Hrithik roshan ಮಾಜಿ ಪತ್ನಿಗೆ “ಡಾರ್ಲಿಂಗ್” ಎಂದ ಅರ್ಸ್ಲಾನ್ ಗೋನಿ..ಅವರಿಬ್ಬರ ಪ್ರೇಮ ಸಂಬಂಧ ನಿಜವೇ?

Hrithik Roshan's ex-wife Sussanne Khan: ಸುಸಾನೆಯ ಹುಟ್ಟುಹಬ್ಬಕ್ಕೆ ಅರ್ಸ್ಲಾನ್ ಬರೆದಿರುವ ಬರಹವೊಂದು, ಅವರಿಬ್ಬರ ನಡುವಿನ ಲವ್ವಿಡವಿ ನೂರಕ್ಕೆ ನೂರು ಸತ್ಯ ಎಂಬುದನ್ನು ಸಾಬೀತು ಪಡಿಸುತ್ತಿದೆ.

Sussanne Khan - Arslan Goni

Sussanne Khan - Arslan Goni

  • Share this:
    Sussanne Khan - Arslan Goni: ಬಾಲಿವುಡ್ ನಟ ಹೃತಿಕ್ ರೋಶನ್ (Hrithik roshan) ಮಾಜಿ ಪತ್ನಿ ಸುಸಾನೆ ಖಾನ್ ಮತ್ತೆ ಪ್ರೇಮದಲ್ಲಿ ಬಿದ್ದಿದ್ದಾರೆ. ಸುಸಾನೆ ಅರ್ಸ್ಲಾನ್ ಗೋನಿರೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಾರೆ ಎಂದು ದೀರ್ಘಕಾಲದಿಂದ ಗಾಳಿ ಸುದ್ದಿಗಳು ಹರಿದಾಡುತ್ತಿದ್ದವು. ಸುಸಾನೆ ಖಾನ್ - ಅರ್ಸ್ಲಾನ್ ಗೋನಿ ರಹಸ್ಯವಾಗಿ ಡೇಟಿಂಗ್ (Dating) ಮಾಡುತ್ತಿದ್ದಾರೆ ಎಂಬುದನ್ನು ಬಿಂಬಿಸುವ, ಅವರಿಬ್ಬರು ಜೊತೆಗಿರುವ ಫೋಟೋಗಳನ್ನು ಒಳಗೊಂಡಿರುವ ವರದಿಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಆದರೆ ಅವರ ಈ ರಹಸ್ಯ ಈಗ ರಹಸ್ಯವಾಗಿ ಉಳಿದಿಲ್ಲ. ಸುಸಾನೆಯ ಹುಟ್ಟುಹಬ್ಬಕ್ಕೆ ಅರ್ಸ್ಲಾನ್ ಬರೆದಿರುವ ಬರಹವೊಂದು, ಅವರಿಬ್ಬರ ನಡುವಿನ ಲವ್ವಿಡವಿ ನೂರಕ್ಕೆ ನೂರು ಸತ್ಯ ಎಂಬುದನ್ನು ಸಾಬೀತು ಪಡಿಸುತ್ತಿದೆ. ಹೌದು, ಅವರು ಸುಸಾನೆಯ ಜನ್ಮ ದಿನದಂದು “ಡಾರ್ಲಿಂಗ್” ಎಂದು ಉಲ್ಲೇಖಿಸಿ ಆಕೆಗೆ ಹೃದಯಪೂರ್ವಕವಾಗಿ ಶುಭ ಕೋರಿದ್ದಾರೆ. ಅದಕ್ಕುತ್ತರವಾಗಿ ಸುಸಾನೆ ಖಾನ್, ಆತ ಆಕೆಯ ಪಾಲಿಗೆ “ ಎಲ್ಲವೂ” ಆಗಿದ್ದಾರೆ ಎಂದು ಹೇಳುವ ಮೂಲಕ ಜಗತ್ತಿಗೆ ತಮ್ಮ ನಡುವಿನ ಸಂಬಂಧವನ್ನು ಬಿಚ್ಚಿಟ್ಟಿದ್ದಾರೆ.

    ಇನ್‍ಸ್ಟಾಗ್ರಾಂನಲ್ಲಿ (Instagram) ಅರ್ಸ್ಲಾನ್ ತಮ್ಮ ನಲ್ಲೆ ಸುಸಾನೆಗೆ ಶುಭ ಕೋರಿದ್ದು ಹೀಗೆ : “ಹುಟ್ಟು ಹಬ್ಬದ ಶುಭಾಶಯಗಳು ಡಾರ್ಲಿಂಗ್. . . .ಉತ್ತಮ ವರ್ಷ ಮತ್ತು ಅದ್ಭುತ ಜೀವನ ನಿನ್ನದಾಗಲೆಂದು ನಾನು ಪ್ರಾರ್ಥಿಸುತ್ತೇನೆ. . . . ನನ್ನ ಜೀವನದಲ್ಲಿ ನಾನು ಕಂಡ ಅತ್ಯುತ್ತಮ ಹೃದಯವುಳ್ಳ ವ್ಯಕ್ತಿ ನೀನು. ಮತ್ತು ಇದು ಅದ್ಭುತ ಸಂದರ್ಭ. ದೇವರು ನೀನು ಬಯಸುವ ಎಲ್ಲವನ್ನು ನಿನಗೆ ನೀಡಲಿ. ಬಹಳಷ್ಟು ಮತ್ತು ಬಹಳಷ್ಟು ಪ್ರೀತಿ.”

    ಗೆಳೆಯನ ಈ ಶುಭಾಶಯಕ್ಕೆ ಕೂಡಲೇ ಪ್ರತಿಕ್ರಿಯಿಸಿದ ಸುಸಾನೆ, “ ಧನ್ಯವಾದಗಳು ಧನ್ಯವಾದಗಳು . . . . .ನನ್ನ “ಎಲ್ಲದಕ್ಕೂ” ಧನ್ಯವಾದಗಳು” ಎಂದು ಉತ್ತರಿಸಿದ್ದಾರೆ.



    ಇದನ್ನು ಓದಿ: ಬ್ರೇಕಪ್​ ನಂತರ Rider​ ಚಿತ್ರದ​ ನಟಿಗೆ ಹಿಂಸೆ ಕೊಡುತ್ತಿದ್ದ ಪಾಗಲ್​ ಪ್ರೇಮಿ ಬಂಧನ

    ಸುಸಾನೆ ಮತ್ತು ಅರ್ಸ್ಲಾನ್ ನಡುವೆ ಎಂತಹ ಸಂಬಂಧ ಇದೆ ಎಂಬುದನ್ನು ತಿಳಿಯಲು ಇದು ಸಾಕಾಗುತ್ತದೆ ಅಲ್ಲವೇ? ಅದಲ್ಲದೆ, ಇನ್‍ಸ್ಟಾದಲ್ಲಿ ಹುಟ್ಟು ಹಬ್ಬದ ದಿನ ಶುಭ ಕೋರುವ ಮೂಲಕ ಸಂಬಂಧವನ್ನು ಅಧಿಕೃತವಾಗಿ ತಿಳಿಸುವುದು ಇತ್ತೀಚಿನ ದಿನಗಳಲ್ಲಿ ಬಾಲಿವುಡ್‍ನಲ್ಲಿ ಒಂದು ಟ್ರೆಂಡ್ ಆಗಿದೆ. ಒಂದೇ ಒಂದು ಇನ್‍ಸ್ಟಾಗ್ರಾಂ ಪೋಸ್ಟ್, ಎಲ್ಲಾ ಸಂಗತಿಯನ್ನು ಒಮ್ಮೆಲೆ ನೇರವಾಗಿ ಎಲ್ಲರಿಗೂ ತಲುಪಿಸಿ ಬಿಡುತ್ತದೆ.



    ಇದನ್ನು ಓದಿ: ಕನ್ನಡ ಬಿಗ್ ಬಾಸ್​ ಖ್ಯಾತಿಯ ಗೀತಾ ಭಾರತಿ ಭಟ್​ Weight Loss Journey

    ಸುಸಾನೆ ಅರ್ಸ್ಲಾನ್ ಜೊತೆಗಿನ ಸಂಬಂಧವನ್ನು ಅಧಿಕೃತಗೊಳಿಸಿದ್ದಾರೆಯೇ?

    ಅರ್ಸ್ಲಾನ್ , ಒಂದಿಷ್ಟು ಸಿನಿಮಾಗಳಲ್ಲಿ ನಟಿಸಿರುವ ಭಾರತೀಯ ನಟ. ಆತ ಬಿಗ್‍ಬಾಸ್ ಸ್ಪರ್ಧಿ ಅಲಿ ಗೋನಿಯ ಸಹೋದರ ಕೂಡ. ಅರ್ಸ್ಲಾನ್ ಸುಸಾನೆಯ ಪೋಸ್ಟ್‌ಗಳಿಗೆ ಆಗಾಗ ಪ್ರತಿಕ್ರಿಯೆ ನೀಡುತ್ತಲೇ ಇರುತ್ತಾರೆ. ಸುಸಾನೆಯ ಜಿಮ್ ವಿಡಿಯೋ ಪೋಸ್ಟ್ ಒಂದಕ್ಕೆ , ಅರ್ಸ್ಲಾನ್ “ಸ್ಪೇಸ್ ಗರ್ಲ್” ಎಂದು ಪ್ರತಿಕ್ರಿಯಿಸಿದ್ದರು. ಸಿನಿಮಾ ಹಿನ್ನೆಲೆಯ ಕುಟುಂಬದ ಸುಸಾನೆ ಖಾನ್ , ಬಾಲಿವುಡ್ ನಟ ಹೃತಿಕ್ ರೋಶನ್‌ರನ್ನು 2000ನೇ ಇಸವಿಯಲ್ಲಿ ಮದುವೆಯಾಗಿದ್ದರು. 2014ರಲ್ಲಿ ವಿಚ್ಚೇದನ ಪಡೆದುಕೊಂಡ ಈ ದಂಪತಿ, ಆ ಬಳಿಕವೂ ಸ್ನೇಹಿತರಾಗಿ ಮುಂದುವರೆದಿದ್ದರು. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.
    First published: