War Box Office Collection: ಎಂಟು ದಿನಗಳಲ್ಲೇ 200 ಕೋಟಿಗೂ ಹೆಚ್ಚು ಕಲೆಕ್ಷನ್​ ಮಾಡಿದ ವಾರ್

War Box Office Collection: ಸಿನಿಮಾ ತೆರೆ ಕಂಡು ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತಾದರೂ ಬಾಕ್ಸಾಫಿಸ್​ನಲ್ಲಿ ಮಾತ್ರ ಜೋರಾಗಿಯೇ ಸದ್ದು ಮಾಡುತ್ತಿದೆ. ಈ ಸಿನಿಮಾದಲ್ಲಿ ಆ್ಯಕ್ಷನ್​ ಸೀಕ್ವೆನ್ಸ್​ ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬಂದಿದ್ದವು ವಿನಃ ಕತೆಯ ಬಗ್ಗೆ ಅಲ್ಲ. ಆದರೂ ಈ ಸಿನಿಮಾ 8 ದಿನಗಳಲ್ಲಿ 228 ಕೋಟಿ ಗಳಿಸಿದೆ.

Anitha E | news18-kannada
Updated:October 10, 2019, 4:14 PM IST
War Box Office Collection: ಎಂಟು ದಿನಗಳಲ್ಲೇ 200 ಕೋಟಿಗೂ ಹೆಚ್ಚು ಕಲೆಕ್ಷನ್​ ಮಾಡಿದ ವಾರ್
ವಾರ್​ ಸಿನಿಮಾದ ಪೋಸ್ಟರ್​
Anitha E | news18-kannada
Updated: October 10, 2019, 4:14 PM IST
ಹೃತಿಕ್ ರೋಷನ್ ಹಾಗೂ ಟೈಗರ್ ಶ್ರಾಫ್ ನಟನೆಯ ವಾರ್ ಬಾಕ್ಸಾಫಿಸ್‍ನಲ್ಲಿ ಬಿರುಗಾಳಿ ಎಬ್ಬಿಸುತ್ತಿದೆ. ಕೇವಲ 7 ದಿನಗಳಲ್ಲೇ 200 ಕೋಟಿ ಕ್ಲಬ್ ಸೇರಿದೆ. ಅಕ್ಟೋಬರ್​ 2ರಂದು ಗಾಂಧಿ ಜಯಂತಿ ಪ್ರಯುಕ್ತ ಈ ಸಿನಿಮಾ ತೆರೆಕಂಡಿತ್ತು.

ಸಿನಿಮಾ ತೆರೆ ಕಂಡು ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತಾದರೂ ಬಾಕ್ಸಾಫಿಸ್​ನಲ್ಲಿ ಮಾತ್ರ ಜೋರಾಗಿಯೇ ಸದ್ದು ಮಾಡುತ್ತಿದೆ. ಈ ಸಿನಿಮಾದಲ್ಲಿ ಆ್ಯಕ್ಷನ್​ ಸೀಕ್ವೆನ್ಸ್​ ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬಂದಿದ್ದವು ವಿನಃ ಕತೆಯ ಬಗ್ಗೆ ಅಲ್ಲ. ಆದರೂ ಈ ಸಿನಿಮಾ 8 ದಿನಗಳಲ್ಲಿ 228 ಕೋಟಿ ಗಳಿಸಿದೆ.

#War continues its supremacy... Biz on Wed - Day 8 in this case - is super-solid, with the film collecting in double digits... Has stamina to challenge *lifetime biz* of #KabirSingh [highest grosser of 2019]... #War could also emerge first ₹ 300 cr #Hindi film of 2019 [NBOC].




ಬಾಕ್ಸಾಫಿಸ್​ನಲ್ಲಿ ಹವಾ ಎಬ್ಬಿಸಿರುವ 'ವಾರ್​' ಸಿನಿಮಾ ತೆರೆಕಂಡ ಮೊದಲ ವಾರದಲ್ಲೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ 11ನೇ ಸ್ಥಾನದಲ್ಲಿದೆ. 93.82 ಕೋಟಿ ಗಳಿಕೆ ಮಾಡುವ ಮೂಲಕ ಅಮೀರ್​ ಖಾನ್​ ಅಭಿನಯದ 'ಪಿಕೆ' ಸಿನಿಮಾ ಈ ಸ್ಥಾನದಲ್ಲಿತ್ತು. ಜೊತೆಗೆ ಈ ವರ್ಷದದಲ್ಲಿ ಮೊದಲ ವಾರದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಹೆಗ್ಗಳಿಕೆಗೂ ಪಾತ್ರವಾಗಿದೆ.

ಇದನ್ನೂ ಓದಿ: Bipasha Basu: ಸಿಂಧೂರ್​ ಖೇಲ್​ನಲ್ಲಿ ಬಿಳಿ ಬಣ್ಣದ ಸೀರೆಯುಟ್ಟು ಮಿಂಚಿದ ಕೃಷ್ಣ ಸುಂದರಿ ಬಿಪಾಶಾ..!
Loading...

'ವಾರ್​' ಬಿಡುಗೆಡೆಯಾಗುವ ಮುನ್ನ 90.47 ಕೋಟಿ ಬಾಚಿಕೊಳ್ಳುವ ಮೂಲಕ ಸಲ್ಮಾನ್​ ಅಭಿನಯದ 'ಭಾರತ್​' ಈ ವರ್ಷದಲ್ಲಿ ಮೊದಲ ವಾರ ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಚಿತ್ರವಾಗಿತ್ತು. 'ವಾರ್​' ಸಿನಿಮಾ ತೆರೆಕಂಡ ಮೊದಲ ವಾರದಲ್ಲಿ 95 ಕೋಟಿ ಗಳಿಕೆ ಮಾಡಿದ್ದು, ಇದು ಈ ಚಿತ್ರ ನಾಯಕರ ಸಿನಿ ಜೀವನದಲ್ಲೂ ಒಂದು ದಾಖಲೆಯಾಗಿದೆ.

ಈ ಚಿತ್ರದ ನಿರ್ದೇಶಕ 'ವಾರ್​'ನ ಸೀಕ್ವೆಲ್​ ಮಾಡುವ ಆಲೋಚನೆಯಲ್ಲಿದ್ದಾರಂತೆ. ಈ ಸಿನಿಮಾಗೆ ಸಿಗುತ್ತಿರುವ ಪ್ರತಿಕ್ರಿಯೆ ಕಂಡು ಈ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದ್ದಾರೆ ಎಂಬ ಸುದ್ದಿಯೂ ಬಾಲಿವುಡ್​ ಗಲ್ಲಿಗಳಲ್ಲಿ ಹರಿದಾಡುತ್ತಿದೆ.

Rare Photos Of Rekha: ತೆರೆ ಮೇಲೆ ಸ್ಟಾರ್ ನಟಿ, ನಿಜ ಜೀವನದಲ್ಲಿ ಏಕಾಂಗಿಯಾದ ಚಿರಯೌವ್ವನೆ ರೇಖಾರ ಅಪರೂಪದ ಚಿತ್ರಗಳು..!

First published:October 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...