ಬಾಲಿವುಡ್(Bollywood) ಜೋಡಿಗಳಾದ ಫರ್ಹಾನ್ ಅಖ್ತರ್(Farhan Akhtar) ಹಾಗೂ ಶಿಬಾನಿ ದಂಡೇಕರ್(Shibani Dandekar)ದಾಂಪತ್ಯ ಜೀವನಕ್ಕೆ (ಫೆ.19) ಕಾಲಿಟ್ಟಿದ್ದಾರೆ. ಮಹಾರಾಷ್ಟ್ರ(Maharashtra)ದ ಖಂಡಾಲದಲ್ಲಿ ಕುಟುಂಬಸ್ಥರು, ಸ್ನೇಹಿತರು ಕೇಲವೇ ಬಾಲಿವುಡ್(Bollywood) ಮಂದಿಯ ಸಮ್ಮುಖದಲ್ಲಿ ಸಿಂಪಲ್(Simple) ಆಗಿ ಈ ಜೋಡಿ ಮದುವೆ ಆಗಿದ್ದಾರೆ. ಇನ್ನೂ ಬಾಲ್ಯದ ಗೆಳೆಯ ಫರ್ಹಾನ್ ಅಖ್ತರ್ ಮದುವೆ(Marriage) ಮನೆ ಸಂಭ್ರಮದಲ್ಲಿ ನಟ ಹೃತಿಕ್ ರೋಷನ್(Hrithik Roshan) ಸಖತ್ ಆಗಿ ಡ್ಯಾನ್ಸ್(Dance) ಮಾಡಿದ್ದಾರೆ. ಹೃತಿಕ್ ರೋಷನ್ ಅವರು 'ಜಿಂದಗಿ ನಾ ಮಿಲೇಗಿ ದೊಬಾರಾ'(Zindagi Na Milegi Dobara) ಚಿತ್ರದ ಸೆನೋರಿಟಾ(Senorita) ಹಾಡಿಗೆ ಹೆಜ್ಜೆ ಹಾಕಿದ್ದರು. ಈ ವಿಡಿಯೋ ಭಾರೀ ವೈರಲ್ ಆಗಿದ್ದು,. ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಡುತ್ತಿದೆ.
ಮದುವೆಯಲ್ಲಿ ಭರ್ಜರಿ ಸ್ಟೆಪ್ಸ್ ಹಾಕಿದ ಹೃತಿಕ್ ರೋಷನ್!
ಹೃತಿಕ್ ಮತ್ತು ಫರ್ಹಾನ್ ಇಬ್ಬರು ಒಟ್ಟಿಗೆ ನಟಿಸಿರುವ 'ಜಿಂದಗಿ ನಾ ಮಿಲೇಗಿ ದೊಬಾರಾ' ಚಿತ್ರದ ಚಿತ್ರದ ಹಾಡಿಗೆ ಮದುವೆ ಮನೆಯಲ್ಲೂ ಇಬ್ಬರು ಒಟ್ಟಿಗೆ ಸ್ಟೆಪ್ ಹಾಕಿದ್ದಾರೆ. ಡ್ಯಾನ್ಸ್ ವೀಡಿಯೊದಲ್ಲಿ, ಹೃತಿಕ್ ಮತ್ತು ಫರ್ಹಾನ್ ಸೆನೊರಿಟಾ ಹಾಡಿಗೆ ಹಾಕಿರುವ ಸಿಗ್ನೇಚರ್ ಸ್ಟೆಪ್ ಅನ್ನು ನೋಡಬಹುದು. ವೀಡಿಯೊದಲ್ಲಿ ಹೃತಿಕ್ ರೋಷನ್ ಹುಕ್ ಸ್ಟೆಪನ್ನು ಮರೆತುಬಿಡುತ್ತಾರೆ, ಆದಾಗ್ಯೂ, ಅವರು ಫರ್ಹಾನ್ನಿಂದ ಸ್ವಲ್ಪ ಸಹಾಯ ಪಡೆದು ಮತ್ತೆ ನೆನಪಿಸಿಕೊಂಡು ಡ್ಯಾನ್ಸ್ ಮಾಡುತ್ತಾರೆ.
ಇದನ್ನೂ ಓದಿ: ಮಾಧುರಿ.. ವಯಸ್ಸು 54 ಆಯ್ತುರೀ! ಆದ್ರೂ ಹಾಗೇ ಇದ್ದಾರೆ ಡ್ಯಾನ್ಸ್ ಕ್ವೀನ್
ಈ ವೇಳೆಯಲ್ಲಿ ವರ ಫರ್ಹಾನ್ ಅಖ್ತರ್ ಕಪ್ಪು ಸೂಟಿನಲ್ಲಿ ಮಿಂಚುತ್ತಿದ್ದಾರೆ, ಇತ್ತ ಹೃತಿಕ್ ರೋಷನ್ ಬಿಳಿ ಮತ್ತು ಪೀಚ್ ಬಟ್ಟೆಯಲ್ಲಿ ಸಖತ್ತಾಗಿ ಕಾಣುತ್ತಿದ್ದರು. ಇಬ್ಬರ ನೃತ್ಯಕ್ಕೆ ನೆಟ್ಟಿಗರು ಕಾಮೆಂಟ್ ಮಾಡಿದ್ದು, ಎಂಥ ಮೂವ್ಸ್ ಎಂದು ಕಾಮೆಂಟ್ ಮಾಡಿದ್ದಾರೆ. ಹೃತಿಕ್ ರೋಷನ್ ತಮ್ಮ ತಂದೆ ರಾಕೇಶ್ ರೋಷನ್ ಮತ್ತು ತಾಯಿ ಪಿಂಕಿ ರೋಷನ್ ಅವರೊಂದಿಗೆ ಫರ್ಹಾನ್ ಮತ್ತು ಶಿಬಾನಿ ಅವರ ವಿವಾಹದಲ್ಲಿ ಭಾಗವಹಿಸಿದ್ದರು.
ಕುಟುಂಬಸ್ಥರು, ಆಪ್ತ ಸ್ನೇಹಿತರಷ್ಟೇ ಭಾಗಿ!
ಫೆ.19ರಂದು ಫರ್ಹಾನ್ ಅಖ್ತರ್ ಹಾಗೂ ಶಿಬಾನಿ ದಂಡೇಕರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಹಾರಾಷ್ಟ್ರದ ಖಂಡಾಲದಲ್ಲಿ ಈ ಮದುವೆ ನಡೆದಿದೆ. ಫರ್ಹಾನ್ ಅಖ್ತರ್ ಅವರ ತಂದೆ ಜಾವೇದ್ ಅಖ್ತರ್ ಹಾಗೂ ತಾಯಿ ಶಬಾನಾ ಅಜ್ಮಿ ಅವರ ನಿವಾಸದಲ್ಲಿ ವಿವಾಹ ಸಮಾರಂಭ ನೆರವೇರಿತು. ಫರ್ಹಾನ್ ಅಖ್ತರ್-ಶಿಬಾನಿ ದಂಡೇಕರ್ ಮದುವೆಗೆ ಕೆಲವೇ ಕೆಲವು ಮಂದಿಗೆ ಮಾತ್ರ ಆಹ್ವಾನ ನೀಡಲಾಗಿತ್ತು.
ಕಪ್ಪು ಬಣ್ಣದ ಶೂಟ್ನಲ್ಲಿ ಮಿಂಚಿದ ಫರ್ಹಾನ್ ಅಖ್ತರ್!
ಫರ್ಹಾನ್ ಅಖ್ತರ್ ಸಹೋದರಿ ಜೋಯಾ ಅಖ್ತರ್, ನಟಿ ರಿಯಾ ಚಕ್ರವರ್ತಿ, ಶಿಬಾನಿ ಸಹೋದರಿ ಅನುಷಾ ದಂಡೇಕರ್, ನಟ ಹೃತಿಕ್ ರೋಷನ್, ಗಾಯಕ ಶಂಕರ್ ಮಹದೇವನ್ ಮುಂತಾದವರು ಈ ಸಂಭ್ರಮದ ಕ್ಷಣಕ್ಕೆ ಹಾಜರಿದ್ದರು. ಮದುವೆಯಲ್ಲಿ ಶಂಕರ್ ಮಹದೇವನ್ ಅವರು ‘ದಿಲ್ ಚಾಹ್ತಾ ಹೈ’ ಸಿನಿಮಾದ ಗೀತೆಯನ್ನು ಹಾಡುವ ಮೂಲಕ ನವಜೋಡಿಗೆ ಅಭಿನಂದನೆ ತಿಳಿಸಿದರು. ಫರ್ಹಾನ್ ಅಖ್ತರ್ ಕಪ್ಪು ಬಣ್ಣದ ಸೂಟ್ ಧರಿಸಿದ್ದರೆ, ಶಿಬಾನಿ ದಂಡೇಕರ್ ಅವರು ಕೆಂಪು ಗೌನ್ ಧರಿಸಿದ್ದರು.
ಇದನ್ನೂ ಓದಿ: ಈ ಸಿನಿಮಾ ಕತೆಗಳೆಲ್ಲಾ ನಿಜ ಜೀವನದಲ್ಲಿ ನಡೆದಿರೋದೇ! ನೀವು ನೋಡಿದ್ದೀರಾ?
ಫರ್ಹಾನ್ ಅಖ್ತರ್ ಅವರಿಗೆ ಇದು ಎರಡನೇ ಮದುವೆ. ಮೊದಲ ಪತ್ನಿ ಅದುನಾ ಭಬಾನಿಗೆ 2017ರಲ್ಲಿ ಅವರು ವಿಚ್ಛೇದನ ನೀಡಿದ್ದರು. ಬಳಿಕ ಶಿಬಾನಿ ಅವರನ್ನು 4 ವರ್ಷದಿಂದ ಪ್ರೀತಿ ಮಾಡಿ ಈಗ ಮದುವೆ ಆಗಿದ್ದಾರೆ. ಇಬ್ಬರ ಮದುವೆ ಮುಸ್ಲಿಂ ಧರ್ಮದ ಸಂಪ್ರದಾಯ ಅಥವಾ ಮರಾಠಿ ಸಂಪ್ರದಾಯದಂತೆ ನಡೆದಿಲ್ಲ. ಬದಲಾಗಿ, ಪರಸ್ಪರರಿಗೆ ಬರೆದುಕೊಂಡ ಪ್ರತಿಜ್ಞೆಗಳನ್ನು ಎಲ್ಲರ ಎದುರು ಓದುವ ಮೂಲಕ ಫರ್ಹಾನ್ ಅಖ್ತರ್ ಮತ್ತು ಶಿಬಾನಿ ದಂಡೇಕರ್ ಮದುವೆ ಮಾಡಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ