• Home
  • »
  • News
  • »
  • entertainment
  • »
  • Ponniyin Selvan: ಸೌತ್​ನ ಟಾಪ್ ಡೈರೆಕ್ಟರ್ ಮಣಿರತ್ನಂ ಸಿನಿಮಾದಲ್ಲಿ ಹುಬ್ಬಳ್ಳಿ ಹುಡುಗ!

Ponniyin Selvan: ಸೌತ್​ನ ಟಾಪ್ ಡೈರೆಕ್ಟರ್ ಮಣಿರತ್ನಂ ಸಿನಿಮಾದಲ್ಲಿ ಹುಬ್ಬಳ್ಳಿ ಹುಡುಗ!

ಮಣಿರತ್ನಂ ಚಿತ್ರಕ್ಕೆ ಹುಬ್ಬಳ್ಳಿ ಹುಡುಗನ ಅಸಿಸ್ಟಂಟ್ ಕಲಾ ನಿರ್ದೇಶನ

ಮಣಿರತ್ನಂ ಚಿತ್ರಕ್ಕೆ ಹುಬ್ಬಳ್ಳಿ ಹುಡುಗನ ಅಸಿಸ್ಟಂಟ್ ಕಲಾ ನಿರ್ದೇಶನ

ಹುಬ್ಬಳ್ಳಿಯ ಹುಡುಗ ವಿಶಾಲ್ ಅಬಾನಿ, ಪೂಣಾ ಫಿಲ್ಮಂ ಇನ್​ಸ್ಟಿಟ್ಯೂಟ್​ ನಲ್ಲಿಯೇ ಆರ್ಟ್ ಡೈರೆಕ್ಷನ್ ಮತ್ತು ಪ್ರೋಡಕ್ಷನ್ ಡಿಸೈನಿಂಗ್ ಕಲಿಯುತ್ತಿರೋ ಈ ಸಮಯದಲ್ಲಿ ಇಲ್ಲಿಗೆ ಬಂದ ಗೆಸ್ಟ್​ ಫೆಕಲ್ಟಿ ಸಹಾಯದಿಂದ ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ ಚಿತ್ರಕ್ಕೆ ಅಸಿಸ್ಟಂಟ್ ಆರ್ಟ್ ಡೈರೆಕ್ಟರ್ ಆಗೋ ಅವಕಾಶ ಪಡೆದಿದ್ದಾರೆ.

ಮುಂದೆ ಓದಿ ...
  • Share this:

ಕಲೆ ಅನ್ನೋದು (Art) ಯಾರ ಸ್ವತ್ತು ಅಲ್ಲ. ಅದು ಎಲ್ಲರಿಗೂ ಒಲಿಯೋದು ಇಲ್ಲ. ಒಲಿದರೆ ಅದು ಎಂತವರನ್ನು ಉತ್ತುಂಗಕ್ಕೆ ತೆಗೆದುಕೊಂಡು ಹೋಗುತ್ತದೆ. ಅದೇ ಕಲೆ ಕಲಾ ನಿರ್ದೇಶನದ (Art Direction) ವಿಚಾರದಲ್ಲೂ ಅಷ್ಟೇನೆ, ಲಕ್ ಹುಡುಕಿಕೊಂಡು ಬರುತ್ತದೆ. ಹುಬ್ಬಳ್ಳಿಯ ಹುಡುಗ ವಿಶಾಲ್ ಅಬಾನಿ (Hubballi Boy Vishal Abani) ಆ ಲಕ್ಕಿ ಪಡೆದ ಯುವ ಅಸಿಸ್ಟಂಟ್ ಕಲಾ ನಿರ್ದೇಶಕ. ಈತನ ಲಕ್ ನೋಡಿದ್ರೆ ಎಂತಹವರೂ ಆಶ್ಚರ್ಯ ಪಡುತ್ತಾರೆ. ನಿಜ, ಇಂದು ಎಲ್ಲೆಡೆ ರಿಲೀಸ್ ಆಗುತ್ತಿರೋ ಮಣಿರತ್ನಂ ನಿರ್ದೇಶನ ಪೊನ್ನಿಯಿನ್ ಸೆಲ್ವನ್ (Ponniyin Selvan) ಸಿನಿಮಾ ತನ್ನ ಸೆಟ್ ಡಿಸೈನಿಂಗ್​ನಿಂದಲು ಗಮನ ಸೆಳೆದಿದೆ. ಅದೇ ಸೆಟ್ ವರ್ಕ್​ ಗಳಲ್ಲಿ ಅಸಿಸ್ಟಂಟ್ ಕಲಾ ನಿರ್ದೇಶಕನಾಗಿಯೇ ಈ ಯುವಕ ವಿಶಾಲ್ ಕೆಲಸ ಮಾಡಿದ್ದಾನೆ.


ಪೊನ್ನಿಯಿನ್ ಸೆಲ್ವನ್ ಒಂದು ಬಹು ಕೋಟಿ ಸಿನಿಮಾ. ಅದರಲ್ಲೂ ಚೋಳರಕಾಲದ ಚಿತ್ರವೂ ಆಗಿದೆ. ಇದೇ ಚಿತ್ರದ ತಯಾರಿಕೆಯಲ್ಲಿ ಸಾವಿರಾರು ಜನ ಕೆಲಸ ಮಾಡಿರುತ್ತಾರೆ. ಎಲ್ಲ ವಿಭಾಗದಲ್ಲೂ ಅನೇಕರು ತೊಡಗಿಕೊಂಡಿರುತ್ತಾರೆ.


ಆಗಲೇ ಈ ಚಿತ್ರಕ್ಕೆ ಆ ಕಾಲದ ನೈಜತೆ ಬರೋಕೆ ಸಾಧ್ಯವಾಗುತ್ತದೆ. ಅದರಲ್ಲೂ ಸೆಟ್ ವರ್ಕ್​ ಅನ್ನೋದು ಇದೇ ಅಲ್ವೇ, ಅದು ಒಂದು ರೀತಿ ಎಲ್ಲ ಕಲಾ ನಿರ್ದೇಶಕರಿಗೂ ಒಂದು ಚಾಲೆಂಜಿಂಗ್ ಕೆಲಸವೇ ಆಗಿದೆ.


ಮಣಿರತ್ನಂ ಚಿತ್ರದಲ್ಲಿ ಹುಬ್ಬಳ್ಳಿ ಹುಡುಗನ ಅಸಿಸ್ಟಂಟ್ ಆರ್ಟ್ ಡೈರೆಕ್ಷನ್
ಹುಬ್ಬಳ್ಳಿಯ ಹುಡುಗ ವಿಶಾಲ್ ಅಬಾನಿ ಇಂತಹ ಒಂದು ದೊಡ್ಡ ಪ್ರೋಜೆಕ್ಟ್ ನಲ್ಲಿ ಕೆಲಸ ಮಾಡೋಕೆ ಅವಕಾಶ ಪಡೆದಿರೋದೇ ವಿಶೇಷ. ಪೂಣಾ ಫಿಲ್ಮಂ ಇನ್​ಸ್ಟಿಟ್ಯೂಟ್​ ನಲ್ಲಿಯೇ ಆರ್ಟ್ ಡೈರೆಕ್ಷನ್ ಮತ್ತು ಪ್ರೋಡಕ್ಷನ್ ಡಿಸೈನಿಂಗ್ ಕಲಿಯುತ್ತಿದ್ದಾರೆ.


Hubballi Young Art Director Work As Asistant Art Director for Director Mani Ratnam Ponniyin Selvan Film
ಹುಬ್ಬಳ್ಳಿಯ ಹುಡುಗ ಅಸಿಸ್ಟಂಟ್ ಕಲಾ ನಿರ್ದೇಶಕ ವಿಶಾಲ್ ಅಬಾನಿ


ಆಗಲೇ ಇಲ್ಲಿಗೆ ಬಂದ ಗೆಸ್ಟ್​ ಫೆಕಲ್ಟಿ ಸಹಾಯದಿಂದ ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ ಚಿತ್ರಕ್ಕೆ ಅಸಿಸ್ಟಂಟ್ ಆರ್ಟ್ ಡೈರೆಕ್ಟರ್ ಆಗೋ ಅವಕಾಶ ಪಡೆದಿದ್ದಾರೆ.
ಈ ಮೂಲಕ ಚಿತ್ರದ ಪ್ರೋಡಕ್ಷನ್ ಡಿಸೈನರ್ ತೋಟಾ ತರಾನಿ, ಕಲಾ ನಿರ್ದೇಶಕ ಅನಿಲ್ ಜಾದವ್ ಅವರ ಅಸಿಸ್ಟಂಟ್ ಕಲಾ ನಿರ್ದೇಶಕನಾಗಿಯೇ ವಿಶಾಲ್ ಅಬಾನಿ ಕೆಲಸ ಮಾಡಿದ್ದಾರೆ. ಚೋಳರ ಕಾಲದ ಚಿತ್ರಕ್ಕೆ ಅಸಿಸ್ಟಂಟ್ ಕಲಾ ನಿರ್ದೇಶಕನಾಗಿ ಕೆಲಸ ಮಾಡೋ ಅನುಭವ ನಿಜಕ್ಕೂ ಅನನ್ಯ ಅಂತಾರೆ ವಿಶಾಲ್.


ಪೊನ್ನಿಯಿನ್ ಸೆಲ್ವನ್ ಚಿತ್ರದ ಕಲಾ ನಿರ್ದೇಶನದ ಅನುಭವ ಹೇಗಿತ್ತು?
ರಾಮೋಜಿರಾವ್ ಫಿಲ್ಮಂ ಸಿಟಿಯಲ್ಲೂ ಈ ಚಿತ್ರಕ್ಕಾಗಿಯೇ ಸೆಟ್ ನಿರ್ಮಾಣಗೊಂಡಿತ್ತು. ಅಲ್ಲಿ ಚಿತ್ರಕ್ಕಾಗಿಯೇ ಒಂದು ಮಾರ್ಕೆಟ್ ಸೆಟ್ ಅನ್ನ ನಾವು ಹಾಕಿದ್ದೇವು. ಆದರೆ ಇದನ್ನ ಹಾಕೋದು ಅಷ್ಟು ಸುಲಭವಾಗಿರಲಿಲ್ಲ. ಆ ಕಾಲದ ವಸ್ತುಗಳನ್ನ ಹುಡುಕೋದೇ ಒಂದು ದೊಡ್ಡ ಚಾಲೆಂಜ್ ಆಗಿತ್ತು ನೋಡಿ.


ಇದನ್ನೂ ಓದಿ; Allu Arjun: ಗೋಲ್ಡನ್ ಟೆಂಪಲ್‌ನಲ್ಲಿ ಅಲ್ಲು ಅರ್ಜುನ್ ಫ್ಯಾಮಿಲಿ! ಫೋಟೋಸ್ ಇಲ್ಲಿವೆ ನೋಡಿ


ಆಗಿನ ವಸ್ತುಗಳು ಈಗ ಸಿಗೋದು ಅಪರೂಪವೇ ಸರಿ. ಆದರೂ ಆ ಕಾಲದ ಮಾರ್ಕೆಟ್ ಅನ್ನ ರೆಡಿ ಮಾಡಿಸಿಯೇ ಬಿಟ್ಟೇವು. ನಾನು ಮತ್ತು ನನ್ನ ಜೊತೆಗೆ ಇನ್ನೂ ಒಬ್ಬ ಅಸಿಸ್ಟಂಟ್ ಕಲಾ ನಿರ್ದೇಶಕ ಇದ್ದರು. ನಾವು ಒಟ್ಟಿಗೇನೆ ಇಲ್ಲಿ ಕೆಲಸ ಮಾಡಿದ್ದೇವೆ.


ವಾರ್ ಸೀನ್ ತೆಗೆಯೋವಾಗ ಪ್ರತಿ ದಿನವೂ ಕತ್ತಿ-ಗುರಾಣಿ ಡ್ಯಾಮೇಜ್
ಆದರೆ ಮಧ್ಯ ಪ್ರದೇಶದಲ್ಲೂ ಸಿನಿಮಾ ಚಿತ್ರೀಕರಣ ಆಗಿದೆ. ಅಲ್ಲೂ ನಾನು ಹೋಗಿದ್ದೆ. ಅಲ್ಲೂ ಕೂಡ ಕಲಾ ನಿರ್ದೇಶನದ ಹಲವು ಅನುಭವಗಳು ಆದವು. ಪೊನ್ನಿಯಿನ್ ಸೆಲ್ವನ್ ಸಿನಿಮಾದಲ್ಲಿ ವಾರ್ ಜಾಸ್ತಿ ಇದೆ.


ಇದರಿಂದ ಪ್ರತಿ ದಿನ ಕತ್ತಿ ತಯಾರಿಸೋ ಪರಿಸ್ಥಿತಿ ಬರುತ್ತಿತ್ತು. ಪ್ರತಿ ಸೀನ್​ನಲ್ಲೂ ಕತ್ತಿನೋ, ಗುರಾಣಿನೋ ಹಾಳಾಗಿ ಹೋಗುತ್ತಿದ್ದವು. ಅವುಗಳನ್ನ ರೆಡಿ ಮಾಡೋ ಕೆಲಸ ನಮ್ಮದೇ ಆಗಿತ್ತು.


Hubballi Young Art Director Work As Asistant Art Director for Director Mani Ratnam Ponniyin Selvan Film
ಪೊನ್ನಿಯಿನ್ ಸೆಲ್ವನ್ ಸೆಟ್ ವರ್ಕ್ ಟೈಮ್​ ನಲ್ಲಿ ವಿಶಾಲ್ ಅಬಾನಿ


ಪೊನ್ನಿಯಿನ್ ಸೆಲ್ವನ್ ಚಿತ್ರಕ್ಕಾಗಿಯೇ ರಾಮೋಜಿರಾವ್ ಫಿಲ್ಮಂ ಸಿಟಿಯಲ್ಲಿ ಬಾಂಬು ಸೆಟ್ ಅನ್ನೂ ಹಾಕಿದ್ದೇವು. ಇಲ್ಲಿ ವಾರ್ ಸೀನ್ ಬೇರೆ ಇತ್ತು. ಈ ಸಮಯದಲ್ಲಂತೂ ಸಿಕ್ಕಾಪಟ್ಟೆ ತೊಂದರೆ ಕೂಡ ಆಯಿತು ಅಂತಲೇ ಅಸಿಸ್ಟಂಟ್ ಕಲಾ ನಿರ್ದೇಶಕ ವಿಶಾಲ್ ಅಬಾನಿ ಹೇಳಿಕೊಂಡಿದ್ದಾರೆ.


ಇದನ್ನೂ ಓದಿ: Renu Desai: 19 ವರ್ಷದ ಬಳಿಕ ಬಣ್ಣ ಹಚ್ಚಿದ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ, ಹೋರಾಟಗಾರ್ತಿ ಪಾತ್ರದಲ್ಲಿ ಕಮ್ ಬ್ಯಾಕ್


ಕಲಾ ನಿರ್ದೇಶನದಲ್ಲಿಯೇ ಮುಂದುವರೆಯಬೇಕು ಅನ್ನೋ ವಿಶಾಲ್ ಅಬಾನಿ ಕೆಲಸ ಮಾಡಿದ ಪೊನ್ನಿಯಿನ್ ಸೆಲ್ವನ್ ಸಿನಿಮಾ, ಸೆಪ್ಟೆಂಬರ್-30 ರಂದು ಎಲ್ಲೆಡೆ ರಿಲೀಸ್ ಆಗುತ್ತಿದೆ. ಇಂತಹ ದೊಡ್ಡ ಸಿನಿಮಾದಲ್ಲಿ ಹುಬ್ಬಳ್ಳಿಯ ಹುಡುಗ ವಿಶಾಲ್ ಅಬಾನಿ ಕೆಲಸ ಮಾಡಿದ್ದಾನೇ ಅನ್ನೋದೇ ಇಲ್ಲಿ ಜನರ ಹೆಮ್ಮೆ.

First published: