Krrish 4: ಹೃತಿಕ್​ ರೋಷನ್​ ಅಭಿನಯದ ಕ್ರಿಶ್​ 4 ಸಿನಿಮಾದಲ್ಲಿರಲಿದೆ ಟೈಮ್​ ಟ್ರಾವೆಲ್​ ಸ್ಟೋರಿ..!

Hrithik Roshan: ಕ್ರಿಶ್​ 4 ಸಿನಿಮಾದ ಹೊಸ ಟೀಸರ್​ ಹಂಚಿಕೊಂಡಿರುವ ಹೃತಿಕ್​ ಸಿನಿಮಾದ ಕಥೆ ಕುರಿತಾಗಿ ಸುಳಿವು ನೀಡಿದ್ದಾರೆ. ಹೌದು, ಭೂತಕಾಲವಾಯಿತು ಈಗ ಭವಿಷ್ಯ ಹೇಗಿರಲಿದೆ ಎಂದು ನೋಡೋಣ ಅಂತ ಹೃತಿಕ್​ ಈ ಟೀಸರ್​ಗೆ ಶೀರ್ಷಿಕೆಯಾಗಿ ಬರೆದಿದ್ದಾರೆ. 

ಕ್ರಿಶ್​ 4 ಸಿನಿಮಾದಲ್ಲಿ ಹೃತಿಕ್ ರೋಷನ್​

ಕ್ರಿಶ್​ 4 ಸಿನಿಮಾದಲ್ಲಿ ಹೃತಿಕ್ ರೋಷನ್​

  • Share this:
ಹೃತಿಕ್​ ರೋಷನ್​ ಅವರ ಸಿನಿ ಜೀವನದ ಹಿಟ್​ ಸಿನಿಮಾವಾದ ಕ್ರಿಶ್​ ಸರಣಿಯ ಹೊಸ ಸಿನಿಮಾದ ಕುರಿತು ಬಹಳ ಸಮಯದಿಂದ ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಿದ್ದವು. 'ಕ್ರಿಶ್​ 4' ಸಿನಿಮಾ ಮಾಡುವುದಾಗಿ 2018ರ ಜನವರಿಯಲ್ಲೇ ರಾಕೇಶ್ ರೋಷನ್​ ಪ್ರಕಟಿಸಿದ್ದರು. ಅಷ್ಟೊತ್ತಿಗೆ ರಾಕೇಶ್ ರೋಷನ್​ ಅವರಿಗೆ ಗಂಟಲು ಕ್ಯಾನ್ಸರ್ ಇರುವುದು ತಿಳಿದಿತ್ತು. ಇದರಿಂದಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಸದ್ಯ ಹೃತಿಕ್​ ಅಪ್ಪನೊಂದಿಗೆ ಸೇರಿಕೊಂಡು 'ಕ್ರಿಶ್​ 4' ಸಿನಿಮಾದ ಕತೆ ಮೇಲೆ ಕೆಲಸ ಮಾಡುತ್ತಿದ್ದಾರಂತೆ. 'ಕ್ರಿಶ್​ 4' ಸಿನಿಮಾದ ಕತೆ ಮೇಲೆ ರಾಕೇಶ್​ ರೋಷನ್​, ಹೃತಿಕ್​ ಹಾಗೂ ಅವರ ಬರಹಗಾರರ ತಂಡ ಕೆಲಸ ಮಾಡುತ್ತಿದ್ದು, ಈಗ ಕೃಷ್ಣ ಪಾತ್ರವನ್ನು ಹೇಗೆ ಮುಂದುವರೆಸುವುದು ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ ಎಂದೂ ಹೇಳಲಾಗಿತ್ತು.  ಜೊತೆಗೆ ಕಳೆದ ವರ್ಷ ಮೇ ತಿಂಗಳಲ್ಲಿ ಈ ಸಿನಿಮಾದ ಬಗ್ಗೆ ಒಂದು ಅಪ್ಡೇಟ್​ ಕೊಟ್ಟಿದ್ದರು. 

ಕ್ರಿಶ್​ 4 ಸಿನಿಮಾದ ಹೊಸ ಟೀಸರ್​ ಹಂಚಿಕೊಂಡಿರುವ ಹೃತಿಕ್​ ಸಿನಿಮಾದ ಕಥೆ ಕುರಿತಾಗಿ ಸುಳಿವು ನೀಡಿದ್ದಾರೆ. ಹೌದು, ಭೂತಕಾಲವಾಯಿತು ಈಗ ಭವಿಷ್ಯ ಹೇಗಿರಲಿದೆ ಎಂದು ನೋಡೋಣ ಅಂತ ಹೃತಿಕ್​ ಈ ಟೀಸರ್​ಗೆ ಶೀರ್ಷಿಕೆಯಾಗಿ ಬರೆದಿದ್ದಾರೆ.
ಸಿನಿಮಾದಲ್ಲಿ ಟೈಮ್​ ಟ್ರಾವೆಲ್​ ಕಥೆ ಇರಲಿದೆ ಎಂದು ಹೃತಿಕ್​ ಅವರು ಕೊಟ್ಟಿರುವ ಸುಳಿವಿನಿಂದ ತಿಳಿಯುತ್ತಿದೆ. ಇನ್ನು ಟೈಮ್​ ಟ್ರಾವೆಲ್​ ಕಥೆಯ ಮೂಲಕ ಜಾದೂ ಪಾತ್ರವನ್ನು ಮತ್ತೆ ಸಿನಿಮಾದಲ್ಲಿ ತರಲು ಚಿತ್ರತಂಡ ಪ್ಲಾನ್​ ಮಾಡಿಕೊಂಡಿದೆಯಂತೆ. ಇನ್ನು ಕೊಯಿ ಮಿಲ್​ಗಯಾ  ಸಿನಿಮಾದಲ್ಲಿ ಹೃತಿಕ್​ ಎರಡು ಶೇಡ್​ಗಳಲ್ಲಿ ಕಾಣಿಸಿಕೊಂಡಿದ್ದರು. ಒಂದು ಏರಿನೂ ಅರಿಯದ ಹಾಗೂ ಮತ್ತೊಂದು ಸೂಪರ್ ಹೀರೋ ಆಗಿ ನಟಿಸಿದ್ದರು. ಈ ಸಿನಿಮಾದ ನಂತರದಲ್ಲಿ ತೆರೆಕಂಡ ಸರಣಿ ಚಿತ್ರಗಳಲ್ಲಿ ಜಾದೂ ಇರಲಿಲ್ಲ.

ಇದನ್ನೂ ಓದಿ: Happy Birthday Karisma Kapoor: ಅಮ್ಮನಂತಿರುವ ಅಕ್ಕ ಕರಿಷ್ಮಾರ ಹುಟ್ಟುಹಬ್ಬ ಆಚರಿಸಿದ ಕರೀನಾ ಕಪೂರ್​..!

ಜೊತೆಗೆ 'ಕ್ರಿಶ್​ 3' ಸಿನಿಮಾದಲ್ಲಿ ರೋಹಿತ್ ಮೆಹ್ರಾ ಸಾವನ್ನಪ್ಪಿದ್ದು, ಈಗ ಕ್ರಿಶ್​ ಅಂದರೆ ಕೃಷ್ಣನ ಪಾತ್ರಕ್ಕೆ ಜಾದೂವಿನ ಪರಿಚಯಿಸಲು ಸೂಕ್ತ ಕಾಲ ಬಂದಿದೆ ಎನ್ನುತ್ತಿದ್ದಾರಂತೆ. 'ಕ್ರಿಶ್​ 4'ನಲ್ಲಿ ಜಾದೂ ಮತ್ತೆ ಭೂಮಿಗೆ ಬರಲಿದ್ದು, ಕೃಷ್ಣಾಗೆ ಪರಿಚಯವಾಗಲಿದೆಯಂತೆ. 2018ರಲ್ಲೇ 'ಕ್ರಿಶ್​ 4' ನಿರ್ಮಾಣಕ್ಕಾಗಿ ಪ್ಲಾನ್​ ಮಾಡಲಾಗಿತ್ತು. ಅಂದುಕೊಂಡಂತೆ ಆಗಿದ್ದರೆ ಇದೇ 2020ರಲ್ಲೇ ಈ ಸಿನಿಮಾ ತೆರೆ ಕಾಣಬೇಕಿತ್ತು. ಅಲ್ಲದೆ ಕ್ರಿಶ್​ 5 ಮಾಡುವ ಆಲೋಚನೆಯಲ್ಲಿದ್ದಾರಂತೆ ರಾಕೇಶ್ ರೋಷನ್​ ಹಾಗೂ ಹೃತಿಕ್​ ರೋಷನ್​.

ಇದನ್ನೂ ಓದಿ: Bigg Boss 8: ದಿವ್ಯಾ ಉರುಡುಗ ಜತೆಗಿನ ಟಾಸ್ಕ್​ನಲ್ಲಿ ದಿವ್ಯಾ ಸುರೇಶ್​ ಕಾಲಿಗೆ ಪೆಟ್ಟು..!

ಲಾಕ್​ಡೌನ್​ನಲ್ಲಿ ಹೃತಿಕ್​ ರೋಷನ್​ ಅವರಿಗೆ ನಿಜಕ್ಕೂ ಅದೃಷ್ಟ ಖುಲಾಯಿಸಿತ್ತು. ಕೊರೋನಾ ಮೊಲದ ಅಲೆ ವೇಳೆಯಲ್ಲಿ ಹೃತಿಕ್​ ರೋಷನ್​ ಅವರ ವಿಚ್ಛೇದಿತ ಪತ್ನಿ ಸುಸೈನ್​ ಖಾನ್​ ತಮ್ಮ ಮಕ್ಕಳೊಂದಿಗೆ ಬಂದು ಹೃತಿಕ್​ ಅವರ ಮನೆಯಲ್ಲೇ ಇದ್ದರು. ಸುಸೈನ್​ ತಮ್ಮ ಮನೆಗೆ ಮಕ್ಕಳ ಜೊತೆ ಬಂದಿದ್ದ ವಿಷಯವನ್ನು ಹೃತಿಕ್ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಜೊತೆಗೆ ಮಕ್ಕಳ ಹುಟ್ಟುಹಬ್ಬವನ್ನು ಅಲ್ಲೇ ಒಟ್ಟಿಗೆ ಆಚರಿಸಿದ್ದರು. ಹೃತಿಕ್​ ತಮ್ಮ ಮಕ್ಕಳ ಹಾಗೂ ಮಾಜಿ ಪತ್ನಿ ಜತೆ ಒಂದೇ ಮನೆಯಲ್ಲಿ ಇದ್ದ ವಿಷಯ ತಿಳಿಯುತ್ತಿದ್ದಂತೆಯೇ ಅಭಿಮಾನಿಗಳು ಖುಷಿಯಿಂದ ಸಂಭ್ರಮಿಸಿದ್ದರು. ಇನ್ನಾದರೂ ಈ ಜೋಡಿಯ ನಡವೆ ಇರುವ ದೂರ ಕಡಿಮೆಯಾಗಲಿ ಎಂದು ಆಶಿಸಿದ್ದರು.
Published by:Anitha E
First published: