ಬಾಲಿವುಡ್ (Bollywood) ಮೋಸ್ಟ್ ಹ್ಯಾಂಡ್ ಸಮ್ ಹೀರೋಗಳಲ್ಲಿ ಒಬ್ಬರು ಹೃತಿಕ್ ರೋಷನ್. 2000 ನೇ ಇಸ್ವಿಯಲ್ಲಿ ಬಿಡುಗಡೆಯಾದ ಕಹೋನಾ ಪ್ಯಾರ್ ಹೈ ಚಿತ್ರದಿಂದ ಹಿಡಿದು 2019 ರಲ್ಲಿ ರಿಲೀಸ್ ಆಗಿರೋ ವಾರ್ ಚಿತ್ರದ ವರೆಗೂ ಹೃತಿಕ್ (Hrithik) ನಟನೆ ಹಾಗೂ ಡ್ಯಾನ್ಸ್ ಗೆ ಫಿದಾ ಆಗದವರಿಲ್ಲ. ಅವರ ಡ್ಯಾನ್ಸ್, ಅದರಲ್ಲೂ ಬಾಡಿ ಫ್ಲಿಕ್ಸಿಬಿಲಿಟಿ, ಬೆಂಡ್ ಮಾಡೋ ರೀತಿ.. ಅವರ ಎಕ್ಸ್ ಪ್ರೆಷನ್ ಅಭಿಮಾನಿಗಳನ್ನ ಹುಚ್ಚೆಬ್ಬಿಸುತ್ತೆ. ಇನ್ನು ಹೃತಿಕ್ ರೋಷನ್ ರ ವಿಕ್ರಂ ವೇದಾ (Vikram Vedha) ಚಿತ್ರದ ಆಲ್ಕೊಹಾಲಿಯಾ ಹಾಡನ್ನು ನೋಡಿದ್ರಂತೂ ಅವರ ಫ್ಯಾನ್ಸ್ ಸಖತ್ ಥ್ರಿಲ್ ಗೆ ಒಳಗಾಗೋದು ನಿಜ.
ವಿಕ್ರಂ ವೇದಾ ಸಿನೆಮಾದ ಆಲ್ಕೋಹಾಲಿಯಾ
ಬಾಲಿವುಡ್ ನಲ್ಲಿ ಬ್ರಹ್ಮಾಸ್ತ್ರ ಬಳಿಕ ಅತಿಹೆಚ್ಚು ನಿರೀಕ್ಷೆ ಮೂಡಿಸಿರುವ ಚಿತ್ರ ಹೃತಿಕ್ ಅವರ ವಿಕ್ರಂವೇದಾ ಚಿತ್ರ. ಇನ್ನು ಇದೀಗ ಬಿಡುಗಡೆಯಾಗಿರುವ ಆಲ್ಕೋಹಾಲಿಯಾ ಸಾಂಗ್ ಹೃತಿಕ್ ಮೇಲಿರುವ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚು ಮಾಡಿದೆ ಅಂದರೆ ಸುಳ್ಳಾಗಲ್ಲ.
ಇದನ್ನೂ ಓದಿ: Hrithik Roshan: ಕಹೋ ನಾ ಪ್ಯಾರ್ ಹೈ ಚಿತ್ರಕ್ಕೂ ಮೊದಲೇ ಹೃತಿಕ್‍ಗೆ ಡಾಕ್ಟ್ರು ಡ್ಯಾನ್ಸ್ ಮಾಡಬೇಡಿ ಅಂತ ಹೇಳಿದ್ರಂತೆ
[embed]https://youtu.be/zACzoUH4JDs[/embed]
ಹೃತಿಕ್ ಅವರ ಡ್ಯಾನ್ಸ್ ಹಾಗೂ ಹಾಡಿನಲ್ಲಿರುವ ಅಸಾಧಾರಣ ನೃತ್ಯ ಸಂಯೋಜನೆಯ ಬಗ್ಗೆ ಎರಡು ಮಾತಿಲ್ಲ. ಆದರೆ, ಈ ಭಾರಿ ಚಿತ್ರದ ಈ ಹಾಡಿನಲ್ಲಿರುವ ಅವರ ಹುಚ್ಚುತನದ ಕಣ್ಣು ಹಾಗೂ ಅವರ ಅಭಿವ್ಯಕ್ತಿ ಹೆಚ್ಚು ಗಮನ ಸೆಳೆಯುತ್ತೆ. ಇನ್ನು ಟ್ರೇಲರ್ ನೋಡಿದವರಲ್ಲೂ ಇದೇ ಅಭಿಪ್ರಾಯವಿದೆ. ಹೃತಿಕ ಕಣ್ಣಿನಲ್ಲಿರುವ ಆ ಕ್ರೇಜಿ ನೋಟ ಅಪರೂಪದ್ದು ಅಂತ ನಿಮಗೆ ಅನ್ನಿಸದೇ ಇರಲ್ಲ. ಅಲ್ಲಿನ ಕ್ಲೋಸ್ ಅಪ್ ಶಾಟ್ ಗಳು, ಜೊತೆಗೆ ಹೃತಿಕ್ ಮುಖಭಾವ ಮನಸ್ಸು ಮುಟ್ಟುತ್ತೆ. ಅದ್ರಲ್ಲೂ ಈ ಹಾಡು ನೋಡಿದ ಮೇಲಂತೂ ನೀವು ಮತ್ತೊಮ್ಮೆ ಹೃತಿಕ್ ಪಕ್ಕಾ ಫ್ಯಾನ್ ಆಗ್ತೀರಾ.
ವಿಕ್ರಂ ವೇದಾ ಸಿನೆಮಾದಲ್ಲಿ ಹೃತಿಕ್ ಅವರ ಪಾತ್ರವೇನು?
ಅಂದಹಾಗೆ ಈ ಹೃತಿಕ್ ರ ಆಲ್ಕೋಹಾಲಿಯಾ ದಲ್ಲಿರೋ ನೋಟ.. ಅಗ್ನಿಪಥ್ ನ ಬೆಂಕಿಯಂಥ ನೋಟವಲ್ಲ. ಹಾಗೇ ಸೂಪರ್ 30ಯ ಸಣ್ಣ ಪಟ್ಟಣದ ಶಿಕ್ಷಕನೊಬ್ಬನ ತಮಾಷೆಯ ನೋಟವೂ ಅಲ್ಲ. ಇವೆರಡರ ಮಧ್ಯೆ ಇರುವ ನೋಟವದು. ಹೃತಿಕ್ ರೋಷನ್ ರ ಈ ಪಾತ್ರವಾದ ವೇದಾ ಬಹುಶಃ ದುಷ್ಟ, ಹುಚ್ಚ, ಉನ್ಮಾದ, ಬಾಲಿಶ ಹಾಗೂ ತಮಾಷೆ ಈ ಎಲ್ಲಾ ಭಾವಗಳನ್ನ ಒಟ್ಟಾಗಿ ಸೇರಿಸಿಕೊಂಡಂತಿದೆ ಎನ್ನಬಹುದೇನೋ... ಈ ತರಹದ ಪಾತ್ರವನ್ನು ಹೃತಿಕ್ ರಲ್ಲಿ ಕಾಣೋಕೆ ಅಭಿಮಾನಿಗಳು ಕೂಡ ಉತ್ಸುಕರಾಗಿದ್ದಾರೆ.
ಅಲ್ಲದೇ, ಆಲ್ಕೋಹಾಲಿಯಾ ಹಾಡಿನಲ್ಲಿರುವ ಅವರ ಎಕ್ಸ್ ಪ್ರೆಷನ್, ಕೋರಿಯಾಗ್ರಫಿ ಜೊತೆಗೆ ಅವರ ಬಾಡಿ ಲಾಂಗ್ವೇಜ್, ವೇದಾ ಪಾತ್ರದಲ್ಲಿ ಒಳಹೊಕ್ಕ ಅಪರೂಪದ ಹೃತಿಕ್ ರೋಷನ್ ರನ್ನು ಕಾಣಬಹುದು ಅನ್ನೋದಕ್ಕೆ ಸಾಕ್ಷಿ ಒದಗಿಸುತ್ತೆ.
ವಿಕ್ರಂ ವೇದಾ ಸಿನೆಮಾ ಬಿಡುಗಡೆ ಯಾವಾಗ?
ಬಾಲಿವುಡ್ ನಲ್ಲಿ ಬ್ರಹ್ಮಾಸ್ತ್ರದ ನಂತರ ತುಂಬಾ ನಿರೀಕ್ಷೆ ಹೊಂದಿರುವ ಸೆಪ್ಟೆಂಬರ್ ನಲ್ಲಿ ಬಿಡುಗಡೆಯಾಗುತ್ತಿರುವ ಚಿತ್ರ ವಿಕ್ರಂ ವೇದಾ. ಸೆಪ್ಟೆಂಬರ್ 30 ರಂದು ರಿಲೀಸ್ ಆಗಲಿರುವ ವಿಕ್ರಂ ವೇದಾ, ಚಿತ್ರ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಅಲ್ದೇ ಈ ಚಿತ್ರದಲ್ಲಿ ನಟ ಸೈಫ್ ಅಲಿ ಖಾನ್ ಸಹ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಚಿತ್ರವನ್ನು ಪುಷ್ಕರ್-ಗಾಯತ್ರಿ ನಿರ್ದೇಶಿಸಿದ್ದಾರೆ. ಚಿತ್ರದ ಟೀಸರ್ ಕೂಡ ಬಿಡುಗಡೆಯಾದ ಕೆಲ ಹೊತ್ತಿನಲ್ಲೇ ಲಕ್ಷಾಂತರ ವ್ಯೂವ್ಸ್ ಕಂಡಿದ್ದು ಚಿತ್ರದ ಬಗೆಗಿನ ಕುತೂಹಲವನ್ನು ಇಮ್ಮಡಿ ಮಾಡಿತ್ತು.
ಇದನ್ನೂ ಓದಿ: Koffe with Karan 7: ಕರಣ್ ಜೋಹರ್ ರಿಲೇಶನ್‌ಶಿಪ್‌ನಲ್ಲಿದ್ರಾ? ವರುಣ್ ಧವನ್ ಪ್ರಶ್ನೆಗೆ ನಟ ಹೇಳಿದ್ದು ಹೀಗೆ
ಅಂದಹಾಗೆ, ಈ ಚಿತ್ರ ತಮಿಳಿನ ಸೂಪರ್ ಹಿಟ್ ಚಿತ್ರ ವಿಕ್ರಂ ವೇದಾ ರಿಮೇಕ್ ಆಗಿರೋದು ವಿಶೇಷ. ಸದ್ಯ ಬಾಯ್ಕಾಟ್ ಸುಳಿಯಲ್ಲಿ ಸಿಲುಕಿ ಸಾಲು ಸಾಲು ಬಾಲಿವುಡ್ ಚಿತ್ರಗಳ ಸೋಲುತ್ತಿರುವ ದಿನಗಳಲ್ಲಿ ಸೌತ್ ನ ಕಥೆ ಹೊಂದಿರುವ ವಿಕ್ರಂ ವೇದಾ ಚಿತ್ರ ಗೆಲ್ಲುತ್ತಾ.. ಅಭಿಮಾನಿಗಳು ಚಿತ್ರವನ್ನು ಒಪ್ಪಿಕೊಳ್ತಾರಾ.. ಅನ್ನೋದನ್ನ ಕಾದು ನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ