• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Hrithik Roshan: ನಮ್ಮಿಂದಲೇ ನೀವ್ ಸ್ಟಾರ್ ಆಗಿದ್ದು! ಸ್ವಿಗ್ಗಿ ಬಾಯ್​ನನ್ನು ತಳ್ಳಿದ ಹೃತಿಕ್ ರೋಷನ್​ಗೆ ನೆಟ್ಟಿಗರ ಟೀಕೆ

Hrithik Roshan: ನಮ್ಮಿಂದಲೇ ನೀವ್ ಸ್ಟಾರ್ ಆಗಿದ್ದು! ಸ್ವಿಗ್ಗಿ ಬಾಯ್​ನನ್ನು ತಳ್ಳಿದ ಹೃತಿಕ್ ರೋಷನ್​ಗೆ ನೆಟ್ಟಿಗರ ಟೀಕೆ

ಬಾಲಿವುಡ್ ನಟ ಹೃತಿಕ್ ರೋಷನ್

ಬಾಲಿವುಡ್ ನಟ ಹೃತಿಕ್ ರೋಷನ್

Hrithik Roshan: ಸೆಲೆಬ್ರಿಟಿಗಳು ಹಲವು ಸಲ ಜನ ಸಾಮಾನ್ಯರನ್ನು ಕೆಟ್ಟದಾಗಿ ನಡೆಸಿಕೊಂಡು ಟ್ರೋಲ್ ಆಗುತ್ತಾರೆ. ಈಗ ಹೃತಿಕ್ ರೋಷನ್ ವಿರುದ್ಧ ನೆಟ್ಟಿಗರು ಗರಂ ಆಗಿದ್ದೇಕೆ ಗೊತ್ತಾ?

  • News18 Kannada
  • 5-MIN READ
  • Last Updated :
  • Mumbai, India
  • Share this:

ಇತ್ತೀಚೆಗೆ ನಟಿ ಪ್ರೀತಿ ಜಿಂಟಾ ಭಿಕ್ಷುಕನನ್ನು ಕಾಣುತ್ತಲೇ ಕಾರಿನ  (Car) ಡೋರ್ ಎಳೆದ ವಿಡಿಯೋ ವೈರಲ್ (Video Viral) ಆಗಿತ್ತು. ನಟಿಯ ಈ ವರ್ತನೆ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ (Social Media) ಸಿಕ್ಕಾಪಟ್ಟೆ ಟೀಕೆ ವ್ಯಕ್ತವಾಗಿತ್ತು. ಇದೀಗ ಮತ್ತೊಬ್ಬ ನಟ ಇದೇ ರೀತಿ ಅಭಿಮಾನಿಯ (Fans) ಜೊತೆ ಕೆಟ್ಟದಾಗಿ ವರ್ತಿಸಿ ನೆಟ್ಟಿಗರ ಕೋಪಕ್ಕೆ ಗುರಿಯಾಗಿದ್ದಾರೆ. ನಟ ಹೃತಿಕ್ ರೋಷನ್ (Hrithik Roshan) ಅವರು ಸಿಕ್ಕಾಪಟ್ಟೆ ಟ್ರೋಲ್ (Troll) ಆಗಿದ್ದು ಅವರ ವಿಡಿಯೋ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರಂತೂ (Netizens) ಕಂಗನಾ ರಣಾವತ್ (Kangana Ranaut) ಹೇಳೋದು ಸುಮ್ನೆ ಅಲ್ಲ ಎಂದು ಜನ ಮಾತನಾಡಿಕೊಂಡಿದ್ದಾರೆ.


ತನ್ನ ಅಭಿಮಾನಿ ಜೊತೆ ಕೆಟ್ಟದಾಗಿ ವರ್ತಿಸಿದ್ದಕ್ಕೆ ಶೆಹನಾಜ್ ಗಿಲ್ ತನ್ನ ಬಾಡಿಗಾರ್ಡ್ ಮೇಲೆ ರೇಗಿದ್ದು ನಿಮಗೆ ನೆನಪಿದೆಯಾ? ಆದರೆ ಎಲ್ಲಾ ಸೆಲೆಬ್ರಿಟಿಗಳು ಹೀಗಿರುವುದಿಲ್ಲ. ಅಭಿಮಾನಿಯನ್ನು ತಳ್ಳಿದಾಗ ಅಕ್ಷಯ್ ಕುಮಾರ್ ಅವರ ಘಟನೆಯಲ್ಲೂ ಇದೇ ಆಗಿತ್ತು. ಇಂತಹ ಘಟನೆಗಳಲ್ಲಿ ಬಹಳಷ್ಟು ಸಂದರ್ಭ ಸ್ಟಾರ್​ಗಳು ಕ್ಷಮೆ ಕೇಳಿದ್ದಾರೆ. ಆದರೆ ಹೃತಿಕ್ ರೋಷನ್ ಹಾಗಲ್ಲ. ಹೃತಿಕ್ ರೋಷನ್ ಜೊತೆ ಅಭಿಮಾನಿಯೊಬ್ಬ ಫೋಟೋ ಕ್ಲಿಕ್ಕಿಸಲು ಯತ್ನಿಸಿದ್ದ. ಅವನನ್ನು ಹೃತಿಕ್ ರೋಷನ್ ಬಾಡಿಗಾರ್ಡ್ ಬಲವಾಗಿ ತಳ್ಳಿದ್ದಾನೆ.


ಇತ್ತೀಚಿನ ದಿನಗಳಲ್ಲಿ ಹೃತಿಕ್ ರೋಷನ್ ಹೆಚ್ಚಾಗಿ ಹೊರಗಡೆ ಕಾಣಿಸಿಕೊಳ್ಳುತ್ತಾರೆ. ಸ್ನೇಹಿತರ ಜೊತೆ ಔಟಿಂಗ್ ಹೋಗುತ್ತಾರೆ, ಗೆಳತಿ ಸಬಾ ಅಜಾದ್ ಜೊತೆ ಡೇಟಿಂಗ್, ಫ್ಯಾಮಿಲಿ ಲಂಚ್ ಎಂದು ನಟ ಆಗಾಗ ಹೊರಗೆ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗೆ ನಟ ತನ್ನ ಮಾಜಿ ಪತ್ನಿ ಸುಸೇನ್ ಖಾನ್, ಅವರ ಬಾಯ್​ಫ್ರೆಂಡ್ ಅಸ್ರ್ಲಾನ್ ಗೋನಿ, ಝಯೇದ್ ಖಾನ್ ಜೊತೆ ಊಟಕ್ಕೆ ಬಂದಿದ್ದರು. ಆ ಸಂದರ್ಭ ಅಭಿಮಾನಿಯೊಬ್ಬ ಹೃತಿಕ್​ನಲ್ಲಿ ಫೋಟೋ ಕೇಳುವುದನ್ನು ಕಾಣಬಹುದು. ಆದರೆ ನಟ ನಿರಾಕರಿಸುತ್ತಾರೆ.




ಹೃತಿಕ್ ರೋಷನ್ ರೆಸ್ಟೋರೆಂಟ್​ನಿಂದ ಹೊರಗೆ ಬಂದು ಸ್ನೇಹಿತರಿಗಾಗಿ ಕಾಯುತ್ತಿರುತ್ತಾರೆ. ಅದೇ ಸಮಯಕ್ಕೆ ಸ್ವಿಗ್ಗಿ ಡೆಲಿವರಿ ಬಾಯ್ ಹೃತಿಕ್ ಹತ್ತಿರ ಬಂದು ಸೆಲ್ಫಿ ತೆಗೆದುಕೊಳ್ಳಲು ಯತ್ನಿಸುತ್ತಾನೆ. ಹೃತಿಕ್ ಅವರು ಕೂಡಾ ನಿರಾಕರಿಸುವುದಿಲ್ಲ. ಆದರೆ ಬಾಡಿಗಾರ್ಡ್ ಆತನನ್ನು ದೂರ ತಳ್ಳುತ್ತಾನೆ. ಇದನ್ನೆಲ್ಲ ಹೃತಿಕ್ ರೋಷನ್ ನೋಡಿದರೂ ತನ್ನ ಬಾಡಿಗಾರ್ಡ್​ಗೆ ಏನೂ ಅನ್ನಲಿಲ್ಲ ಎಂದು ನೆಟ್ಟಿಗರು ಅಚ್ಚರಿಪಟ್ಟಿದ್ದಾರೆ.




ನೆಟ್ಟಿಗರು ವಿಡಿಯೋ ನೋಡಿ ನಟನ ವರ್ತನೆಯನ್ನು ಟೀಕಿಸಿದ್ದಾರೆ. ನಟನ ನಿಷ್ಠುರ ವರ್ತನೆಯನ್ನು ಖಂಡಿಸಿದ್ದಾರೆ. ಹೃತಿಕ್ ಸ್ವಭಾವವನ್ನು ಇದಕ್ಕೆ ಮೊದಲೇ ಎಕ್ಸ್​ಪೋಸ್ ಮಾಡಿದ್ದಕ್ಕಾಗಿ ಕೆಲವರು ಕಂಗನಾ ಅವರನ್ನು ನೆನಪಿಸಿಕೊಂಡರು. ನಮ್ಮಿಂದಾಗಿ ನೀವಿದ್ದೀರಿ, ಆ ಡೆಲಿವರಿ ಬಾಯ್​ನನ್ನು ಯಾಕಷ್ಟು ನಿಷ್ಠುರವಾಗಿ ನಡೆಸಿಕೊಳ್ಳುತ್ತೀರಿ ರಂದಿದ್ದಾರೆ. ಕೆಟ್ಟ ವರ್ತನೆ ಎಂದಿದ್ದಾರೆ ಇನ್ನೊಬ್ಬರು.




ಇದನ್ನೂ ಓದಿ: Preity Zinta: ಹಣ ಕೊಡಿ ಅಂತ ಬೇಡಿಕೊಂಡರೂ, ಕಾರು ನಿಲ್ಲಿಸದೇ ಹೋದ ಪ್ರೀತಿ ಜಿಂಟಾ! ವೈರಲ್ ಆಯ್ತು ಬಾಲಿವುಡ್ ನಟಿಯ ಈ ವಿಡಿಯೋ


ನಿಮ್ಮ ಜೊತೆ ಸೆಲ್ಫಿಗಾಗಿ ಕಾಯುತ್ತಿದ್ದ. ಬಾಡಿಗಾರ್ಡ್ ತಳ್ಳಿದ. ಆದರೂ ನೀವೇನೂ ಹೇಳಿಲ್ಲ. ಇವರ ಸಿನಿಮಾ ನೋಡುವುದೇ ನಾಚಿಗೆ ಸಂಗತಿ ಎಂದಿದ್ದಾರೆ ಇನ್ನೊಬ್ಬರು.


ಕಂಗನಾ ಅವರು ಹಿಂದೆಯೇ ಹೇಳಿದ್ದರು. ಹೃತಿಕ್ ತನ್ನನ್ನು ತಾನು ದೇವರು ಎಂದುಕೊಕೊಳ್ಳುತ್ತಾನೆ ಎಂದು. ಈಗ ಅರ್ಥವಾಯಿತು ಎಂದಿದ್ದಾರೆ ಇನೊಬ್ಬರು. ಅಂತೂ ನಟನ ವರ್ತನೆಗೆ ತೀವ್ರ ಟೀಕೆ ಎದುರಾಗಿದೆ. ಇನ್ನುಮುಂದೆ ಇವರ ಸಿನಿಮಾ ನೋಡೋದು ಬೇಡ ಎಂದು ನೆಟ್ಟಿಗರು ಮಾತನಾಡಿದ್ದಾರೆ.

First published: