news18-kannada Updated:June 8, 2020, 12:54 PM IST
ಹುಚ್ಚ ವೆಂಕಟ್
ಬೆಂಗಳೂರು (ಜೂ.8): ಹುಚ್ಚ ವೆಂಕಟ್ ಬಿಗ್ ಬಾಸ್ಗೆ ಎಂಟ್ರಿಕೊಟ್ಟಾಗಿನಿಂದಲೂ ಒಂದಿಲ್ಲೊಂದು ವಿಚಾರಕ್ಕೆ ಸದ್ದು ಮಾಡುತ್ತಲೇ ಇದ್ದಾರೆ. ಇತ್ತೀಚೆಗೆ ಹುಚ್ಚ ವೆಂಕಟ್ ಸಂಕಷ್ಟದಲ್ಲಿರೋರಿಗೆ ಸಹಾಯ ಮಾಡಿ ಸುದ್ದಿ ಮಾಡಿದ್ದರು, ಅದರ ಬೆನ್ನಲ್ಲೇ ಕೊರೋನಾ ಪತ್ತೆಗೆ ಹೊಸ ಯಂತ್ರ ಕಂಡು ಹಿಡಿಯುವಂತೆ ಬೇಡಿಕೆ ಇಟ್ಟಿದ್ದರು. ಈಗ ಏಕಾಏಕಿ ಅವರು ಶ್ರೀರಂಗಪಟ್ಟಣದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಅವರ ಕಣ್ಣೀರು ನೋಡಿ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
ಹುಚ್ಚ ವೆಂಕಟ್ ಶ್ರೀರಂಗಪಟ್ಟಣದ ರಂಗನಾಥ ಮೈದಾನದಲ್ಲಿ ರಾತ್ರಿಯಿಡೀ ಮಲಗಿದ್ದರು. ನಂತರ ದೇವಾಲಯದ ಮುಂಭಾಗದಲ್ಲಿ ಕಾರು ನಿಲ್ಲಿಸಿ ಶ್ರೀರಂಗಪಟ್ಟಣದಲ್ಲಿ ಅಲೆದಾಟ ನಡೆಸಿದ್ದರು. ಹುಚ್ಚ ವೆಂಕಟ್ ಸ್ಥಿತಿ ನೋಡಿ ಅಭಿಮಾನಿಗಳು ಹೋಟೆಲ್ನಿಂದ ತಿಂಡಿ ಕೊಡಿಸಿದ್ದಾರೆ.
ಇನ್ನು, ರಸ್ತೆಯಲ್ಲಿ ಎಲ್ಲರಿಗೂ ಬಯ್ಯತ್ತಾ ಹುಚ್ಚ ವೆಂಕಟ್ ಪುಂಡಾಟ ನಡೆಸಿದ್ದಾರೆ. ನಂತರ ಊರಿಗೆ ಹೋಗಲು 10 ರೂಪಾಯಿ ಕೊಡಿ ಎಂದು ಜನರ ಬಳಿ ಕಣ್ಣೀರಿಟ್ಟಿದ್ದಾರೆ. ಹುಚ್ಚ ವೆಂಕಟ್ ಸ್ಥಿತಿ ಕಂಡು ಮರುಗಿದ ಸ್ಥಳೀಯರಿಂದ ಹಣ ನೀಡಿ ಸಹಾಯ ಮಾಡಿದ್ದಾರೆ. ಕಡೆಗೆ ಪೊಲೀಸರ ಸಹಾಯದಿಂದ ಶ್ರೀರಂಗಪಟ್ಟಣದಿಂದ ಅವರನ್ನು ಕಳುಹಿಸಕೊಡಲಾಗಿದೆ.
ಇದನ್ನೂ ಓದಿ: ಕೊರೋನಾ ನಿಯಂತ್ರಣಕ್ಕೆ ಹುಚ್ಚ ವೆಂಕಟ್ ನೀಡಿದ ಐಡಿಯಾ ಕೇಳಿ ಜನರೇ ಸುಸ್ತು!
ಇನ್ನು, ಜನರ ಬಳಿ ತೆರಳಿ ಸಹಾಯ ಕೇಳುವಾಗ ಹುಚ್ಚ ವೆಂಕಟ್ ಕಣ್ಣೀರು ಹಾಕುತ್ತ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಈ ಮೊದಲು ಕೂಡ ಹುಚ್ಚ ವೆಂಕಟ್ ಅನೇಕ ಬಾರಿ ಜನರ ಎದುರು ಕಣ್ಣೀರು ಹಾಕಿದ್ದ ಉದಾಹರಣೆಗಳಿವೆ.
First published:
June 8, 2020, 12:54 PM IST