KGF Chapter 3 ಚಿತ್ರದಲ್ಲಿ ಹೃತಿಕ್ ರೋಷನ್? ಸ್ಪಷ್ಟನೆ ನೀಡಿದ ವಿಜಯ್ ಕಿರಗಂದೂರು

ಕೆಜಿಎಫ್ 3 ಚಿತ್ರದಲ್ಲಿ ಬಾಲಿವುಡ್ ಹ್ಯಾಂಡ್‌ಸಮ್ ಹಂಕ್ ಹೃತಿಕ್ ರೋಷನ್ ಅವರು ಅಭಿನಯಿಸಲಿದ್ದಾರೆ ಎಂಬ ಮಾಹಿತಿಯೊಂದು ಎಲ್ಲಡೆ ವೈರಲ್ ಆಗುತ್ತಿದೆ. ಇದನ್ನು ಕೇಳಿದ ಸಿನಿ ಪ್ರೇಮಿಗಳು ಸಕತ್ ಥ್ರಿಲ್ ಆಗಿದ್ದು, ಚಿತ್ರವು ಇನ್ನೊಂದು ಲೇವಲ್​ ಗೆ ಹೋಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಾಕಿಂಗ್ ಸ್ಟಾರ್ ಯಶ್ (rocking star Yash) ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಕಾಂಭಿನೇಷನ್​ ನ ಬ್ಲಾಕ್ ಬಸ್ಟರ್ ಕೆಜಿಎಫ್ ಚಾಪ್ಟರ್ 2 (KGF Chapter 2) ಸದ್ದು ಮಾಡಿದೆ. ಸರಣಿ ದಾಖಲೆಗಳನ್ನು ಮಾಡುವ ಮೂಲಕ, ಈಗಾಗಲೇ ಇದ್ದ ದಾಖಲೆಗಳನ್ನು ಪುಡಿ ಮಾಡಿದ ಸ್ಯಾಂಡಲ್​ವುಡ್​ (Sandalwood) ಹೆಮ್ಮೆಯ ಚಿತ್ರ ಕೆಜಿಎಫ್ ಎನ್ನಬಹುದು. ಇದರ ನಡುವೆ ಎಲ್ಲಡೆ ಕೆಜಿಎಫ್ 3 ಕುರಿತ ಚರ್ಚೆಗಳು ಆರಂಭವಾಗಿದೆ. ಚಿತ್ರದ ನಿರ್ಮಾಪಕ ವಿಜಯ್ ಕಿರಂಗದೂರು (Vijay Kirgandur) ಕೆಜಿಎಫ್ 3 ಕುರಿತು ಹೇಳಿಕೆ ನಂತರ ಕೆಜಿಎಫ್ 3 ಶೂಟಿಂಗ್ ಸಧ್ಯಕ್ಕಿಲ್ಲ ಎನ್ನುವ ಅಂಶ ಬಹಿರಂಗವಾಗಿದೆ. ಆದರೆ ಹೊಸದೊಂದು ಸುದ್ದಿ ಇದೀಗ ಗಾಂಧಿನಗರದ ಗಲ್ಲಿ ಗಲ್ಲಿಗಳಲ್ಲಿಯೂ ಹರಿದಾಡುತ್ತಿದ್ದು, ಇದರ ಕುರಿತು ಕಿರಂಗದೂರು ಸ್ಪಷ್ಟನೆ ನೀಡಿದ್ದಾರೆ.

ಕೆಜಿಎಫ್ 3 ಚಿತ್ರದಲ್ಲಿ ಬಾಲಿವುಡ್‌ನ ಹೃತಿಕ್ ರೋಷನ್?:

ಹೌದು, ಇಂತದೊಂದು ಸುದ್ದಿ ಸದ್ಯ ಎಲ್ಲಡೆ ಹರಿದಾಡುತ್ತಿದ್ದು, ಕೆಜಿಎಫ್ 3 ಚಿತ್ರದಲ್ಲಿ ಬಾಲಿವುಡ್ ಹ್ಯಾಂಡ್‌ಸಮ್ ಹಂಕ್ ಹೃತಿಕ್ ರೋಷನ್ ಅವರು ಅಭಿನಯಿಸಲಿದ್ದಾರೆ ಎಂಬ ಮಾಹಿತಿಯೊಂದು ಎಲ್ಲಡೆ ವೈರಲ್ ಆಗುತ್ತಿದೆ. ಇದನ್ನು ಕೇಳಿದ ಸಿನಿ ಪ್ರೇಮಿಗಳು ಸಕತ್ ಥ್ರಿಲ್ ಆಗಿದ್ದು, ಚಿತ್ರವು ಇನ್ನೊಂದು ಲೇವಲ್​ ಗೆ ಹೋಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅಲ್ಲದೇ ಈಗಾಗಲೇ ನಿರ್ಮಾಪಕ ವಿಜಯ್ ಕಿರಂಗದೂರು ಅವರು ಹೃತಿಕ್ ರೋಷನ್ ಅವರನ್ನು ಭೆಟಿ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಕುರಿತು ಕಿರಂಗದೂರು ಅವರು ಮಾಧ್ಯಮಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಸ್ಪಷ್ಟನೆ ನೀಡಿದ ವಿಜಯ್ ಕಿರಂಗದೂರು:

ಇನ್ನು, ಕೆಜಿಎಫ್ 3 ಸಿನಿಮಾದಲ್ಲಿ ಬಾಲಿವುಡ್ ಗ್ರೀಕ್ ಗಾಡ್ ಹೃತಿಕ್ ರೋಷನ್ ನಟಿಸಲಿದ್ದಾರೆ ಎಂಬ ಮಾಹಿತಿ ಎಲ್ಲಡೆ ಹರಿದಾಡುತ್ತಿದ್ದಂತೆ ನಿರ್ಮಾಪಪ ವಿಜಯ್ ಕಿರಂಗದೂರು ಅವರು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ‘ನಾವಿನ್ನೂ ಕೆಜಿಎಫ್ 3 ಕುರಿತ ಸ್ಟಾರ್‌ಕಾಸ್ಟ್ ಬಗ್ಗೆ ಏನೂ ನಿರ್ಧಾರ ತೆಗೆದುಕೊಂಡಿಲ್ಲ.

ಇದನ್ನೂ ಓದಿ: Casting Couch: ಗೀತಕೃಷ್ಣಗೆ ಬಿಸಿ ಮುಟ್ಟಿಸಿದ ಬಿಗ್ ಬಾಸ್ ಖ್ಯಾತಿಯ ಕೃತಿಕಾ, ನನ್ನ ಹೇಳಿಕೆ ತಿರುಚಲಾಗಿದೆ ಎಂದ ನಿರ್ದೇಶಕ

ಅಲ್ಲದೇ ಕೆಜಿಎಫ್ ತಂಡಕ್ಕೆ ಯಾರು ಸೇರಿಕೊಳ್ಳಲಿದ್ದಾರೆ ಎಂಬುದರ ಕುರಿತು ಯಾವುದೇ ನಿರ್ಧಾರಗಳನ್ನೂ ಇನ್ನೂ ತೆಗೆದುಕೊಂಡಿಲ್ಲ‘ ಎಂದು ಹೇಳಿದ್ದಾರೆ. ಏನಾದರೂ ಈ ಸುದ್ದಿ ಕೇಳಿದ ಯಶ್ ಅಭಿಮಾನಿಗಳಂತೂ ಒಮ್ಮೆ ಸಖತ್ ಥ್ರಿಲ್ ಆಗಿದ್ದು, ಈ ರೀತಿ ನಡೆದಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳುತ್ತಿದ್ದಾರೆ.

ಕೆಜಿಎಫ್ 3 ಸಿನಿಮಾ ಶೂಟಿಂಗ್ ಸದ್ಯಕ್ಕಿಲ್ಲ:

ಅಕ್ಟೋಬರ್​ನಲ್ಲಿ ಕೆಜಿಎಫ್ 3 ಶೂಟಿಂಗ್ ಆರಂಭವಾಗಲಿದೆ ಎಂದು ಹೇಳಲಾಗುತ್ತಿತ್ತು, ಆದರೆ ಇದೀಗ ಕೆಜಿಎಫ್ ಸಿನಿಮಾದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಕೆಜಿಎಫ್-2 ನೋಡಿ ಫುಲ್ ಖುಷ್ ಆಗಿದ್ದ ಅಭಿಮಾನಿಗಳು ಕೆಜಿಎಫ್-3ಗಾಗಿ ಕಾತರದಿಂದ ಕಾಯುತ್ತಿದ್ದರು. ಆದರೀಗ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದಿದ್ದಾರೆ.





ಅರೇ ಏನಪ್ಪಾ ಇದು ಅಂತ ಅಶ್ಚರ್ಯವಾಗಬೇಡಿ. ಈ ಬಗ್ಗೆ ಕಾರ್ತಿಕ್ ಗೌಡ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದು, ಹರಿದಾಡುತ್ತಿರುವ ಸುದ್ದಿಗಳೆಲ್ಲ ಸುಳ್ಳು. ನಾವು ಈಗ ಅನೇಕ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದೀವಿ. ಹೊಂಬಾಳೆ ಫಿಲ್ಮ್ಸ್ ಸದ್ಯದಲ್ಲೇ ಕೆಜಿಎಫ್-3 ಪ್ರಾರಂಭ ಮಾಡುವುದಿಲ್ಲ. ನಾವು ಕೆಜಿಎಫ್-3 ಪ್ರಾರಂಭ ಮಾಡಿದಾಗ ಮಾಹಿತಿ ನೀಡುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Kabhi Eid Kabhi Diwali: ಸೌತ್ ಕಲಾವಿದರತ್ತ ಸಲ್ಮಾನ್ ಚಿತ್ತ, ಸಲ್ಲುಗೆ ವಿಲನ್ ಆಗ್ತಾರಾ ದಕ್ಷಿಣದ ಸ್ಟಾರ್​?

ನಿರ್ದೇಶಕ ಪ್ರಶಾಂತ್ ನೀಲ್ ಸದ್ಯ ಪ್ರಭಾಸ್ ನಟನೆಯ ಸಲಾರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಸದ್ಯ 30ರಿಂದ 35ರಷ್ಟು ಮುಗಿದಿದ್ದು, ಈ ವರ್ಷದ ಅಕ್ಟೋಬರ್ ಅಥವಾ ನವೆಂಬರ್ ವೇಳೆಗೆ ಚಿತ್ರೀಕರಣ ಮುಗಿಯಲಿದೆ. ಬಳಿಕ ಕೆಜಿಎಫ್-3 ಪ್ರಾರಂಭವಾಗಲಿದೆ. 2024ಕ್ಕೆ ಸಿನಿಮಾವನ್ನು ಬಿಡುಗಡೆ ಮಾಡುವ ಆಲೋಚನೆಯಲ್ಲಿದ್ದೇವೆ ಎಂದು ಹೇಳಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಈ ಸುದ್ದಿಗೆ ಇದೀಗ ಬ್ರೇಕ್ ಬಿದ್ದಿದೆ.
Published by:shrikrishna bhat
First published: