Hrithik Roshan Workout Video: ಹೃತಿಕ್​ ರೋಷನ್​​ ಹಂಚಿಕೊಂಡ ವರ್ಕ್​ಔಟ್​ ವಿಡಿಯೋ ವೈರಲ್​..!

Hrithik Roshan Workout Video: ಸಿನಿಮಾ ಪಾತ್ರಗಳಿಗಾಗಿ ನಾಯಕ ನಟರು ದೇಹದ ತೂಕ ಹೆಚ್ಚಿಸಿಕೊಳ್ಳುವುದು ಹಾಗೂ ಇಳಿಸಿಕೊಳ್ಳುವುದು ಸಹಜ. ಆದರೆ ಆರೋಗ್ಯದ ಸಮಸ್ಯೆಗಳಿಂದ ದೇಹಾಕಾರದಲ್ಲಿ ಬದಲಾವಣೆಗಳಾದರೆ, ಅದನ್ನು ಮತ್ತೆ ಮೊದಲಿನಂತೆ ಮಾಡುವುದು ತುಂಬಾ ಕಷ್ಟದ ಕೆಲಸ. ಹೃತಿಕ್​ ರೋಷನ್​ ಜೀವನದಲ್ಲೂ ಇಂತಹದೊಂದು ಘಟನೆ ನಡೆದಿತ್ತು.

ಹೃತಿಕ್​ ರೋಷನ್​

ಹೃತಿಕ್​ ರೋಷನ್​

  • Share this:
ಸೆಲೆಬ್ರಿಟಿಗಳಿಗೆ ಅವರ ಸೌಂದರ್ಯ... ಕಟ್ಟುಮಸ್ತಾದ ದೇಹವೇ... ಆಸ್ತಿ. ಅದಕ್ಕಾಗಿಯೇ ಅವರು ತಮ್ಮ ಜೀವನದ ಹೆಚ್ಚಿನ ಸಮಯವನ್ನು ಫಿಟ್ನೆಸ್​ಗೆ ಮುಡುಪಾಗಿರುತ್ತದೆ. ಅದರಲ್ಲೂ ಸ್ಟಾರ್​ ನಟರ ದೇಹ ಔಟ್​ ಆಫ್​ ಶೇಪ್​ ಆದರೆ ಮುಗಿದೇ ಹೋಯಿತು. ಅವರ ಸಿನಿ ಜೀವನಕ್ಕೆ ಫುಲ್​ ಸ್ಟಾಪ್​ ಬಿತ್ತೆಂದೆ.

ಸಿನಿಮಾ ಪಾತ್ರಗಳಿಗಾಗಿ ನಾಯಕ ನಟರು ದೇಹದ ತೂಕ ಹೆಚ್ಚಿಸಿಕೊಳ್ಳುವುದು ಹಾಗೂ ಇಳಿಸಿಕೊಳ್ಳುವುದು ಸಹಜ. ಆದರೆ ಆರೋಗ್ಯದ ಸಮಸ್ಯೆಗಳಿಂದ ದೇಹಾಕಾರದಲ್ಲಿ ಬದಲಾವಣೆಗಳಾದರೆ, ಅದನ್ನು ಮತ್ತೆ ಮೊದಲಿನಂತೆ ಮಾಡುವುದು ತುಂಬಾ ಕಷ್ಟದ ಕೆಲಸ. ಹೃತಿಕ್​ ರೋಷನ್​ ಜೀವನದಲ್ಲೂ ಇಂತಹದೊಂದು ಘಟನೆ ನಡೆದಿತ್ತು.

ಹೃತಿಕ್​ ರೋಷನ್


ಹೌದು, ಹೃತಿಕ್ ರೋಷನ್​ ದೇಹ ಸಹ ಔಟ್​ ಆಫ್​ ಶೇಪ್​ ಆಗಿತ್ತು. ಅದಕ್ಕೆ ಕಾರಣವೇನು..? ಅದರಿಂದ ಹೊರ ಬರಲು ಹೃತಿಕ್​ ಮಾಡಿದ್ದೇನು ಎನ್ನುವ ಪ್ರಶ್ನೆಗಳಿಗೆ ಉತ್ತರವಾಗಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ ಹೃತಿಕ್​.




ಹೃತಿಕ್​ ರೋಷನ್​ ಸೂಪರ್​ 30 ಸಿನಿಮಾಕ್ಕಾಗಿ ದೇಹದ ತೂಕ ಹೆಚ್ಚಿಕೊಂಡು ಕೊಂಚ ಹೊಟ್ಟೆಯನ್ನು ದಪ್ಪಗಾಗಿಸಿಕೊಂಡಿದ್ದರು. ನಂತರ 2018ರಲ್ಲಿ ವಾರ್​ ಸಿನಿಮಾಗಾಗಿ ಮತ್ತೆ ಫಿಟ್​ ಆಗಬೇಕಿತ್ತು. ಆದರೆ ಆಗಲೇ ಹೃತಿಕ್​ಗೆ ಸ್ಲಿಪ್​ ಡಿಸ್ಕ್​ನಿಂದಾಗಿ ವರ್ಕ್​ಔಟ್​ ಮಾಡಲಾಗ ಪರಿಸ್ಥಿತಿ ನಿರ್ಮಾಣವಾಗಿತ್ತು.

ಇದನ್ನೂ ಓದಿ: Hrithik Roshan Video: ವೈರಲ್​ ಆಗುತ್ತಿದೆ ಹೃತಿಕ್ ರೋಷನ್​ ಬಾಲ್ಯದ ವಿಡಿಯೋ..!​

ನಂತರ ಅದೇ ನೋವಿನಲ್ಲೇ ಹೃತಿಕ್​ ತರಬೇತುದಾರನ ಸಹಾಯ ಪಡೆದು ನಿತ್ಯ ಜಿಮ್​ನಲ್ಲಿ ಬೆವರಿಳಿಸಿ ಕಟ್ಟು ಮಸ್ತಾದ ದೇಹವನ್ನು ತಮ್ಮದಾಗಿಸಿಕೊಂಡರು. ಅವರ ಫಿಟ್​ ಬಾಡಿ ಹಿಂದಿನ ಶ್ರಮ ಎಷ್ಟರ ಮಟ್ಟಿಗೆ ಇತ್ತೆಂದು ಈ 11 ನಿಮಿಷ ವಿಡಿಯೋದಲ್ಲಿ ತೋರಿಸಲಾಗಿದೆ.

ವಾರ್ ಸಿನಿಮಾದಲ್ಲಿ ಹೃತಿಕ್​ ಕಬೀರ್​ ಪಾತ್ರಕ್ಕೆ ಜೀವ ತುಂಬಿದ್ದು,​ ಚಿತ್ರದಲ್ಲಿ ಹೃತಿಕ್ ಎಂಟ್ರಿ ಸಖತ್ತಾಗಿತ್ತು. ಅವರು ಯಾವುದೇ ಹಾಲಿವುಡ್​ನ ಹೀರೋಗೂ ಕಡಿಮೆ ಇಲ್ಲ ಎಂಬಂತೆ ಮೂಡಿಬಂದಿದ್ದಾರೆ. ಪ್ರೇಕ್ಷಕರು ಬೆಳ್ಳಿ ಪರದೆ ಮೇಲೆ ಹೃತಿಕ್​ ಅವರನ್ನು ಬಿಟ್ಟ ಕಣ್ಣು ಬಿಟ್ಟಂತೆಯೇ ನೋಡುವಷ್ಟರ ಮಟ್ಟಿಗೆ ಹೃತಿಕ್​ ಮೇಕೋವರ್​ ಆಗಿದೆ. ಈ ಸಿನಿಮಾ ಬಾಕ್ಸಾಫಿಸ್​ನಲ್ಲಿ 100 ಕೋಟಿ ಗಳಿಕೆ ಮಾಡಿದೆ.

Samyuktha Hegde: ಲಾಕ್​ಡೌನ್​ನಲ್ಲಿ ಅಪ್ಪ-ಅಮ್ಮನೊಂದಿಗೆ ಕಾಲ ಕಳೆಯುತ್ತಿರುವ ಸಂಯುಕ್ತಾ ಹೆಗಡೆ..!


 

First published: