ರಶ್ಮಿಕಾ ಮಂದಣ್ಣನನ್ನು ತುಂಬಾನೇ ಮಿಸ್ ಮಾಡಿಕೊಂಡೆ; ಬಹಿರಂಗ ಪತ್ರ ಬರೆದ ವಿಜಯ್ ದೇವರಕೊಂಡ!

ಇನ್​ಸ್ಟಾಗ್ರಾಂನಲ್ಲಿ ವಿಜಯ್​ ದೇವರಕೊಂಡ ಹೊಸ ಪೋಸ್ಟ್​ ಒಂದನ್ನು ಹಾಕಿದ್ದಾರೆ. ಅದರಲ್ಲಿ ರಶ್ಮಿಕಾ ಮಂದಣ್ಣ ಅವರನ್ನು ಮಿಸ್​ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

Rajesh Duggumane | news18
Updated:August 18, 2019, 2:22 PM IST
ರಶ್ಮಿಕಾ ಮಂದಣ್ಣನನ್ನು ತುಂಬಾನೇ ಮಿಸ್ ಮಾಡಿಕೊಂಡೆ; ಬಹಿರಂಗ ಪತ್ರ ಬರೆದ ವಿಜಯ್ ದೇವರಕೊಂಡ!
ನೀವು ಮತ್ತು ವಿಜಯ್ ಇಬ್ಬರು ಒಳ್ಳೆಯ ಜೋಡಿ. ನೀವಿಬ್ಬರು ಯಾಕೆ ಡೇಟಿಂಗ್ ಮಾಡಬಾರದು ಎಂದು ಫ್ಯಾನ್​ವೊಬ್ಬರು ಪ್ರಶ್ನೆ ಮಾಡಿದ್ದರು.
  • News18
  • Last Updated: August 18, 2019, 2:22 PM IST
  • Share this:
ರಕ್ಷಿತ್​ ಶೆಟ್ಟಿ ಹಾಗೂ ರಶ್ಮಿಕಾ ಸಂಬಂಧ ಮುರಿದು ಬೀಳಲು ವಿಜಯ್​ ದೇವರಕೊಂಡ ಕಾರಣ ಎನ್ನುವ ಮಾತು ಕೇಳಿ ಬಂದಿದೆಯಾದರೂ ಈ ವಿಚಾರ ಗಾಸಿಪ್​ ಆಗಿಯೇ ಉಳಿದಿದೆ. ‘ಗೀತ ಗೋವಿಂದಂ’ ನಂತರ ವಿಜಯ್​ ದೇವರಕೊಂಡ-ರಶ್ಮಿಕಾ ‘ಡಿಯರ್​ ಕಾಮ್ರೇಡ್​’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿಯೂ ಆಗಿದೆ. ಈಗ ವಿಜಯ್​ ದೇವರಕೊಂಡ ರಶ್ಮಿಕಾಗೆ ಬಹಿರಂಗ ಪತ್ರ ಬರೆದಿದ್ದು, ಅದರಲ್ಲಿ ನಾನು ನಿಮ್ಮನ್ನು ಮಿಸ್​ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ!

ಅಷ್ಟಕ್ಕೂ ವಿಜಯ್​ ಹೀಗೆ ಹೇಳಿದ್ದೇಕೆ ಎಂದು ಅಚ್ಚರಿ ಪಡಬೇಡಿ! ಅವರು ಹೀಗೆ ಬರೆಯಲು ಕಾರಣ ‘ಗೀತ ಗೋವಿಂದಂ’ ಚಿತ್ರಕ್ಕೆ ಸೈಮಾ ಪ್ರಶಸ್ತಿ ಬಂದಿದ್ದು! ಹೌದು, ‘ಗೀತ ಗೋವಿಂದಂ’ ಚಿತ್ರಕ್ಕಾಗಿ ವಿಜಯ್​ಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿತ್ತು. ಕತಾರ್​ನಲ್ಲಿ ನಡೆ​ದ ಈ ಕಾರ್ಯಕ್ರಮದಲ್ಲಿ ವಿಜಯ್​ ಪ್ರಶಸ್ತಿ ಸ್ವೀಕರಿಸಿದ್ದರು.

ಈ ಕಾರ್ಯಕ್ರಮಕ್ಕೆ ರಶ್ಮಿಕಾ ತೆರಳಿರಲಿಲ್ಲ. ಹೀಗಾಗಿ ಪ್ರಶಸ್ತಿ ಸ್ವೀಕರಿಸುವ ವೇಳೆ ರಶ್ಮಿಕಾ ಇರಬೇಕಿತ್ತು. ಅವರನ್ನು ಮಿಸ್​ ಮಾಡಿಕೊಂಡೆ ಎಂದು ವಿಜಯ್​ ಹೇಳಿದ್ದಾರೆ. “ಆಗಸ್ಟ್​​ 15ಕ್ಕೆ ‘ಗೀತ ಗೋವಿಂದಂ’ ರಿಲೀಸ್​ ಆಗಿತ್ತು. ಈ ವರ್ಷ ಆ ಚಿತ್ರಕ್ಕೆ ಬೆಸ್ಟ್​ ಆ್ಯಕ್ಟರ್​ ಪ್ರಶಸ್ತಿ ದೊರೆತಿದೆ. ಪರಶುರಾಮ್​, ಅರವಿಂದ್, ವಾಸು, ರಶ್ಮಿಕಾ ಮಂದಣ್ಣ, ಗೋಪಿ ಸುಂದರ್​ ಸೇರಿ ಅನೇಕರನ್ನು ನಾನು ಮಿಸ್​ ಮಾಡಿಕೊಂಡಿದ್ದೇನೆ ಮತ್ತು ಅವರು ನನ್ನ ಪ್ರೀತಿಯನ್ನು ಕಳುಹಿಸುತ್ತಿದ್ದೇನೆ,​” ಎಂದು ವಿಜಯ್​ ಬರೆದುಕೊಂಡಿದ್ದಾರೆ.

First published: August 18, 2019, 2:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading