• Home
  • »
  • News
  • »
  • entertainment
  • »
  • Raj B Shetty-Rishab Shetty: ರಾಜ್ ಬಿ ಶೆಟ್ಟಿಗೆ ಬೇಜಾರು, ಹರ್ಟ್ ಮಾಡಿದ್ಯಾರು? ರಿಷಬ್ ಕಮೆಂಟ್

Raj B Shetty-Rishab Shetty: ರಾಜ್ ಬಿ ಶೆಟ್ಟಿಗೆ ಬೇಜಾರು, ಹರ್ಟ್ ಮಾಡಿದ್ಯಾರು? ರಿಷಬ್ ಕಮೆಂಟ್

ರಾಜ್ ಬಿ. ಶೆಟ್ಟಿ-ರಿಷಬ್ ಶೆಟ್ಟಿ

ರಾಜ್ ಬಿ. ಶೆಟ್ಟಿ-ರಿಷಬ್ ಶೆಟ್ಟಿ

ರಾಜ್ ಬಿ ಶೆಟ್ಟಿ ಹೆಸರಿನ ಫೇಸ್​​ಬುಕ್ ಖಾತೆಯಿಂದ ಫೋಟೋ ಒಂದನ್ನು ಪೋಸ್ಟ್ ಮಾಡಲಾಗಿದ್ದು, ಇದಕ್ಕೆ ರಿಷಬ್ ಶೆಟ್ಟಿ ಅವರು ಕಮೆಂಟ್ ಮಾಡಿದ್ದಾರೆ.

  • News18 Kannada
  • Last Updated :
  • Bangalore, India
  • Share this:

ಕಾಂತಾರ ಹೀರೋ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಅವರು ರಕ್ಷಿತ್ ಶೆಟ್ಟಿ  (Rakshit Shetty) ನಿರ್ದೇಶಕನ ಬ್ಯಾಚುರಲ್ ಪಾರ್ಟಿ (Batural Party) ಸಿನಿಮಾದಿಂದ (Cinema) ಹೊರ ಬಂದಿದ್ದಾರೆ. ಈ ವಿಚಾರ ಈಗ ಎಲ್ಲೆಡೆ ಸುದ್ದಿಯಾಗುತ್ತಿದೆ. ರಕ್ಷಿತ್ ನಿರ್ಮಾಣದಲ್ಲಿ ಅನೌನ್ಸ್ ಆಗಿದ್ದ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅಚ್ಯುತ್ ಕುಮಾರ್, ದಿಗಂತ್ (Diganth) ಹಾಗೂ ರಿಷಬ್ ಶೆಟ್ಟಿ ಜೊತೆಯಾಗಿ ನಟಿಸುವವರಿದ್ದರು. ಬ್ಯಾಚುರಲ್ ಪಾರ್ಟಿ ಎನ್ನುವ ಹೆಸರಿನ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರನ್ನು ಬ್ಯಾಚುರಲ್ ಅವತಾರದಲ್ಲಿ ಕಾಣಬಹುದಾಗಿತ್ತು. ಸಿನಿಮಾದ ಪೋಸ್ಟರ್ ಅಂತೂ ಭರ್ಜರಿ ರೆಸ್ಪಾನ್ಸ್ ಕೂಡಾ ಪಡೆದುಕೊಂಡಿತ್ತು. ಆದರೆ ಸಿನಿಮಾದಿಂದ ರಿಷಬ್ ಶೆಟ್ಟಿ (Raj B Shetty) ಹೊರಬಂದಿರುವುದು ಎಲ್ಲರಿಗೂ ಗೊತ್ತು. ಈ ಎಲ್ಲ ಬೆಳವಣಿಗೆಗಳ ಮಧ್ಯೆ ರಾಜ್. ಬಿ. ಶೆಟ್ಟಿ ಅವರ ಫೇಸ್​ಬುಕ್ ಖಾತೆಯಿಂದ ಪೋಸ್ಟ್ ಒಂದನ್ನು ಶೇರ್ ಮಾಡಲಾಗಿದೆ. ಇದಕ್ಕೆ ರಿಷಬ್ ಶೆಟ್ಟಿ ಕೂಡಾ ಕಮೆಂಟ್ ಮಾಡಿದ್ದಾರೆ.


ರಿಷಬ್ ಶೆಟ್ಟಿ ಕಮೆಂಟ್ ಏನು?


ನೀವೊಬ್ಬ ಕಲಾವಿದನನ್ನು ನೋಯಿಸಿದಾಗ ಹಾಡು ಹೊರಹೊಮ್ಮುತ್ತದೆ ಎಂದು ರಾಜ್ ಬಿ ಶೆಟ್ಟಿ ಅವರು ಫೇಸ್​​ಬುಕ್​​ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ರಿಷಬ್ ಶೆಟ್ಟಿ ಕಮೆಂಟ್ ಮಾಡಿದ್ದಾರೆ. ಹರ್ಟ್ ಮಾಡಿದ್ದು ಯಾರಂತ ಹೇಳಾ ಶೆಟ್ರೇ ಎಂದು ರಿಷಬ್ ಅವರು ಕಮೆಂಟ್ ಮಾಡಿದ್ದಾರೆ.
ರಾಜ್ ಬಿ ಶೆಟ್ಟಿ ಅವರ ಫೇಸ್​ಬುಕ್ ಪೋಸ್ಟ್​ಗೆ 120 ಲೈಕ್ಸ್ ಬಂದಿದ್ದು 10 ಜನರು ಕಮೆಂಟ್ ಮಾಡಿದ್ದಾರೆ. ಇನ್ನು ರಿಷಬ್ ಶೆಟ್ಟಿ ಅವರ ಕಮೆಂಟ್​ಗೆ  11 ಜನರು ರಿಯಾಕ್ಟ್ ಮಾಡಿದ್ದು ವಿವಿಧ ಎಮೋಜಿಗಳನ್ನು ಕಳುಹಿಸಿದ್ದಾರೆ.


ಸಿನಿಮಾದಿಂದ ಹೊರ ಬಂದಿದ್ದಕ್ಕೆ ಬೇಜಾರಾ?


ರಕ್ಷಿತ್ ಶೆಟ್ಟಿ ಸಿನಿಮಾದಿಂದ ರಿಷಬ್ ಶೆಟ್ಟಿ ಹೊರಬಂದಿದ್ದಕ್ಕೆ ರಾಜ್ ಬಿ ಶೆಟ್ಟಿ ಬೇಜಾರಾಗಿದ್ದಾರಾ? ಸ್ನೇಹಿತರಾಗಿದ್ದವರು ಈ ರೀತಿ ಪರಸ್ಪರ ಸಿನಿಮಾಗಳನ್ನು ಬೆಂಬಲಿಸಿಕೊಂಡು ಬಂದು ಈಗ ಮಿತ್ರನ ಸಿನಿಮಾದಿಂದಲೇ ದಿಢೀರ್ ಬ್ಯಾಕೌಟ್ ಆಗಿರುವುದಕ್ಕೆ ರಾಜ್ ಬಿ ಶೆಟ್ಟಿ ಅಸಮಾಧಾನಗೊಂಡಿದ್ದಾರಾ ಎನ್ನುವ ಚರ್ಚೆ ಶುರುವಾಗಿದೆ.


ಇದನ್ನೂ ಓದಿ: Rakshit Shetty-Rishab Shetty: ರಕ್ಷಿತ್​​ಗೆ ರಿಷಬ್ ಕೈಕೊಡೋಕೆ ಕಾರಣ ಇದೇನಾ? ಅಭಿಮಾನಿಗಳಿಗೆ ಶಾಕ್!


ಇನ್ನು ರಿಷಬ್ ಶೆಟ್ಟಿ ಅವರ ಕಮೆಂಟ್ ನೋಡಿದ ಜನರು ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದಿಂದ ರಮ್ಯಾ ಹೊರಬಂದಿದ್ದಕ್ಕೆ ರಾಜ್ ನೊಂದುಕೊಂಡಿರಬಹುದು ಎಂದು ಕೂಡಾ ಊಹಿಸುತ್ತಿದ್ದಾರೆ. ಆದರೆ ಈ ಒಂದು ಬೆಳವಣಿಗೆಗೆ ಸ್ಪಷ್ಟ ಕಾರಣ ಸಿಕ್ಕಿಲ್ಲ.


ರಿಷಬ್ ಶೆಟ್ಟಿ ಕಮೆಂಟ್


ರಾಜ್ ಬಿ. ಶೆಟ್ಟಿ ಪೋಸ್ಟ್ ಇರೋದು ಅಧಿಕೃತ ಖಾತೆಯಲ್ಲಿ ಅಲ್ಲ


ಇಲ್ಲಿ ಇನ್ನೊಂದು ಗಮನಿಸಬೇಕಾದ ವಿಚಾರವೆಂದರೆ ಈ ಪೋಸ್ಟ್ ಶೇರ್ ಆಗಿರುವುದು ರಾಜ್. ಬಿ. ಶೆಟ್ಟಿ ಅವರ ಅಧಿಕೃತ ಫೇಸ್​ಬುಕ್ ಖಾತೆಯಿಂದ ಅಲ್ಲ. ಅದು Unverified ಖಾತೆ. ಆದರೆ ಇನ್ನೋ ಗೊಂದಲ ಉಂಟು ಮಾಡಿರೋ ವಿಚಾರ ಏನೆಂದರೆ ಈ ಪೋಸ್ಟ್​ಗೆ ಕಮೆಂಟ್ ಬಂದಿರುವುದು ಮಾತ್ರ ರಿಷಬ್ ಶೆಟ್ಟಿ ಅವರ ಅಧಿಕೃತ ಖಾತೆಯಿಂದ. ರಾಜ್ ಬಿ. ಶೆಟ್ಟಿ ಅವರಿಗೂ ಅಧಿಕೃತ ಫೇಸ್​ಬುಕ್ ಅಕೌಂಟ್ ಇದ್ದಾಗ ಅವರು ನಾರ್ಮಲ್ ಖಾತೆಯಿಂದ ಪೋಸ್ಟ್ ಮಾಡಲ್ಲ ಎನ್ನುವುದು ಕೆಲವರ ವಾದ. ಹಾಗಿದ್ದರೆ ಪೋಸ್ಟ್ ಮಾಡಿರುವುದು ಯಾರು?


ರಾಜ್ ಬಿ ಶೆಟ್ಟಿ ಎನ್ನುವ ಖಾತೆಯಿಂದ ಮಾಡಲಾಗಿರುವ ಪೋಸ್ಟ್


ನಕಲಿ ಖಾತೆಯಿಂದ ಪೋಸ್ಟ್ ಆಗಿರಬಹುದೇ?


ರಾಜ್ ಬಿ ಶೆಟ್ಟಿ ಅವರ ಹೆಸರಲ್ಲಿ ಯಾರಾದರೂ ನಕಲಿ ಖಾತೆ ಮಾಡಿ ಈ ಕಿತಾಪತಿ ಮಾಡುತ್ತಿರಬಹುದೇ? ರಾಜ್ ಅವರ ಹೆಸರು ಇಟ್ಟು ಸುಮ್ಮನೆ ಪೋಸ್ಟ್​ಗಳನ್ನು ಮಾಡುತ್ತಿರಬಹುದು ಎನ್ನುತ್ತಿದ್ದಾರೆ ಕೆಲವರು. ಆದರೆ ಇದು ಗೊಂದಲಮಯವಾಗಿದ್ದು ಈ ಬಗ್ಗೆ ಅವರೇ ಸ್ಪಷ್ಟನೆ ನೀಡಬೇಕಷ್ಟೆ.

Published by:Divya D
First published: