Hrithik Roshan: 5 ನಿಮಿಷಗಳಲ್ಲಿ Krrish 4 ಕತೆ ರೆಡಿಮಾಡಿದ ಅಭಿಮಾನಿ: ಹೃತಿಕ್ ರೋಷನ್ ಏನಂದ್ರು ಗೊತ್ತಾ?

ಟ್ವಿಟ್ಟರ್‌ ಬಳಕೆದಾರ ಸಂಬಿತ್ (@LuciferIite) ಕ್ರಿಶ್-4 ಚಿತ್ರದ ತಾನು ಬರೆದ ಕಥಾಹಂದರವನ್ನು ಹಂಚಿಕೊಂಡಿದ್ದು, ಇದನ್ನು ಚಿತ್ರಕ್ಕಾಗಿ ತನ್ನ ಇನ್‌ಪುಟ್‌ ಎಂದು ಬರೆದುಕೊಂಡರು. ಅಲ್ಲದೆ, ಬರಹಗಾರರ ವೆಬ್‌ಸೈಟ್ ವಾಟ್‌ಪ್ಯಾಡ್‌ಗಾಗಿ ಕೇವಲ ಐದು ನಿಮಿಷಗಳಲ್ಲಿ ಈ ಉಲ್ಲಾಸದ ಫ್ಯಾನ್-ಫಿಕ್ಷನ್‌ ಅನ್ನು ಬರೆದಿದ್ದೇನೆ ಎಂದೂ ಅವರು ಟ್ವೀಟ್‌ ಮೂಲಕ ತನ್ನ ಫಾಲೋವರ್‌ಗಳಿಗೆ ಹಾಗೂ ಕ್ರಿಶ್‌ ಚಿತ್ರದ ಅಭಿಮಾನಿಗಳಿಗೆ ಬರೆದುಕೊಂಡಿದ್ದಾರೆ.

Hrithik Roshan

Hrithik Roshan

  • Share this:

ಬಾಲಿವುಡ್ ನಟ ಹೃತಿಕ್ ರೋಷನ್ ಇತ್ತೀಚೆಗೆ ತಮ್ಮ ಸೂಪರ್‌ ಹೀರೋ ಫ್ರ್ಯಾಂಚೈಸ್ ‘ಕ್ರಿಶ್’ನ ನಾಲ್ಕನೇ ಸರಣಿಯ ಚಿತ್ರದ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾ ಹ್ಯಾಂಡಲ್‌ ಮೂಲಕ ಘೋಷಣೆ ಮಾಡಿದರು. ಈ ಮೂಲಕ ತಮ್ಮ ಹಾಗೂ ಬಾಲಿವುಡ್‌ ಚಿತ್ರಗಳ ಅಭಿಮಾನಿಗಳನ್ನು ಅಚ್ಚರಿಗೊಳಿಸಿದರು. ಈ ಘೋಷಣೆಯ ನಂತರ ಹೃತಿಕ್ ರೋಷನ್‌ ಅವರ ಅನೇಕ ಅಭಿಮಾನಿಗಳು ಮಾಡಿದ ಟ್ರೇಲರ್‌ಗಳು ಹಾಗೂ ಮ್ಯಾಶಪ್‌ಗಳನ್ನು ಮಾಡಿದರು. ಒಬ್ಬ ವ್ಯಕ್ತಿಯ ಕಥಾವಸ್ತುವಿಗೆ ಸ್ವತ: ನಟ ಹೃತಿಕ್‌ ರೋಷನ್‌ ಅವರಿಂದಲೇ ಅನುಮೋದನೆ ಸಿಕ್ಕಿತು..! ಟ್ವಿಟ್ಟರ್‌ನಲ್ಲಿ ಅಭಿಮಾನಿಯೊಬ್ಬ ಕ್ರಿಶ್‌-4 ಚಿತ್ರದ ಬಗ್ಗೆ ಕತೆಯ ಎಳೆಯನ್ನು ಬರೆದರು. ಈ ಟ್ವೀಟ್‌ ಸಿಕ್ಕಾಪಟ್ಟೆ ವೈರಲ್‌ ಆಯಿತು. ಸ್ವತ: ಹೃತಿಕ್‌ ರೋಷನ್‌ ಇದನ್ನು ಮೆಚ್ಚಿಕೊಂಡು ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.


ಟ್ವಿಟ್ಟರ್‌ ಬಳಕೆದಾರ ಸಂಬಿತ್ (@LuciferIite) ಕ್ರಿಶ್-4 ಚಿತ್ರದ ತಾನು ಬರೆದ ಕಥಾಹಂದರವನ್ನು ಹಂಚಿಕೊಂಡಿದ್ದು, ಇದನ್ನು ಚಿತ್ರಕ್ಕಾಗಿ ತನ್ನ ಇನ್‌ಪುಟ್‌ ಎಂದು ಬರೆದುಕೊಂಡರು. ಅಲ್ಲದೆ, ಬರಹಗಾರರ ವೆಬ್‌ಸೈಟ್ ವಾಟ್‌ಪ್ಯಾಡ್‌ಗಾಗಿ ಕೇವಲ ಐದು ನಿಮಿಷಗಳಲ್ಲಿ ಈ ಉಲ್ಲಾಸದ ಫ್ಯಾನ್-ಫಿಕ್ಷನ್‌ ಅನ್ನು ಬರೆದಿದ್ದೇನೆ ಎಂದೂ ಅವರು ಟ್ವೀಟ್‌ ಮೂಲಕ ತನ್ನ ಫಾಲೋವರ್‌ಗಳಿಗೆ ಹಾಗೂ ಕ್ರಿಶ್‌ ಚಿತ್ರದ ಅಭಿಮಾನಿಗಳಿಗೆ ಬರೆದುಕೊಂಡಿದ್ದಾರೆ. ವಾಟ್‌ಪ್ಯಾಡ್‌ ವೆಬ್‌ಸೈಟ್‌ನಲ್ಲಿ ಬರಹಗಾರರು ತಾವೇ ರಚಿಸಿದ ಕತೆಗಳನ್ನು ಬರೆಯುತ್ತಾರೆ ಹಾಗೂ ಸಮುದಾಯದ ಪ್ರತಿಕ್ರಿಯೆಯನ್ನು ಸಹ ಇದು ಪಡೆಯುತ್ತದೆ.


ತನ್ನ ಮಹಾಕಾವ್ಯದ ಕಾಲ್ಪನಿಕ ಶಕ್ತಿಯನ್ನು ಬಳಸಿಕೊಂಡು, ಅಭಿಮಾನಿ ಜಾದುವನ್ನು ಮರಳಿ ತರಲು ಬಯಸಿದ್ದಲ್ಲದೆ, ಪ್ರಿಯಾಂಕಾ ಚೋಪ್ರಾ ಮತ್ತು ಹೃತಿಕ್ ರೋಷನ್ ಪಾತ್ರಗಳು ಟೈಮ್‌ ಮಷಿನ್‌ನಂತೆ ಹಳೆಯ ಕಾಲಕ್ಕೆ ಅಥವಾ ಸಮಯಕ್ಕೆ ಹಿಂದಿರುಗಲು ಬಯಸಿದ್ದರು.


ಅಷ್ಟೇ ಅಲ್ಲದೆ, ಹೃತಿಕ್‌ ರೋಷನ್‌ ಅವರನ್ನು ಮಾತ್ರ ಸೂಪರ್‌ ಹೀರೋವನ್ನಾಗಿ ಮಾಡಲು ಬಯಸಲಿಲ್ಲ. ಅದರ ಜತೆಗೆ, ಪ್ರಿಯಾಂಕಾ ಚೋಪ್ರಾ ಪಾತ್ರಕ್ಕೂ ಸೂಪರ್‌ ಪವರ್‌ ಅನ್ನು ಸೇರಿಸಲು ಬಯಸುತ್ತಾರೆ. ಏಕೆಂದರೆ ನಾವು ಭಾರತದಲ್ಲಿನ್ನೂ ಮಹಿಳಾ ಪ್ರಧಾನ ಸೂಪರ್‌ ಹೀರೋ ಚಲನಚಿತ್ರವನ್ನು ಹೊಂದಿಲ್ಲ.


ಈ ಟ್ವೀಟ್‌ನಲ್ಲಿ ಅವರ ಕಥಾ ಹಂದರವನ್ನು ನೀವೇ ಓದಿ..

ಚಿತ್ರದ ನಿರ್ದೇಶಕ ಮತ್ತು ಹೃತಿಕ್ ಅವರ ತಂದೆ ರಾಕೇಶ್ ರೋಷನ್ ಕೂಡ ಅಂತಹ ರೋಮಾಂಚನಕಾರಿ ಕಥಾವಸ್ತುವನ್ನು ತರಲು ಎಂದಿಗೂ ಸಾಧ್ಯವಾಗುವುದಿಲ್ಲ ಎಂದು ಅವರು ತಮ್ಮ ಟ್ವೀಟ್‌ನಲ್ಲಿ ಸೇರಿಸಿಕೊಂಡಿದ್ದಾರೆ.

ಅವರ ಟ್ವೀಟ್‌ಗಳು ಅನೇಕರನ್ನು ಆನ್‌ಲೈನ್‌ನಲ್ಲಿ ವಿಭಜಿಸಿವೆ. ಇನ್ನು, ಸಂಬಿತ್ ತಮ್ಮ ಟ್ವೀಟ್‌ನಲ್ಲಿ ಬಾಲಿವುಡ್‌ ನಟ ಹೃತಿಕ್‌ ರೋಷನ್‌ ಅವರನ್ನು ಟ್ಯಾಗ್‌ ಮಾಡಿರಲಿಲ್ಲ. ಆದರೂ ಸಹ, ಈ ಟ್ವೀಟ್‌ ಕ್ರಿಶ್‌ ಸರಣಿಯ ಪ್ರಮುಖ ನಟನೆ ಗಮನ ಸೆಳೆದಿದೆ. ಅಂತಿಮವಾಗಿ ಅವರ ಪ್ರಯತ್ನವನ್ನು ಶ್ಲಾಘಿಸಿದ ಹೃತಿಕ್‌ ರೋಷನ್‌, ತನ್ನ ಈ ಅಭಿಮಾನಿಯ ಕಲ್ಪನೆಗೆ 100 ಅಂಕಗಳನ್ನು ನೀಡಿದರು.


ನಟ ಹೃತಿಕ್‌ ರೋಷನ್‌ ಮಾತ್ರವಲ್ಲ, ನೆಟ್ಟಿಗರು ಕೂಟ ಈ ಕ್ರೇಜಿ ಕಥಾ ವಸ್ತುವನ್ನು ಹಾಗೂ ಕತೆಯ ಟ್ವಿಸ್ಟ್‌ಗಳನ್ನು ಆನಂದಿಸಿದ್ದಾರೆ. ಅಲ್ಲದೆ, ಸಂಬಿತ್‌ ಟ್ವೀಟ್‌ನಂತೆ ರಾಕೇಶ್‌ ರೋಷನ್‌ ಈ ರೀತಿಯ ವಿಷಯದೊಂದಿಗೆ ಬರಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಅವರ ಕೆಲವು ಆಲೋಚನೆಗಳು ಫಲಪ್ರದವಾಗಬಹುದು ಎಂದು ಇತರರು, ತಮ್ಮನ್ನು ಅಭಿನಂದಿಸುವಾಗ ಆಶಿಸಿದರು.


ಸಂಬಿತ್‌ ಅವರ ಟ್ವೀಟ್‌ಗೆ ಕೆಲ ನೆಟ್ಟಿಗರ ಪ್ರತಿಕ್ರಿಯೆಗಳು ಹೀಗಿದೆ ನೋಡಿ..
ಸಂಬಿತ್‌ ಅವರ ಈ ಟ್ವೀಟ್‌ ಅನ್ನು 1700 ಕ್ಕೂ ಹೆಚ್ಚು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಹಲವರು ಪ್ರತಿಕ್ರಿಯೆ ಮಾಡಿದ್ದಾರೆ. ಇನ್ನು, ಸಂಬಿತ್‌ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ನಟ ಹೃತಿಕ್‌ ರೋಷನ್‌ ಅವರ ಟ್ವೀಟ್‌ಗೆ 3 ಸಾವಿರಕ್ಕೂ ಅಧಿಕ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
First published: