭ್!

Amitabh Bachchan: ಪ್ರತಿದಿನ 9 ರಿಂದ 5 ಗಂಟೆವರೆಗೆ ಕೆಲಸ ಮಾಡೋ ಹೆಂಡತಿ ಬೇಡ ಅಂತ ಹೇಳಿದ್ರಂತೆ ಅಮಿತಾಭ್!

ಅಮಿತಾಭ್ ಬಚ್ಚನ್ ಮತ್ತು ಜಯ ಬಚ್ಚನ್​

ಅಮಿತಾಭ್ ಬಚ್ಚನ್ ಮತ್ತು ಜಯ ಬಚ್ಚನ್​

Film Star: ಬಾಲಿವುಡ್ ನ ಹಿರಿಯ ನಟ ಅಮಿತಾಭ್ ಬಚ್ಚನ್ ಅವರಿಗೂ ಇದೇ ರೀತಿಯಾಗಿ ಮದುವೆಗೂ ಮುಂಚೆ ಜಯಾ ಅವರ ಮುಂದೆ ಒಂದು ಷರತ್ತು ಇಟ್ಟಿದ್ದರಂತೆ ಎಂದು ತಿಳಿದುಬಂದಿದೆ. ನಟ ಅಮಿತಾಭ್ ಬಚ್ಚನ್ ಮತ್ತು ಜಯಾ ಬಚ್ಚನ್ ಮದುವೆಯಾಗಿ 49 ವರ್ಷಗಳಾಗಿವೆ.

  • Share this:

ಪ್ರತಿಯೊಬ್ಬರಿಗೂ ತಮ್ಮ ಕೈ ಹಿಡಿಯುವ ಸಂಗಾತಿ ಹೀಗಿರಬೇಕು, ಹಾಗಿರಬೇಕು ಅಂತ ಕೆಲವು ನಿರೀಕ್ಷೆಗಳಿರುತ್ತವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಬಾಲಿವುಡ್ (Bollywood) ನ ಹಿರಿಯ ನಟ ಅಮಿತಾಭ್ ಬಚ್ಚನ್ (Amitabh Bachchan) ಅವರಿಗೂ ಇದೇ ರೀತಿಯಾಗಿ ಮದುವೆಗೂ ಮುಂಚೆ ಜಯಾ ಅವರ ಮುಂದೆ ಒಂದು ಷರತ್ತು ಇಟ್ಟಿದ್ದರಂತೆ ಎಂದು ತಿಳಿದುಬಂದಿದೆ. ನಟ ಅಮಿತಾಭ್ ಬಚ್ಚನ್ ಮತ್ತು ಜಯಾ ಬಚ್ಚನ್ ಮದುವೆಯಾಗಿ 49 ವರ್ಷಗಳಾಗಿವೆ. ಜಯಾ ಅವರ ಹಿರಿಯ ಮೊಮ್ಮಗಳು ನವ್ಯಾ ನವೇಲಿ ನಂದಾ ತನ್ನ ಅಜ್ಜಿ ಮತ್ತು ತಾಯಿ ಶ್ವೇತಾ ಬಚ್ಚನ್ ನಂದಾ ಅವರೊಂದಿಗೆ ‘ವಾಟ್ ದಿ ಹೆಲ್ ನವ್ಯಾ’ ಎಂಬ ಪಾಡ್ಕಾಸ್ಟ್ ಅನ್ನು ಇತ್ತೀಚೆಗೆ ಆಯೋಜಿಸಿದ್ದರು. ಅದರಲ್ಲಿ ಅವರು ತಮ್ಮ ಜೀವನ, ಸಾಮಾಜಿಕ ಮಾಧ್ಯಮ, ನಿಷೇಧಿತ ವಿಷಯಗಳು ಮತ್ತು ಹೆಚ್ಚಿನವುಗಳ ಬಗ್ಗೆ ವಿವಿಧ ವಿಷಯಗಳನ್ನು ಚರ್ಚಿಸಿದ್ದಾರೆ.


ಇತ್ತೀಚಿನ ಚರ್ಚೆಯ ಸಮಯದಲ್ಲಿ, ತನ್ನ ಅಜ್ಜ ಅಮಿತಾಭ್ ಬಚ್ಚನ್ ಅವರು ತಮ್ಮ ಅಜ್ಜಿ ಜಯಾಗೆ ಹೇಗೆ ಪ್ರಪೋಸ್ ಮಾಡಿದರು ಎಂಬುದರ ಬಗ್ಗೆ ನವ್ಯಾ ಕುತೂಹಲದಿಂದ ಕೇಳಿದರು.


ಮದುವೆಯಾಗೋ ಮುಂಚೆ ಜಯಾ ಮುಂದೆ ಅಮಿತಾಭ್ ಹೇಳಿದ್ದೇನು?


"ನಾನು ಕಲ್ಕತ್ತಾದಲ್ಲಿ ಚಿತ್ರೀಕರಣದಲ್ಲಿದ್ದೆ ಮತ್ತು ನಾವು ಮಾಡಿದ ಒಂದು ಚಲನಚಿತ್ರವು ಹಿಟ್ ಆದರೆ ನಾವು ಎಲ್ಲಾದರೂ ಹೋಗಿ ಸುತ್ತಾಡಿಕೊಂಡು ಬರೋಣ ಅಂತ ನಿರ್ಧರಿಸಿದ್ದೆವು" ಎಂದು ಜಯಾ ಬಚ್ಚನ್ ಹೇಳಿದರು.


ಆಗ ‘ಝಂಜೀರ್’ ಚಿತ್ರ ಹಿಟ್ ಆಗಿತ್ತು, ನಾನು ಕಲ್ಕತ್ತಾದಲ್ಲಿ ಒಂದು ಚಲನಚಿತ್ರದ ಚಿತ್ರೀಕರಣದಲ್ಲಿದ್ದೆ ಮತ್ತು ನಿಮ್ಮ ಅಜ್ಜ ನನಗೆ ಕರೆ ಮಾಡಿ 'ಒಂದು ಸಮಸ್ಯೆ ಇದೆ' ಎಂದು ಹೇಳಿದರು. ನಾವು ಅಕ್ಟೋಬರ್ ನಲ್ಲಿ ಮದುವೆಯಾಗಲು ನಿರ್ಧರಿಸಿದ್ದೆವು, ಏಕೆಂದರೆ ಅಷ್ಟೊತ್ತಿಗಾಗಲೇ ನನ್ನ ಕೆಲಸ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತಿತ್ತು.


ಇದನ್ನೂ ಓದಿ: ವ್ಹಾವ್​, ರಗಡ್​ ಲುಕ್​ನಲ್ಲಿ ಯಶ್​! ಮುಂದಿನ ಸಿನಿಮಾ ಬಗ್ಗೆ ದೊಡ್ಡದಾಗಿ ಸಿಗ್ನಲ್​ ಕೊಟ್ರಾ ರಾಕಿ ಭಾಯ್?


ಆದರೆ ಅವರು ನನಗೆ ಕರೆ ಮಾಡಿದಾಗ ಹೇಳಿದ್ದ ಮಾತು 'ನನಗೆ ಖಂಡಿತವಾಗಿಯೂ 9 ರಿಂದ 5 ಗಂಟೆವರೆಗೆ ಕೆಲಸ ಮಾಡುವ ಹೆಂಡತಿ ಬೇಕಾಗಿಲ್ಲ. ದಯವಿಟ್ಟು ಕೆಲಸ ಮಾಡು, ಆದರೆ ಪ್ರತಿದಿನ ಅಲ್ಲ. ನೀನು ಏನು ಮಾಡಬೇಕು ಅಂತ ನೀನೇ ಆಯ್ಕೆ ಮಾಡಿಕೊ, ಸರಿಯಾದ ಜನರೊಂದಿಗೆ ಕೆಲಸ ಮಾಡು' ಎಂದು ಅಮಿತಾಭ್ ಹೇಳಿದ್ದನ್ನು ಜಯಾ ನೆನಪಿಸಿಕೊಂಡರು.


ಅಮಿತಾಭ್ ಷರತ್ತಿಗೆ ಒಪ್ಪಿದ ಜಯಾ


"ಅಮಿತಾಭ್ ಹೇಳಿದ್ದಕ್ಕೆ ನಾನು ಸರಿ ಎಂದು ಹೇಳಿದೆ. ಅವರು ಮತ್ತೊಮ್ಮೆ ನನಗೆ ಕರೆ ಮಾಡಿ ಜಯಾ ನಿನ್ನೊಂದಿಗೆ ರಜಾದಿನಕ್ಕೆ ಹೋಗಲು ಸಾಧ್ಯವಿಲ್ಲ ಎಂದು ನನ್ನ ಪೋಷಕರು ಹೇಳುತ್ತಿದ್ದಾರೆ. ನೀನು ಅವಳೊಂದಿಗೆ ರಜಾದಿನಕ್ಕೆ ಹೋಗಲು ಬಯಸಿದರೆ, ನೀನು ಅವಳನ್ನು ಮದುವೆಯಾಗು, ನಂತರ ಕರೆದುಕೊಂಡು ಹೋಗು ಅಂತ ಹೇಳುತ್ತಿದ್ದಾರೆ" ಎಂದು ಅಮಿತಾಭ್ ಹೇಳಿದ್ದರಂತೆ ಎಂದು ಜಯಾ ಹೇಳಿದರು. ಆಗ ನಾನು ಅವರಿಗೆ "ನಿಮ್ಮ ಅಭಿಪ್ರಾಯವೇನು' ಎಂದು ಕೇಳಿದೆ.. ಸರಿ ಹಾಗಾದರೆ ನಾವು ಅಕ್ಟೋಬರ್ ಬದಲಿಗೆ ಜೂನ್ ನಲ್ಲಿಯೇ ಮದುವೆ ಮಾಡಿಕೊಳ್ಳೋಣ ಎಂದು ಅಮಿತಾಭ್ ಹೇಳಿದ್ರಂತೆ” ಎಂದು ಜಯಾ ಹೇಳಿದರು.


ನಂತರ "ನೀವು ನನ್ನ ಹೆತ್ತವರೊಂದಿಗೆ ಮಾತನಾಡಬೇಕು" ಎಂದು ಅಮಿತಾಭ್ ಗೆ ಜಯಾ ಹೇಳಿದ್ರಂತೆ. ಅದಕ್ಕೆ ಒಪ್ಪಿ ನನ್ನ ತಂದೆಯೊಂದಿಗೆ ಮಾತನಾಡಿದರು. ನನ್ನ ತಂದೆ ಈ ವಿವಾಹದಿಂದ ತುಂಬಾ ಸಂತೋಷವಾಗಿರಲಿಲ್ಲ, ನನ್ನ ತಂದೆ ನಾನು ಮದುವೆಯಾಗಬೇಕೆಂದು ಎಂದಿಗೂ ಬಯಸಿದವರಲ್ಲ.


ಇದನ್ನೂ ಓದಿ: ಖ್ಯಾತ ಸೀರಿಯಲ್ ನಿರ್ದೇಶಕ ಹೃದಯಾಘಾತದಿಂದ ನಿಧನ


ನಾವು ಒಟ್ಟು ಮೂವರು ಸಹೋದರಿಯರು. 'ನಾನು ನಿಮಗೆ ಜನ್ಮ ನೀಡಿದ್ದು ಕೇವಲ ಶಿಕ್ಷಣ ಪಡೆದು ನಂತರ ಮದುವೆಯಾಗಲು ಅಲ್ಲ, ಅದಕ್ಕಿಂತಲೂ ಹೊರತಾಗಿ ನೀವೆಲ್ಲರೂ ಜೀವನದಲ್ಲಿ ಏನನ್ನಾದರೂ ಮಾಡಬೇಕೆಂದು ನಾನು ಬಯಸುತ್ತೇನೆ' ಎಂದು ನನ್ನ ತಂದೆ ಹೇಳಿದರು ಎಂದು ಜಯಾ ಹೇಳಿದರು. ಆಗ ಅಮಿತಾಭ್ ಸಹ ತನ್ನ ಪೋಷಕರ ಸಮ್ಮುಖದಲ್ಲಿ ಸರಳವಾಗಿ ವಿವಾಹ ಮಾಡಿಕೊಡಿ ಅಂತ ಕೇಳಿದರು ಎಂದು ನಟಿ ಹೇಳಿದರು.


ಕೂನೆಗೆ ಮುಂಬೈನ ತನ್ನ ಅಜ್ಜಿಯ ನಿವಾಸದಲ್ಲಿ ಅಮಿತಾಭ್ ಅವರೊಂದಿಗೆ ವಿವಾಹ ನಡೆಯಿತು ಎಂದು ಜಯಾ ಬಚ್ಚನ್ ಹೇಳಿದರು.

First published: