ಕನ್ನಡ ಬಲು ಕಷ್ಟ, ಸತ್ಯ ಒಪ್ಪಿಕೊಂಡ ರಶ್ಮಿಕಾ ಮಂದಣ್ಣ!; ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

Rashmika Mandanna: ರಶ್ಮಿಕಾ ಕನ್ನಡವನ್ನು ಸರಿಯಾಗಿ ಮಾತನಾಡಲು ಬರುವುದಿಲ್ಲ ಎಂದಿರುವುದಕ್ಕೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರ ನಡೆ ಎಲ್ಲರಿಗೂ ಸಿಟ್ಟು ತರಿಸಿದೆ.

Rajesh Duggumane | news18
Updated:July 19, 2019, 2:35 PM IST
ಕನ್ನಡ ಬಲು ಕಷ್ಟ, ಸತ್ಯ ಒಪ್ಪಿಕೊಂಡ ರಶ್ಮಿಕಾ ಮಂದಣ್ಣ!; ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ
ರಶ್ಮಿಕಾ ಮಂದಣ್ಣ
  • News18
  • Last Updated: July 19, 2019, 2:35 PM IST
  • Share this:
‘ಕಿರಿಕ್​ ಪಾರ್ಟಿ’ ಯಶಸ್ಸಿನ ನಂತರ ರಶ್ಮಿಕಾಗೆ ಪರಭಾಷೆಯಿಂದ ಆಫರ್​ಗಳು ಬರಲು ಆರಂಭವಾದವು. ಅದನ್ನು ಅವರು ಒಪ್ಪಿಕೊಂಡರು ಕೂಡ. ತೆಲುಗಿನ ‘ಚಲೋ’, ‘ಗೀತ ಗೋವಿಂದಂ’ ಸಿನಿಮಾಗಳಲ್ಲಿ ನಟಿಸಿ ಟಾಲಿವುಡ್​ ಅಂಗಳದಲ್ಲೂ ತಮ್ಮ ಖ್ಯಾತಿಯನ್ನು ಹೆಚ್ಚಿಸಿಕೊಂಡರು ರಶ್ಮಿಕಾ. ಕನ್ನಡತಿಯೊಬ್ಬರು ಇಷ್ಟು ದೊಡ್ಡ ಮಟ್ಟದ ಹೆಸರು ಮಾಡಿದ್ದು ಕರ್ನಾಟಕದವರ ಪಾಲಿಗೆ ಹೆಮ್ಮೆ ಎಂದು ಅನೇಕರು ಭಾವಿಸಿದ್ದರು. ಆದರೆ, ಅವರ ನಡೆ ಎಲ್ಲರಿಗೂ ಸಿಟ್ಟು ತರಿಸಿತ್ತು.

ಕನ್ನಡ ಸಿನಿಮಾಗಳ ಬಗ್ಗೆ ಮಾತನಾಡುವಾಗ ರಶ್ಮಿಕಾ ಆಂಗ್ಲ ಭಾಷೆ  ಬಳಸುತ್ತಿದ್ದರು. ನನಗೆ ಕನ್ನಡ ಸರಿಯಾಗಿ ಉಚ್ಚರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟನೆಯನ್ನೂ ನೀಡಿದ್ದರು. ಆದರೆ, ಟಾಲಿವುಡ್​ನಲ್ಲಿ ಒಂದು ಸಿನಿಮಾ ತೆರೆಕಾಣುವುದರೊಳಗೆ ಅವರು ಸ್ವಚ್ಛವಾಗಿ ತೆಲುಗು ಮಾತನಾಡಲು ಆರಂಭಿಸಿದ್ದರು. ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಅಷ್ಟೇ ಅಲ್ಲ ರಶ್ಮಿಕಾ ಕನ್ನಡ ವಿರೋಧಿ ಎಂದು ಅನೇಕರು ಹೇಳಿಕೊಂಡಿದ್ದರು.

ಈಗ ರಶ್ಮಿಕಾ ಕನ್ನಡ ಮಾತನಾಡುತ್ತಾರೆ. ಅವರ ಮುಂಬರುವ ‘ಡಿಯರ್ ಕಾಮ್ರೇಡ್​’ ಚಿತ್ರದ ಕನ್ನಡ ಅವತರಣಿಕೆಗೆ ರಶ್ಮಿಕಾ ಅವರೇ ಡಬ್​ ಮಾಡಿದ್ದಾರೆ. ಹೀಗಿದ್ದರೂ ಅವರಿಗೆ ಕನ್ನಡ ಸರಿಯಾಗಿ ಮಾತನಾಡಲು ಬರುವುದಿಲ್ಲವಂತೆ. ಈ ಬಗ್ಗೆ ತಮಿಳು ಸಂದರ್ಶನವೊಂದರಲ್ಲಿ ಅವರು ಹೇಳಿಕೊಂಡಿದ್ದಾರೆ.ಇದನ್ನೂ ಓದಿ: ನಿಮ್ಮ ಕೆಲಸ ಏನಿದೆಯೋ ನೋಡಿಕೊಳ್ಳಿ; ರಶ್ಮಿಕಾ ಬ್ರೇಕಪ್ ವಿಚಾರದಲ್ಲಿ ಗರಂ ಆಗಿ ಉತ್ತರಿಸಿದ ವಿಜಯ್ ದೇವರಕೊಂಡ

ಡಿಯರ್​ ಕಾಮ್ರೇಡ್​ ಕನ್ನಡ ಅವತರಣಿಕೆ ವಿಚಾರ ಬಂದಾಗ “ನನಗೆ ಕನ್ನಡ ಕೂಡ ಕಷ್ಟ. ನಿಜ ಹೇಳಬೇಕೆಂದರೆ ನನಗೆ ಕನ್ನಡ ಕೂಡ ಸರಿಯಾಗಿ ಮಾತನಾಡಲು ಬರುವುದಿಲ್ಲ,” ಎಂದು ತಮಿಳಿನಲ್ಲಿ ಮಾತನಾಡಿದ್ದಾರೆ. ರಶ್ಮಿಕಾ ಕನ್ನಡವನ್ನು ಸರಿಯಾಗಿ ಮಾತನಾಡಲು ಬರುವುದಿಲ್ಲ ಎಂದಿರುವುದಕ್ಕೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
First published:July 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ