• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Hrithik Roshan: ಕಾರ್ ಒಳಗೆ ಗರ್ಲ್​ಫ್ರೆಂಡ್​ ಜೊತೆ ಹೃತಿಕ್ ರೋಷನ್ ಲಿಪ್​ಲಾಕ್! ವಿಡಿಯೋ ವೈರಲ್

Hrithik Roshan: ಕಾರ್ ಒಳಗೆ ಗರ್ಲ್​ಫ್ರೆಂಡ್​ ಜೊತೆ ಹೃತಿಕ್ ರೋಷನ್ ಲಿಪ್​ಲಾಕ್! ವಿಡಿಯೋ ವೈರಲ್

ಹೃತಿಕ್ ರೋಷನ್-ಸಬಾ ಅಜಾದ್

ಹೃತಿಕ್ ರೋಷನ್-ಸಬಾ ಅಜಾದ್

ಬಾಲಿವುಡ್ ನಟ ಹೃತಿಕ್ ರೋಷನ್ ಗರ್ಲ್​ಫ್ರೆಂಡ್​ ಜೊತೆ ಏರ್​ಪೋರ್ಟ್​ನಲ್ಲಿ ಲಿಪ್​ಕಿಸ್ ಮಾಡುವ ವಿಡಿಯೋ ಆನ್​ಲೈನ್​ನಲ್ಲಿ ಲೀಕ್ ಆಗಿದ್ದು ಎಲ್ಲೆಡೆ ವೈರಲ್ ಆಗಿದೆ.

  • News18 Kannada
  • 5-MIN READ
  • Last Updated :
  • Bangalore, India
  • Share this:

ಸೆಲೆಬ್ರಿಟಿಗಳು ಮನೆಯಿಂದ ಹೊರ ಬರುವಾಗ ಸ್ವಲ್ಪ ಹೆಚ್ಚೇ ಜಾಗರೂಕತೆ ವಹಿಸಬೇಕಾಗುತ್ತದೆ. ಎಷ್ಟು ಕೇರ್​ಫುಲ್ ಆಗಿದ್ದರೂ ಅವರ ಕುರಿತು ವಿಡಿಯೋ ಅಥವಾ ಫೋಟೋ ಬೇಗನೆ ವೈರಲ್ ಆಗಿಬಿಡುತ್ತದೆ. ಇದೀಗ ಬಾಲಿವುಡ್ (Bollywood) ಸ್ಟಾರ್ ನಟನ ಲಿಪ್ ಕಿಸ್ (Lip Kiss) ವಿಡಿಯೋ (Video) ವೈರಲ್ (Viral) ಆಗಿದೆ. ಹೃತಿಕ್ ರೋಷನ್ ಅವರು ಗರ್ಲ್​ಫ್ರೆಂಡ್ ಸಬಾ ಆಜಾದ್ ಜೊತೆ ಏರ್ಪೋರ್ಟ್​ ನಲ್ಲಿ (Airport) ಕಾಣಿಸಿಕೊಂಡರು. ಬಾಲಿವುಡ್ ಸ್ಟಾರ್ ನಟನ ಲಿಪ್​ಲಾಕ್ ವಿಡಿಯೋ ಈಗ ಎಲ್ಲಾ ಕಡೆಗಳಲ್ಲಿ ವೈರಲ್ ಆಗಿದೆ. ಮುಂಬೈ  (Mumbai) ಏರ್ಪೋರ್ಟ್​ನಲ್ಲಿ ಗರ್ಲ್​ಫ್ರೆಂಡ್ (Girl Friend) ಸಬಾಳ ಜೊತೆ ಬಂದಿದ್ದರು ಹೃತಿಕ್. ಈ ಸಂದರ್ಭ ಈ ಜೋಡಿ ಕಾರಿನ ಒಳಗೆ ಲಿಪ್​ಲಾಕ್ ಮಾಡಿದ್ದಾರೆ. ಇದರ ವಿಡಿಯೋ ಈಗ ವೈರಲ್ (Viral) ಆಗಿದೆ.


ಸಬಾ ಅವರು ವಿದೇಶಕ್ಕೆ ತೆರಳಲಿಲ್ಲ. ಬದಲಾಗಿ ಹೃತಿಕ್ ಅವರನ್ನು ಭೇಟಿ ಮಾಡಲು ಬಂದಿದ್ದರು. ಇವರ ವಿಡಿಯೋವನ್ನು ಫ್ಯಾನ್ ಪೇಜ್​ಗಳು ಶೇರ್ ಮಾಡುತ್ತಿದ್ದು ಕಿಸ್ ಆಫ್ ಲವ್ ಎಂದು ಬಣ್ಣಿಸಿದ್ದಾರೆ.


ಕಳೆದ ವರ್ಷದಿಂದ ವೈರಲ್ ಆದ ಜೋಡಿ


ಕಳೆದ ವರ್ಷ ಆರಂಭದಿಂದಲೇ ಸಬಾ ಹಾಗೂ ಹೃತಿಕ್ ರೋಷನ್ ಡೇಟಿಂಗ್ ಮಾಡುತ್ತಿರುವ ವಿಚಾರ ಬೆಳಕಿಗೆ ಬಂತು. ಒಂದು ವರ್ಷದ ಹಿಂದೆ ಇವರಿಬ್ಬರೂ ಡಿನ್ನರ್ ಡೇಟ್​ನಲ್ಲಿ ಒಟ್ಟಿಗೆ ಕಾಣಿಸಿಕೊಂಡ ನಂತರ ಇವರ ಸಂಬಂಧದ ಬಗ್ಗೆ ಚರ್ಚೆ ಶುರುವಾಯಿತು.









View this post on Instagram






A post shared by @varindertchawla





ಸಬಾ ಹೃತಿಕ್ ರೋಷನ್ ಅವರ ಫ್ಯಾಮಿಲಿ ಗೆಟ್​ ಟು ಗೆದರ್​ನಲ್ಲಿಯೂ ಭಾಗವಹಿಸಿದ್ದರು. ನಿರ್ಮಾಪಕ ಕರಣ್ ಜೋಹರ್ ಅವರ 50 ನೇ ವರ್ಷದ ಬರ್ತ್​ಡೇ ಪಾರ್ಟಿಯಲ್ಲಿ ಹೃತಿಕ್ ತಮ್ಮ ಗರ್ಲ್​ಫ್ರೆಂಡ್ ಜೊತೆ ಬಂದರು. ಹೃತಿಕ್ ಇದಕ್ಕೂ ಮುನ್ನ ಇಂಟೀರಿಯರ್ ಡಿಸೈನರ್ ಸುಸೇನ್ ಖಾನ್ ಅವರನ್ನು ಮದುವೆಯಾಗಿದ್ದರು.


ಇದನ್ನೂ ಓದಿ: Rakhi Sawant: ಇಷ್ಟು ಚಂದದ ಹೆಂಡ್ತಿಯನ್ನು ಆದಿಲ್ ಕಳ್ಕೊಂಡ! ರಾಖಿ ಹೇಳಿದ್ದಿಷ್ಟು


ಇತ್ತೀಚಿನ ಸಂದರ್ಶನವೊಂದರಲ್ಲಿ ಸಬಾ ಜನರು ತನ್ನ ಖಾಸಗಿ ಜೀವನದ ಬಗ್ಗೆ ಮಾತನಾಡುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಿದರು. ನ್ಯೂಸ್18 ಜೊತೆಗಿನ ಸಂದರ್ಶನದಲ್ಲಿ ತನ್ನ ಹಾಗೂ ಹೃತಿಕ್ ಸಂಬಂಧದ ಬಗ್ಗೆ ಎಷ್ಟೊಂದು ಗಮನ ಹರಿಸಲಾಗುತ್ತಿದೆ ಎನ್ನುವುದರ ಬಗ್ಗೆ ಮಾತನಾಡಿದ್ದಾರೆ.


ಬವಾಲ್' ಚಿತ್ರ ನಿರ್ಮಾಪಕ ನಿತೇಶ್ ತಿವಾರಿ ಅವರು ರಾಮಾಯಣ ಕಥೆಯನ್ನು ಬೆಳ್ಳಿ ಪರದೆಯ ಮೇಲೆ ತರಲು ಬಯಸಿದ್ದು ರಾವಣ ಪಾತ್ರದಲ್ಲಿ ಅಭಿನಯಿಸಲು ಹೃತಿಕ್ ಜೊತೆಗೆ ಮಾತುಕತೆ ನಡೆಸಿದ್ದರಂತೆ.


ಯಾರಾದರೂ ಕೆಲಸಕ್ಕೆ ಹೋದರೆ, ಎಲ್ಲಿ ಹೋದರೂ, ಯಾವುದೇ ಕ್ಷೇತ್ರಕ್ಕೆ ಹೋದರೂ ನೀವು ಕೆಲಕ್ಕೆ ಹೋಗುತ್ತೀರಿ, ಮನೆಗೆ ಬರುತ್ತೀರಿ. ನಿಮ್ಮ ಖಾಸಗಿ ಜೀವನವನ್ನು ಯಾರೂ ಮಾತನಾಡುವುದಿಲ್ಲ. ಆದರೆ ಆ ರೀತಿ ನಡೆಯುವ ಒಂದೇ ಒಂದು ಇಂಡಸ್ಟ್ರಿ ಸಿನಿಮಾ ಫೀಲ್ಡ್. ಆದರೆ ಅದರ ಬಗ್ಗೆ ಹೆಚ್ಚು ಮಾತನಾಡುವುದು ಬೇಡ ಎಂದಿದ್ದಾರೆ.


ಫ್ಯಾಮಿಲಿ ಫಂಕ್ಷನ್​ಗಳಲ್ಲಿಯೂ ಭಾಗಿ


ಕಳೆದ ತಿಂಗಳು ಮುಂಬೈನಲ್ಲಿ ವಿಶ್ವದ ಅತಿದೊಡ್ಡ ಸಂಗೀತ ಉತ್ಸವಗಳಲ್ಲಿ ಒಂದಾದ ಲೊಲ್ಲಾಪಲೂಜಾದಲ್ಲಿ ಶೋ ಕೊಟ್ಟಂತಹ ಅನೇಕ ಕಲಾವಿದರಲ್ಲಿ ಸಾಬಾ ಕೂಡ ಒಬ್ಬರು. ನಟನ ಮಾಜಿ ಪತ್ನಿ ಮತ್ತು ಇಂಟೀರಿಯರ್ ಡಿಸೈನರ್ ಸುಸೇನ್ ಖಾನ್ ಅವರು ತಮ್ಮ ಗೆಳೆಯ ನಟ ಅರ್ಸ್ಲಾನ್ ಗೋನಿ ಅವರೊಂದಿಗೆ ಸಂಗೀತ ಉತ್ಸವದಲ್ಲಿ ಭಾಗವಹಿಸಿದ್ದರು.




ಹೃತಿಕ್ ಅವರ ಪುತ್ರ ಹೃದಯನ್ ರೋಷನ್ ಕೂಡ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಹೃತಿಕ್ ಅವರ ಸೋದರಸಂಬಂಧಿ, ಉದಯೋನ್ಮುಖ ನಟ ಪಶ್ಮಿನಾ ರೋಷನ್, ಹಾಗೆಯೇ ಸಬಾ ಮತ್ತು ಸುಸೇನ್ ಫೋಟೋಸ್ ಮತ್ತು ವೀಡಿಯೊಗಳನ್ನು Instagram ಸ್ಟೋರೀಸ್‌ನಲ್ಲಿ ಶೇರ್ ಮಾಡಿದ್ದಾರೆ.


ಕೌಟುಂಬಿಕ ಕಾರ್ಯಕ್ರಮಗಳು ಮತ್ತು ವೆಕೇಷನ್​ಗೆ ಸಬಾ ಆಗಾಗ ಹೃತಿಕ್ ಜೊತೆಯಲ್ಲಿ ಬರುತ್ತಾರೆ. ಯುರೋಪ್‌ನಲ್ಲಿ ಹೃತಿಕ್ ಅವರ ಪುತ್ರರು ಮತ್ತು ಸಂಬಂಧಿಗಳೊಂದಿಗೆ ಫ್ಯಾಮಿಲಿ ವೆಕೇಷನ್​ನಲ್ಲಿ ಅವರು ಕ್ರಿಸ್ಮಸ್ ಕೂಡಾ ಒಟ್ಟಿಗೆ ಆಚರಿಸಿದರು.

Published by:Divya D
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು