kannadiga of the 2018

ಗುರುತಿಸಲಾಗದ ವೇಶದಲ್ಲಿ ಹೃತಿಕ್​: ವೈರಲ್​ ಆದ ಫೋಟೋಗಳು

news18
Updated: February 13, 2018, 6:00 PM IST
ಗುರುತಿಸಲಾಗದ ವೇಶದಲ್ಲಿ ಹೃತಿಕ್​: ವೈರಲ್​ ಆದ ಫೋಟೋಗಳು
news18
Updated: February 13, 2018, 6:00 PM IST
ನ್ಯೂಸ್​ 18 ಕನ್ನಡ

ನಟ ಹೃತಿಕ್​ ರೋಷನ್​ ಸದ್ಯ ‘ಸೂಪರ್​ 30’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾಕ್ಕಾಗಿ ಹೃತಿಕ್​ ಪಡುತ್ತಿರುವ ಶ್ರಮ ಈ ಚಿತ್ರ ಫಸ್ಟ್ ಲುಕ್​ನಲ್ಲೇ ಕಾಣಬಹುದು. ಆದರೆ ಈಗ ಈ ಸಿನಿಮಾದ ಚಿತ್ರೀಕರಣದ ವೇಳೆ ತೆಗೆಯಲಾಗಿರುವ ಪೋಟೋಗಳು ವೈರಲ್​ ಆಗಿವೆ. ಕಾರಣ ಈ ಫೋಟೋಗಳಲ್ಲಿ ಹೃತಿಕ್​ ಅವರನ್ನು ಗುರುತಿಸುವುದು ಕಷ್ಟವಾಗುತ್ತಿದೆ.

ನೀಲಿ ಬಣ್ಣದ ಶರ್ಟ್​ ಹಾಗೂ ಬೂದು ಬಣ್ಣದ ಪ್ಯಾಂಟ್ ತೊಟ್ಟಿರುವ ಹೃತಿಕ್​ ಅವರ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಹೃತಿಕ್​ ಅವರ ಫೋಟೋಗಳನ್ನು ನೋಡಿದರೆ, ಇ ಸಿನಿಮಾಗಾಗಿ ಅವರು ಪಡುತ್ತಿರುವ ಶ್ರಮದ ಅರಿವಾಗುತ್ತದೆ. ಸದ್ಯ ಚಿತ್ರದ ಚಿತ್ರೀಕರಣ ಲಕ್ನೊದಲ್ಲಿ ನಡೆಯುತ್ತಿದೆ.

ಬಿಹಾರದಲ್ಲಿ ವಾಸಿಸುವ ಪ್ರೊ.ಆನಂದ್​ ಅವರ ಜೀವನಾಧಾರಿತ ಚಿತ್ರವೇ ‘ಸೂಪರ್​ 30’. ಇದರಲ್ಲಿ ಹೃತಿಕ್​ ಆನಂದ್​ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಆನಂದ್​ ಪಾತ್ರಕ್ಕೆ ತಕ್ಕಂತೆ ಲುಕ್​ ಬದಲಾಯಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಹೃತಿಕ್​ ಭಾಷೆ ಹಾಗೂ ಅಭಿನಯದಲ್ಲಿ ತಮ್ಮನ್ನ ತಾವು ಸಾಬೀತು ಪಡಿಸುತ್ತಾರಾ ಎಂದು ಕಾದು ನೋಡಬೇಕಿದೆ.

 
First published: February 13, 2018
ಮತ್ತಷ್ಟು ವೀಕ್ಷಿಸಿ ಮುಂದಿನ ಸುದ್ದಿ