War: ಮತ್ತೆ ಬಿಕಿನಿ ತೊಟ್ಟು ಮತ್ತೇರಿಸಲು ಬಂದ ಬೇಫಿಕ್ರೆ ಹುಡುಗಿ ವಾಣಿ ಕಪೂರ್..!

War: ಯಶ್​ ರಾಜ್​ ಫಿಲ್ಮ್ಸ್​ ನಿರ್ಮಾಣ ಸಿನಿಮಾ ಬೇಫಿಕ್ರೆಯಲ್ಲಿ ಹಸಿಬಿಸಿ ದೃಶ್ಯಗಳಲ್ಲಿ ಮಿಂಚಿದ್ದ ವಾಣಿ ಕಪೂರ್ ಈಗ ವಾರ್​ ಸಿನಿಮಾದಲ್ಲೂ ಬಿಕಿ ತೊಟ್ಟು ಸಖತ್ ಹಾಟಾಗಿ ಕಾಣಿಸಿಕೊಂಡಿದ್ದಾರೆ.

Anitha E | news18-kannada
Updated:September 6, 2019, 4:25 PM IST
War: ಮತ್ತೆ ಬಿಕಿನಿ ತೊಟ್ಟು ಮತ್ತೇರಿಸಲು ಬಂದ ಬೇಫಿಕ್ರೆ ಹುಡುಗಿ ವಾಣಿ ಕಪೂರ್..!
ವಾರ್​ನಲ್ಲಿ ಹೃತಿಕ್ ಹಾಗೂ ವಾಣಿ ಕಪೂರ್​
Anitha E | news18-kannada
Updated: September 6, 2019, 4:25 PM IST
ಯಶ್​ ರಾಜ್​ ಫಿಲ್ಮ್ಸ್​ ನಿರ್ಮಿಸುತ್ತಿರುವ ವಾರ್​ ಸಿನಿಮಾ ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಹೃತಿಕ್ ರೋಷನ್ ಹಾಗೂ ಟೈಗರ್ ಶ್ರಾಫ್ ನಟನೆಯಲ್ಲಿ ವಾರ್ ಸಿನಿಮಾ ರಿಲೀಸ್‍ಗೆ ರೆಡಿಯಾಗಿದೆ.

ಈ ಚಿತ್ರದ ಟ್ರೈಲರ್ ಈಗಾಗಲೇ ಸಿಕ್ಕಾಪಟ್ಟೆ ಹವಾ ಎಬ್ಬಿಸಿದ್ದು, ಈಗ ಹಾಡಿನ ಮೂಲಕ  ಬಿಟೌನ್‍ನಲ್ಲಿ ಬಿರುಗಾಳಿ ಎಬ್ಬಿಸುತ್ತಿದೆ. ಈಗ ಬಿಡುಗಡೆಯಾಗಿರುವ 'ಕೆ ಗುಂಗುರು...' ಹಾಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಕೋಟಿಗಟ್ಟಲೆ ವೀಕ್ಷಣೆ ಪಡೆದುಕೊಳ್ಳುತ್ತಿದೆ.



ಈ ಸಿನಿಮಾದಲ್ಲಿ ವಾಣಿ ಕಪೂರ್​  ನಾಯಕಿಯಾಗಿ ಅಭಿನಯಿಸಿದ್ದು, 'ಕೆ ಗುಂಗುರು ಟೂಟ್​ ಪಡೆ...' ಹಾಡಿನಲ್ಲಿ ಸಿಕ್ಕಾಪಟ್ಟೆ ಹಾಟ್​ ಆಗಿ ಕಾಣಿಸಿಕೊಂಡಿದ್ದಾರೆ. ಹೌದು, ಈ ಹಾಡಿನಲ್ಲಿ ವಾಣಿ ಕಪೂರ್ ಬಿಕಿನಿಯಲ್ಲಿ ಮತ್ತೇರಿಸುತ್ತಿದ್ದಾರೆ.

ಇದನ್ನೂ ಓದಿ: ವೈರಲ್​ ಆಯ್ತು ರಣಬೀರ್ ಕಪೂರ್​ - ಅಲಿಯಾ ವಿವಾಹದ ಫೋಟೋ..!

ಈ ಸಿನಿಮಾ ತೆಲುಗು ಹಾಗೂ ತಮಿಳಿನಲ್ಲೂ ರಿಲೀಸ್​ ಆಗುತ್ತಿದ್ದು, ಈಗ ತಮಿಳು ಮತ್ತು ತೆಲುಗಿನಲ್ಲೂ ಹಾಡು ಬಿಡುಗಡೆಯಾಗಿದೆ. ತೆಲುಗು ಹಾಗೂ ತಮಿಳಿನಲ್ಲಿ ರಾಹುಲ್​ ವಿ. ಮತ್ತು ಅನುಷಾ ಎಂ. ಹಾಡನ್ನು ಹಾಡಿದ್ದಾರೆ.


Loading...



ವಿಶಾಲ್​ ಹಾಗೂ ಶೇಖರ್ ಅವರ ಸಂಗೀತ ನಿರ್ದೇಶನದಲ್ಲಿ ಅರಿಜಿತ್​ ಸಿಂಗ್ ಹಾಗೂ ಶಿಲ್ಪಾ ರಾವ್ ಅವರ ಮಧುರವಾದ ದನಿಯಲ್ಲಿ ಮೂಡಿ ಬಂದಿರುವ ಈ ವಿಡಿಯೋ ಹಾಡು ಗುಂಗು ಹಿಡಿಸುವಂತಿದೆ. 24 ಗಂಟೆಯೊಳಗೆ 2 ಕೋಟಿ ವೀಕ್ಷಣೆ ಪಡೆದಿರೋ ಈ ಹಾಡು ಯೂಟ್ಯೂಬ್ ಟ್ರೆಂಡಿಂಗ್‍ನಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ಈ ಸಿನಿಮಾ ಇದೇ ಅಕ್ಟೋಬರ್​ನಲ್ಲಿ 2ರಂದು ತೆರೆ ಕಾಣಲಿದೆ.

 

Riya Sen: ಬಿಕಿನಿ ತೊಟ್ಟು ಬಿಸಿ ಏರಿಸಿದ ಹಾಟ್​ ಬೇಬಿ ರಿಯಾ ಸೇನ್​..!
First published:September 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...