Bollywood: ಒಂದೇ ಚಿತ್ರದಲ್ಲಿ ಹೃತಿಕ್, ಸಲ್ಮಾನ್, ಶಾರುಖ್! ಯಾವ ಸಿನಿಮಾ ಗೊತ್ತಾ? ಅಭಿಮಾನಿಗಳು ದಿಲ್ ಖುಷ್!

ಪಠಾಣ್ ಎಂಬ ಪಾತ್ರದಲ್ಲಿ ಶಾರುಖ್ ಖಾನ್, ಟೈಗರ್ ಎಂಬ ಪಾತ್ರದಲ್ಲಿ ಸಲ್ಮಾನ್ ಖಾನ್ ಮತ್ತು ಕಬೀರ್ ಎಂಬ ಪಾತ್ರದಲ್ಲಿ ಹೃತಿಕ್ ರೋಷನ್ ಒಟ್ಟಿಗೆ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರಂತೆ

ಸಲ್ಮಾನ್​, ಹೃತಿಕ್, ಶಾರುಕ್

ಸಲ್ಮಾನ್​, ಹೃತಿಕ್, ಶಾರುಕ್

  • Share this:

ಬಾಲಿವುಡ್‌ (Bollywood) ನಲ್ಲಿ ಸಾಮಾನ್ಯವಾಗಿ ಇಬ್ಬರು ನಟರು ಒಂದೇ ಸಿನಿಮಾದಲ್ಲಿ ನಟಿಸುವುದನ್ನು ನಾವೆಲ್ಲರೂ ನೋಡಿರುತ್ತೇವೆ, ಆದರೆ ಮೂವರು ದಿಗ್ಗಜ ನಟರು ಒಂದೇ ಚಿತ್ರದಲ್ಲಿ ನಟಿಸುವುದು ತುಂಬಾನೇ ಅಪರೂಪ ಎಂದು ಹೇಳಬಹುದು. ಅದರಲ್ಲೂ ತುಂಬಾನೇ ಜನಪ್ರಿಯ ನಟರಾದ ಶಾರುಖ್ ಖಾನ್ (Shah Rukh khan) ಮತ್ತು ಸಲ್ಮಾನ್ ಖಾನ್ (Salman khan) ಒಟ್ಟಿಗೆ ಒಂದೇ ಚಿತ್ರದಲ್ಲಿ ಕಾಣಿಸಿಕೊಂಡು ತುಂಬಾನೇ ವರ್ಷಗಳಾಯ್ತು ಎಂದರೆ ತಪ್ಪಾಗುವುದಿಲ್ಲ. ಇವರಿಬ್ಬರ ಅಭಿಮಾನಿಗಳು (Fans) ಇವರ ಜೋಡಿಯನ್ನು ತೆರೆಯ ಮೇಲೆ ಒಟ್ಟಾಗಿ ನೋಡಲು ಕಾತುರದಿಂದ ಕಾಯುತ್ತಿರುತ್ತಾರೆ.


ಇಲ್ಲಿ ಮೂರನೆಯ ನಟ ಯಾರು ಇವರಿಬ್ಬರ ಜೊತೆ ನಟಿಸಲಿದ್ದಾರೆ ಎಂದು ನಿಮಗೆ ಪಶ್ನೆಯೊಂದು ಮೂಡಬಹುದು. ಬನ್ನಿ ಹಾಗಾದರೆ ಆ ಮೂರನೆಯ ನಟ ಯಾರು ಎನ್ನುವುದನ್ನು ತಿಳಿದುಕೊಳ್ಳೋಣ.


ಒಂದೇ ಚಿತ್ರದಲ್ಲಿ ಶಾರುಖ್, ಸಲ್ಮಾನ್,  ಹೃತಿಕ್​

ಪಠಾಣ್ ಎಂಬ ಪಾತ್ರದಲ್ಲಿ ಶಾರುಖ್ ಖಾನ್, ಟೈಗರ್ ಎಂಬ ಪಾತ್ರದಲ್ಲಿ ಸಲ್ಮಾನ್ ಖಾನ್ ಮತ್ತು ಕಬೀರ್ ಎಂಬ ಪಾತ್ರದಲ್ಲಿ ಹೃತಿಕ್ ರೋಷನ್ ಒಟ್ಟಿಗೆ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎಂಬುದರ ಬಗ್ಗೆ ವ್ಯಾಪಕ ಊಹಾಪೋಹಗಳು ಈಗ ಬಾಲಿವುಡ್‌ನಲ್ಲಿ ಹರಿದಾಡುತ್ತಿವೆ.


ಇದನ್ನೂ ಓದಿ: Shah Rukh Khan: ಮತ್ತೆ ಸೋಶಿಯಲ್ ಮೀಡಿಯಾಗೆ ಎಂಟ್ರಿ ಕೊಟ್ಟ ಬಾಲಿವುಡ್ ಬಾದ್‌ಷಾ

ನಟ ಹೃತಿಕ್ ರೋಷನ್ ಪಠಾಣ್ ಅಥವಾ ಟೈಗರ್ 3 ಚಿತ್ರಗಳಲ್ಲಿ ಕಾಣಿಸಿಕೊಳ್ಳಬಹುದು ಎಂದು ಚಿತ್ರೋದ್ಯಮವು ಊಹಿಸುತ್ತಿರುವಾಗಲೇ, ಈ ಮೂವರು ನಟರು ಒಂದೇ ಸಿನಿಮಾದಲ್ಲಿ ಒಟ್ಟಿಗೆ ನಟಿಸಲಿದ್ದಾರೆ ಎಂದು ಊಹಾಪೋಹ ಬಲವಾಗಿ ಹರಿದಾಡುತ್ತಿವೆ.


ಪಠಾಣ್ ಮತ್ತು ಟೈಗರ್ 3 ಸ್ಕ್ರಿಪ್ಟ್ ನಲ್ಲಿ ಏನಿದೆ?

ಮೂಲವೊಂದು ಬಹಿರಂಗ ಪಡಿಸಿದ ಹಾಗೆ "ಪಠಾಣ್ ಮತ್ತು ಟೈಗರ್ 3ರ ಸ್ಕ್ರಿಪ್ಟ್ ನಲ್ಲಿ ಏನಿದೆ ಎಂದು ತಿಳಿದಿರುವ ಎಲ್ಲರಿಗೂ ಹೃತಿಕ್ ರೋಷನ್ ಪಾತ್ರ ಕಬೀರ್ ಈ ಯಾವುದೇ ಚಿತ್ರಗಳಲ್ಲಿ ಕಾಣಿಸಲು ಸಿಗುವುದಿಲ್ಲ ಎಂಬುದು ಈಗಾಗಲೇ ಸ್ಪಷ್ಟವಾಗಿ ತಿಳಿದಿರುತ್ತದೆ. ಹೌದು. ಆದಿತ್ಯ ಚೋಪ್ರಾ ಕಾರ್ಯತಂತ್ರಾತ್ಮಕವಾಗಿ ತಮ್ಮ ಸ್ಪೈ ಫ್ರ್ಯಾಂಚೈಸ್ ಅನ್ನು ನಿರ್ಮಿಸುತ್ತಿದ್ದಾರೆ ಮತ್ತು ಸಲ್ಮಾನ್ ಖಾನ್, ಹೃತಿಕ್ ರೋಷನ್ ಮತ್ತು ಶಾರುಖ್ ಖಾನ್ ಟೈಗರ್, ಪಠಾಣ್ ಮತ್ತು ಕಬೀರ್ ಅವರು ‘ವಾರ್ 2’ ಚಿತ್ರವಾದ ನಂತರವೇ ಪರಸ್ಪರ ಭೇಟಿಯಾಗುವುದು” ಎಂದು ಹೇಳಿದ್ದಾರೆ.


ಇದನ್ನೂ ಓದಿ:  Kapil Sharma Show: ಶಾರುಖ್‌ ಖಾನ್‌ಗೆ ಕರೆ ಮಾಡಿ ಕೊಡಿ: ಅಭಿಮಾನಿ ಕೋರಿಕೆಗೆ ನಟ ಅಕ್ಷಯ್ ಕುಮಾರ್‌ ಪ್ರತಿಕ್ರಿಯೆ ಹೀಗಿದೆ..

ಆದಿತ್ಯ ಚೋಪ್ರಾ ಅವರ ‘ಸ್ಪೈ ಯೂನಿವರ್ಸ್’ ಚಿತ್ರವೂ ನಂಬಲಾಗದಷ್ಟು ರೋಮಾಂಚನಕಾರಿಯಾಗಿ ಕಾಣುತ್ತಿದೆ, ಏಕೆಂದರೆ ಇದರಲ್ಲಿ ಮೊಟ್ಟ ಮೊದಲ ಬಾರಿಗೆ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಎದುರು ಕತ್ರಿನಾ ಕೈಫ್ ಮತ್ತು ದೀಪಿಕಾ ಪಡುಕೊಣೆ ಅವರಂತಹ ನಾಯಕಿಯರು ನಟಿಸಲಿದ್ದಾರೆ.  ಭಾರತೀಯ ಸಿನಿಮಾದ ಇತಿಹಾಸದಲ್ಲಿ ಮೂವರು ದೊಡ್ಡ ಸೂಪರ್ ಸ್ಟಾರ್‌ಗಳು ಒಗ್ಗೂಡಿದಾಗ ಯಶ್ ರಾಜ್ ಫಿಲ್ಮ್ಸ್ ಪ್ರೇಕ್ಷಕರಿಗೆ ಮನೋರಂಜನೆಯ ಸಿಹಿ ಊಟವನ್ನು ಉಣ ಬಡಿಸಲಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.


ಇದರಲ್ಲಿ ರೋಮಾಂಚನಕಾರಿ ಸಂಗತಿಯೆಂದರೆ, ಪಠಾಣ್ ಮತ್ತು ಟೈಗರ್ 3 ಎರಡು ಚಿತ್ರಗಳ ನಂತರ ‘ಸ್ಪೈ ಯೂನಿವರ್ಸ್’ ತೆರೆಗೆ ಬರುವುದು ಎಂದು ಈಗಾಗಲೇ ಊಹಾಪೋಹ ಹರಿದಾಡುತ್ತಿದೆ.


ಮೂವರನ್ನು ಒಂದೇ ಚಿತ್ರದಲ್ಲಿ ನೋಡಲು  ಕಾತುರ

ಈ ಮೂವರು ಸೂಪರ್ ಸ್ಟಾರ್‌ಗಳು ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಪ್ರೇಕ್ಷಕರಿಗೆ ಅವೆಂಜರ್ಸ್ ಎಂಡ್ ಗೇಮ್ ನೋಡಿದಂತೆ ಆಗುವುದು ಗ್ಯಾರಂಟಿ ಎಂದು ಆದಿತ್ಯ ಚೋಪ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರಂತೆ ಎಂದು ಮೂಲಗಳು ಹೇಳುತ್ತಿವೆ. ಈ ಚಿತ್ರ ತೆರೆಯ ಮೇಲೆ ಬರುವವವರೆಗೆ ಪ್ರೇಕ್ಷಕರು ಈ ಕ್ಷಣಕ್ಕಾಗಿ ಹಂಬಲಿಸುತ್ತಾ ಇರುತ್ತಾರೆ ಎನ್ನುವುದು ಸುಳ್ಳಲ್ಲ.


ಇದೀಗ, ಇದು ನಿರ್ಮಾಣ ಪ್ರಕ್ರಿಯೆಯಲ್ಲಿದ್ದು ಮತ್ತು ಇದು ಬಾಲಿವುಡ್‌ನ ಮೂವರು ದೈತ್ಯರನ್ನು ಒಟ್ಟುಗೂಡಿಸುವ ಚಿತ್ರವು ಇದಾಗಲಿದೆ ಎಂದು ಹೇಳಲಾಗುತ್ತಿದೆ.


ಈ ಮಧ್ಯೆ, ಪಠಾಣ್ ಮತ್ತು ಟೈಗರ್ 3 ಎರಡು ಚಿತ್ರಗಳು ನಿರ್ಮಾಣದ ಕೊನೆಯ ಹಂತದಲ್ಲಿವೆ. ಈ ಎರಡು ಚಿತ್ರಗಳಿಗೆ ಸಿದ್ಧಾರ್ಥ್ ಆನಂದ್ ಮತ್ತು ಮನೀಶ್ ಶರ್ಮಾ ನಾಯಕತ್ವ ವಹಿಸುತ್ತಿದ್ದಾರೆ. ಶೀಘ್ರದಲ್ಲಿಯೇ ಈ ಚಿತ್ರಗಳ ಬಿಡುಗಡೆಯ ದಿನಾಂಕವನ್ನು ಪ್ರಕಟಣೆ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

Published by:Pavana HS
First published: