ನಾನು ಎರಡನೇ ಪ್ರಭಾಸ್ ಅಲ್ಲ, ಮೊದಲ ಯಶ್!; ವೈರಲ್ ಆಯ್ತು ‘ರಾಕಿಂಗ್ ಸ್ಟಾರ್’ ಹೇಳಿಕೆ

ಪರಭಾಷೆಯ ಆ್ಯಂಕರ್​ ಒಬ್ಬರು ‘ನೀವು ದಕ್ಷಿಣ ಭಾರತದ ಎರಡನೇ ಪ್ರಭಾಸ್​​ ಆಗುತ್ತೀರಾ’ ಎಂದು ಯಶ್​ಗೆ ಕೇಳಿದ್ದರು. ಇದಕ್ಕೆ ಅವರು ನೀಡಿರುವ ಉತ್ತರ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

Rajesh Duggumane | news18
Updated:December 2, 2018, 11:57 AM IST
ನಾನು ಎರಡನೇ ಪ್ರಭಾಸ್ ಅಲ್ಲ, ಮೊದಲ ಯಶ್!; ವೈರಲ್ ಆಯ್ತು ‘ರಾಕಿಂಗ್ ಸ್ಟಾರ್’ ಹೇಳಿಕೆ
ಯಶ್
  • News18
  • Last Updated: December 2, 2018, 11:57 AM IST
  • Share this:
ಬೆಂಗಳೂರು (ಡಿ.02): ದಕ್ಷಿಣ ಭಾರತದಲ್ಲಿ ಕನ್ನಡ ಚಿತ್ರಗಳಿಗೆ ಹೋಲಿಸಿದರೆ ತೆಲುಗು-ತಮಿಳು ಸಿನಿಮಾಗಳೇ ಹೆಚ್ಚು ಸದ್ದು​ ಮಾಡುತ್ತವೆ. ಆದರೆ, ಇದೇ ಮೊದಲ ಬಾರಿಗೆ ಕನ್ನಡದ ಚಿತ್ರ ‘ಕೆಜಿಎಫ್​’ ದಕ್ಷಿಣ ಚಿತ್ರರಂಗದಲ್ಲಿ ಸಖತ್​ ಸುದ್ದಿ ಮಾಡಿದೆ. ಚಂದನವನದ ಚಿತ್ರವೊಂದು ದಕ್ಷಿಣ ಭಾರತದಲ್ಲಿ ಇಷ್ಟು ದೊಡ್ಡ ಮಟ್ಟಕ್ಕೆ ನಿರೀಕ್ಷೆ ಹುಟ್ಟು ಹಾಕಿರುವುದು ಇದೇ ಮೊದಲು. ಹಾಗಾಗಿ ನಿರೀಕ್ಷೆ ಹೆಚ್ಚಿರುವುದರಿಂದ ಚಿತ್ರತಂಡ ಬಿರುಸಿನಲ್ಲೇ ಪ್ರಚಾರ ನಡೆಸುತ್ತಿದೆ. ಈ ವೇಳೆ ಪರಭಾಷೆಯ ಆ್ಯಂಕರ್​ ಒಬ್ಬರು ‘ನೀವು ದಕ್ಷಿಣ ಭಾರತದ ಎರಡನೇ ಪ್ರಭಾಸ್​​ ಆಗುತ್ತೀರಾ’ ಎಂದು ಯಶ್​ಗೆ ಕೇಳಿದ್ದರು. ಇದಕ್ಕೆ ಅವರು ನೀಡಿರುವ ಉತ್ತರ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅಷ್ಟಕ್ಕೂ ಯಶ್​ ನೀಡಿದ ಉತ್ತರವೇನು? ಅದನ್ನು ತಿಳಿದುಕೊಳ್ಳಲು ಮುಂದೆ ಓದಿ.

ಯಶ್​ ಐದೂ ಭಾಷೆಗಳಲ್ಲಿ ​‘ಕೆಜಿಎಫ್​’ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಇತ್ತೀಚೆಗೆ ಹೈದರಾಬಾದ್​ಗೆ ತೆರಳಿದ್ದ ಅವರು, ಎಲ್ಲ ಮಾಧ್ಯಮದವರಿಗೂ ಸಂದರ್ಶನ ನೀಡಿದ್ದರು. ಈ ವೇಳೆ ಆ್ಯಂಕರ್​ ಒಬ್ಬರು, ‘ನಿಮ್ಮ ನಟನೆಯ ಕೆಜಿಎಫ್​ ಚಿತ್ರ ಪ್ರಭಾಸ್​ ನಟನೆಯ ‘ಛತ್ರಪತಿ’ ಸಿನಿಮಾ ಮಟ್ಟಕ್ಕೆ ನಿರೀಕ್ಷೆ ಹುಟ್ಟುಹಾಕಿದೆ. ಹಾಗಾಗಿ ದಕ್ಷಿಣ ಭಾರತದಲ್ಲಿ ನೀವು ಎರಡನೇ ಪ್ರಭಾಸ್​ ಆಗುವಿರಿ ಎಂದು ಎಲ್ಲರೂ ಹೇಳುತ್ತಿದ್ದಾರೆ. ಇದಕ್ಕೆ ನಿಮ್ಮ ಅಭಿಪ್ರಾಯ ಏನು’ ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ್ದ ಯಶ್​, ‘ಹೋಲಿಕೆಯಲ್ಲಿ ನನಗೆ ನಂಬಿಕೆ ಇಲ್ಲ. ಸೆಕೆಂಡ್​ ಎನ್ನುವ ಮಾತೇ ಬೇಡ. ನಾನು ಮೊದಲ ಯಶ್​ ಆಗಿರಲು ಬಯಸುತ್ತೇನೆ’ ಎಂದು ಪ್ರತಿಕ್ರಿಯಿಸಿದ್ದಾರೆ. ಅವರ ಉತ್ತರಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.

ಇದನ್ನೂ ಓದಿ: ಅಂತೂ ಈಡೇರಿತು ಯಶ್​ ಆಸೆ; ಹೆಣ್ಣು ಮಗುವಿನ ತಂದೆಯಾದ 'ರಾಕಿಂಗ್​ ಸ್ಟಾರ್​'

ಸಂದರ್ಶನದ ವೇಳೆ, ‘ಕೆಜಿಎಫ್​’ ಚಿತ್ರೀಕಣದಲ್ಲಿ ಎದುರಾದ ಕಷ್ಟಗಳ ಬಗೆಗೂ ಅವರು ಮಾತನಾಡಿದ್ದಾರೆ. ‘ಕೋಲಾರ ಚಿನ್ನದ ಗಣಿಯಲ್ಲಿ ‘ಕೆಜಿಎಫ್​’ ಶೂಟಿಂಗ್​ ಮಾಡಲಾಗಿತ್ತು. ಅಲ್ಲಿ ಸಂಪೂರ್ಣ ಧೂಳು. ಮೊದಲು ಜ್ಯೂನಿಯರ್​ ಕಲಾವಿದರನ್ನು ಬೆಂಗಳೂರಿನಿಂದ ಕರೆದುಕೊಂಡು ಹೋದೆವು. ಆದರೆ, ಅವರು ಹಿಂದೇಟು ಹಾಕಿದರು. ನಂತರ ಮೈಸೂರಿನಿಂದ ಕಲಾವಿದರು ಬಂದರು. ಅಲ್ಲಿನ ಧೂಳು ನೋಡಿ ಅವರು ಕಂಗಾಲಾದರು. ನಂತರ ಬೇರೆ ರಾಜ್ಯಗಳಿಂದ ಕಲಾವಿದರನ್ನು ಕರೆಸಬೇಕಾಯಿತು’ ಎಂದು ಯಶ್​ ಹೇಳಿಕೊಂಡಿದ್ದಾರೆ.

ನಾಳೆ ಬಿಡುಗಡೆಯಾಗಲಿದೆ ‘ಕೆಜಿಎಫ್​’​ ಹಾಡು​!:
ಚಿತ್ರತಂಡದಿಂದ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದು ಸಿಕ್ಕಿದೆ. ಅದೇನೆಂದರೆ ಸೋಮವಾರ ಚಿತ್ರದ ಮೊದಲ ಹಾಡು ಐದೂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಅಂದಹಾಗೆ, ಈ ಹಾಡು ಯಾವ ರೀತಿ ಇರಲಿದೆ ಎಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಲಹರಿ ಸಂಸ್ಥೆ ಚಿತ್ರದ ಆಡಿಯೋ ಹಕ್ಕನ್ನು ಪಡೆದುಕೊಂಡಿದೆ.

ಇದನ್ನೂ ಓದಿ: Photos: ರಾಕಿಂಗ್​ ಜೋಡಿ ಯಶ್​-ರಾಧಿಕಾರ ಕರುಳ ಕುಡಿಯ ಮೊದಲ ಚಿತ್ರ...!
First published: December 2, 2018, 11:53 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading