ಯಶ್ ಜೊತೆ ನಟಿಸಲು ನೋ, ತೆಲುಗು ನಾನಿಗೆ ಜೈ; ಕನ್ನಡತಿ ಶ್ರದ್ಧಾ ಶ್ರೀನಾಥ್ ಬಗ್ಗೆ ನೆಟ್ಟಿಗರ ಅಸಮಾಧಾನ

ಯಶ್​ ಹಾಗೂ ನಾನಿ ಇವರಲ್ಲಿ ಒಬ್ಬರ ಜೊತೆ ನಟಿಸಬೇಕು. ಯಾರನ್ನು ನೀವು ಆಯ್ಕೆ ಮಾಡಿಕೊಳ್ಳುತ್ತೀರಿ ಎಂದು ಶ್ರದ್ಧಾಗೆ ಸಂದರ್ಶನದಲ್ಲಿ ಕೇಳಲಾಗಿದೆ. ಅದಕ್ಕೆ ಶ್ರದ್ಧಾ ಈ ರೀತಿ ಉತ್ತರಿಸಿದ್ದಾರೆ.

news18
Updated:April 20, 2019, 1:03 PM IST
ಯಶ್ ಜೊತೆ ನಟಿಸಲು ನೋ, ತೆಲುಗು ನಾನಿಗೆ ಜೈ; ಕನ್ನಡತಿ ಶ್ರದ್ಧಾ ಶ್ರೀನಾಥ್ ಬಗ್ಗೆ ನೆಟ್ಟಿಗರ ಅಸಮಾಧಾನ
ಯಶ್​-ಶ್ರದ್ಧಾ-ನಾನಿ
news18
Updated: April 20, 2019, 1:03 PM IST
ಪವನ್​ ಕುಮಾರ್​ ನಿರ್ದೇಶನದ ‘ಯು ಟರ್ನ್​’ ಚಿತ್ರ ನಟಿ ಶ್ರದ್ಧಾ ಶ್ರೀನಾಥ್ ವೃತ್ತಿ ಜೀವನಕ್ಕೆ ಸಾಕಷ್ಟು ಮೈಲೇಜ್​ ನೀಡಿತ್ತು. ಈ ಚಿತ್ರದ ನಂತರ ಸಾಲು ಸಾಲು ಚಿತ್ರಗಳು ಅವರನ್ನು ಅರಸಿ ಬಂದಿದ್ದವು. ಸದ್ಯ ಅವರು ಸ್ಯಾಂಡಲ್​ವುಡ್​ಗಿಂತ ಪರಭಾಷೆಯಲ್ಲಿ ಹೆಚ್ಚು ತೊಡಗಿಕೊಂಡಿದ್ದಾರೆ. ಈಗ ಅವರು ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟುಹಾಕಿದೆ.

ನಾನಿ ಜೊತೆ ಶ್ರದ್ಧಾ ನಟಿಸಿರುವ ತೆಲುಗಿನ ‘ಜೆರ್ಸಿ’ ಚಿತ್ರ ಶುಕ್ರವಾರ ಬಿಡುಗಡೆ ಆಗಿತ್ತು. ಈ ಚಿತ್ರದ ಪ್ರಮೋಷನ್​ ವೇಳೆ ಮಾತನಾಡಿದ್ದ ಅವರು, ಯಶ್​ ಬದಲು ನಾನಿ ಜೊತೆ ತೆರೆಹಂಚಿಕೊಳ್ಳಲು ಬಯಸುತ್ತೇನೆ ಎಂದಿದ್ದಾರೆ. ಕನ್ನಡತಿಯಾಗಿ ಅವರು ಈ ರೀತಿ ಹೇಳಿಕೆ ನೀಡಬಾರದಿತ್ತು ಎಂದು ಅನೇಕರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಯಶ್​ ಹಾಗೂ ನಾನಿ ಇವರಲ್ಲಿ ಒಬ್ಬರ ಜೊತೆ ನಟಿಸಬೇಕು. ಯಾರನ್ನು ನೀವು ಆಯ್ಕೆ ಮಾಡಿಕೊಳ್ಳುತ್ತೀರಿ ಎಂದು ಶ್ರದ್ಧಾಗೆ ಸಂದರ್ಶನದಲ್ಲಿ ಕೇಳಲಾಗಿದೆ. ಅದಕ್ಕೆ ಉತ್ತರಿಸಿದ್ದ ಶ್ರದ್ಧಾ, “ನಾನು ಈಗಾಗಲೇ ನಾನಿ ಜೊತೆ ಕೆಲಸ ಮಾಡಿದ್ದೇನೆ. ಯಶ್​ ಅವರನ್ನು ಒಮ್ಮೆ ಮಾತ್ರ ಭೇಟಿ ಮಾಡಿದ್ದೆ. ವೈಯಕ್ತಿಕವಾಗಿ ನನನಗೆ ಅವರು ಅಷ್ಟಾಗಿ ಪರಿಚಯವಿಲ್ಲ. ಹಾಗಾಗಿ ನಾನಿ ಜೊತೆ ತೆರೆಹಂಚಿಕೊಳ್ಳಲು ಬಯಸುತ್ತೇನೆ,” ಎಂದಿದ್ದಾರೆ ಶ್ರದ್ಧಾ.

ಇದನ್ನೂ ಓದಿ: ಸಮಂತಾ ಅಕ್ಕಿನೇನಿ ನಟನೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಕನ್ನಡತಿ ಶ್ರದ್ಧಾ ಶ್ರೀನಾಥ್​

ಇನ್ನು ಯಶ್​ ಕಾರ್ಯವೈಖರಿಯನ್ನು ಶ್ರದ್ಧಾ ಹೊಗಳಿದ್ದಾರೆ. “ಯಶ್​ ಸ್ಟಾರ್​ಗಿರಿ ಪಡೆದುಕೊಳ್ಳಲು ತುಂಬಾನೇ ಶ್ರಮವಹಿಸಿದ್ದಾರೆ. ಅವರು ಧಾರಾವಾಹಿಗಳಲ್ಲಿ ಮೊದಲು ಬಣ್ಣ ಹಚ್ಚಿದ್ದರು. ಈಗ ಕನ್ನಡ ಚಿತ್ರರಂಗವನ್ನು ಬೇರೆ ಹಂತಕ್ಕೆ ಕರೆದೊಯ್ದ ಖ್ಯಾತಿ ಅವರಿಗಿದೆ,” ಎಂದರು ಶ್ರದ್ಧಾ.

ಸ್ಯಾಂಡಲ್​ವುಡ್​-ಟಾಲಿವುಡ್​ನಲ್ಲಿ ಯಾವುದಕ್ಕೆ ಹೆಚ್ಚು ಆದ್ಯತೆ ನೀಡುತ್ತೀರಾ ಎನ್ನುವ ಪ್ರಶ್ನೆಗೆ ಶ್ರದ್ಧಾ ತುಂಬಾ ನಾಜೂಕಾಗಿ ಉತ್ತರಿಸಿದ್ದಾರೆ. “ನಾನೋರ್ವ ಕಲಾವಿದೆಯಾಗಿ ಎಲ್ಲ ಚಿತ್ರರಂಗವನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುತ್ತೇನೆ. ನನಗೆ ಯಾವುದೂ ಹೆಚ್ಚಿಲ್ಲ, ಕಡಿಮೆ ಇಲ್ಲ. ಹಾಗೆ ಮಾಡಿದರೆ ಅಭಿಮಾನಿಗಳನ್ನು ನಾನು ಕಳೆದುಕೊಳ್ಳುತ್ತೇನೆ,” ಎಂಬುದು ಶ್ರದ್ಧಾ ಮಾತು.
Loading...

ಇದನ್ನೂ ಓದಿ: ನಟ ನಾನಿಯ ಮುದ್ದು ಗೊಂಬೆ ಶ್ರದ್ಧಾ ಶ್ರೀನಾಥ್​ರ ಲೆಟೆಸ್ಟ್​ ಫೋಟೋಶೂಟ್​

First published:April 20, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626