ಕಾಂತಾರ (Kantara) ಸೂಪರ್ ಸಕ್ಸಸ್ ಬಳಿಕ ಸಿನಿಮಾ ಪತ್ರಕರ್ತರೊಂದಿಗೆ ಸಂವಾದದಲ್ಲಿ ರಿಷಬ್ ಶೆಟ್ಟಿ (Rishab Shetty) ಮಾತಾಡಿದ್ದಾರೆ. ಈ ವೇಳೆ ಅನೇಕ ವಿಚಾರಗಳ ಬಗ್ಗೆ ಕೂಡ ಮಾತಾಡಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ರಿಷಬ್ ಶೆಟ್ಟಿ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಎನ್ನುವ ಅನೇಕ ಸುದ್ದಿಗಳು ಹರಿದಾಡುತ್ತಿದೆ. ಅನೇಕ ಮಾಧ್ಯಮಗಳಲ್ಲಿ ಈ ಬಗ್ಗೆ ವರದಿ ಬಂದಿದೆ. ಇದೀಗ ರಾಜಕೀಯ ಪ್ರವೇಶದ (Political Entry) ಬಗ್ಗೆ ಕೂಡ ರಿಷಬ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.
ರಾಜಕೀಯದಿಂದಲೇ ಸಮಾಜದಲ್ಲಿ ಬದಲಾವಣೆ ತರಬೇಕಿಲ್ಲ
ನೀವೂ ರಾಜಕೀಯಕ್ಕೆ ಎಂಟ್ರಿ ಕೊಡುವ ವಿಚಾರ ನಿಜವೇ ಎಂದು ರಿಷಬ್ ಶೆಟ್ಟಿಯನ್ನು ಪತ್ರಕರ್ತರು ಕೇಳಿದ್ದಾರೆ. ರಾಜಕೀಯ ಪ್ರವೇಶಿಸಿಯೇ ಸಮಾಜದಲ್ಲಿ ಬದಲಾವಣೆ ತರಬೇಕಿಲ್ಲ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ. ಸದ್ಯಕ್ಕೆ ನಾನು ರಾಜಕೀಯಕ್ಕೆ ಎಂಟ್ರಿ ಕೊಡುವುದಿಲ್ಲ ಎಂದು ಹೇಳಿದ್ದಾರೆ.
ಮೂರೂ ಪಕ್ಷಗಳಿಂದ ನನಗೆ ಟಿಕೆಟ್
ಮಾಧ್ಯಮಗಳಲ್ಲಿ ರಿಷಬ್ ರಾಜಕೀಯ ಪ್ರವೇಶದ ಬಗ್ಗೆ ವರದಿಯಾಗಿದ್ದು, ಈ ಕುರಿತು ರಿಷಬ್ ಶೆಟ್ಟಿ ತಮಾಷೆ ಮಾಡಿದ್ದಾರೆ. ಅನೇಕರು ನನಗೆ ಮೂರು ಪಕ್ಷಗಳಿಂದಲೂ ಟಿಕೆಟ್ ಕೊಡಿಸಿದ್ದಾರೆ ಎಂದು ನಕ್ಕರು. ರಾಜಕೀಯ ಪ್ರವೇಶದ ಆಸೆ ಸದ್ಯಕ್ಕಿಲ್ಲ ಎನ್ನುವುದನ್ನು ರಿಷಬ್ ಶೆಟ್ಟಿ ತಿಳಿಸಿದ್ದಾರೆ.
ಕಾಂತಾರ ಸಿನಿಮಾ ಹುಟ್ಟಿದ ಕಥೆ ಹೇಳಿದ ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ ಅವರು ಕಾಂತಾರ ಸಿನಿಮಾದ ಕಥೆ ಹುಟ್ಟಿದ ಬಗ್ಗೆ ಹೇಳಿದ್ದಾರೆ. ನಾನು ರೈತಾಪಿ ಕುಟುಂಬದಿಂದ ಬಂದ ಹುಡುಗ. ಲಾಕ್ ಡೌನ್ ಸಮಯದಲ್ಲಿ ಎಲ್ಲರೂ ಕೃಷಿಯ ಕಡೆಗೆ ಮುಖ ಮಾಡುತ್ತಿದ್ದರು. ಆಗ ನಮ್ಮ ಸ್ನೇಹಿತ ಒಬ್ಬ ಒಂದು ಘಟನೆಯನ್ನು ಹೇಳಿದ. ಗೆಳೆಯನ ಮನೆಯಲ್ಲಿ ಸಾವಯುವ ಕೃಷಿ ಮಾಡಿದ್ದರು. ಭತ್ತ ಕಟಾವಿಗೆ ಬಂದಿತ್ತು. ಆಗ ಒಂದು ಕಾಡು ಹಂದಿ ಆ ಭತ್ತದ ಗದ್ದೆಗೆ ನುಗ್ಗಿ ಭತ್ತ ತಿಂದಿರುತ್ತದೆ. ಆ ಹಂದಿ ಹೊಡೆಯೋಣ ಅಂತ ಒಂದು ವಾರ ಹುಡುಕುತ್ತಾರೆ.
ಆದರೆ ಆ ಹಂದಿ ಸಿಗೋದಿಲ್ಲ. ಕೊನೆಗೆ ಒಂದು ಮರದಲ್ಲಿ ಹಂದಿ ಹೊಡೆಯಲು ಕಾದು ಕುಳಿತುಕೊಳ್ಳುತ್ತಾರೆ. ಆ ಹಂದಿ ಹೊಡೆಯೋಕೆ ಕೂತಿರೋ ಮಾಹಿತಿ ಫಾರೆಸ್ಟ್ ಆಫೀಸರ್ಗೆ ಸಿಗುತ್ತದೆ. ಅವರು ನಮ್ಮ ಸ್ನೇಹಿತನ ಮನೆಗೆ ರೇಡ್ ಮಾಡುತ್ತಾರೆ. ಆಗ ಲೋಡೆಡ್ ಗನ್ ಸಿಗುತ್ತದೆ. ಆ ಗನ್ ಹಿಡಿದು ಫಾರೆಸ್ಟ್ ಆಫೀಸರ್ ಶೂಟ್ ಮಾಡುತ್ತಾರೆ.
ಆಗ ಆ ಫಾರೆಸ್ಟ್ ಆಫೀಸರ್ ಕಣ್ಣಿಗೆ ಸಮಸ್ಯೆ ಆಗಿತ್ತು. ಈ ಕಥೆಯನ್ನ ನಮ್ಮೂರಲ್ಲಿರೋ ಒಬ್ಬ ಸ್ನೇಹಿತ ಹೇಳುತ್ತಾರೆ. ಅದರಿಂದಲೇ ಕಾಂತಾರ ಸಿನಿಮಾದ ಕಥೆ ಹುಟ್ಟಿಕೊಂಡಿತು ಎಂದಿದ್ದಾರೆ ರಿಷಬ್.
ಕಾಂತಾರ ಸಿನಿಮಾದ ಸಕ್ಸಸ್ ಬಗ್ಗೆ ಮಾತನಾಡಿದ ರಿಷಬ್ ಶೆಟ್ಟಿ ಅವರು ನಾನು ಯಾವುದೇ ಗೆಲುವನ್ನ ಸೋಲನ್ನ ತಲೆಗೆ ತೆಗೆದುಕೊಳ್ಳುವುದಿಲ್ಲ. ನಾನು ಕೆಲಸ ಮಾಡೋಣ ಅಂತ ಯಾವಾಗಲೂ ಯೋಚನೆ ಮಾಡುತ್ತೇನೆ. ಯಾವುದೇ ವೇದಿಕೆಗಾಗಲಿ, ಸಿನಿಮಾ ಅವಾರ್ಡ್ಗೆ ಹೋಗಲಿ ಅಂತ ಸಿನಿಮಾ ಮಾಡಲ್ಲ ಎಂದಿದ್ದಾರೆ.
ಇದನ್ನೂ ಓದಿ: Kantara-2 Updates: ರಿಷಬ್ ಶೆಟ್ಟಿ ಕಾಂತಾರ-2 ಚಿತ್ರ ಯಾವಾಗ ಆರಂಭಿಸುತ್ತಾರೆ? ಲೇಟೆಸ್ಟ್ ಅಪ್ಡೇಟ್ಸ್ ಇಲ್ಲಿದೆ
ಕಾಂತಾರ ಸಿನಿಮಾ ಬೇರೆ ಭಾಷೆಗೆ ಹೋಗುತ್ತೆ ಅಂತ ನಾನು ಅಂದು ಕೊಂಡಿರಲಿಲ್ಲ. ಕಾಂತಾರ ಈಗ ಇಂಗ್ಲೀಷ್ ನಲ್ಲೂ ಬರುತ್ತಿದೆ. ನೆಟ್ ಫ್ಲಿಕ್ಸ್ ನಲ್ಲಿ ಇಂಗ್ಲಿಷ್ ಅವತರಣಿಕೆ ಬರುತ್ತಿದೆ. ಕಾಂತಾರ ಸಿನಿಮಾವನ್ನ ಸಣ್ಣ ಸಿನಿಮಾ ಅಂತಲೇ ಅಂದುಕೊಂಡಿದ್ದೇನೆ. ಬಾಹುಬಲಿ, ಆರ್ ಆರ್ ಆರ್, ಕೆಜಿಎಫ್ ಸಿನಿಮಾದಷ್ಟು ದೊಡ್ಡ ಬಜೆಟ್ ಸಿನಿಮಾ ನಮ್ಮದಲ್ಲ ಎಂದು ರಿಷಬ್ ಹೇಳಿದ್ರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ