Hrithik Workout Video: ವೈರಲ್​ ಆಗುತ್ತಿದೆ ಹೃತಿಕ್​ ರೋಷನ್​ರ ವರ್ಕೌಟ್ ವಿಡಿಯೋ..!

War: ವಾರ್​ ಚಿತ್ರದಲ್ಲಿ ಹೃತಿಕ್ ಎಂಟ್ರಿ ಸಖತ್ತಾಗಿದ್ದು, ಅವರು ಯಾವುದೇ ಹಾಲಿವುಡ್​ನ ಹೀರೋಗೂ ಕಡಿಮೆ ಇಲ್ಲ ಎಂಬಂತೆ ಮೂಡಿಬಂದಿದ್ದಾರೆ. ಪ್ರೇಕ್ಷಕರು ಬೆಳ್ಳಿ ಪರದೆ ಮೇಲೆ ಹೃತಿಕ್​ ಅವರನ್ನು ಬಿಟ್ಟ ಕಣ್ಣು ಬಿಟ್ಟಂತೆಯೇ ನೋಡುವಷ್ಟರ ಮಟ್ಟಿಗೆ ಹೃತಿಕ್​ ಮೇಕೋವರ್​ ಆಗಿದೆ.

Anitha E | news18-kannada
Updated:October 11, 2019, 3:05 PM IST
Hrithik Workout Video: ವೈರಲ್​ ಆಗುತ್ತಿದೆ ಹೃತಿಕ್​ ರೋಷನ್​ರ ವರ್ಕೌಟ್ ವಿಡಿಯೋ..!
ನಟ ಹೃತಿಕ್​ ರೋಷನ್​
Anitha E | news18-kannada
Updated: October 11, 2019, 3:05 PM IST
ಬಾಲಿವುಡ್ ಸೂಪರ್​ ಸ್ಟಾರ್  ಹೃತಿಕ್ ರೋಷನ್ 'ವಾರ್​' ಸಿನಿಮಾದಲ್ಲಿ ಹೇಗೆಲ್ಲ ಕಾಣಿಸಿಕೊಂಡಿದ್ದಾರೆ ಎಂದು ಹೊಸದಾಗಿ ಹೇಳಬೇಕಿಲ್ಲ. ತುಂಬಾ ಜನರಿಗೆ ಚಿತ್ರದ ಕತೆ ಇಷ್ಟವಾಗಲಿಲ್ಲ ಎಂದೂ ಹೃತಿಕ್​ ಕಾಣಿಸಿಕೊಂಡಿರುವ ರೀತಿಗೆ ಖುಷಿಯಾಗಿದ್ದಾರೆ.

ಹೌದು, 'ವಾರ್​ ಚಿತ್ರದಲ್ಲಿ ಹೃತಿಕ್ ಎಂಟ್ರಿ ಸಖತ್ತಾಗಿದ್ದು, ಅವರು ಯಾವುದೇ ಹಾಲಿವುಡ್​ನ ಹೀರೋಗೂ ಕಡಿಮೆ ಇಲ್ಲ ಎಂಬಂತೆ ಮೂಡಿಬಂದಿದ್ದಾರೆ. ಪ್ರೇಕ್ಷಕರು ಬೆಳ್ಳಿ ಪರದೆ ಮೇಲೆ ಹೃತಿಕ್​ ಅವರನ್ನು ಬಿಟ್ಟ ಕಣ್ಣು ಬಿಟ್ಟಂತೆಯೇ ನೋಡುವಷ್ಟರ ಮಟ್ಟಿಗೆ ಹೃತಿಕ್​ ಮೇಕೋವರ್​ ಆಗಿದೆ.

Hrithik Roshan Starrer movie earned more than 200 crore in just 8 days in Box Office 
'ವಾರ್​' ಸಿನಿಮಾದ ಪೋಸ್ಟರ್​


ಪ್ರೇಕ್ಷಕರು ಇಷ್ಟೆಲ್ಲ ಮೆಚ್ಚುಗೆಗೆ ಪಾತ್ರರಾಗುತ್ತಿರುವ ಹೃತಿಕ್​, ಅದಕ್ಕಾಗಿ ಸಿಕ್ಕಾಪಟ್ಟೆ ಕಷ್ಟಪಟ್ಟಿದ್ದಾರೆ. ಹೌದು, ಕಷ್ಟ ಎಂದರೆ ಅಷ್ಟಿಷ್ಟಲ್ಲ...  ಸುರಿ ಮಳೆಯನ್ನೇ ಸುರಿಸುವಷ್ಟರ ಮಟ್ಟಿಗೆ ಹೃತಿಕ್​ ತಮ್ಮ ಇದೇ ಜುಲೈನಲ್ಲಿ ತೆರೆಕಂಡ 'ಸೂಪರ್ 30' ಚಿತ್ರಕ್ಕಾಗಿ ಹೃತಿಕ್ ತಮ್ಮ ತೂಕ ಹೆಚ್ಚಿಸಿಕೊಂಡು ದಪ್ಪಗಾಗಿದ್ದರು.

Hrithik Roshan
'ಸೂಪರ್​ 30' ಸಿನಿಮಾದಲ್ಲಿ ಹೃತಿಕ್​


ಆದರೆ ಆ್ಯಕ್ಷನ್ ಸಿನಿಮಾ ವಾರ್​'ಗಾಗಿ ಅವರು  ಮತ್ತೆ ಬಮ್ಮ ದೇಹವನ್ನು ಹುರಿಗೊಳಿಸಿಕೊಳ್ಳಬೇಕಿತ್ತು. ಅದಕ್ಕಾಗಿ ಹೃತಿಕ್ ಹಲವು ತಿಂಗಳ ಕಾಲ ಪ್ರತಿದಿನ ವರ್ಕೌಟ್, ಡಯಟ್ ಮಾಡಿದ್ದಾರೆ. ಅವರು ದೇಹವನ್ನು ದಂಡಿಸಿದ ರೀತಿ ಹೇಗಿದೆ ಅಂತ ನೀವೇ ಈ ವಿಡಿಯೋದಲ್ಲಿ ನೋಡಿ...


Loading...

ಇದನ್ನೂ ಓದಿ: ಅರೆಬೆತ್ತಲೆಯಾಗಿ ಪೋಸ್​ ಕೊಟ್ಟ ನಟ: ಪ್ರಪೋಸ್​ ಮಾಡಲು ಹಿಂದೆ ಬಿದ್ದ ಹುಡುಗಿ..!

ಹೃತಿಕ್​ ಅವರ ಟ್ರಾನ್ಸ್​ಫಾರ್ಮೇಷನ್ ವಿಡಿಯೋ ಬಿಡುಗಡೆಯಾಗಿದ್ದು, ಹೃತಿಕ್‍ರ ಬದ್ಧತೆ ಎಲ್ಲರಿಗೂ ಇಷ್ಟವಾಗುತ್ತಿದೆ. ಈ ವಿಡಿಯೋ ನೋಡಿದವರೂ ಹೃತಿಕ್​ಗೆ ಭೇಷ್ ಎಂನ್ನುತ್ತಿದ್ದಾರೆ. ಈ ಸಿನಿಮಾ ಸಹ ಬಾಕ್ಸಾಫಿಸ್​ನಲ್ಲಿ ಕೇವಲ 8 ದಿನಗಳಲ್ಲಿ 200 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಈ ಚಿತ್ರದಲ್ಲಿ ಟೈಗರ್​ ಶ್ರಾಫ್​ ಹಾಗೂ ವಾಣಿ ಕಪೂರ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Madhubala: ಎವರ್​ಗ್ರೀನ್ ಸುಂದರಿ ಮಧುಬಾಲಾರನ್ನೇ ಹೋಲುವ ಸ್ಯಾಂಡಲ್​ವುಡ್​ ನಟಿ ಈಗ ಹೊಸ ಟಿಕ್ ಟಾಕ್ ಸ್ಟಾರ್


 



 
First published:October 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...