• Home
 • »
 • News
 • »
 • entertainment
 • »
 • Video Viral: ‘ಏಕ್​ ಲವ್​ ಯಾ‘ ಟ್ರೇಲರ್​ನಲ್ಲಿ ರಚಿತಾ ರಾಮ್ ಲಿಪ್​ ಕಿಸ್​​; ಥೂ ಎಂದ ಹುಚ್ಚ ವೆಂಕಟ್​

Video Viral: ‘ಏಕ್​ ಲವ್​ ಯಾ‘ ಟ್ರೇಲರ್​ನಲ್ಲಿ ರಚಿತಾ ರಾಮ್ ಲಿಪ್​ ಕಿಸ್​​; ಥೂ ಎಂದ ಹುಚ್ಚ ವೆಂಕಟ್​

 ರಚಿತಾ ರಾಮ್, ಹುಚ್ಚಾ ವೆಂಕಟ್

ರಚಿತಾ ರಾಮ್, ಹುಚ್ಚಾ ವೆಂಕಟ್

ಇತ್ತೀಚೆಗೆ ಪ್ರೇಮ್​ ನಿರ್ದೇಶನದ ‘ಏಕ್​ ಲವ್​ ಯಾ‘ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿತ್ತು. ಟ್ರೇಲರ್​ನಲ್ಲಿ ನಟಿ ರಚಿತಾ ರಾಮ್​ ಕಿಸ್​ ಮಾಡುವ ಮತ್ತು ಸಿಗರೇಟ್​ ಸೇದುವ ದೃಶ್ಯಗಳು ಇದ್ದವು. ಇದನ್ನು ವಿರೋಧಿಸಿ ಹುಚ್ಚ ವೆಂಕಟ್​ ರಚಿತಾ ರಾಮ್​ರನ್ನು ತರಾಟೆ ತೆಗೆದುಕೊಂಡಿದ್ದಾರೆ.

 • Share this:

  ಸ್ಯಾಂಡಲ್​ವುಡ್​ ನಟ ಹುಚ್ಚ ವೆಂಕಟ್​ ನಟಿ ರಚಿತಾ ರಾಮ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.


  ಇತ್ತೀಚೆಗೆ ಪ್ರೇಮ್​ ನಿರ್ದೇಶನದ ‘ಏಕ್​ ಲವ್​ ಯಾ‘ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿತ್ತು. ಟ್ರೇಲರ್​ನಲ್ಲಿ ನಟಿ ರಚಿತಾ ರಾಮ್​ ಕಿಸ್​ ಮಾಡುವ ಮತ್ತು ಸಿಗರೇಟ್​ ಸೇದುವ ದೃಶ್ಯಗಳು ಇದ್ದವು. ಇದನ್ನು ವಿರೋಧಿಸಿ ಹುಚ್ಚ ವೆಂಕಟ್​ ರಚಿತಾ ರಾಮ್​ರನ್ನು ತರಾಟೆ ತೆಗೆದುಕೊಂಡಿದ್ದಾರೆ.


  ಈ ಕುರಿತಾಗಿ ಹುಚ್ಚ ವೆಂಕಟ್​ ಯ್ಯೂಟೂಬ್​ನಲ್ಲಿ ವಿಡಿಯೋವನ್ನು ಅಪ್ಲೋಡ್​ ಮಾಡಿದ್ದಾರೆ. ವಿಡಿಯೋದಲ್ಲಿ ಈ ವಿಡಿಯೋ ರಚಿತಾ ರಾಮ್​​ ಎಂದು ಹೇಳುತ್ತ, ಯಾಕ್ರೀ ಈ ರೀತಿಯ ಪಾತ್ರಗಳನ್ನು ಮಾಡಿ ಜನರನ್ನು ಹಾಳು ಮಾಡ್ತೀರಾ. ನೀವು ಸಿಗರೇಟ್​ ಸೇದಿದ್ದೀರಾ. ಲಿಪ್​ ಕಿಸ್​ ಮಾಡಿದ್ದೀರಾ. ಇದರಿಂದ ಏನಾಗುತ್ತೆ?. ಥಿಯೇಟರ್​ನಲ್ಲಿ ಹೆಣ್ಣು ಮಕ್ಕಳಿಗೆ ಕೂತು ಸಿನಿಮಾನೋಡಲು ಮುಜುಗರ ಆಗುತ್ತದೆ ಎಂದು ಹೇಳಿದ್ದಾರೆ.
  ನಂತರ ಮಾತು ಮುಂದುವರಿಸಿದ ಅವರು ಎಲ್ಲವನ್ನು ನಿರ್ದೇಶಕರ ತಲೆ ಮೇಲೆ ಹಾಕುತ್ತೀರಾ. ನಿಮ್ಮ ಒಪ್ಪಿಗೆ ಇಲ್ಲದೆ ನಿರ್ದೇಶಕರು ಸಿನಿಮಾ ಮಾಡಲ್ಲ. ನಿಮ್ಮ ಟ್ಯಾಲೆಂಟ್​ ಈ ರೀತಿ ಯಾಕೆ ತೋರಿಸ್ತೀರಾ?. ಕನ್ನಡ ಇಂಡಸ್ಟ್ರಿ ಅಂದರೆ ಅಶ್ಲೀಲ ಇಲ್ಲದಂತಿತ್ತು. ಇಂದು ಹೇಗಾಗಿದೆ ನೋಡಿ ಎಂದು ಹುಚ್ಚವೆಂಕಟ್​ ವಿಡಿಯೋದಲ್ಲಿ ಹೇಳಿದ್ದಾರೆ.


  ಪ್ರೇಮ್​ ನಿರ್ದೇಶನದ ಏಕ್​ ಲವ್​ ಯಾ ಸಿನಿಮಾದಲ್ಲಿ ರಕ್ಷಿತ್​ ಪ್ರೇಮ್​ ತಮ್ಮ ರಾಣಾ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ಡಿಂಪಲ್​ ಕ್ವೀನ್​ ರಚಿತಾ ರಾಮ್​ ಮತ್ತು ಕೊಡಗಿನ ಯುವ ನಟಿ ರೀಷ್ಮಾ ಅಭಿನಯಿಸಿದ್ದಾರೆ.


  ಇದನ್ನೂ ಓದಿ: ಬುರ್ಖಾ ಧರಿಸಿಕೊಂಡು ಈ ಆಸೆ ಈಡೇರಿಸಿಕೊಳ್ಳುತ್ತೇನೆ ಎಂದ ರಶ್ಮಿಕಾ ಮಂದಣ್ಣ; ಅಂಥದ್ದೇನು ಆಸೆ ಆಕೆಯದ್ದು?


  ಇದನ್ನೂ ಓದಿ: ಬೇಸಿಗೆಯಲ್ಲಿ ದಚ್ಚು-ಕಿಚ್ಚ-ಅಪ್ಪು-ಧ್ರುವ ಸಿನಿಮಾಗಳದ್ದೇ ಕಾರುಬಾರು; ಬಿಡುಗಡೆಗೆ ಸಜ್ಜಾಗಿ ನಿಂತಿವೆ ಸ್ಟಾರ್​ಗಳ​​ ಸಿನಿಮಾ!

  Published by:Harshith AS
  First published: