ಈತನ ಡ್ಯಾನ್ಸ್​ ಮೋಡಿಗೆ ಬಾಲಿವುಡ್​ ಮಂದಿಯೇ ಫಿದಾ: ಯಾರೀ ಟಿಕ್ ಟಾಕ್ ಸ್ಟಾರ್

ವಾವ್ಹ್...ಎಂಬ ಕ್ಯಾಪ್ಷನ್​ನೊಂದಿಗೆ ಬಿಗ್ ಬಾಗ್ ಯುವರಾಜ್​ ವಿಡಿಯೋವನ್ನು ಹಂಚಿಕೊಂಡರೆ, ಅತ್ತ ಸುನೀಲ್ ಶೆಟ್ಟಿ, ರವೀನಾ ಟಂಡನ್, ಅನುಪಮ್ ಖೇರ್, ರೆಮೊ ಡಿಸೋಜಾ ಸೇರಿದಂತೆ ಬಾಲಿವುಡ್ ಖ್ಯಾತನಾಮರು ಬಾಬಾ ಜಾಕ್ಸನ್ ಸ್ಟೆಪ್ಸ್​ಗೆ ಮರುಳಾಗಿದ್ದಾರೆ.

zahir | news18-kannada
Updated:January 15, 2020, 8:34 PM IST
ಈತನ ಡ್ಯಾನ್ಸ್​ ಮೋಡಿಗೆ ಬಾಲಿವುಡ್​ ಮಂದಿಯೇ ಫಿದಾ: ಯಾರೀ ಟಿಕ್ ಟಾಕ್ ಸ್ಟಾರ್
yuvraj singh tiktok
  • Share this:
ಟಿಕ್ ಟಾಕ್ ಆ್ಯಪ್​ನಿಂದ ಅದೆಷ್ಟೋ ಯುವ ಪ್ರತಿಭೆಗಳು ಬೆಳಕಿಗೆ ಬಂದಿವೆ. ಕೆಲವರು ಆ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರೆ, ಮತ್ತೆ ಕೆಲವರು ಅದೇ ಆ್ಯಪ್​ನಿಂದ ಕೈ ತುಂಬಾ ಸಂಪಾದಿಸುತ್ತಿದ್ದಾರೆ. ಆದರೆ ಇಲ್ಲೊಬ್ಬ ಟಿಕ್ ಟಾಕ್ ಮೂಲಕ ಇಡೀ ಬಾಲಿವುಡ್​ನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡಿ ಸುದ್ದಿಯಾಗಿದ್ದಾನೆ.

ಹೌದು, ಕಳೆದ ಕೆಲ ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಡ್ಯಾನ್ಸಿಂಗ್ ವಿಡಿಯೋವೊಂದು ಭಾರೀ ವೈರಲ್ ಆಗುತ್ತಿದೆ. ಥೇಟ್ ಮೈಕೆಲ್ ಜಾಕ್ಸನ್ ತರ ಸ್ಟೆಪ್ಸ್​ ಹಾಕುವ ಈತ ಇದೀಗ ಬಾಲಿವುಡ್ ತಾರೆಗಳನ್ನೇ ನಿಬ್ಬೆರಗಾಗಿಸಿದ್ದಾರೆ.

ಈತನ ಡ್ಯಾನ್ಸ್ ನೋಡಿ ಬಾಲಿವುಡ್​ನ ಡ್ಯಾನ್ಸ್ ಕಿಂಗ್ ಹೃತಿಕ್ ರೋಷನ್ ಮೂಕವಿಸ್ಮಿತರಾಗಿದ್ದಾರೆ. ಸದ್ಯ ಟ್ವಿಟರ್​ನಲ್ಲಿ ವೈರಲ್ ಆಗುತ್ತಿರುವ ಯುವಕನ ಡ್ಯಾನ್ಸಿಂಗ್ ವಿಡಿಯೋವನ್ನು ಶೇರ್ ಮಾಡಿರುವ ಹೃತಿಕ್, ಅತ್ಯಂತ ನಯವಾದ ಏರ್​ವಾಕರ್ ಎಂದು ಹಾಡಿ ಹೊಗಳಿದ್ದಾರೆ. ಅಷ್ಟೇ ಅಲ್ಲದೆ ಯಾರೀತ ಎಂದು ಪ್ರಶ್ನಿಸುವ ಮೂಲಕ ತೆರೆ ಮರೆಯ ಪ್ರತಿಭೆಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿಚಾರಿಸಿದ್ದಾರೆ.

ಈ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದ್ದು, ಈ ಡ್ಯಾನ್ಸರ್ ಹೆಸರು ಯುವರಾಜ್ ಸಿಂಗ್. ಟಿಕ್​ಟಾಕ್​ನಲ್ಲಿ ಬಾಬಾ ಜಾಕ್ಸನ್ 2020 ಎಂದೇ ಜನಪ್ರಿಯ. ಕಳೆದ ಕೆಲ ದಿನಗಳಿಂದ ಯುವರಾಜ್​ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದನ್ನು ನೋಡಿ ಬಿಗ್ ಬಿ ಅಮಿತಾಭ್ ಬಚ್ಚನ್ ಸಹ ಪ್ರತಿಕ್ರಿಯಿಸಿದ್ದಾರೆ.

ವಾವ್ಹ್...ಎಂಬ ಕ್ಯಾಪ್ಷನ್​ನೊಂದಿಗೆ ಬಿಗ್ ಬಾಗ್ ಯುವರಾಜ್​ ವಿಡಿಯೋವನ್ನು ಹಂಚಿಕೊಂಡರೆ, ಅತ್ತ ಸುನೀಲ್ ಶೆಟ್ಟಿ, ರವೀನಾ ಟಂಡನ್, ಅನುಪಮ್ ಖೇರ್, ರೆಮೊ ಡಿಸೋಜಾ ಸೇರಿದಂತೆ ಬಾಲಿವುಡ್ ಖ್ಯಾತನಾಮರು ಬಾಬಾ ಜಾಕ್ಸನ್ ಸ್ಟೆಪ್ಸ್​ಗೆ ಮರುಳಾಗಿದ್ದಾರೆ.


ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಹವಾ ಎಬ್ಬಿಸಿರುವ ಬಾಬಾ ಜಾಕ್ಸನ್ ರನ್ನು ಹಿಂದಿ ಡ್ಯಾನ್ಸಿಂಗ್ ಕಾರ್ಯಕ್ರಮಗಳಲ್ಲಿ ಕರೆ ತರಲು ಹಲವು ಚಾನೆಲ್​ಗಳು ತೆರೆಮರೆಯ ಪ್ರಯತ್ನ ಆರಂಭಿಸಿದೆ ಎಂದು ವರದಿಯೊಂದು ತಿಳಿಸಿದೆ.

First published: January 15, 2020, 8:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading