ಸಾಮಾನ್ಯವಾಗಿ ಈ ಚಲನಚಿತ್ರ ನಟ ನಟಿಯರಿಗೆ ತಮ್ಮ ಮನೆಯವರೊಂದಿಗೆ ಕಾಲ ಕಳೆಯಲು ಹೆಚ್ಚು ಸಮಯ ದೊರೆಯುವುದಿಲ್ಲ. ಹಾಗಾಗಿ ಅವರಿಗೆ ಸಿಕ್ಕ ಸಮಯವನ್ನು ತುಂಬಾ ಮಧುರವಾಗಿ ಕಳೆಯಲು ಬಯಸುತ್ತಾರೆ. ಇಲ್ಲಿಯೂ ಸಹ ಒಬ್ಬ ಬಾಲಿವುಡ್ ನಟ ತನಗೆ ಸಿಕ್ಕ ಸಮಯದಲ್ಲಿ ಯಾರ ಫೋಟೋ ಸೆರೆ ಹಿಡಿಯುವುದರ ಮೂಲಕ ಅಭಿಮಾನಿಗಳಿಂದ ಮೆಚ್ಚುಗೆ ಪಡೆದಿದ್ದಾರೆ ನೀವೇ ನೋಡಿ. ಆ ನಟ ಬೇರೆ ಯಾರು ಅಲ್ಲ, ಅವರೇ ಹೃತಿಕ್ ರೋಷನ್ (Hrithik Roshan). ಮನೆಯಲ್ಲಿ ಬುಧವಾರ ಬೆಳಗ್ಗೆ ಉಪಾಹಾರ ಸೇವಿಸಿದ ನಂತರ ಅವರಿಗೆ ಸಮಯ ದೊರೆತಿದ್ದು ತಮ್ಮ ತಾಯಿ ಪಿಂಕಿ ರೋಷನ್ (Pinkie Roshan) ಫೋಟೋವನ್ನು ಕನ್ನಡಿಯಲ್ಲಿ ನೋಡಿಕೊಂಡು ಸೆಲ್ಫಿ ಕ್ಲಿಕ್ಕಿಸಿ ನಂತರ ಅದನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಆ ಮುದ್ದಾದ ಫೋಟೋದಲ್ಲಿ ಅವರ ತಾಯಿ ತಮ್ಮ ಮನೆಯ ಬಾಲ್ಕನಿಯಲ್ಲಿ ನಿಂತು ಹೊರಗಿನ ವಾತಾವರಣವನ್ನು ಆನಂದಿಸುತ್ತಿರುವುದನ್ನು ನಾವು ಕಾಣಬಹುದಾಗಿದೆ.
ತಾಯಿ ಮತ್ತು ಮಗನ ಜೋಡಿ ಎಂಬಂತೆ ಇಬ್ಬರೂ ಕಪ್ಪು ಟಿ-ಶರ್ಟ್ ಧರಿಸಿದ್ದನ್ನು ನಾವು ನೋಡಬಹುದು. ತಮ್ಮ ಪೋಸ್ಟ್ನ ಶೀರ್ಷಿಕೆಯಲ್ಲಿ,
ಹೃತಿಕ್ ರೋಷನ್ 'ನನ್ನ ತಾಯಿ
ಪಿಂಕಿ ರೋಷನ್ ಅವರ ಜೊತೆ ಮುಂಜಾನೆಯ ಉಪಾಹಾರದ ಡೇಟ್.... ಬುಧವಾರವು ಭಾನುವಾರದಂತೆ ಭಾಸವಾಗುತ್ತಿರುವುದು ತುಂಬಾ ಚೆನ್ನಾಗಿದೆ' ಎಂದು ಬರೆದುಕೊಂಡಿದ್ದಾರೆ. ಈ ಫೋಟೋಗೆ ಇನ್ಸ್ಟಾಗ್ರಾಂನಲ್ಲಿ ಈಗಾಗಲೇ ಸುಮಾರು 17 ಲಕ್ಷ ಜನರು ಇಷ್ಟಪಟ್ಟಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ, ತಮ್ಮ ತಾಯಿಯ ಮೇಲಿನ ಪ್ರೀತಿಯನ್ನು ಅವರಿಗೆ ಅಪ್ಪಿಕೊಳ್ಳುವ ಮೂಲಕ ವ್ಯಕ್ತಪಡಿಸುವಂತೆ ಅಭಿಮಾನಿಗಳನ್ನೂ ಕೋರಿದ್ದಾರೆ.
ಹೃತಿಕ್ ರೋಷನ್ ಅವರ ಆಪ್ತ ಸ್ನೇಹಿತ ಮತ್ತು ನಟ ಕುನಾಲ್ ಕಪೂರ್, ಜನಪ್ರಿಯ ಹೇರ್ ಸ್ಟೈಲಿಸ್ಟ್ ಅಲೀಂ ಹಕೀಮ್ ಈ ಫೋಟೋಗೆ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ನೆಟ್ಟಿಗರು ಸಹ ಈ ಮುದ್ದಾದ ಫೋಟೋ ನೋಡಿ ಪ್ರೀತಿಯಿಂದ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಹೃತಿಕ್ ತನ್ನ ಹೆತ್ತವರಿಬ್ಬರಿಗೂ ಹತ್ತಿರವಾಗಿದ್ದು ಮತ್ತು ಆಗಾಗ್ಗೆ ಅವರೊಂದಿಗೆ ತೆಗೆಸಿಕೊಂಡ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ, ತಮ್ಮ ತಂದೆ, ನಿರ್ದೇಶಕ ರಾಕೇಶ್ ರೋಷನ್ರ 72ನೇ ಜನ್ಮದಿನದಂದು ಒಂದು ಫೋಟೋವನ್ನು ಹಂಚಿಕೊಂಡಿದ್ದರು. ಫೋಟೋದಲ್ಲಿ ತಂದೆ ಮತ್ತು ಮಗನ ಜೋಡಿ ಕಪ್ಪು ಉಡುಗೆಗಳಲ್ಲಿ ತುಂಬಾ ಖುಷಿಯಾಗಿರುವುದನ್ನು ನಾವು ಕಾಣಬಹುದಾಗಿದೆ.
ಇದನ್ನೂ ಓದಿ: ಸ್ಯಾಂಡಲ್ವುಡ್ ಗ್ಲಾಮರಸ್ ಗೊಂಬೆ Ramya ಲೆಟೆಸ್ಟ್ ಫೋಟೋಗಳಿಗೆ ಅಭಿಮಾನಿಗಳು ಫಿದಾ..!
ಹೃತಿಕ್ ತಮ್ಮ ಟಿ-ಶರ್ಟ್ ಗೆ ಸರಿ ಹೊಂದುವಂತೆ ಕಪ್ಪು ಬಣ್ಣದ ಕ್ಯಾಪ್ ಸಹ ಹಾಕಿದ್ದನ್ನು ನೋಡಬಹುದು. ಅವರ ತಂದೆ ಕಪ್ಪು ಟಿ-ಶರ್ಟ್, ಜಾಕೆಟ್ ಮತ್ತು ಸ್ಮಾರ್ಟ್ ವಾಚ್ ಅನ್ನು ಧರಿಸಿದ್ದನ್ನೂ ನೋಡಬಹುದಾಗಿದೆ.
ತನ್ನ ತಂದೆಯ ಬಗ್ಗೆ ತನ್ನ ಪ್ರೀತಿ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಿದ ನಟ "ನನ್ನ ತಂದೆ ನನ್ನೊಳಗಿನ ಅಸಾಧ್ಯವಾದ ಸಾಮರ್ಥ್ಯದ ಮೇಲೆ ನನಗೆ ನಂಬಿಕೆ ಇಡಲು ಸದಾ ನನ್ನನ್ನು ಪ್ರೇರೇಪಿಸುತ್ತಾರೆ. 72ನೇ ಹುಟ್ಟುಹಬ್ಬದ ಶುಭಾಶಯಗಳು ಅಪ್ಪಾ. ನಾನು ನಿಮ್ಮಂತೆಯೇ ಆಗಲು ಬಯಸುತ್ತೇನೆ" ಎಂದು ಶೀರ್ಷಿಕೆಯಲ್ಲಿ ಬರೆದಿದ್ದರು. ಈ ಫೋಟೋವನ್ನೂ ಲಕ್ಷಾಂತರ ಜನರು ಇಷ್ಟಪಟ್ಟಿದ್ದು, ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದರು.
ಇದನ್ನೂ ಓದಿ: Hrithik Roshan: ಹೃತಿಕ್ ರೋಷನ್ ಹಾಲಿವುಡ್ ಎಂಟ್ರಿ: ಸ್ಪೈ ಪಾತ್ರದಲ್ಲಿ ಬಾಲಿವುಡ್ ಹಂಕ್..!
ಹೃತಿಕ್ ರೋಷನ್ ಅವರು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಒಂದು ಕಡೆ ಕ್ರಿಷ್ ಸರಣಿ ಸಿನಿಮಾ ಮತ್ತೊಂದು ಕಡೆ ಫೈಟರ್. ಹೌದು, ಹೃತಿಕ್ ರೋಷನ್ ಅವರು ತಮ್ಮ 47ನೇ ಹುಟ್ಟುಹಬ್ಬದಂದು ಈ ಫೈಟರ್ ಸಿನಿಮಾದ ಟೈಟಲ್ ವಿಡಿಯೋವನ್ನು ಹಂಚಿಕೊಂಡಿದ್ದರು. ಈ ವಿಡಿಯೋಗೆ ಸಖತ್ ಪ್ರತಿಕ್ರಿಯೆ ಸಿಕ್ಕಿತ್ತು. ಈ ಸಿನಿಮಾದಲ್ಲಿ ಹೃತಿಕ್ ರೋಷನ್ಗೆ ನಾಯಕಿಯಾಗಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ