Humble Politician Nograj: ಮೈ ಡಿಯರ್ ಫ್ರೆಂಡ್ಸ್​.. ನೊಗ್​ರಾಜ್​ನ ಮೀಟ್​ ಮಾಡ್ಬೇಕಾ? ಹೀಗ್​ ಮಾಡಿ..ಜೊತೆಯಲ್ಲೇ ಸೀರೀಸ್​ ನೋಡಿ..!

ಹಂಬಲ್​ ಪೊಲಿಟಿಷಿಯನ್​ ವೆಬ್​ ಸೀರೀಸ್​ ಜನವರಿ 6 ರಂದು ವೂಟ್​ ಆ್ಯಪ್​ನಲ್ಲಿ ಬಿಡುಗಡೆಯಾಗಲಿದೆ. ಹೀಗಾಗಿ ಜನವರಿ 4ರಂದು ದಾನಿಶ್​ ಸೇಠ್​ ಅವರನ್ನು ಮೀಟ್​ ಮಾಡಲು ಅವಕಾಶ ಮಾಡಿಕೊಟ್ಟಿದೆ. ಅಭಿಮಾನಿಗಳ ಜೊತೆ ಕೂತು ಈ ಸೀರೀಸ್​ ನೋಡಲು ಬೆಂಗಳೂರಿನಲ್ಲಿ ಸಿದ್ಧತೆ ಮಾಡುತ್ತಿದೆ.

ಹಂಬಲ್​ ಪೊಲಿಟಿಷಿಯನ್​ ನೊಗ್​ರಾಜ್​ ಪೋಸ್ಟರ್​

ಹಂಬಲ್​ ಪೊಲಿಟಿಷಿಯನ್​ ನೊಗ್​ರಾಜ್​ ಪೋಸ್ಟರ್​

  • Share this:
ದಾನಿಶ್​ ಸೇಠ್​ (Danish Sait) ಅವರ ಬಗ್ಗೆ ಪರಿಚಯ ಮಾಡಿಸಿಕೊಡುವ ಅವಶ್ಯಕತೆ ಇಲ್ಲ. ನಟ (Actor), ನಿರೂಪಕ (Anchor)ರಾಗಿ ಈಗಾಗಲೇ ಎಲ್ಲರ ಗಮನ ಸೆಳೆದಿದ್ದಾರೆ. ಆರ್​ಸಿಬಿ (RCB)  ತಂಡ ಇನ್​ಸೈಡರ್​ ಮಿಸ್ಟರ್​ ನಾಗ್ಸ್​ ಅಂದರೆ ಎಲ್ಲರಿಗೂ ಅಚ್ಚು ಮೆಚ್ಚು. ಹೀರೋ ಆಗಿಯೂ ದಾನಿಶ್​ ಸೇಠ್​ ಕಾಣಿಸಿಕೊಂಡಿದ್ದಾರೆ. ಅವರು ಅಭಿನಯಿಸಿರುವ ‘ಫ್ರೆಂಚ್​​ ಬಿರಿಯಾನಿ’, ‘ಹಂಬಲ್ ಪೊಲಿಟಿಷಿಯನ್ ನೊಗ್​ರಾಜ್​​’ (Humble Politician Nograj) ಚಿತ್ರಗಳನ್ನು ಜನರು ಮೆಚ್ಚಿಕೊಂಡಿದ್ದಾರೆ. ಇವರ ಮೊದಲ ಸಿನಿಮಾ ‘ಹಂಬಲ್​ ಪೊಲಿಟಿಷಿಯನ್​ ನೊಗ್​ರಾಜ್’​​ ಸಿನಿಮಾ ಜನರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತು. “ಹಂಬಲ್ ಪೊಲಿಟೀಷಿಯನ್ ನೊಗ್​ರಾಜ್” ಈ ಸಿನಿಮಾ ಮೂಲಕ ಎಲ್ಲರನ್ನು ರಂಜಿಸಿದ್ದ ಇದೇ ಚಿತ್ರತಂಡ ಈಗ ವೆಬ್‌ಸೀರಿಸ್ ಮೂಲಕ ಮತ್ತೊಮ್ಮೆ ರಂಜಿಸಲು ಬರುತ್ತಿದೆ. “ಹಂಬಲ್ ಪೊಲಿಟೀಷಿಯನ್ ನೊಗ್‌ರಾಜ್” ವೆಬ್ ಸೀರೀಸ್‌ (Web Series)ನ ಟ್ರೈಲರ್(Trailer)​ ರಿಲೀಸ್​ ಆಗಿದೆ. ಜನವರಿ 6 ಕ್ಕೆ ಈ ವೆಬ್​ ಸೀರೀಸ್​ ಬಿಡುಗಡೆಯಾಗಲಿದೆ. ಇನ್ನೂ ಜನವರಿ 4 ರಂದು  ದಾನಿಶ್​ ಸೇಠ್​ ಅವರನ್ನು ಮೀಟ್​ ಮಾಡಲು ಅವರ ಅಭಿಮಾನಿಗಳಿಗೆ ಅವಕಾಶ ಮಾಡಿಕೊಟ್ಟಿದೆ. ಹಂಬಲ್​ ಪೊಲಿಟಿಷಿಯನ್​ ನೊಗ್​ರಾಜ್ ಅವರನ್ನು ಭೇಟಿ ಮಾಡಬೇಕು ಅಂದರೆ ಏನು ಮಾಡಬೇಕು ಗೊತ್ತಾ? ಹೀಗೆ ಮಾಡಿ..

ಅಭಿಮಾನಿಗಳಿಗೆ ಆಹ್ವಾನ ಕೊಟ್ಟ ಚಿತ್ರತಂಡ!

ಹೌದು, ಹಂಬಲ್​ ಪೊಲಿಟಿಷಿಯನ್​ ವೆಬ್​ ಸೀರೀಸ್​ ಜನವರಿ 6 ರಂದು ವೂಟ್​ ಆ್ಯಪ್​ನಲ್ಲಿ ಬಿಡುಗಡೆಯಾಗಲಿದೆ. ಹೀಗಾಗಿ ಜನವರಿ 4ರಂದು ದಾನಿಶ್​ ಸೇಠ್​ ಅವರನ್ನು ಮೀಟ್​ ಮಾಡಲು ಅವಕಾಶ ಮಾಡಿಕೊಟ್ಟಿದೆ. ಅಭಿಮಾನಿಗಳ ಜೊತೆ ಕೂತು ಈ ಸೀರೀಸ್​ ನೋಡಲು  ಬೆಂಗಳೂರಿನಲ್ಲಿ ಸಿದ್ಧತೆ ಮಾಡಿಕೊಂಡಿದೆ. ಹಂಬಲ್ ಪೊಲಿಟೀಷಿಯನ್ ನೊಗ್​ರಾಜ್​ ಕಾಮಿಡಿ ಆಧಾರಿತ ವೆಬ್‌ಸೀರಿಸ್ ಆಗಿದ್ದು, ಒಟ್ಟು 10 ಎಪಿಸೋಡ್ ಹೊಂದಿದೆ. ನಟರಾದ ಪ್ರಕಾಶ್ ಬೆಳಬಾಡಿ, ವಿನಯ್ ಚೆಂಡೂರ್ ಮತ್ತು ದಿಶಾ ಮದನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಾದ್‌ಖಾನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.ಇದನ್ನು ಓದಿ: `ಹಂಬಲ್​ ಪೊಲಿಟಿಷಿಯನ್​ ನೊಗ್​ರಾಜ್​’ ಟ್ರೈಲರ್​ ರಿಲೀಸ್​: ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸ್ತಾರೆ ದಾನಿಶ್!

ನೊಗ್​ರಾಜ್​ ವೆಬ್​ ಸೀರೀಸ್​ ಕಥೆಯೇ ಫನ್ನಿ!

ದಾನಿಶ್​ ಸೇಠ್​ ಒಬ್ಬ ಸ್ವಯಂ ಸೇವಕನಾಗಿ ಸೇವೆ ಸಲ್ಲಿಸುತ್ತಾ ರಾಜಕೀಯ ಕ್ಷೇತ್ರಕ್ಕೆ ಕಾಲಿಡಲಿದ್ದಾರೆ. ನಂತರ ರೆಸಾರ್ಟ್ ರಾಜಕೀಯ, ಮುಖ್ಯಮಂತ್ರಿ ಸ್ಥಾನಕ್ಕೇರಲು ಏನೆಲ್ಲಾ ಸರ್ಕಸ್ ಮಾಡಲಿದ್ದಾರೆ ಹಾಗೂ ಅಧಿಕಾರಿ ದುರಾಸೆ, ಭ್ರಷ್ಟಾಚಾರ ವನ್ನು ವಿಡಂನಾತ್ಮಕವಾಗಿ ತೆಗೆದುಕೊಂಡು ಹೋಗುವ ಮೂಲಕ ರೋಲರ್ ಕೋಸ್ಟರ್ ಆಗಿ ನೋಗರಾಜ್ ಜನರನ್ನು ರಂಜಿಸಲಿದ್ದಾರೆ. 10 ಎಪಿಸೋಡ್‌ನ ಈ ವೆಬ್‌ಸೀರಿಸ್ ಪೂರ್ತಿ ಪಂಚಿಂಗ್ ಡೈಲಾಗ್ ಹಾಗೂ ನಗುವಿಕೆ‌ ಕೊರತೆ ಇಲ್ಲ.

ಇದನ್ನು ಓದಿ : ₹10 ಲಕ್ಷ ಕೊಡ್ತಾರಂತೆ ವಿಜಯ್​ ದೇವರಕೊಂಡ: ನಿಮ್ಗೂ ಸಿಗುತ್ತೆ ರೀ.. ಹೀಗ್​ ಮಾಡಿ..

ಸೀರಿಯಸ್​ ಮ್ಯಾಟರ್​, ಕಾಮಿಡಿ ಸ್ಕ್ರೀನ್​ ಪ್ಲೇ!

ಹಂಬಲ್ ಪೊಲಿಟೀಷಿಯನ್ ನೊಗ್​ರಾಜ್​ ಕಾಮಿಡಿ ಆಧಾರಿತ ವೆಬ್‌ಸೀರಿಸ್ ಆಗಿದ್ದು, ಒಟ್ಟು 10 ಎಪಿಸೋಡ್ ಹೊಂದಿದೆ. ನಟರಾದ ಪ್ರಕಾಶ್ ಬೆಳಬಾಡಿ, ವಿನಯ್ ಚೆಂಡೂರ್ ಮತ್ತು ದಿಶಾ ಮದನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಾದ್‌ಖಾನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಡ್ಯಾನಿಶ್ ಸೇಟ್ ಒಬ್ಬ ಸ್ವಯಂ ಸೇವಕನಾಗಿ ಸೇವೆ ಸಲ್ಲಿಸುತ್ತಾ ರಾಜಕೀಯ ಕ್ಷೇತ್ರಕ್ಕೆ ಕಾಲಿಡಲಿದ್ದಾರೆ. ನಂತರ ರೆಸಾರ್ಟ್ ರಾಜಕೀಯ, ಮುಖ್ಯಮಂತ್ರಿ ಸ್ಥಾನಕ್ಕೇರಲು ಏನೆಲ್ಲಾ ಸರ್ಕಸ್ ಮಾಡಲಿದ್ದಾರೆ ಹಾಗೂ ಅಧಿಕಾರಿ ದುರಾಸೆ, ಭ್ರಷ್ಟಾಚಾರ ವನ್ನು ವಿಡಂನಾತ್ಮಕವಾಗಿ ತೆಗೆದುಕೊಂಡು ಹೋಗುವ ಮೂಲಕ ರೋಲರ್ ಕೋಸ್ಟರ್ ಆಗಿ ನೋಗರಾಜ್ ಜನರನ್ನು ರಂಜಿಸಲಿದ್ದಾರೆ. 10 ಎಪಿಸೋಡ್‌ನ ಈ ವೆಬ್‌ಸೀರಿಸ್ ಪೂರ್ತಿ ಪಂಚಿಂಗ್ ಡೈಲಾಗ್ ಹಾಗೂ ನಗುವಿಕೆ‌ ಕೊರತೆ ಇಲ್ಲ.
Published by:Vasudeva M
First published: